Aug 102020
 

ಸಂಜೀವರ ಪದ್ಯ:
ಅಳೆಯುವೇನೆನ್ನ ನೀನೀಯಳತೆಗೋಲಿನೊಳೆ?
ಕಳೆ! ನಿನ್ನ ತಿಳಿವಾದರೋ ಪಳತು ಕಾಣಾ
ತುಳಿದಿಳೆಯನಳೆದಿಹನು ಜಗವನಾಳುವವ ನಿ
ನ್ನಳೆಯೇನು? ತಾಳು ತಾಳೆಂದೆಂದಿಗುಂ
———
ರಾಮಚಂದ್ರರ ಪದ್ಯ:
ಮುದದೆ ಸದನವ ಕಟ್ಟೆ ಮಕ್ಕಳೆತ್ತಲೊ ಪೋಗ-
ಲುದಕವಿಲ್ಲದ ಭವ್ಯ ಬಾವಿಯಂತೆ|
ನದಿಗೆ ಸೇತುವೆ ಕಟ್ಟೆ ತಾನೆತ್ತೊ ಪರಿದಪುದು
ಮದುವೆ ಪಳತಾಗಿರ್ದ ಕೂರ್ಮೆಯಂತೆ||
———
ಸೋಮಶೇಖರರ ಪದ್ಯಗಳು:
ಲಕ್ಷಾಂತರದ ಪಣದ ಜನ್ನದಿಂ ಜನಿಸಿತುಂ
ದಕ್ಷೆತೆಯನೆಸಗಿ ನಿಂತಯ್, ಮನುಜರೋಳ್|
ದೀಕ್ಷೆಯಿರ್ಪೊಡಮೀಕ್ಷೆ ಮಿತಿಯರಿವನರುಪಿ ನೀಂ
ಸಾಕ್ಷಿಯಾದಪೆಯಲ್ತೆ ಚಿರಕಾಲಕಂ||

ಚಾಚಿರಲ್ ಬಾಹುವಿಂ ಪಿಡಿದೆಯೇನಿರ್ದಡಂ
ತೋಚಿಕೆಯನನುಸರಿಸುತುಂ ಬಳೆದಯಯ್|
ಔಚಿತ್ಯಮುಳಿದಿರ್ಪ ವಾಗ್ವಿಲಾಸದ ತೆರದಿ
ಪೇಚಿಗಂ ಮಾದರಿಯವೊಲ್ ನಿಂದೆಯೇಂ??

ಆತುರದೆ ವಿಧ್ವಂಸನಂಗೆಯ್ವುದೊಂದು ಬಗೆ
ಪಾತಾಲನೊಳ್ ನೂಂಕುವೊಂದು ಬಗೆಯಯ್|
ಘಾತಿಸಲ್ ನದಿಗಿರ್ಪ ನೇರ್ಪ ಬಗೆ ದಾಂಟಿಪಂ-
ಗಾತುಕೊಳ್ಳದ ದಿವ್ಯನಿರ್ಲಕ್ಷ್ಯಮೇ??

ಪಿಂತೆಂದೊ ದರ್ಪದಿಂ ನಿರ್ಮಿಸಲ್ ಮೂರ್ತಿಯಂ
ಸ್ವಂತಿಕೆಯನುಳಿದ ಧೂರ್ತನವೆಸರಿನೊಳ್|
ನಿಂತು ನೋಳ್ಪುದೆ ಲೋಗಮಂಟಿರದ ನೆನಹುಗಳ
ಕಂತೆಯಂ ತನ್ನಾರ್ದ್ರಭಾವದಿಂದಂ||

ನದಿಯುಂ ಸೇತುವೆಯುಂ ಗಡ
ಮುದದಿಂ ಗೈವುದು ಪರೋಪಕಾರಮನೆಸಗಲ್|
ಹೃದಯದೆ ಮಚ್ಚರಮೀರ್ವರೊ-
ಳುದಯಂಗೈಯ್ಯುತೆ ವಿರೋಧಿಸಲ್ ಗತಿಯೆಂತಯ್||
——–

