ಈ ದ್ರಕಾರವಿದೇನು? ಈ ಸಮಸ್ಯೆಯದೇನು? ಕ್ಷುದ್ರವೋ ರಸಯುತವೊ ತಿಳಿಯದಾಯ್ತು ಅದ್ರಿಜೆಯೆ ಸಾಕ್ಷಿ ನಾ ಪೂರಣವಗೈದಿಲ್ಲ “ಭದ್ರಕಾಳಿಯು ಬೆದರಿ ಮಾಯವಾದಳ್”
ಹುಲ್ಲುಕಲ್ಲುಗಳೇನು? ಅದುಕೂಡ ಹೂರಣದಿ! ಗುಲ್ಲನೆಬ್ಬಿಸದೆಯೇ ಬಿಡುವರೇನು? ಬಲ್ಲಿದರೆ, ಸೊಲ್ಲನಡಗಿಸುವಿರೇ? – “ಹೂರಣದಿ ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು” ಸ್ನೇಹಿತರೆ, ೩ನೆಯ ಸಾಲನ್ನೂ ಸ್ವಲ್ಪ ತಿಂದಿದ್ದೇನೆ. ೩ನೇ ಸಾಲು “ಹೂರಣದಿ” ಮುಗಿವಂತೆ, ೪ನೇ ಸಾಲು “ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು” ಎಂಬುದಾಗಿ ಬರುವಂತೆ ಪರಿಹರಿಸಿ.
ನವಕವಿತೆ ಕದ-ಲುವುದು, ಕದ-ಲಿಪುದು, ಬದ-ಲಪ್ಪುದು, ಬದ-ಲಿಪುದು ಹಾ-ಡುವುದು, ಹಾ-ಡಿಸುವುದು ನಿಡುನಿದ್ದೆಯಿನ್ -ಎಬ್ಬಿಸುವುದು ಮುಂದೆ-ಮುಂದೆ- ಸಾಗಿಸುವದು ಪರಿಪೂರ್ಣತೆ ಬಾಳ್ಗೀವುದು ಬೇಕಿದೆ ನವಕವಿತೆಗೆ (ಆಧಾರ:ಶ್ರೀಶ್ರೀ) Howtoread “కద-లేదీ, కద-లించే-దీ, మా-రేదీ,- మా-ర్పించే-దీ, పా-డేదీ,- పా-డించే-దీ, పెను-నిద్దుర- వద-లించే-దీ, మును-ముందుకు- సా-గించే-దీ, పరి-పూర్ణపు- బ్రతు-కిచ్చే-దీ, కా-వాలోయ్- నవ-కవనా-నికి”
ಅನುರೂಪದಾ ಪಂಚಮಾತ್ರೆಗಳ ಚೌಪದಿಯ – ಲನುಭಾವದಿಂದೀ ಸಮಸ್ಯೆ ಬಿಡಿಸಿ | ತನುವಿಶೇಷದೊಳಿರುವುದಶ್ಲೀಲತೆಯೆ ಭಾಸ “ಸ್ತನ ದೊಡ್ಡತನದಲ್ಲಿ ಶೋಭಿಸಿಹುದು” || ಇದು ಸದ್ಯದಲ್ಲಿ ನಡೆದ ಅಷ್ಟಾವಧಾನದಲ್ಲಿ ಕೊಟ್ಟ ಸಮ್ಮಸ್ಯೆ.. ಅಶ್ಲೀಲದಂತೆ ತೋರುವ ಮೇಲಿನ ಸಾಲಿನ (ಕೊನೆಯ ಸಾಲು) ಹಿಂದಿನ ೩ ಸಾಲುಗಳನ್ನು ಪೂರೈಸಿರಿ. ಪದ್ಯ ಓದುವ ಧಾಟಿ
ನಾಲ್ಕನೆಯ ಸಾಲು : ಸುಗ್ರೀವನೆಡಗಾಲಶುನಕ ಕಚ್ಚಲ್
