Dec 052012
 
ಪದ್ಯಸಪ್ತಾಹ ೪೯: ಮೊತ್ತಮೊದಲ ತುಂಬುಗನ್ನಡದ ಶತಾವಧಾನದ ಐತಿಹಾಸಿಕ ಕ್ಷಣಗಳು

  ಮಂಗಳಮಂಟಪದ ವೇದಿಕೆಯಲ್ಲಿ ಶತಾವಧಾನಿಗಳು ಮತ್ತು ಪೃಚ್ಛಕವಿದ್ವಾಂಸರು. ಮೊತ್ತ ಮೊದಲ ತುಂಬುಗನ್ನಡದ ಶತಾವಧಾನದ ಅಭೂತಪೂರ್ವ ಯಶಸ್ಸಿನ ಮತ್ತಿನಲ್ಲಿರುವ ಪದ್ಯಪಾನಿಗಳೇ, ನಿಮ್ಮ ನಶೆಗೆ ಕಾರಣವೇನೆ೦ಬುದನ್ನೇ ಈ ವಾರ ಪದ್ಯವಾಗಿಸಿ. ಹೊಸ ಸದಸ್ಯರು ಆದಷ್ಟುಮಟ್ಟಿಗೆ ’ಪದ್ಯವಿದ್ಯೆ’ಯನ್ನು ನೋಡಿ, ವೀಡಿಯೋ ತರಗತಿಗಳನ್ನು ಕೇಳಿ ನ೦ತರ ರಚನೆಯಲ್ಲಿ ತೊಡಗಿಕೊಂಡರೆ ಒಳ್ಳೆಯದು. ಇದೇ ಸಂದರ್ಭದಲ್ಲಿ, ಈ ಒ೦ದು ಐತಿಹಾಸಿಕ ಕ್ಷಣಗಳನ್ನು ಅನುಭವಿಸಲು ಮತ್ತು ಅದಕ್ಕೆ ಸಾಕ್ಷಿಯಾಗಲು  ನೆರವಾದ ಎಲ್ಲ ವೀಕ್ಷಕರಿಗೂ ಪದ್ಯಪಾನದ ಪರವಾಗಿ ಅನ೦ತಾನ೦ತ ವಂದನೆಗಳು. ಇ೦ತಹಾ ಒಂದು ಮಹಾಯಶಸ್ಸಿಗೆ ಕಾರಣವಾದರೂ ಈ ಕಾರ್ಯಕ್ರಮವನ್ನು […]

Nov 242012
 

ಪದ್ಯಪಾನದಲ್ಲಿ ಪುಷ್ಪೋತ್ಸವ! ನಿಮಗಿಷ್ಟವಾದ ಹೂವಿನ ಬಗೆಗೆ ಪದ್ಯವನ್ನು ನಿಮಗಿಷ್ಟವಾದ ಛಂದಸ್ಸಿನಲ್ಲಿ ರಚಿಸಿ.   ಪದ್ಯನಿದರ್ಶನಂ – ೪: ಪಂಪನ ಆದಿಪುರಾಣದಿಂದ (ಚಂಪಕಮಾಲೆ): ಎಸೞ್ಗಳನೆಯ್ದೆ ಕಂಡರಿಸಿ ಮುತ್ತಿನೊಳಲ್ಲಿ ಸುವರ್ಣಚೂರ್ಣಮಂ ಪಸರಿಸಿ ಕೇಸರಾಕೃತಿಯೊಳಲ್ಲಿಗೆ ಕರ್ಣಿಕೆಯಂದಮಾಗೆ ಕೀ ಲಿಸಿ ಪೊಸತಪ್ಪ ಮಾಣಿಕದ ನುಣ್ಬರಲಂ ಮಧು ಮನ್ಮಥಂಗೆ ಬ ಣ್ಣಿಸಿ ಸಮೆದಂತೆ ತೋಱುವುದು ಪೂಗಳೊಳೇಂ ಸುರಹೊನ್ನೆ ಚೆನ್ನಮೋ [ಉಚ್ಛಾರದಲ್ಲಿ ೞ್ ಳ್ ಗೂ, ಱ್ ರ್ ಗೂ ಸಮೀಪ.] ಎಯ್ದೆ = ಚೆನ್ನಾಗಿ, ವಿಶೇಷವಾಗಿ. ಕರ್ಣಿಕೆ = ಹೂವೊಂದರ ನಟ್ಟನಡುವಿನ ಭಾಗ. ನುಣ್ಬರಲಂ = […]

