ಮಾಧವಾ ನೀ ಮಮತೆಯಾ ಮಡು
ರಾಧೆಯಾ ರಾಗನಿವ ನರಕನ
ಭಾಧೆಯಾ ಭಂಧನವ ಬಿಡಿಸಿದ ಅಂಗನಾಲೋಲಾ
ಆಧರದ ಸೋದರನೆ ನೆಚ್ಚಿಗೆ
ಸಾಧಿಸಲೊಲವ ವಿಜಯನರಸಿಗೆ
ವೇಧೆಯಲಿ ಕೈ ಪಿಡಿದೆ ನೀ ವೀರರ ಸತೀಮಣಿಯಾ
ಮಾಧವಾ ನೀ ಮಮತೆಯಾ ಮಡು
ರಾಧೆಯಾ ರಾಗನಿವ ನರಕನ
ಭಾಧೆಯಾ ಭಂಧನವ ಬಿಡಿಸಿದ ಅಂಗನಾಲೋಲಾ
ಆಧರದ ಸೋದರನೆ ನೆಚ್ಚಿಗೆ
ಸಾಧಿಸಲೊಲವ ವಿಜಯನರಸಿಗೆ
ವೇಧೆಯಲಿ ಕೈ ಪಿಡಿದೆ ನೀ ವೀರರ ಸತೀಮಣಿಯಾ
ಸೀಸ ಪದ್ಯ…..೬ ವಿಷ್ಣುಗಣ(ಅಥವಾ ೫ ಮಾತ್ರೆಯ ೬ ಗಣಗಳು) + ೨ ಬ್ರಹ್ಮಗಣ ( ಅಥವಾ ೩ ಮಾತ್ರೆ ೨ ಗಣಗಳು) ಗಳ ೪ ಸಾಲುಗಳು…
೫*೬ + ೩*೨
ಕೊನೆಗೆ ಸೀಸದ ಜೊತೆಯಾಗಿ ಬರುವ ತೇಟಗೀತೆ( ೩ * ೧ + ೫*೨ + ೩* ೨)
ಮಾತ್ರೆಗಳಿಗಕ್ಷರಗಳನಿಡುವಿಕ್ಕಟ್ಟಲೆ ಜಗದಗಲವ ನಿರ್ಮಿಸಿ ನಗುತಲೆ ನಡೆದ
ಪದಮಾತ್ರ ದಲೆ ಕಾವ್ಯಸಾಸಿರವ ಸೃಜಿಪ ಕವಿಯ೦ತ್ರತಿರುಪುಗಳ್ ಬಿಗಿವ೦ಥ ಯ೦ತ್ರಿ |
ಛ೦ದದಿ೦ ಚ೦ದವಾಗಿಹಕಾವ್ಯದಿ೦ ಬದಲಿಸಿಹ ಜೀವಗತಿಯ ಹುರುಪಿನಿ೦ ಕಾವ್ಯೋ
ದ್ಯೋಗಕ್ಕೆಳೆಸಿ ದಾರಿಯಲಿ ಹೆಜ್ಜೆ ಗುರುತೊ೦ದಕ೦ಡು ನಮಿಸುತಿರಿಸಿಹೆ ಹೆಜ್ಜೆಯೊ೦ದಾ ||
ಸ್ವೀಕರಿಸಿ ಶ್ರೀಶನೀ ಸೀಸವ೦ ಹರಸಿ ನೀವ್
ಕೈಯೆಡವದ೦ತೆ ಮನದಿ೦ಗಿತವ೦ ರಚಿಸಲ್ ||
~~~~~~~~~~~~
ಬರಿಯ ಜನ್ಮದ ಬಲ ಸಾಲದು:
———————–
ಬರಿಯ ಜನ್ಮದ ಬಲದಲೇನಿದೆ
ನರನನುತ್ತಮನೆಂದು ಬಗೆಯುವ
ಸ್ಥಿರದ ಶೌರ್ಯ ಕುಶಾಗ್ರಮತಿಯ ವಿಲಾಸ ಸೊಗಸುಗಳು?
ಪುರದ ರಾಜನ ಕುವರನಾದೊಡೆ
ತುರುಗಳನು ಹಿಡಿದೊಯ್ದ ಕೇಡಿಗ
ಕುರುಜನರ ಪವ್ರುಷವನಡಗಿಸೆ ಉತ್ತರೋತ್ತರನೆ? ||೧||
[ಕುರುಜನರ ಪವ್ರುಷವನಳಿಸದ ಉತ್ತರೋತ್ತರನೆ? ]
ಶಿವನ ಕಾಲ್ತುಳಿತದಲಿ ಅಲೆತಾಂ-
ಡವದ ನಾಟ್ಯಕೆ ಹೆಜ್ಜೆ ಹಾಕಿತೆ?
ಜವನ ಮಹಿಷನೆ ಕಪ್ಪು ಅಲೆಗಳ ರೂಪ ತಾಳಿದನೆs?
ರವಿಯ ಬೆಳಕನೆ ಮಾಸುವಂದದಿ
ಕವಿಸುತಲಿ ಕತ್ತಲೆಯ ನಿಮಿಷದೆ
ಸವೆಸಿದುದು ಜೀವಗಳ ಶರಧಿಯ ಮಂಥನದ ವಿಷವೇ?
