Apr 132022
 

೧.ಸುಂದರಿಯ ಓರೆನೋಟ
೨. ಲಟ್ಟಣಿಗೆಯ ಸ್ವಗತ
೩. ಮರಿ ಆನೆ

ಸಮಸ್ಯೆ:
(पृथ्वी)दरिद्रसदने सदा वसति भावुका भार्गवी
(ಪೃಥ್ವೀ) ದರಿದ್ರನ ನಿವಾಸದೊಳ್ ಸಿರಿಯೆವಾಸಿಪಳ್ ಸರ್ವದಾ

  One Response to “ಪದ್ಯಸಪ್ತಾಹ ೪೫೦”

  1. ಸುಂದರಿಯ ಓರೆನೋಟ:
    ಶರಕಂ ಪೂಗಳ್ ಸಿಗದ ಶಿ
    ಶಿರದೊಳ್ ತಾನೇನನಾಂತು ಗೆಲ್ವಂ ಮದನಂ?
    ನೆರವಿಂಗೆ ಲೋಕದೊಳ್ ಸುಂ
    ದರಿಯರ ಕಡೆಗಣ್ಣನೋಟಮೊಂದೆ ಶರಣ್ಯಂ||

    ತನ್ನ ಬಾಣಗಳಿಗೆ ಹೂವುಗಳೇ ಸಿಗದ ಶಿಶಿರದಲ್ಲಿ ಮದನನಿಗೆ ಒದಗಿ ಬರುವುದು ಸುಂದರಿಯರ ಕಡೆಗಣ್ಣ ನೋಟವೇ.

    ಮರಿಯಾನೆ:
    ಗೋಕುಲದೊಳ್ ಗೋಪೀಜನ
    ದಾಕೇಕರಮೆಂಬಲಾನಕಂ ಬಂಧಿತಮಯ್|
    ಲೋಕದೆ ರಾಕ್ಷಸರಾ ಕದ
    ಳೀಕಾನನನಾಶನಾರ್ಥಿ ಕಳಭಂ ಸ್ತುತ್ಯಂ||

    ಗೋಕುಲದಲ್ಲಿ ಗೋಪೀಜನರ ಕಡೆಗಣ್ಣನೋಟವೆಂಬ ಆಲಾನಸ್ತಂಭಕ್ಕೆ ಕಟ್ಟಲ್ಪಟ್ಟು ರಾಕ್ಷಸರೆನ್ನುವ ಕದಳೀವನವನ್ನು ನಾಶಮಾಡಲು ಬಯಸುತ್ತಿರುವ ಆನೆಮರಿಯು ಸ್ತುತ್ಯವಾದುದು.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)