Aug 102020
 

ಶ್ರೀಧರ ಸಾಲಿಗ್ರಾಮರ ಪರಿಹಾರಗಳು:
ಕಂದರಮಂ ಬಳಸುತ್ತುಂ
ಮುಂದಕ್ಕಂ ನದಿಗಳೊಟ್ಟುಗೂಡುತೆ ಸಾಗಲ್|
ಸಂದೆಗಮಿರದಾಗಿದೊ ಕಾ-
ಣೊಂದಕೆ ಮತ್ತೊಂದ ಕೂಡಲೊಂದೆಯೆ ಮೊತ್ತಂ||

ಪೊಂದಿಸುತುಂ ದಿಟ್ಟಿಯನೊ-
ಪ್ಪಂದಂಗೊಂಡೆರಡು ಕಂಗಳೀಕ್ಷಿಪುದೆಂದುಂ|
ಮುಂದಿರ್ಪುದನೈಕ್ಯತೆಯಿಂ-
ದೊಂದಕೆ ಮತ್ತೊಂದ ಕೂಡಲೊಂದೆಯೆ ಮೊತ್ತಂ||

ಸಂದಿರೆ ಗಾಯಕರ ಜುಗ-
ಲ್ಬಂದಿಯೊಳರಿತೊರ್ವರೊರ್ವರೊಳ್ ಶ್ರುತಿ ಸೇರಲ್|
ಸಂದೆಗಮಿರದೊಕ್ಕೊರಲಂ-
ತೊಂದಕೆ ಮತ್ತೊಂದ ಕೂಡಲೊಂದೆಯೆ ಮೊತ್ತಂ||
——–
ನೀಲಕಂಠ ಕುಲಕರ್ಣಿಯವರ ಪರಿಹಾರ:
ಕುಂದದ ಗಣಿತಂ ಬಹಳಾ-
ನಂದಮನೀಯ್ಗುಂ ಬಹುತ್ವಮಂ ತೋರದೆಯೇ|
ಗೊಂದಲಮೆನಿಸದು ಸಂಖ್ಯೆಯ-
ನೊಂದಕೆ ಮತ್ತೊಂದು ಸೇರಲೊಂದೇ ಮೊತ್ತಂ||
(ಬಹುತ್ವವನ್ನು ತೋರದೇ ಒಂದು ಕೂಡಿಕೆಗೆ ಒಂದೇ ಮೊತ್ತವನ್ನು ಕೊಡುತ್ತದೆ ಗಣಿತ. ಬೇರೆ ಬೇರೆ ಮೊತ್ತವಲ್ಲ)
——-
ಕಾಂಚನಾರವರ ಪರಿಹಾರ:
ಪೊಂದಿಸಿಕೊಳ್ಳುತೆ ಪಕ್ಷಗ-
ಳೊಂದಕೆ ಮತ್ತೊಂದು ಸೇರಲೊಂದೇ ಮೊತ್ತಂ-|
ಪಂದಿಕುರಿನಾಯ್ನರಿಗಳಾ!
ಬಂದೊಡನೊಂದೆಡೆ, ಸಮಾನರೀ ಘಟಬಂಧಂ!!
——–
ಉಷಾರವರ ಪರಿಹಾರಗಳು:
ಛಂದೋಬದ್ಧಂ ವೃತ್ತಂ,
ಸಂದ ಪ್ರಸ್ತಾರದೊಳ್ ಗುರುಲಘುಗಣನಕಂ|
ಮುಂದಾಗಲ್ ಪ್ರತಿಪಾದದೊ-
ಳೊಂದಕೆ ಮತ್ತೊಂದು ಸೇರಲೊಂದೇ ಮೊತ್ತಂ||
(ವೃತ್ತದ ಪ್ರತಿಪಾದದಲ್ಲೂ ಮಾತ್ರೆಗಳ ಮೊತ್ತ ಒಂದೇ)
——-
ಸೋಮಶೇಖರ ಶರ್ಮರ ಪರಿಹಾರ:
ಈಗಾಗಲೇ ಒಂದು ಕೊಲೆಗೆ ಖಳನಾಯಕನಿಗೆ ನೇಣು ಶಿಕ್ಷೆಯಾಗಿದ್ದಾಗ…
ಬಂದೆಯ ಕುನ್ನಿಯೆ ಸದೆಯುವೆ-
ನೆಂದಂ ಖಳನಾಯಕಂ ರಿಪುವನೊದೆಯುತ್ತುಂ|
ಸಂದಿದೆ ನೇಣೆನಗಿನ್ನೇ-
ನೊಂದಕೆ ಮತ್ತೊಂದು ಕೂಡಲೊಂದೇ ಮೊತ್ತಂ||
——
ಸುಧೀರ ಕೇಸರಿಯವರ ಪರಿಹಾರ:
अनुयुक्त also means asked,
भवति is also ಸಂಭೋಧನೆ to a lady,
आचार्या is a lady teacher
आचार्ययानुयुक्तो ह्येकं चैकेनुयुक्तम्-अथ किं भवति?
शिष्यो ब्रूते “त्रि भवत्यैकं चैकेनुयुक्तम्-एकं, भवति!”
1+(1+1)