ಸರಳ ರಗಳೆ:
ಅತಿ ಸುಲಭವಾದ ಛ೦ದೋಬ೦ಧ. ೫ ಮಾತ್ರೆಗಳ ೪ ಗಣಗಳು ಪ್ರತಿ ಸಾಲಿನಲ್ಲಿ…ಆದಿ-ಅ೦ತ್ಯ ಪ್ರಾಸದ ರಗಳೆ ಇಲ್ಲವಾದ್ದರಿ೦ದ…ಇದು ಸರಳ ರಗಳೆ 🙂
ಹೊದೆದ ಕ೦ಬಳಿಸರಿದು ಹಿಮದಹನಿ ಕರಗಿರಲು
ಎಲೆರಾಶಿಯೆಲ್ಲೆಲ್ಲು ಭೂಗವಚದ೦ತಿರಲು
ಕೊರಳ ಕೋಗಿಲೆ ಕೊಡವಿ ದು೦ಬಿ ಮೈಮುರಿದಿರಲು
ಕಳೆಯುತಿದೆ ಮಾಘ ಜಗಕಾದಿಹುದು ಹೊಸತನಕೆ.
ಹತ್ತು ವರ್ಷದ ಮುನ್ನ ತೇರಲಿ
ಸುತ್ತಮುತ್ತೋಡಾಡುತಿದ್ದಿರಿ
ಹತ್ತಿರದ ಹೆಣ್ಣೆಂದು ಮೆಚ್ಚುತ ಮುತ್ತನೊತ್ತಿದಿರಿs ||
ಕತ್ತನೆತ್ತದ ಭಯದ ಭರ ನಾ –
ಚುತ್ತ ಕರಗುತ ಕೆಂಪಡರಿ ಮನೆ –
ಯತ್ತ ಓಡಲು ಕೆನ್ನೆಗೆರಡನು ಕೊಟ್ಟರದು ಹದನs || ೧ ||
ಮನೆಗೆ ಹಿರಿಯರ ಕೂಡಿ ಬಂದವ –
ರೆನಗೆ ಉಡುಗೊರೆಯೊಂದ ತಂದು ಲ –
ಗನದ ಮಾತಾಡಿದಿರಿ ಗೆಲುವನು ಹರಡಿದಿರಿ ಬಹುಳ ||
ಇನಿಯರಾದಿರದೊಂದು ಪರಿಯಿಂ –
ದೆನಗೆ ನಚ್ಚನೆ ಸನಿಹ ಬಂದಿರಿ
ಪುನಹ ಪಡೆದಿರಿ ಹೋದ ಮಾನವ ಜೊತೆಗೆ ಹೆಣ್ಣೊಂದs || ೨ ||
ನೆಂಟರೆಲ್ಲರ ಸದರ ಸಡಗರ
ತುಂಟ ಮಕ್ಕಳ ಕೂಟದಾಟಗ –
ಳೆಂಟು ದಿನಗಳ ಮದುವೆ ಸಂಭ್ರಮ ಸಂದ ಸುಮ ಸಮಯ ||
ಅಂಟಿ ಹೊರಟಿತು ಬಾಳ ಬಂಡಿಯು
[ ಅಂಟಿ ಹೊರಟೆವು ಬಾಳ ಪಥದಲಿ ]
ಬಂಟರೆಲ್ಲರ ಶುಭದ ಹರಕೆಯ
ಸೊಂಟ ಬಾಗಿಸಿ ಪಡೆದ ಹಿರಿಯರ ವರಗಳನುಗ್ರಹದಿs || ೩ ||
ಬಳೆಯು ಮೇಲೇರದೆಲೆ ಮುಂಗೈ –
ಗಳಲಿ ನೋವಾಗಿರಲು ಹಯ್ಯೋ
ಕಳವಳದಿ ಕೆಳಗಿಳಿದು ಬಂದಿರಿ ಚಿಂತೆಯಾಗ್ರಹದಿs ||
ಬಳೆಯ ಸೆಟ್ಟಿಯ ಕುಹಕ ನಗೆಯಿಂ –
ದಳಿದ ತಾಳ್ಮೆಯ ಕೋಪವದು ಮೈ
ಪುಳಕಗೊಳಿಸಿತು ನಿಮ್ಮ ಗೆಳೆತನದುಪರಿ ವಾತ್ಸಲ್ಯ || ೪ ||
ಬೆಟ್ಟಗಳ ಸಾಲಿನಲಿ ಹಾದಿಯು
ಬೆಟ್ಟಗಲದಷ್ಟಿರಲು ಜೊತೆಯಲಿ
ಕಟ್ಟಿಕೊಂಡೋಡಾಡುತಿದ್ದಿರಿ ನನ್ನ ಸಂತಸದಿs ||
ನಿಟ್ಟಿನಲಿ ಮುಂದಾಗಿ ನಡೆದಿರಿ
ಬಿಟ್ಟಿರದೆ ಕಣಿವೆಯಲಿ ಹಿಂಗಡೆ –
ಯೊಟ್ಟು ತಿರುಗುತಲೊಟ್ಟು ನಲಿಯುತ ಕೂಡೆ ಸಂಗಡಣೆ || ೫ ||
ಸಿರಿತನದಿ ಬಡತನದಿ ಯಾರೇ
ಇರಲಿಯಾರಿರದಿರಲಿ ಸಮದಿಂ
ಮೆರೆದಿರೆದರದೆ ದೊರೆಯ ತರದಲಿ ಧೀರ ನಿಲುವಿನಲಿs ||
ಸರಿಗನಿಗೆ ಒಪ್ಪಾಗಿ ಕಂದದ
ಮರಿಗೆ ನಾ ದಿಕ್ಕಾಗಿ ಜೊತೆಯ –
ಲ್ಲಿರಲು ಸಂಗಡ ಪಯಣಿಸುವ ನಾವ್ ತುಂಬು ಜೀವನದಿs || ೬ ||
– ರಾಮಚಂದ್ರ