ಈ ಚಿತ್ರಕ್ಕೆ ಸೂಕ್ತವಾದ ಪದ್ಯವನ್ನು ನಿಮಗಿಷ್ಟವಾದ ಛಂದಸ್ಸಿನಲ್ಲಿ ಬರೆಯಿರಿ ::
“ವಿಪ್ರೋ”(Wipro), “ಸತ್ಯಂ”(Satyam),”ಟಿಸಿಎಸ್”(TCS), “ಗೂಗಲ್”(Google), ಈ ಪದಗಳನ್ನು ಉಪಯೋಗಿಸಿ ಮಳೆಯನ್ನು ವರ್ಣಿಸಿ. ಛ೦ದಸ್ಸಿನ ಆಯ್ಕೆ ನಿಮ್ಮದೇ.
ಈ ಕೆಳಗಿನ ಕಥೆಯ ಸ್ಫೂರ್ತಿಯಿಂದ ತಕ್ಕದಾದ ಪದ್ಯಗಳನ್ನು ರಚಿಸಿರಿ. ಬೇಕಿದ್ದರೆ ಕಥೆಯಲ್ಲಿರುವ ೩ – ೪ ಸನ್ನಿವೇಶಗಳಲ್ಲಿ ಯಾವುದಾದರು ಬಿಟ್ಟು, ಯಾವುದನ್ನಾದರೂ ನಿಮ್ಮ ಕಲ್ಪನೆಯಂತೆ ವಿಸ್ತರಿಸಿ ರಚಿಸಿರಿ.
ಸಂದರ್ಭ
ಯೋಗಾನಂದ ಎಂಬ ರಾಜನಿಗೆ ವರರುಚಿಯೆಂಬ ವಿದ್ಯಾವಂತನೂ, ಪ್ರತಿಭಾವಂತನೂ ಆದ ಮಂತ್ರಿಯಿದ್ದನು. ಯಾವುದೋ ಕಾರಣಕ್ಕೆ, ಚಾಣಾಕ್ಷನೂ, ದೇಶಪ್ರೇಮಿಯೂ ಆದ ಶಕಟಾಲನೆಂಬ ಇನ್ನೊಬ್ಬ ಮಂತ್ರಿಯನ್ನೂ ಅವನ ಮನೆಯವರನ್ನೂ ವರರುಚಿಯು ಹಾಳುಬಾವಿಗೆ ದೂಡಿಸಿದ್ದು, ಶಕಟಾಲನು ಮುಯ್ಯಿ ತೀರಿಸಿಕೊಳ್ಳಲು ಜೀವ ಹಿಡಿದುಕೊಂಡಿದ್ದನು.
ಕಥೆ
ಈ ಕಥೆಯನ್ನು ಹೇಳುತ್ತಿರುವವನು “ವರರುಚಿ”
ಕಾಲಕ್ರಮದಲ್ಲಿ ಯೋಗಾನಂದನು ಕಾಮಿಯೂ ವಿಶೃಂಖಲನೂ ಆದನು. ಆದ್ದರಿಂದ ಶಕಟಾಲನ ಸಹಾಯವಿರುವುದು ಒಳ್ಳೆಯದೆಂದು ನಾನು ಅವನನ್ನು ಎತ್ತಿ ತರಿಸಿ ಮತ್ತೆ ಮಂತ್ರಿಯಾಗಿ ಮಾಡಿದೆ. ಅವನು ಕಾಲವನ್ನು ನಿರೀಕ್ಷಿಸುತ್ತಾ ನಮ್ರನಾಗಿ ನಡೆದುಕೊಳ್ಳುತ್ತಿದ್ದನು.
