ಕಂದ ಪದ್ಯದ ಛಂದಸ್ಸು

 

ಇದು ಕನ್ನಡದಲ್ಲಿ, ಚತುರ್ಮಾತ್ರಾಗಣದ ವಿಶೇಷವಾಗಿ ಉಪಯೋಗಿಸಲ್ಪಟ್ಟ ಛಂದಸ್ಸು. ಇದರ ಹೆಸರಿನ ಉಗಮ “ಸ್ಕಂದಕ → ಕಂದಅ → ಕಂದ” ಹೀಗೆ ಆಗಿರಬಹುದು.

೪ ಪಾದಗಳಲ್ಲಿ ಮಾತ್ರಾ-ಗಣ ವಿಭಾಗಗಳು ಇಂತಿವೆ ::

೧. ೪ + + ೪

೨. + ೪ + + ೪ +

೩. ೪ + + ೪

೪. + ೪ + + ೪ +

ಈ ಗಣಗಳಲ್ಲಿ, ಗುರು-ಲಘು ಜೋಡಣೆಗಳು ಈ ರೀತಿ ::

ಗಣ ಲಘು(U) – ಗುರು( _ ) ಜೋಡಣೆ
೪ (ಸಾಮಾನ್ಯ) _ _
U U U U
_ U U
U U _
U _ U (ಜಗಣ)
U U U U (ಸರ್ವ ಲಘು)
_ _
U U _
ಯಾವ ಜೋಡಣೆಯೂ ಆಗಬಹುದು
(ಸಾಮಾನ್ಯ ಅಥವ ಜಗಣ)

ಎರಡನೆಯ ಹಾಗು ನಾಲ್ಕನೆಯ ಸಾಲುಗಳಲ್ಲಿ ಮಧ್ಯದ (ಮೂರನೆಯ) ಗಣದಲ್ಲಿ ಸರ್ವಲಘುಗಳು ಬರಬಹುದೆಂದು ಹೇಳಿದೆಯಷ್ಟೆ. ಈ ಗಣಗಳಲ್ಲಿ ಸರ್ವಲಘು ಗಣ ಬಂದಾಗ ಮೊದಲ ಮಾತ್ರಾಕ್ಷರದ ಬಳಿಕ ಯತಿಸ್ಥಾನವಿರಬೇಕೆಂಬುದು ಕಡ್ಡಾಯ. ಅಂದರೆ ಮೊದಲ ಮಾತ್ರಾಕ್ಷರಕ್ಕೆ ಒಂದು ಪದ ಮುಗಿದು ಉಳಿದ ಮೂರು ಮಾತ್ರೆಗಳ ಒಂದು ಪದ ಬರಬೇಕು. ಇಲ್ಲದಿದ್ದರೆ ಸಾಲಿನಲ್ಲಿ ಯತಿಭಂಗವಾಗಿ ಧಾಟಿಯಲ್ಲಿ ಓದುವಾಗ ತೊಡಕಾಗುತ್ತದೆ. ಜೊತೆಗೆ ಈ ಯೆಡೆಯಲ್ಲಿ ತುಂಬ ಲಘುಗಳು ಬಂದರೆ ಪದ್ಯಬಂಧದ ನಡೆಗೆಡುತ್ತದೆ.

ಕಂದ ಪದ್ಯ ಬರೆಯಲು ಮೊದಲು ಚತುಷ್ಪಾದ ಪದ್ಯ ಬರೆದು, ಒಂದು (ಕೊನೆಯ) ಗಣವನ್ನು ಮೊದಲನೆಯ (ಹಾಗು ಮೂರನೆಯ) ಪಾದದಿಂದ ತೆಗೆದು ಎರಡನೆ (ಹಾಗೂ ನಾಲ್ಕನೆಯ) ಪಾದಕ್ಕೆ ಹೊಂದಿಸಿ ಪ್ರಯತ್ನ ಮಾಡಬಹುದು. ಹೀಗೆ ಮಾಡಿದಲ್ಲಿ ಗಣಗಳ ಸಂಖ್ಯೆ ಸರಿಯಾದರೂ, ಮೇಲೆ ತೋರಿಸಿದ ವಿಶೇಷ ಗಣಗಳಲ್ಲಿನ ಗುರು-ಲಘು ಹೊಂದಿಕೆಯನ್ನೂ ಗಮನಿಸಬೇಕು.