Aug 102020
 

चन्द्रचिन्ता – ವೀಣಾರವರ ಪದ್ಯ:
नीराजयति भूमेर्मां कटाक्षैः यौवतं शतम्।
न शकेsपि नु ताः स्प्रष्टुं श्वशुरः कुप्यति क्षणात्।।
——-
ಚಂದ್ರನ ಚಿಂತೆ – ಉಷಾರವರ ಪದ್ಯ:
ಹೆಂಗರುಳಂ ಭೂಲೋಕದ
ತಂಗೆಂದಿರ ಸೋದರಂ ಸದಾ ಸಂತಂ ಬಾ-|
ನಂಗಳದ ಸಂತೆಯೊಳ್ ಮೇಣ್
ತಿಂಗಳ ಸಂಬಳಿಗನೋಲ್ ಶ್ರಮಿಪ ಕರ್ಮಂ ಕಾಣ್||

Aug 032020
 

ಶಶಿಕಿರಣ್ ರವರ ಪದ್ಯ – ಹೂವಿನ ಬಗೆಗಿನ ಅನ್ಯೋಕ್ತಿ: मा कत्थिष्ठाः सुम व्यक्तं सौरभत्वात्कदाचन। विप्रकीर्णत्वमाप्नोषि वियोगाद्गुणसम्पदः॥ ಹೂವೇ, ನಿನ್ನಲ್ಲಿ ಸೌರಭವಿದೆಯೆಂದು ಬೀಗದಿರು, ಗುಣ(ದಾರ)ವಿಲ್ಲದಿದ್ದರೆ ನೀವು ಬಿಡಿಯಾಗಿಯೇ (ಬೆರೆಯದೆಲೆ) ಉಳಿಯುವೆ. ——- ಉಷಾರವರ ಪದ್ಯ – ಉಪ್ಪು & ಸಕ್ಕರೆಯ ಸಂವಾದ: ಒದಗಿರ್ಪುದೆನಗೂಟದೆಲೆಯ ಬಲತುದಿ ಭಾಗ್ಯ- ಮದೆ ನಿನ್ನನೆಡಕಿಡುದ ನಾನು ಬಲ್ಲೆಂ| ಮದಮೆಂತದೆಲೆಮರುಳೆಯೆನಗಿಲ್ಲ ಪರ್ಯಾಯ ಬದಲುಂಟು ನಿನಗೆ ಕಾಣ್ ಜೇನು ಬೆಲ್ಲಂ|| ಉಪ್ಪಿಗೆ ಆಲ್ಟರ್ನೇಟೇ ಇಲ್ಲ ಅಲ್ಲವೇ? ಹೇಗಿದೆ ಅದರ ಆಲ್ಟರ್ಕೇಟ್? ——- ವೀಣಾರವರ ಪದ್ಯ […]