ಇದು ಗಣೇಶ ರವರು ಕೊಟ್ಟ ಸಮಸ್ಯೆ ಬರಿಯ ಭಾಮಿನಿಯಲ್ಲಿ ಸಾಗು- ತ್ತಿರುವ ಕಾವ್ಯಕುತೂಹಲದಿ ಜನ ತೊರೆವರೇನೋ ಕುತುಕವನ್ನೆನುತೆನಗೆ ಸಂದೇಹ ಸ್ಫುರಿಸಿತೀಗಳೆ ನಿಮ್ಮ ಜಾಣ್ಮೆಯು ತರದೆ ಭಾಮಿನಿಯನ್ನು ನೋಡರು ತೆರೆಯನೂ ರಸಿಕರ್ಗಳಂತೆಯೆ ಗಡಿದು ’ಐಟಮ್ ಸಾಂಗ್”!! ಈ ಕಾರಣದಿಂದ ನಾನೇ ಒಂದು ವಸ್ತುವನ್ನು ಕೊಡುತ್ತಿದ್ದೇನೆ. ಪಂಚಮಾತ್ರಾಗಣದ ಚೌಪದಿಯಲ್ಲಿ ಮುಂಜಾನೆಯ ಬಣ್ಣನೆಯಾಗಬೇಕು. ಎಷ್ಟು ಪದ್ಯಗಳಾದರೂ ಸರಿ, ಹೊಸ ಹೊಸ ಕಲ್ಪನೆಗಳಿಂದ ಕೂಡಿರಬೇಕೆಂಬುದೇ ಮುಖ್ಯನಿಯಮ. ಮೊದಲಿಗೆ ನನ್ನ ಪದ್ಯದಿಂದಲೇ ಆರಂಭ; charity begins at home ಎಂದು ಗಾದೆಯಲ್ಲವೆ! ಹಾಡುಹಕ್ಕಿಗಳೋಳಿ ಗುರು-ಲಘುಗಳಂತಾಗೆಮೂಡುವೆಣ್ಣಿನ […]
ಸೆಳೆಹಿತದಿಕಸ ಶರಧಿಸೇರುಗೆಕೆಳೆಹಿತದಧಮ ಹಿರಿದುಕಾಂಬುಗೆಕಳೆಹಿತದಭಾಮಿನಿಯು ಶರಣಗೆ ದಾರಿ ತೋರುವಳುತಳೆದೆನೀಗಲೆ ಕಾವ್ಯ ಸಂಶಯಗೆಳೆಯಹಿತಜನರಿದನು ಪರಿಕಿಸಿ“ನಳನಳಿಸದೆಯೆ ಸೋತರವರು ಪ್ರಕೃತಿಯೀಶ್ವರರು”ಮೊದಲು, ಸಮಸ್ಯೆಯನ್ನು“ನಳನಳಿಸದೆಯೆ ಸೋತರವರು ಪ್ರಕೃತೀಶ್ವರರು”ಎಂಬುದಾಗಿರಿಸಿದ್ದೆ. ಅದರಲ್ಲಿ ಚ್ಛಂದೋದೋಷವಿತ್ತು.ಗಣೇಶರ ಸಲಹೆಯಂತೆ, ಅದನ್ನು ಬದಲಿಸಿದ್ದೇನೆ.ಸಮಸ್ಯೆ – ಭಾಮಿನಿಯಲ್ಲಿ ಕೊನೆಯ ಸಾಲು ಬರುವಂತೆ“ನಳನಳಿಸದೆಯೆ ಸೋತರವರು ಪ್ರಕೃತಿಯೀಶ್ವರರು”
ನಗಜೆ ಭೂಮಿ ಲಕ್ಷ್ಮಿ ಪೆಸರ ಸೇರಿಸಿದರೆ ನಾಲ್ಕಕ್ಷರ ಕೊನೆಗೆಸೇರೆ ಒಂದಕ್ಷರ ಹೆಸರೊಂದೇ ಐದಕ್ಷರ ಎಡದಕ್ಷರವೂಂದೊಂದನು ತೆಗೆದು ನೋಡಿ ಚೋದ್ಯವಿದನು ಗಣಪ ಬ್ರಹ್ಮ ಷಣ್ಮುಖರು ಮನ್ಮಥನಗ್ನಿಯು ಬಹರು ಈ ವರ್ಣಚ್ಯುತಕದ ಸೂಚನೆ ಹೀಗಿದೆ. ಪಾರ್ವತಿ, ಭೂಮಿ, ಮಹಾಲಕ್ಷ್ಮಿ ಇವರೆಲ್ಲರ ಹೆಸರನ್ನೂ ನಾಲ್ಕು ಅಕ್ಶರದಲ್ಲಿ ಹಿಡಿದಿಡಬಹುದು. ಅದಕ್ಕೆ ಇನ್ನೊಂದು ಅಕ್ಷರವನ್ನು ಸೇರಿಸಿದಾಗ ಐದು ಅಕ್ಷರಗಳಾಗುತ್ತವೆ. ಈ ಐದಕ್ಷರದ ಪದದ ಎಡಭಾಗದ ಒಂದೊಂದೇ ಅಕ್ಷರವನ್ನು ತೆಗೆಯುತ್ತಾ ಹೋದರೆ, ಬೇರೆ ಐವರ ಹೆಸರುಗಳು, ಅಂದರೆ, ಗಣೇಶ, ಬ್ರಹ್ಮ ಷಣ್ಮುಖ, ಮನ್ಮಥ ಮತ್ತು ಅಗ್ನಿ […]