Mar 282011
 
kanda padya

ಬಂದವನಾ ರೇ ಮನದಲಿಚಂದದಿ ನುಡಿಸುತ ಸುಮಧುರ ವೇಣು ನಿನಾದವನಂದ ಕುಮಾರನೆ ಮನದಾನಂದವ ನೀಡುತ ಮರೆಯದೆ ಪೊರೆಯಲು ಬಂದವ -venkataraghavanan attempt to write an kanda padya : a gopikas expression

Mar 272011
 
ಭಾಮಿನಿಯ ಆಕರ್ಷಣೆ

ಮೊದಲು ಬರೆದ ೪ ಮತ್ರಾಗಣದ ಪದ್ಯಗಳು (ಬಾಳೆಯ ತೋಟದ ಪಕ್ಕದ ಕಾಡಲಿ …. ತರಹದ್ದು) :: ಭಾಮಿನಿ ಮೋಹದ ಸುಧಾಲಹರಿಯಲಿ ಮೀಯುತ ಬೇರೆಲ್ಲವ ಮರೆತೆ ||ಕಾಮಿನಿ ಸುಖದಲಿ ಮುಳುಗೇಳುತನಾ ಜೀವನದಾಕರ್ಷಣೆ ಅರಿತೆ || ೧ || ಕೋಮಲ ರಾಗದಿ ಭೋಗ ಕುಸುಮಗಳು  ಅಕ್ಕರೆಯಲಿ ಕರೆಯುತಲಿಹವು ||ಸೋಮದ ಸೊಗಸನು ಮಂದಾನಿಲ ತರೆ ಕಂದವನೇ ಲಲಿತದಿ ತಹವು || ೨ || ಭಾಮಿನಿ ಸೆರೆಯಿಂ ಬಿಡುಗಡೆ ಪಡೆಯದೆ ಗದಗಿನ ಕವಿ ಕೊನೆಯುಸಿರೆಳೆದ ||ಆಮಹನೀಯನಿತರ ಚಂಚಲೆಯರ ಸೈರಿಸದೆಯೆ ಜನುಮವ ಕಳೆದ || […]

Mar 262011
 
ಒಂದು ಬೆಳಗಿನ ಮುಕ್ತಕ

ನಭದ ಉದ್ದಗಲಕ್ಕು ಕಿತ್ತಳೆಯ ತಿಳಿಗೆಂಪುಸೆರಗ ಬೀಸುತ ಬೆಕ್ಕ ನಡೆಯಲ್ಲಿ ಉಷೆಯು,ಬಳುಕುತ್ತಲಾಗಸವ ದಿವೆಯ ಮಡಿಲಿಗೆ ಹಾಕ–ಲೆಳಸುತ್ತ ಬರುತಿಹಳು, ಮೂಡಣದ ಹೋಳಿ!

Mar 242011
 
ಶಿಶುಗೀತೆ

Twinkle Twinkle Little Star…. ಕನ್ನಡದಲ್ಲಿ ನಡಸಿದ ಒಂದು ಪ್ರಯತ್ನ ಚಿನಿಮಿನಿ ಚಿನಿಮಿನಿ ನಕ್ಷತ್ರ ಏರಿದೆ ಏಕೆ ಅಷ್ಟೆತ್ರ! ಚಂದಿರನ ಎಲ್ಲಿ ಕಳಿಸಿರುವೆ ನಿನ್ನನೇ ನೋಡುತ ಮೈಮರೆವೆ! ಅರಳಿತು ಕಂಗಳು ನಿನ್ನ ನೋಡಿ ಎಣಿಸುತ ದಣಿದೆ ಓಡಾಡಿ! ಮಣಿಯೇ ನೀನು ಅಮ್ಮನ ಸರಕೆ ಬಾರೆಲೆ ತಾರೆಯೆ ಹತ್ತಿರಕೆ! ಉಣಿಸುವಳಮ್ಮ ನಿನ್ನ ತೋರಿ ಕುಣಿಯುತ ಮೊಮ್ಮುವೆ ನಾ ಹಾರಿ! – ರಜನೀಶ

Mar 232011
 
ಮಾಧವ....

ಮಾಧವಾ ನೀ ಮಮತೆಯಾ ಮಡು ರಾಧೆಯಾ ರಾಗನಿವ ನರಕನ ಭಾಧೆಯಾ ಭಂಧನವ ಬಿಡಿಸಿದ ಅಂಗನಾಲೋಲಾ ಆಧರದ ಸೋದರನೆ ನೆಚ್ಚಿಗೆ ಸಾಧಿಸಲೊಲವ ವಿಜಯನರಸಿಗೆ ವೇಧೆಯಲಿ ಕೈ ಪಿಡಿದೆ ನೀ ವೀರರ ಸತೀಮಣಿಯಾ