ಕಂದಗಳನ್ನು ಚೆನ್ನಾಗಿ ಬರೆಯಬೇಕೆಂದು ಬಯಸುವವರಿಗೆ ಡಿ.ವಿ.ಜಿ.ಯವರ ಶೃಂಗಾರಮಂಗಳಂ ಮತ್ತು  ಶ್ರೀಕೃಷ್ಣಪರೀಕ್ಷಣಮ್ ಗ್ರಂಥಗಳೂ, ಬಸವಪ್ಪಶಾಸ್ತ್ರಿಗಳ ದಮಯಂತೀಸ್ವಯಂವರಕಾವ್ಯವೂ, ಜನ್ನನ ಯಶೋಧರಚರಿತೆಯೂ ತುಂಬ ಒಳ್ಳೆಯ ಮಾರ್ಗದರ್ಶಿಗಳು. ಈ ಎಲ್ಲ ಕೃತಿಗಳೂ ಸದ್ಯಕ್ಕೆ ಅಂಗಡಿಗಳಲ್ಲಿ ಸಿಗುವಂತಿವೆ.

ಕಂದ ಪದ್ಯದ ಉದಾಹರಣೆಗಳು

೧.
ಕಂದಂ ಕನ್ನಡನುಡಿಗಾ-
ನಂದಂ ಕಬ್ಬಿಗರ ಕಾಡಿಗಿದು ಮಾಕಂದಂ |
ಕಂದಂ ಕೃತಿರಂಭೆಗೆ ಜೇ-
ನಂದಂ ಚಂಪುವಿನ ವೃತ್ತದ ರಸಾಯನಕಂ

[ರಂಭೆ=ಬಾಳೆಗಿಡ, ಜೇನಿನ ಅಂದ=ಜೇನಂದ, ಚಂಪೂಕಾವ್ಯಗಳ ವೃತ್ತಗಳೆಂಬ ರಸಾಯನಕ್ಕೆ ಕಂದವು ಜೇನೆಂಬ ಕಲ್ಪನೆಯಿಲ್ಲಿದೆ]

೨.
ಆರವಮಂ ನಿರ್ಜಿತಕಂ –
ಠೀರವರವಮಂ ನಿರಸ್ತ ಘನರವಮಂ ಕೋ |
ಪಾರುಣ ನೇತ್ರಂ ಕೇಳ್ದಾ
ನೀರೊಳಗಿರ್ದುಂ ಬೆಮರ್ದನುರಗ ಪತಾಕಂ ||

೩.
ಲಂಬೋದರ ಗಣಪತಿ ಹೇ –
ರಂಬಾ ವಿಘ್ನೇಶ ಮೋದಕಪ್ರಿಯ ಕೇಳೈ |
ನಂಬಿದೆನೈ ಕರಿವದನಾ
ತುಂಬಿಸಿ ಬಾಳಿಸುವುದೆನ್ನ ಮತಿಯಂ ದೇವಾ ||

 

  3 Responses to “ಕಂದ ಪದ್ಯದ ಛಂದಸ್ಸು”

  1. ಜಗಣದ ಬದಲು ಸರ್ವಲಘು ಇರುವೆಡೆ, ಮೊದಲ ಅಕ್ಷರವಾದ ಮೇಲೆ ಯತಿ ಬರಬೇಕು – ಇತ್ಯಾದಿ ಇತರ ಸೂಕ್ಷ್ಮಗಳನ್ನು ತಿಳಿಸಿದರೆ ಒಳ್ಳೆಯದು.

    • ಪ್ರಸಾದು – ಸಲಹೆಗೆ ಧನ್ಯವಾದಗಳು. ಈ ಸೂಚನೆಯನ್ನು ಮತ್ತು ಕೆಲವನ್ನು ಸೇರಿಸಲಾಗಿದೆ.

  2. ಜನ್ನನ ಯಶೋಧರ ಚರಿತೆ ಸಂಪೂರ್ಣ ಕಂದ ಪದ್ಯ ಎನ್ನುತ್ತೇವೆ ಆದರೆ ಬಲಿಯನಿತ್ತೊಡೆ ಪದ್ಯ ಭಾಗದ ಮೊದಲ ಪದ್ಯವೇ ಕಂದ ಪದ್ಯಕ್ಕೆ ಬರುವುದಿಲ್ಲ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)