Nov 172012
 

ಕನಸೊಳ್ ಕೊಂಡಿಹ ಸಾಲಮಂ ನನಸಿನೊಳ್ ತೀರ್ಚಿರ್ಪುದೇ ಸಮ್ಮತಂ ಈ ಸಮಸ್ಯೆಯನ್ನು ಮತ್ತೇಭವಿಕ್ರೀಡಿತದಲ್ಲಿ ಪರಿಹರಿಸಿ. ಈ ಛಂದಸ್ಸಿನ ಗತಿ ಹೀಗಿದೆ: ನನನಾನಾನನನಾನನಾನನನನಾ|ನಾನಾನನಾನಾನನಾ ಗತಿಗಾಂಭೀರ್ಯದತುಂಬುಚೆಲ್ವುಮೆರೆಯಲ್ಮತ್ತೇಭವಿಕ್ರೀಡಿತಂ   ಪದ್ಯನಿದರ್ಶನಂ ೩: ರನ್ನನ ಗದಾಯುದ್ಧದಿಂದ:[ಮತ್ತೇಭವಿಕ್ರೀಡಿತ] ಎನಿತುಂ ದ್ರೌಪದಿ ಮುಕ್ತಕೇಶಿ ನಮೆವಳ್ ತದ್ದುಃಖಮಂ ಕಂಡು ಕಂ- ಡೆನಿತುಂ ಸೈರಿಪೆವಾನುಮೆನ್ನನುಜರುಂ ಪಾಂಚಾಲಿಯಂ ನೋಡಿ ನೀಂ ಮನದೊಳ್ ನೋವುದುಮಿಲ್ಲ ನಿಷ್ಕರುಣಿಯಯ್ ನೀನಿಂತಿರಾನನ್ನೆಗಂ ಮುನಿಸಂ ತೀರ್ಚಿ ನರೇಂದ್ರವೈರಿತರುವಂ ನಿರ್ಮೂಲನಂ ಮಾಡುವೆಂ [ಸೈರಿಪೆವಾನುಮೆನ್ನನುಜರುಂ = ಸೈರಿಪೆವ್ ಆನುಮ್ ಎನ್ನನುಜರುಂ, ನೀನಿಂತಿರಾನನ್ನೆಗಂ = ನೀನಿಂತಿರೆ ಆನ್ ಅನ್ನೆಗಂ]   ಹಳಗನ್ನಡ ವಿಭಕ್ತಿಪ್ರತ್ಯಯಗಳು ೧: […]