Mar 212011
 
ಶ್ರೀಶನ-ಸೀಸ

ಸೀಸ ಪದ್ಯ…..೬ ವಿಷ್ಣುಗಣ(ಅಥವಾ ೫ ಮಾತ್ರೆಯ ೬ ಗಣಗಳು) + ೨ ಬ್ರಹ್ಮಗಣ ( ಅಥವಾ ೩ ಮಾತ್ರೆ ೨ ಗಣಗಳು) ಗಳ ೪ ಸಾಲುಗಳು…೫*೬ + ೩*೨ಕೊನೆಗೆ ಸೀಸದ ಜೊತೆಯಾಗಿ ಬರುವ ತೇಟಗೀತೆ( ೩ * ೧ + ೫*೨ + ೩* ೨) ಮಾತ್ರೆಗಳಿಗಕ್ಷರಗಳನಿಡುವಿಕ್ಕಟ್ಟಲೆ ಜಗದಗಲವ ನಿರ್ಮಿಸಿ ನಗುತಲೆ ನಡೆದಪದಮಾತ್ರ ದಲೆ ಕಾವ್ಯಸಾಸಿರವ ಸೃಜಿಪ ಕವಿಯ೦ತ್ರತಿರುಪುಗಳ್ ಬಿಗಿವ೦ಥ ಯ೦ತ್ರಿ |ಛ೦ದದಿ೦ ಚ೦ದವಾಗಿಹಕಾವ್ಯದಿ೦ ಬದಲಿಸಿಹ ಜೀವಗತಿಯ ಹುರುಪಿನಿ೦ ಕಾವ್ಯೋದ್ಯೋಗಕ್ಕೆಳೆಸಿ ದಾರಿಯಲಿ ಹೆಜ್ಜೆ ಗುರುತೊ೦ದಕ೦ಡು ನಮಿಸುತಿರಿಸಿಹೆ ಹೆಜ್ಜೆಯೊ೦ದಾ […]

Mar 202011
 
ಮಹರ್ಷಿ ವಾಲ್ಮೀಕಿಯ ಮೊದಲ ಶ್ಲೋಕ ಬರೆದ ಸಂಧರ್ಭವ ವಸ್ತುವಿಟ್ಟು ಬರೆದಿದ್ದೇನೆ:

ನೀರ ತಿಳಿ ತೊರೆಗಳ ನಿನಾದದ- ಪಾರ ಹಸಿರಿನ ಶಾಲಗಳ ವಿ- ಸ್ತಾರ ವನಗಳು ಚಿತ್ರಕೂಟದ ಸೊಭಗ ಮೆರೆಸಿಹವು || ಧೀರ ಮುನಿಗಳ ಶಾಂತ ತಪಗಂ- ಭೀರ ಯಜ್ಞ್ಯದ ಕಾರ್ಯವಲ್ಲದೆ ದೂರ ದೇಶದ ವಲಸೆ ಪಕ್ಷಿಗಳನ್ನು ಸೆಳೆಯುತಲಿ || ೧ || ದ್ರುಮಗಳಡಿಯಲೆ ತಮಸೆ ತಟದಾ- ಶ್ರಮದೆ ವಾಲ್ಮೀಕಿಮುನಿ ಜಪತಪ ಕ್ರಮದೆ ನಡೆಸುತ ಹಲವು ವರ್ಷಗಳಲ್ಲೆ ಕಳೆದಿಹನು || ಶ್ರಮದೆ ಯೋಜನೆಗಳನು ದಾಟುತ ಕ್ರಮದೆ ಸ್ಥಳ ಪರಕಿಸಲು ಇದೆವಿ- ಶ್ರಮಕೆ ಯೋಗ್ಯವನೆಂದು ಕ್ರೌಂಚಗಳೆರಡರಭಿಮತವು || ೨ || ಶಾಲದತಿ […]

Mar 192011
 
ಭಾಮಿನಿಯ ಮಳೆ

ಉತ್ತರಕೆ ಪ್ರತ್ಯುತ್ತರಗಳಿರೆಮತ್ತೆ ಪದ್ಯಗಳೋಡಿ ಬರುತಿರ –ಲೆತ್ತಿ ನಲಿದುದು ಪ್ರತಿಭೆ ಕಾವ್ಯ ಕುತೂಹಲಿಗರೆದೆಯೊಳ್  ||ಸುತ್ತ ಭಾಮಿನಿ ಷಟ್ಪದಿಗಳಲಿಮುತ್ತಿ ಬರುತಿಹುದೀಸುಹಾಸವುತುತ್ತ ಮರೆಸುತಲಿದ್ದುದಲ್ಲದೆ ನಿದ್ರೆಯನು ಕಾಡಿ || ||

Mar 192011
 
ಅನಾಸಕ್ತರಿಗೂ 'ವಿಶ್ವಕಪ್ ಕ್ರಿಕೆಟ್'ನ ಕೊಡುಗೆ (ಭಾಮಿನಿ)

ಆಟವಿದ ಬಹು ರೋಚಕದೆ ಜನ ಗೂಟ ಹೊಡೆಯುತ ದೂರದರ್ಶನ ನೋಟ ನೋಡಲು ಎಲ್ಲ ಸಮಯವ ಮೀಸಲಿಡುತಿಹರು! ಸ್ಫೋಟದಲೆ ಬೆಳೆದಿರುವ ದೇಶದ ಕಾಟದತಿ ಬಂಡಿಗಳ ಪಥಗಳು ಮಾಟವೆನೆ ಸುಲಭದಲಿ ಕೆಲಸವ ಮಾಡೆ ತೆರೆದಿಹವು!!!