ಒಂದು ದಿನ ಯೋಗಾನಂದನು (ರಾಜನು) ಊರ ಹೊರಗೆ ಸಂಚಾರ ಮಾಡುತ್ತಾ ಗಂಗೆಯಲ್ಲಿ ಐದು ಬೆರಳುಗಳೂ ಕೂಡಿಕೊಂಡಿದ್ದ ಒಂದು ಹಸ್ತ ಮೇಲಕ್ಕೆ ಎದ್ದಿರುವುದನ್ನು ನೋಡಿದನು. ಕೂಡಲೆ ನನ್ನನ್ನು ಕರೆಸಿ ಅದೇನು ಎಂದು ಕೇಳಿದನು. ನಾನು ಅದಕ್ಕೆ ಪ್ರತಿಯಾಗಿ ಎರಡು ಬೆರಳುಗಳನ್ನು ತೋರಿಸಲು, ಆ ಹಸ್ತವು ಅದೃಶ್ಯವಾಯಿತು. ರಾಜನಿಗೆ ಇನ್ನೂ ಆಶ್ಚರ್ಯವಾಗಿ ಅದರ ಅರ್ಥವನ್ನು ಕೇಳಿದನು. ನಾನು “ಐದು ಜನ ಒಟ್ಟುಗೂಡಿದರೆ ಈ ಜಗತ್ತಿನಲ್ಲಿ ಅಸಾಧ್ಯವಾಗಿರುವುದೂ ಉಂಟೇ? ಎಂದುಆ ಹಸ್ತವು ಸೂಚಿಸಿತು. ನಾನು “ಒಂದೇ ಮನಸ್ಸಿನ ಇಬ್ಬರು ಸೇರಿದರೂ ಸಾಕು. ಯಾವುದೂ ಅಸಾಧ್ಯವಾಗುವುದಿಲ್ಲ” ಎಂದು ಎರಡು ಬೆರಳನ್ನು ತೋರಿಸಿದೆ – ಎಂದೆನು.
ಒಂದುಸಾರಿ ಯೋಗಾನಂದನ ರಾಣಿಯು ಕೆಳಗೆ ಹೋಗುತ್ತಿದ್ದ ಒಬ್ಬ ಬ್ರಾಹ್ಮಣನನ್ನು ನೋಡಿದಲು. ಅವನೂ ಕತ್ತೆತ್ತಿ ನೋಡಿದನು. ಅಷ್ಟು ಮಾತ್ರಕ್ಕೇ ಅವನು ಆ ಬ್ರಾಹ್ಮಣನನ್ನು ಕೊಲ್ಲಿಸಲು ಆಜ್ಞೆ ಮಾಡಿದನು. ಅವನನ್ನು ವಧ್ಯ ಭುಮಿಗೆ ಕರೆದುಕೊಂಡು ಹೋಗುತ್ತಿರುವಾಗ ಅಂಗಡಿಯಲ್ಲಿದ್ದ ಒಂದು ಸತ್ತ ಮೀನು ಅದನ್ನು ನೋಡಿ ನಕ್ಕಿತು. ಅದು ರಾಜನಿಗೆ ತಿಳಿಯಿತು. ಆಗ ವಧೆಯನ್ನು ನಿಲ್ಲಿಸಿ ರಾಜನು ಆ ಸತ್ತ ಮೀನು ನಕ್ಕದ್ದು ಹೇಗೆ, ಏಕೆ ಎಂದು ಕೇಳಿದನು. ಮರುದಿನ ಬೆಳೆಗ್ಗೆ ಹೋಗಿ ನಾನು “ಅಂತಃಪುರದ ತುಂಬ ಗಂಡಸರಿದ್ದಾರೆ; ಅದು ತಿಳಿಯದೆ ರಾಜನು ನಿರಪರಾಧಿಯಾದ ಒಬ್ಬ ಬ್ರಾಹ್ಮಣನನ್ನು ಕೊಲ್ಲಿಸುತ್ತಿದ್ದಾನಲ್ಲ” ಎಂದು ನಕ್ಕಿತು – ಎಂದು ಹೇಳಿದೆ. ಆದ್ದರಿಂದ ಆ ಬ್ರಾಹ್ಮಣನು ಬದುಕಿಕೊಂಡನು.