Nov 092012
 

ಸರ, ಸಿರಿ, ಸುರು, ಸೆರೆ – ಇವನ್ನು ಬಳಸಿ, ಅರ್ಜುನ ಗಾಂಡೀವವನ್ನು ಬಿಡಬೇಕಾದ ಸಂದರ್ಭವನ್ನು ಚಂಪಕಮಾಲೆಯಲ್ಲಿ ವಿಸ್ತರಿಸಿ: ಇದನ್ನು ಮುಂದುವರಿಸಿ ಸರಸರ, ಸಿರಿಸಿರಿ, ಸುರುಸುರು, ಸೆರೆಸೆರೆ – ಎಂದಿಟ್ಟೂ ಪ್ರಯತ್ನಿಸಬಹುದು. [ ಚಂಪಕಮಾಲೆಯ ನಡೆ – ಸುಲಲಿತಶಾಂತಕಾಂತಸುಮಕೋಮಲಚಂಪಕಮಾಲೆಯಪ್ಪುಗಂ] ಪದ್ಯನಿದರ್ಶನಂ ೨: [ಇದಕ್ಕೆ ಮೇಲಿನ ಸಮಸ್ಯೆಗೆ ಸಂಬಂಧವಿಲ್ಲ. ಇದೊಂದು ಉದಾಹರಣೆಯ ಪದ್ಯ. ಪದ್ಯಪಾನಿಗಳು ಇವನ್ನು ಕಂಠಸ್ಥಮಾಡಿಕೊಳ್ಳುವುದಕ್ಕೆ ಯಾವುದೇ ಪೇಟೆಂಟ್ ಗಳ ಅಡ್ಡಿಇಲ್ಲ :-)] [ಶಕುಂತಲ ನಾಟಕದ ನಾಲ್ಕನೆಯ ಅಂಕದಲ್ಲಿ ಬರುವ ಪದ್ಯದ ಅನುವಾದ – ಅನುವಾದಿಸಿದವರು ಬಸವಪ್ಪಶಾಸ್ತ್ರಿ ] ಜಲವನದಾವಳೀಂಟಳೆರೆದಲ್ಲದೆ ನಿಮ್ಮಯ ಪಾತೆಗಂಬುವಂ ತಳಿರ್ಗಳ […]

Nov 032012
 

ಗೆಳೆಯರೇ, ವಿದ್ವತ್ತು, ಧಾರಣೆ ಮತ್ತು ಹಾಸ್ಯಚಮತ್ಕಾರಗಳು ಕಾಲನಾಲಯದಲ್ಲಿ ಹರಿಯುವ ನದಿಗಳು. ಇವೆಲ್ಲಾ ಒಂದೇ ಕಡೆ ಸಂಗಮವಾದ ಅಪೂರ್ವ ತಾಣದಲ್ಲಿ ಅವಧಾನಿಯ ಉದಯವಾಗುತ್ತದೆ. ಅವಧಾನದ ಜುಳುಜುಳು ಸದ್ದು ಮೂಡುತ್ತದೆ. ಜಗತ್ತಿನ ಅಹಂಕಾರದ ಪೊರೆಕಳಚಿ, ವಿಭೂತಿಯ ಅನುಭವವಾಗುತ್ತದೆ. ಇಂಥಾ ಸುಸಂದರ್ಭವೊಂದು ನಮ್ಮೆದುರಿಗಿದೆ. ನಮ್ಮ ಪದ್ಯಪಾನದ ಬೆನ್ನೆಲುಬಾದ ಗಣೇಶರು ನವೆಂಬರ್ ೩೦, ಡಿಸೆಂಬರ್ ೧, ೨ಕ್ಕೆ ಶತಾವಧಾನವನ್ನು ನಡೆಸಲಿದ್ದಾರೆ. [ವಿವರಗಳು ಇಲ್ಲಿದೆ.] ಇನ್ನು ನಮ್ಮ ಕೆಲಸ. ಪದ್ಯಪಾನಿಗಳು ಕಾಲರ್ ಮಡಚಿ, ತೊಡೆ ತಟ್ಟಿ ಸಿದ್ಧವಾಗಬೇಕಿದೆ. ಪದ್ಯಪಾನಿಗಳು ಮೊದಲಸಾಲಿನಲ್ಲಿ ಕುಳಿತು, ಹಳಗನ್ನಡ ಪದ್ಯದುದಯವನ್ನು […]

Oct 302012
 

ತನ್ನಂ ತಾನೆ ಪೊಗಳ್ವುದು ಬನ್ನಮದುತ್ತರನ ಪೌರುಷಂ ಚಿಃ ಪೊಲ್ಲಂ| ಮುನ್ನಂ ಯೋಚಿಸಲಕ್ಕುಂ ತನ್ನಂ ತಾನೆ ಪೊಗಳಾಡಿಕೊಳ್ವುದೆ ಚೆನ್ನಂ|| ಸಮಸ್ಯೆ: ತನ್ನಂ ತಾನೆ ಪೊಗಳಾಡಿಕೊಳ್ವುದೆ ಚೆನ್ನಂ|| ಕಂದದೊಳ್ ಪರಿಹರಿಸಿಂ

