Nov 152021
 

೧. ಅನುಮಾನ

೨. ದಾಳಿಂಬೆ

೩. ದಾಸವಾಳದ ಹೂ


ಸಮಸ್ಯೆ
(ಕಂದ) ಕನ್ನಡಕಂ ತೊಟ್ಟ ಬಳಿಕ ಕಿವಿ ಸರಿಯಾಯ್ತಯ್

(ವಂಶಸ್ಥ) धृत्वोपनेत्रं बधिरत्वमुज्झितम् ||

  10 Responses to “ಪದ್ಯಪಾನ ೪೪೪”

  1. ತೋಟದಿಂ ತಂದ ದಾಳಿಂಬೆಯೊಂದೊಂದರೊಳು
    ಕೀಟಕಲುಷಿತ ಕಾಳ್ಗಳಿರುವವೊಲು ಕಾಣ್|
    ಕೌಟುಂಬಿಕರೊಳಿರರೆ ದುಷ್ಟಜನರೊಂದಷ್ಟು
    ಕೂಟವನೆ ಕೆಡಿಸುವರು ದಂಡಿಸದಿರೆ||

  2. ಅಂಗಳದೆ ದಾಸವಾಳವ ತಂದು ನಾನೆಂತು
    ಪಾಂಗಿಂದೆ ಪೂಜಿಸಲಿ ದೇವಬಿಂಬಗಳ|
    ರಂಗಿನಿತು ಕುಂದಿಲ್ಲ ಬಾಡಿಲ್ಲ ಶೀತಲದೆ
    ಸಿಂಗರಕೆ ನೆನ್ನೆಯಿರಿಸಿರ್ಪ ಹೂವೇ||
    (2021ರ ನೊವೆಂಬರ್ ತಿಂಗಳ ಉತ್ತರಾರ್ಧದಲ್ಲಿ ಬೆಂಗಳೂರಿನ ಅಭೂತಪೂರ್ವ ಶೀತಲ ಹವೆಗೆ ಕಾರಣ: ಮುಂಗಾರಿ ಮಳೆಯು ಹಿಂಗಾರಿ ಮಳೆಯವರೆಗೆ ಮುಂದುವರೆದದ್ದು, ಸೈಕ್ಲೋನಿನಿಂದಾದ ಅವ್ಯಾಹತ ಮಳೆ, ಮತ್ತು ಚಳಿಗಾಲದ ಆರಂಭ)

  3. ಇನ್ನೂರು ಪದ್ಯಗಳ ಪಾನಿಗಳ್ ತಾವಂದು
    ಚೆನ್ನಿಂದೆ ರಚಿಸಿದ್ದರಲ್ತೆ ಸೋಮ|
    ಇನ್ನೆಗದರಷ್ಟಾಂಶವಿನ್ನುತ್ತರಾಯಣಕೆ
    ಸೊನ್ನೆಯೆಂದನುಮಾನಿಸುವೆನು ನಾನೈ||

  4. ಬನ್ನಂ ಕರ್ಣಾಕ್ಷಿಗಳಿರೆ
    ಕನ್ನಡಕಂ ತೊಟ್ಟ ಬಳಿಕ ಕಿವಿ ಸರಿಯಾಯ್ತಯ್|
    ಮುನ್ನಂ ಕಾಚೇಂ! ಬಗೆಯೇ-
    ನಿನ್ನಾ ಸಾಧನದೆ ಪಿಂತಣ ಶ್ರವಣದಂಶಂ!!

  5. ಪನ್ನತಿಕೆಯಿರದೊಡಾಡೇ-
    ನಿನ್ನೆನಿತೋ ಭಾಷೆಯಂ ಕಿವಿಗಡಚಿಡುವವೊಲ್|
    ಚೆನ್ನುಡಿಯಾಡುವ ಪಣಮಂ
    ಕನ್ಮಡಕಂ ತೊಟ್ಟ ಬಳಿಕ ಕಿವಿ ಸರಿಯಾಯ್ತಯ್||
    (ಪೂರ್ವಾರ್ಧ ನನ್ನದು, ಕೀಲಕಾರ್ಧ ಶ್ರೀ ನೀಲಕಂಠ ಕುಲಕರ್ಣಿಯವರದು)

  6. ಹೊನ್ನೇ ಛಂದೋಲಾಸ್ಯಂ
    ಜೊನ್ನೇ ಪಳನುಡಿ ವಿಕರ್ಣಪೂರಂ ಪ್ರಾಸಂ|
    ಚೆನ್ನಿಂದೆ ಸಲ್ವುದೆಂದುಂ
    ಕನ್ನಡಕಂ, ತೊಟ್ಟ ಬಳಿಕ ಕಿವಿ ಸರಿಯಾಯ್ತಯ್||

    ಕನ್ನಡತಿ ಕಿವಿಗೆ ಹೊನ್ನೇ ಛಂದೋಲಾಸ್ಯ, ಕರ್ಣಾಮೃತವೇ ಪಳಗನ್ನಡ, ಪ್ರಾಸವೇ ವಿಶೇಷ ಕರ್ಣಪೂರ (ಕಿವಿಯ ಆಭರಣ). ಇವೆಲ್ಲ ತೊಟ್ಟ ಬಳಿಕ ಕಿವಿ ಸರಿಯಾಯ್ತಯ್.(ಛಂದಸ್ಸು, ಪ್ರಾಸ, ಪಳಗನ್ನಡವನ್ನು ತೊಟ್ಟ ಬಳಿಕ ಕನ್ನಡ ರಸಿಕನ ಕಿವಿಗೆ ಮುಟ್ಟಿತು. ತನ್ಮೂಲಕ ಮನಸ್ಸಿಗೂ ಮುಟ್ಟಿತು ಎಂಬ ಭಾವ)

  7. .

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)