ಮತ್ತೊಂದು ಸಾರಿ ಒಬ್ಬ ಚಿತ್ರಗಾರನು ಯೋಗಾನಂದನ ಮತ್ತು ಅವನ ಹೆಂಡತಿಯ ಚಿತ್ರವನ್ನು ಬರೆದನು. ಅದು ಸಜೀವದಂತೆ ತೋರುತ್ತಿತ್ತು. ನಾನು ಅದನ್ನು ನೋಡಿ, ಮಿಕ್ಕ ಲಕ್ಷಣಗಳಿಂದ ರಾಣಿಯ ಸೊಂಟದ ಹತ್ತಿರ ಒಂದು ಮ್ಮಚ್ಚೆಯನ್ನು ಊಹಿಸಿ ಬರೆದೆ. ಆಗ ಚಿತ್ರವು ಪೂರ್ಣವಾಯಿತೆಂದು ರಾಜನು “ಇದು ರಹಸ್ಯವಾಗಿರುವ ಸಂಗತಿ; ಇವನಿಗೆ ಹೇಗೆ ಗೊತ್ತಾಯಿತು? ಇವನಿಗೆ ಅಂತಃಪುರದೊಳಗೆ ಪ್ರವೇಶವಿದ್ದಿರಬೇಕು. ಅಂತಃಪುರದೊಳಗ್ಗೆ ಗಂಡಸರಿದ್ದದ್ದನ್ನೂ ಇವನು ಹೀಗೆಯೇ ತಿಳಿದಿರಬೇಕು” ಎಂದು ಭ್ರಾಂತಿಪಟ್ಟು , ನನ್ನ ಮೇಲೆ ಕೋಪಗೊಂಡು, ನನ್ನನ್ನು ಕೊಲ್ಲಿಸುವಂತೆ ಶಕಟಾಲನಿಗೆ ಆಜ್ಞೆ ಮಾಡಿದನು.
ಕಥೆಯ ಕೃಪೆ – ಕಥಾಸರಿತ್ಸಾಗರ ಮೂಲದ ಕನ್ನಡಲ್ಲಿ ಸಂಕೀರ್ಣ-ಸಂಗ್ರಹಗ್ರಂಥವಾದ ಎ.ಅರ್. ಕೃಷ್ಣಶಾಸ್ತ್ರಿಗಳ ಕಥಾಮೃತ
“ನಾಕು ನಾಕಲೆ ಹತ್ತೆನಲಣುಗ ಪಡೆದ ಬಹುಮಾನ”
ನಾಕು ನಾಕಲೆ(4X4=10) ಹತ್ತು ಎನಲು ಅಣುಗ(ಹುಡುಗ) ಪಡೆದ ಬಹುಮಾನ.
ಭಾಮಿನಿ ಷಟ್ಪದಿಯಲ್ಲಿನ ಈ ಸಮಸ್ಯೆಯನ್ನು ಬಿಡಿಸಿ.
ಈ ಚಿತ್ರಕ್ಕೆ ತಮ್ಮ ಆಯ್ಕೆಯ ಛ೦ದಸ್ಸಿನಲ್ಲಿ ಪದ್ಯರಚನೆಯನ್ನು ಮಾಡಿ (ಇದು ಧರಣಿಮ೦ಡಲ ಮಧ್ಯದೊಳಗೆ ಪದ್ಯದ ಚೌಕಟ್ಟಿನಲ್ಲಾದರೂ ಸರಿಯೆ ಅಥವಾ ಚಿತ್ರವನ್ನು ನೋಡಿ ತಮಗನಿಸಿದ ಮತ್ತಿನ್ನಾವ ವಿಷಯವಾದರೂ ಸರಿಯೆ).
ಬಜಾಜ್(Bajaj), ಯಮಹ(Yamaha), ಕವಸಾಕಿ(kawasaki), ಕೈನೆಟಿಕ್(kinetik)
ಈ ನಾಲ್ಕುಪದಗಳನ್ನು ಬಳಸಿ, ನಿಮ್ಮಾಯ್ಕೆಯ ಛ೦ದಸ್ಸಿನಲ್ಲಿ(ಆದಷ್ಟು ಮಟ್ಟಿಗೆ ವರ್ಣವೃತ್ತಗಳನ್ನು ಬಳಸಿ), ಒಬ್ಬಳುಸು೦ದರಿ ಮತ್ತೊಬ್ಬಳ ಗುಣಗಾನವನ್ನು ಮಾಡುವ ವಿಷಯವನ್ನಿಟ್ಟುಕೊ೦ಡು ಪದ್ಯ ರಚಿಸಿ.
ಅವಧಾನ ಕಲೆಯ ಬಗೆಗಿನ ನಿಮ್ಮ ಅನಿಸಿಕೆಗಳನ್ನು ಪದ್ಯ ರೂಪದಲ್ಲಿ ವಿವರಿಸಿರಿ. ಛಂದಸ್ಸಿನ ಆಯ್ಕೆ ನಿಮ್ಮದೇ.