Oct 012012
 

ಈ ಕೆಳಗಿನ ಕಥೆಯ ಸ್ಫೂರ್ತಿಯಿಂದ ತಕ್ಕದಾದ ಪದ್ಯಗಳನ್ನು ರಚಿಸಿರಿ. ಬೇಕಿದ್ದರೆ ಕಥೆಯಲ್ಲಿರುವ ೩ – ೪ ಸನ್ನಿವೇಶಗಳಲ್ಲಿ ಯಾವುದಾದರು ಬಿಟ್ಟು, ಯಾವುದನ್ನಾದರೂ ನಿಮ್ಮ ಕಲ್ಪನೆಯಂತೆ ವಿಸ್ತರಿಸಿ  ರಚಿಸಿರಿ. ಸಂದರ್ಭ ಯೋಗಾನಂದ ಎಂಬ ರಾಜನಿಗೆ ವರರುಚಿಯೆಂಬ ವಿದ್ಯಾವಂತನೂ, ಪ್ರತಿಭಾವಂತನೂ ಆದ ಮಂತ್ರಿಯಿದ್ದನು. ಯಾವುದೋ ಕಾರಣಕ್ಕೆ,  ಚಾಣಾಕ್ಷನೂ, ದೇಶಪ್ರೇಮಿಯೂ ಆದ ಶಕಟಾಲನೆಂಬ ಇನ್ನೊಬ್ಬ  ಮಂತ್ರಿಯನ್ನೂ ಅವನ ಮನೆಯವರನ್ನೂ ವರರುಚಿಯು ಹಾಳುಬಾವಿಗೆ ದೂಡಿಸಿದ್ದು, ಶಕಟಾಲನು ಮುಯ್ಯಿ ತೀರಿಸಿಕೊಳ್ಳಲು ಜೀವ ಹಿಡಿದುಕೊಂಡಿದ್ದನು. ಕಥೆ ಈ ಕಥೆಯನ್ನು ಹೇಳುತ್ತಿರುವವನು “ವರರುಚಿ” ಕಾಲಕ್ರಮದಲ್ಲಿ ಯೋಗಾನಂದನು ಕಾಮಿಯೂ […]

Sep 232012
 

“ನಾಕು ನಾಕಲೆ ಹತ್ತೆನಲಣುಗ ಪಡೆದ ಬಹುಮಾನ” ನಾಕು ನಾಕಲೆ(4X4=10) ಹತ್ತು ಎನಲು ಅಣುಗ(ಹುಡುಗ) ಪಡೆದ ಬಹುಮಾನ. ಭಾಮಿನಿ ಷಟ್ಪದಿಯಲ್ಲಿನ ಈ ಸಮಸ್ಯೆಯನ್ನು ಬಿಡಿಸಿ.

Sep 172012
 
ಪದ್ಯ ಸಪ್ತಾಹ - ೩೮; ಚಿತ್ರಕ್ಕೆ ಪದ್ಯ

ಈ ಚಿತ್ರಕ್ಕೆ ತಮ್ಮ ಆಯ್ಕೆಯ ಛ೦ದಸ್ಸಿನಲ್ಲಿ ಪದ್ಯರಚನೆಯನ್ನು ಮಾಡಿ (ಇದು ಧರಣಿಮ೦ಡಲ ಮಧ್ಯದೊಳಗೆ ಪದ್ಯದ ಚೌಕಟ್ಟಿನಲ್ಲಾದರೂ ಸರಿಯೆ ಅಥವಾ ಚಿತ್ರವನ್ನು ನೋಡಿ ತಮಗನಿಸಿದ ಮತ್ತಿನ್ನಾವ ವಿಷಯವಾದರೂ ಸರಿಯೆ).