Jul 262020
 

ಶ್ರೀ ರಾ. ಗಣೇಶರ ಪದ್ಯ: ಸೀಸ: ಪುಣ್ಯಕೋಟಿಯ ಕಥೆಯನೊಂದು ಮುದಿದನವಲ್ಲಿ ಕರುಗಳ್ಗೆ ಕೂರ್ಮೆಯಿಂದೊರೆಯುತಿರಲು ನೊಗದ ಭಾರಕೆ ನೊಂದ ಗೋಣುಗಳ ಕಥೆಯನ್ನು ಮತ್ತೊಂದೆಡೆಯೊಳೆತ್ತು ಕಥಿಸುತಿರಲು| ಕರೆಯ ಬಂದಾಕೆಯಂ ಲೀಲೆಯಿಂ ಝಾಡಿಸಿದ ಮೋಜನಾ ತೊಂಡುದನಮೊರೆಯುತಿರಲು ಹುಲ್ಲುಹುರುಳಿಗಳಲ್ಲಿ ಹುರುಳುತಿರುಳುಗಳಿಲ್ಲವೆಂದು ಘೂಂಕರಿಸುತಿರೆ ಗೂಳಿಯತ್ತಲ್|| ತೇಟಗೀತಿ: ಕೊಟ್ಟಿಗೆಯ ನಡುವೆ ಗುಂಗಾಡು ಗುನುಗಿನಲ್ಲಿ ಸದ್ದು ಸದ್ದೆಂದು ಬಾಲಮಂ ಬೀಸಿ ಬೀಸಿ| ಪಶುಸಮೂಹಮದು ಸಂಭಾಷಣೆಗಳ ನಡುವೆ ಮೆಲುಕುಹಾಕುತ್ತುಮಿರ್ಪುದೈ ಹಿಂಡಿತುಂಡಂ||

Jul 192020
 

Two verses by Raghavendra Hebbalalu on Kali’s smile: कालकाललयलास्यसमाप्तौ नन्दिता नृतिमनोज्ञतया सा। कालिका मुहुरपीक्षणकामा हासवित्तमददन्नटराजे।। At the end of the destroyer’s dance of dissolution, She was pleased with the beauty of the dance. Kaalii, desirous of seeing it again, Gave the money of her smile to the king of dancers. (नटराट् – नटराजे) त्रिकालाव्याकृतः स्थाणुर् […]

Jul 122020
 

ಶಶಿಕಿರಣ್ ರವರ ಪರಿಹಾರ: ವಿಕತ್ಥನೋದ್ವರ್ಜಿತಮುದ್ಘವೃತ್ತಿಂ ಜಿತಾರಿಷಟ್ಕಂ ಶಮಸಂಪದೀಡ್ಯಮ್| ಬುದ್ಧಂ ನಿಭಾಲ್ಯೋಚಿತಮೇವಮಾಹು- ರ್ಜಾಜ್ವಲ್ತಿ ವಜ್ರಂ ನ ಕದಾಪಿ ಲೋಕೇ|| ಸ್ವಪ್ರತಿಷ್ಠೆಯ ಲೇಶವೂ ಇಲ್ಲದ, ಅರಿಷಡ್ವರ್ಗವನ್ನು ಗೆದ್ದ, ಶಮವೆಂಬ ಸಂಪತ್ತಿಗೇ ಪೂಜ್ಯನಾದ ಬುದ್ಧನನ್ನು ಕಂಡವರು ಈ ಸಮುಚಿತವಾದ ಮಾತನ್ನಾಡಿದರು–ವಜ್ರವೆಂದೂ ಕಣ್ಣುಕೋರೈಸದು. ಕಾಂಚನಾರವರ ಪರಿಹಾರ: ಮಜ್ಜನಂಗೊಳುತೆ ಭಕ್ತಿಯಬ್ಧಿಯೊಳ್, ಸಜ್ಜನಂ ನುಡಿವನಂತೆ, “ದೇವಿಯೀ| ಬಿಜ್ಜೆಯಿಂದೊಗೆದ ವಕ್ತ್ರದಿಂ ಮಿಗಿಲ್ ಬಜ್ಜರಂ ಬೆಳಗದಿರ್ಪುದೆಂದಿಗುಂ||” ರವೀಂದ್ರಹೊಳ್ಳರ ಪರಿಹಾರ: ವಜ್ಜೆಯಾದ ನವಕೋಟಿದರ್ಪದೊಳ್ ಮಜ್ಜಿತಂ ಕೃಪಣಮಾನಿವಾಸನಯ್| ಬಿಜ್ಜೆಯೊಂದೊಲಿಯೆ ದಾಸನಾಗಲಾ ಬಜ್ಜರಂ ಬೆಳಗದಿರ್ಪುದೆಂದಿಗುಂ|| (ಮಾ=ಶ್ರೀ. ಶ್ರೀನಿವಾಸನಾಯಕನು ಪುರಂದರದಾಸನಾದ ಪರಿಹಾರ. ಒಂದು ಸ್ವಾರಸ್ಯ: […]

