Jun 262018
 

  10 Responses to “ಪದ್ಯಸಪ್ತಾಹ ೩೧೩: ಚಿತ್ರಕ್ಕೆ ಪದ್ಯ”

  1. ಮನೆಮನೆಯದಾರಾರು ಬಗೆಭುಜದ , ನೆಲಜಲದ
    ಘನಗೋಲಮಿದುವಾರ ಕಾಲಚೆಂಡು !
    ಮನಮನದ ಸವಿಯೊಲವ ಹೀರಿ ಹಂಚುತಲಿರುವ
    ಮನುಕುಲವದೊಡನಿರುವ ಜೇನಹಿಂಡು !!

    ಷಡ್ಬುಜಾಕೃತಿಯ ಮನೆಗಳಿಂದಾದ – ಗೋಲ football ನಂತೆ – ಅದರಲ್ಲಿ ಒಟ್ಟಾಗಿರುವ ಮನುಕುಲ ಜೇನಹಿಂಡಿನಂತೆ – ಎಂಬ ಕಲ್ಪನೆಯ ಪದ್ಯ

  2. ನಗೆಬೀರುತಿರ್ಪಳಿಂತು ಮು-
    ಡಿಗೇರಿಹ ಧವಲ ಕಿರೀಟದೊಳ್ ಭಾರತಿಯುಂ
    ಬಿಗು ಭುವನಸುಂದರಿಯವಳ್
    ಜಗದಗಲದ ಜಾಲದೊಳ್ ಪ್ರಸಿದ್ಧಳ್ ಬಲ್ ತಾಂ !!

    www (ವರ್ಲ್ಡ್ ವೈಡ್ ವೆಬ್ ) ~ “ಜಗದಗಲದ ಜಾಲ “ದಲ್ಲಿ ಕಿರೀಟ ತೊಟ್ಟ ಭುವನ ಸುಂದರಿ ಭಾರತಿ !!
    ( ಹಿಮಾಲಯ ಪರ್ವತ ವಜ್ರದ ಕಿರೀಟದಂತೆ ಕಂಡ ಕಲ್ಪನೆಯಲ್ಲಿ !!)

  3. ಸೀಸ|| ಜಗಕೆಲ್ಲ ಜ್ಯೋತಿಯನು ನೀಡುವುದು ತಾನುರಿದು ಬೆಂದು ಭಸ್ಮವದಾದೊಡಂ ದೀಪವು
    ಜನಕೆಲ್ಲ ನೆಳಲನ್ನೆ ನೀಡುವುದು ಪಾದಪವು ಕಾದೊಡಂ ಬಿಸಿಲಿನೊಳ್ ತಾಂ ನಿಲ್ಲುತುಂ|
    ಮಳೆಯಾಗಿ ಬಂದ ನೀರ್ ಆವಿಯಾಗುವ ಮುನ್ನಮೆನಿತೊ ನಿನ್ನಯ ತೃಷೆಯ ಹಿಂಗಿಸಿರದೇಂ
    ಚಲನಶೀಲವದಪ್ಪ ಗಾಳಿ ತಾಂ ತಡೆದು ನಿಲ್ಲದೆ ನೀನುಸಿರನೆಳೆದು ಬಿಡುವನಕ ಪೇಳ್||

    ಆಟವೆಲದಿ|| ಛಾತಿಯನ್ನು ಒಡ್ಡಿ ಸ್ವೀಕರಿಸೊರ್ಮೊರ್ಮೆ(Players)
    ಪುಟಿಪರ್ ಚೆಂಡ ತಮ್ಮ ಶಿರದಿನೊಮ್ಮೆ|
    ಪಾದದಿಂದೆ ಒದೆಸಿಕೊಳ್ವುದೆ ಸಾಮಾನ್ಯಂ
    ಒದೆಸಿಕೊಂಡುಂ ಜಗವ ಮೋಹಿಪುದದು(ಚೆಂಡು)||

    • ಚೆನ್ನಾಗಿದೆ..ಅಲ್ಲಲ್ಲಿ ವಿಸಂಧಿಯಾಗಿದೆಯಲ್ಲ.. !