Mar 182011
 
ಜನ್ಮದ ಬಲ

ಇದು ಸೋಮ ಪದ್ಯ ಮೂಲಕ ಕೇಳಿದ ಪ್ರಶ್ನೆಗೆ ಒಂದು ಉತ್ತರ :: ತಂದೆ ತಾತರು ಪಿತೃಗಳೆಲ್ಲರು  ತಂದ ಪೂರ್ವಾಪರದ ಗತಿಗಳ ಮುಂದುವರಿಸಿದ ತಳಿಯ ಪುಣ್ಯದ ಜನುಮವೆಮ್ಮಿರವು || ಹಿಂದೆ ಕೇಡಿಗರೆದುರು ಹೆದರಿರೆ ಮುಂದೆ ಕುರುಗಳ ಕ್ಷೇತ್ರ ಯುದ್ಧದಿ ತಂದೆ ಸಹಿತದಿ ಹೋರಿ ಮಡಿದವ ಹೇಡಿಯೆಂತಹನು? [ಇನ್ನೂ ಮುಂದುವರಿಯಲೂ ಬಹುದು :-)] – ರಾಮಚಂದ್ರ

Mar 182011
 
ಸೋಮನಾಥ ದೇವಾಲಯದ ಬಗ್ಗೆ ಭಾಮಿನಿ ಷಟ್ಪದಿಯಲ್ಲಿ ಒಂದು ಪದ್ಯ

ದಾಳಿ ಕೋರರ ಕತ್ತಿ ಹೊಡೆತಕೆ  ಸಿಲುಕಿ ತತ್ತರಿಸಿದ್ದ  ನಿನ್ನಯ  ಅಳಲನಾಲಿಸಿ ಆಸೆಯೊಂದನು ಕಂಡರು ಪಟೇಲರು | ಅಲ್ಲಿ ಶಿವ ದೇಗುಲವ ಕಟ್ಟಿಸಿ ಬೆಳೆಸಿ ರಾಷ್ಟ್ರ ಪ್ರೇಮ ಭಕುತಿಯ   ಅಳಸಿದರು ಪಾತಕವನೆಸಗಿದ ವೈರಿ ನೆನಪುಗಳಾ || Corrections/suggestions welcome

Mar 172011
 
ಭಾಮಿನಿಯಲ್ಲಿ ೩ ಪದ್ಯಗಳು

ಬರಿಯ ಜನ್ಮದ ಬಲ ಸಾಲದು:———————– ಬರಿಯ ಜನ್ಮದ ಬಲದಲೇನಿದೆನರನನುತ್ತಮನೆಂದು ಬಗೆಯುವಸ್ಥಿರದ ಶೌರ್ಯ ಕುಶಾಗ್ರಮತಿಯ ವಿಲಾಸ ಸೊಗಸುಗಳು?ಪುರದ ರಾಜನ ಕುವರನಾದೊಡೆತುರುಗಳನು ಹಿಡಿದೊಯ್ದ ಕೇಡಿಗಕುರುಜನರ ಪವ್ರುಷವನಡಗಿಸೆ ಉತ್ತರೋತ್ತರನೆ? ||೧||[ಕುರುಜನರ ಪವ್ರುಷವನಳಿಸದ ಉತ್ತರೋತ್ತರನೆ? ] ಬಾಲವಯದಲಿ ಹಾದಿ ತಪ್ಪಿದಲೋಲ ಸಖಿಯರ ತರುಣನಿವ ತಾಸಾಲ ತೀರಿಸೆ ಪಾಂಡು ಪುತ್ರಗೆ ಪ್ರಾಣವನೆ ಕೊಟ್ಟಕಾಲ ಪಥದಲಿ ಮನುಜನಡತೆಯುವಾಲಿಪುದಕವಗುಣಗಳೆಲ್ಲವ ಜಾಲಿ ಸುತತಾ ಸಾಕ್ಷಿ ಯಾಯಿತು ಹಿರಿಮೆ ಯುತ್ತರನ ||೨|| ಜಪಾನಿನ ಭೀಕರ ದುರಂತದ ಬಗ್ಗೆ:————————– ಶಿವನ ಕಾಲ್ತುಳಿತದಲಿ ಅಲೆತಾಂ-ಡವದ ನಾಟ್ಯಕೆ ಹೆಜ್ಜೆ ಹಾಕಿತೆ?ಜವನ ಮಹಿಷನೆ ಕಪ್ಪು ಅಲೆಗಳ […]