Jul 122020
 

ಶಶಿಕಿರಣ್ ರವರ ಪರಿದ್ಯಗಳು: ಪರಾನುಭವಸಾಕಲ್ಯಮಪರೋಕ್ಷತಯಾ ಯಯಾ| ಪ್ರಸ್ತುತೀಕ್ರಿಯತೇ ಸ್ತೌಮಿ ತಾಮೂಹಾಂ ಪ್ರತಿಭಾತ್ಮಿಕಾಮ್|| ಪ್ರತಿಭಾರೂಪದ ಊಹೆಗೆ ನಮ್ಮ ವಂದನೆ. ಅದರಿಂದ ಪರತತ್ತ್ವದ ಅನುಭವವು (ಅಥವಾ ಬೇರೆಯವರ ಅನುಭವಗಳು) ಸಂಪೂರ್ಣವಾಗಿ, ಅಪರೋಕ್ಷವಾಗಿ ಪ್ರಸ್ತುತವಾಗುತ್ತವೆ. ಶ್ರೇಯಸೇ ಭೂಯಸೇ ಭೂಯಾದಿಭವಕ್ತ್ರಸ್ಯ ಪೀನಸಃ / ಜಗತಃ ಪಿತರೌ ಯೇನ ಸಮಭೂತಾಂ ಸಸಾಧ್ವಸೌ // ಜಗನ್ಮಾತಾಪಿತೃಗಳ ಕಳವಳಕ್ಕೆ ಕಾರಣವಾದ ಗಣಪತಿಯ ಶೀತ ನಮ್ಮಗೆ ಶ್ರೇಯಸ್ಸನ್ನು ತರಲಿ. ಭಗವಾನ್ನಿಜಭಕ್ತಾನಾಂ ಸ್ವಯಂ ರಕ್ಷಾಂ ಚಿಕೀರ್ಷತಿ / ಇತ್ಯೇವಂ ಬೋಧಯಿತ್ರೇ ತೇ ಬಿಡಾಲಶಿಶವೇ ನಮಃ // ಭಗವಂತ ತನ್ನ ಭಕ್ತರನ್ನು […]

Jul 072020
 

ವೀಣಾರವರ ಪರಿಹಾರ: ಕ್ಷಿತಿಗಾ ಸಗ್ಗದಿನಿಳಿದೀ ರತಿಪತಿಯೂಡೆ ಘೃತಸಿಕ್ತಭೋಜ್ಯಂಗಳಮೋ! ಸುತನೋ ಬೆಣ್ಣೆಯ ಮುದ್ದೆಯೊ! ಘೃತದಿಂ ನವನೀತಮಪ್ಪ ಪರಿಯೇ ಸೊಗಸಯ್|| ಭೂಮಿಗಿಳಿದ ಮನ್ಮಥನಂತಿರುವ ಸುತನಿಗೆ ಚೆನ್ನಾಗಿ ಘೃತಭೋಜನವನ್ನು ಮಾಡಿಸಲು ಅವನು ಗುಂಡುಗುಂಡಗೆ ಬೆಣ್ಣೆಮುದ್ದೆಯಂತಾದ.. ಕಾಂಚನಾರವರ ಪರಿಹಾರ: ಸುತನಿಂ ಕೊಂಡಾಯುಷ್ಯಮ ನತಿಯಾಶೆಯೊಳಾ ಯಯಾತಿವಡೆವಂತೆಳಸಂ| ಕೈತವಮಾದೊಡೆ ನೋಡೌ! ಘೃತದಿಂ ನವನೀತಮಪ್ಪ ಪರಿಯೇ ಸೊಗಮೈ|| ಉಷಾರವರ ಪರಿಹಾರ-೧: ಅತಿಶಯದಾಲೋಡನದೀ ಗತಿಯೊಳ್ ಬೆಳ್ಪುಂಡೆಯೋಲುಗಲ್ ತೆರೆಯುಲಿಯೊಳ್| ಕ್ಷಿತಿಜದೆ ತಾಂ ಕಡಲಣುಗಂ ಘೃತದಿಂ ನವನೀತಮಪ್ಪ ಪರಿಯೇ ಸೊಗಮೈ!! ಘೃತ = ನೀರು, ಕಡಲಣುಗ = ಚಂದ್ರ, ಕಡೆದ ಸಾಗರದ […]