ಎಲ್ಲರೂ ಅವಧಾನ ಕಲಾಪ್ರದರ್ಶನವನ್ನು ನೋಡಿರಬಹುದು. ಇಲ್ಲವಾದಲ್ಲಿ, ಮಾಹಿತಿಗಾಗಿ, ಇಲ್ಲಿ ನೀಡಿರುವ ವಿಡಿಯೋಗಳನ್ನು ನೋಡಿರಿ.
https://www.youtube.com/watch?
https://www.youtube.com/watch?
ಇಲ್ಲಿಯೂ ಕೂಡ ಪದ್ಯ ರಚನೆಗೆ ಕೆಲ ಸಾಮಗ್ರಿಯನ್ನು ನೀಡಲಾಗಿದೆ ::
ಅವಧಾನ ಕಲೆ ::
‘ಚಿತ್ತೈಕಾಗ್ರ್ಯಮವಧಾನಂ‘ ಎಂದು ವಾಮನನು ಹೇಳಿರುವಂತೆ ಮನಸ್ಸಿನ ಏಕಾಗ್ರತೆಯೇ ಅವಧಾನ.ಸ್ಮರಣೆ, ಸದ್ಯಸ್ಸ್ಫೂರ್ತಿ, ಬುದ್ಧಿ ಮತ್ತು ಕವಿತ್ವಶಕ್ತಿಗಳಿಂದ ನಡೆಸುವ ಒಂದು ವಿದ್ವತ್ಕಲೆಯೇ ಅವಧಾನ. ಅವಧಾನಿಯು ಪೃಚ್ಛಕಪಂಡಿತರು ಒಡ್ಡುವ ಸಮಸ್ಯೆಗಳಿಗೆ ಯಥೋಚಿತವಾಗಿ, ಆಶುವಾಗಿ, ಯಾವುದೇ ಲೇಖನಸಾಮಗ್ರಿಯಿಲ್ಲದೆ, ಛಂದೋಬದ್ಧಪದ್ಯಗಳ ರೂಪದಲ್ಲಿ ಪರಿಹಾರ ನೀಡುವುದು ಈ ಕಲೆಯ ವಿಶೇಷ. ಧಾರಣ ಹಾಗು ಪೂರಣ ಅವಧಾನದ ಮೂಲಧಾತುಗಳು. ಸಮಸ್ಯೆಗಳನ್ನು ನಾಲ್ಕು ಸುತ್ತುಗಳಲ್ಲಿ ಸ್ವಾರಸ್ಯಕಾರಿಯಾಗಿ ಪರಿಹರಿಸುವುದು ಪೂರಣವಾದರೆ, ಸಮಸ್ಯೆ ಮತ್ತು ಹಿಂದಿನ ಸುತ್ತುಗಳಲ್ಲಿ ನೀಡಿರುವ ಪರಿಹಾರಪಾದಗಳನ್ನು ನೆನಪಿನಲ್ಲಿಟ್ಟು, ಮುಂದುವರಿಸುವುದು ಧಾರಣೆ. ಅವಧಾನಗಳಲ್ಲಿ ಅನೇಕ ವಿಧಗಳಿದ್ದರೂ, ಅಷ್ಟಾವಧಾನ ಮತ್ತು ಶತಾವಧಾನಗಳು ಪ್ರಚುರವಾಗಿವೆ. ಅಷ್ಟಾವಧಾನದಲ್ಲಿ, ಎಂಟು ವಿಧವಾದ ಸಮಸ್ಯೆಗಳನ್ನೂ, ಶತಾವಧಾನದಲ್ಲಿ ೧೦೦ನ್ನೂ ಏಕಕಾಲದಲ್ಲಿ ಪರಿಹರಿಸುವುದಾಗುತ್ತದೆ. ಕೊನೆಯಲ್ಲಿ, ಪೃಚ್ಛಕರ ಪರಿಹಾರಗಳೊಡನೆ ಅವಧಾನವು ಪೂರ್ಣವಾಗುತ್ತದೆ.