      • ಧನ್ಯವಾದ. ಸೀಸದಲ್ಲಿ ಸರಿಪಡಿಸಿದ್ದೇನೆ. ಗೀತಿಯಲ್ಲಿ ಕರ್ಷಣಕ್ಕೆ ಅವಕಾಶವಿದೆ.

  4. ತಾದಾತ್ಮ್ಯದಿಂ ಬ್ರಹ್ಮನನಾಂತರೆಲ್ಲರ್-
    ವೇದಾಂತದೊಳ್, ಬ್ರಹ್ಮರೆ, ಚೆಂಡಿನಾಟ
    ಕ್ಕೀ ದೇವಿವಿಶ್ವಂಭರೆ ನೋಂತುದರ್ಕಂ
    ಮೋದಂಬೊರುತ್ತುಂ ಸಲೆ ಚೆಂಡಿದಾಯ್ತೋ?!
    ವೇದಾಂತದ ಪ್ರಕಾರ ಬ್ರಹ್ಮವನ್ನು ಕುರಿತು ಸದಾ ಧ್ಯಾನಿಸುವವರು ಬ್ರಹ್ಮವೇ ಆಗಿಬಿಡುತ್ತಾರೆ.ಹಾಗೇ ಇಡೀ ಭೂಮಿಯೂ ಫುಟ್ಬಾಲನ್ನು ಕುರಿತು ಧ್ಯಾನಿಸುತ್ತಿರುವುದರಿಂದಲೋ ಏನೋ ಇಡೀ ಭೂಮಿಯೇ ಕಾಲ್ಚೆಂಡಾಗಿಬಿಟ್ಟಿದೆ..

  5. ಈ ಕ್ಷಿತಿಯನೀಕ್ಷಿಸಲ್ ಸಾವಯವದಣುಬಂಧ
    ರಕ್ಷಿಸಿರ್ಪಂತಿರ್ಪುದದು ದಿಟದೆ ಸಾ-
    ಪೇಕ್ಷ ಸಿದ್ಧಾಂತದೊಳ್ ಕಾಲ್ಪನಿಕ ಜಾಲಮೇ-
    ಮಕ್ಷಾಂಶ ರೇಖಾಂಶದೋಲ್ ಭಾವಿಸಲ್ ?!

    ಭೂಮಿಯನ್ನು (ಷಡ್ಭುಜಾಕೃತಿಯ) “ಕಾರ್ಬನ್ ರಿಂಗ್ “ಗಳ ಪದರ ಸುತ್ತುವರಿದಂತೆ ಕಂಡ ಕಲ್ಪನೆ / ಆದರೆ (ವೈಜ್ಞಾನಿಕವಾಗಿ – ಅಕ್ಷಾಂಶ/ರೇಖಾಂಶಗಳಂತೆ) ಆ ಜಾಲ ಕೇವಲ ಕಾಲ್ಪನಿಕವೇ ಎಂಬ ಪ್ರಶ್ನೆ

    • ಇಂತುಮಿಂಗಾಲ ರೇಖಾರಹಸ್ಯo ಗಡಾ
      ಮುಂತು ಕಾದಿರ್ಪುದೇo ಲೋಕವಂ ಸುತ್ತ ತಾಂ
      ಚಿಂತಿಸಲ್ಕಂತು ಸಾಪೇಕ್ಷಸಿದ್ಧಾಂತದೊಳ್
      ತಂತು ಸಂಕಲ್ಪಮಕ್ಷಾಂಶ ರೇಖಾಂಶ ದೋಲ್ !!

      “ಸ್ರಗ್ವಿಣಿ”ಯಲ್ಲಿ ತರುವ ಪ್ರಯತ್ನ !!

Leave a Reply to ಮಂಜ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)