ಅವಧಾನದ ಬೆಳವಣಿಗೆ ::
ಹೇಗೆ ರಸಮಯವಾದ ಕವಿತೆಯು ಜನರನ್ನು ಆರ್ದ್ರಗೊಳಿಸಬಹುದೋ ಹಾಗೆಯೇ ಚಮತ್ಕಾರಿಯಾದ ಕವಿತೆಗಳು ಜನರನ್ನು ನಿಬ್ಬೆರಗಾಗಿಸುತ್ತದೆ. ಕವಿಗಳ ತ೦ತ್ರಗಾರಿಕೆಯನ್ನೂ, ಕವಿತೆಯ ವಿಲಕ್ಷಣವನ್ನೂ ಸಹೃದಯರು ಅನುಭವಿಸುತ್ತಾರೆ. ಸ್ವಯ೦ ಕವಿ, ಪ೦ಡಿತರಾಗಿದ್ದ ರಾಜರುಗಳ ಆಸ್ಥಾನಗಳಲ್ಲಿ ಇ೦ತಹಚಮತ್ಕಾರ ಕವಿತೆಗಳಿಗೆ ಮನ್ನಣೆ ದೊರಕಿ, ಚಿತ್ರಕವಿತ್ವದ ಹಲವು ರೂಪಗಳಿಗೆ ಜನ್ಮನೀಡಿ, ಅವು ಬೆಳೆದದ್ದರಲ್ಲೇ ಅವಧಾನದ ಹುಟ್ಟು ಮತ್ತು ಬೆಳವಣಿಗೆಗಳನ್ನು ನೋಡಬಹುದು. ಅವಧಾನದ ಮೂಲವನ್ನು ನಾವು ವಾತ್ಸಾಯನ ಕಾಮಸೂತ್ರದಲ್ಲೇ ಕಾಣಬಹುದು.
ಸ೦ಸ್ಕೃತದಲ್ಲಿ ಅವಧಾನದ ಉದಯವು ಏಳನೆಯ ಶತಮಾನದಿ೦ದಲೇ ಆಗಿತ್ತಾದರೂ, ಶಾಸನಾದಿಗಳ ಆಧಾರದಮೇಲೆ, ಅದು ಒ೦ದು ಸ್ಪಷ್ಟರೂಪವನ್ನು ಪಡೆದದ್ದು ಹನ್ನೊ೦ದನೇ ಶತಮಾನವೆ೦ದು ಊಹಿಸಬಹುದು. ಇನ್ನು ಕನ್ನಡದಲ್ಲಿ, ೧೧ನೆಯ ಶತಮಾನದ ಕ೦ತಿಯೆ೦ಬ ಕವಯತ್ರಿಯ ಆಶುಕವಿತೆಗಳೇ ಹೆಚ್ಚು ಪ್ರಾಚೀನವಾದದ್ದು. ಕ೦ತಿ–ಹ೦ಪರದ್ದೆ೦ದು ಉಳಿದು ಬ೦ದಿರುವ ಸಮಸ್ಯಾಪೂರಣ, ದತ್ತಪದಿ, ನಿರೋಷ್ಠ್ಯ, ಪ್ರಹೇಲಿಕೆ, ಆಶುಕವಿತೆಗಳನ್ನು ಗಮನಿಸಿದರೆ, ಕ೦ತಿಯೇ ಕನ್ನಡ ಅವಧಾನಪರ೦ಪರೆಯಲ್ಲಿ ಆದ್ಯಳೆ೦ದೆನಿಸಿಕೊಳ್ಳುತ್ತಾಳೆ. ಆದರೆ ಭಾರತೀಯ ಭಾಷೆಗಳೆಲ್ಲಕ್ಕೂ ಒಪ್ಪುವಂತಹ ಅಷ್ಟಾವಧಾನದ ಸಮಗ್ರಲಕ್ಷಣವನ್ನು ಕೊಟ್ಟ ಮೊದಲ ವಿದ್ವತ್ಕವಿಯೆ೦ದರೆ ಕನ್ನಡದ ಕವಿಕಾಮ(ಕ್ರಿ. ಶ. ೧೨೦೦). ಈತನ ವಿವರಣೆಯಿ೦ದ ಇ೦ದಿನ ಅವಧಾನಸ್ವರೂಪವು ಹೇಗೆ ೮೦೦–೯೦೦ ವರ್ಷಗಳ ಕೆಳಗೇ ನಿರೂಪಿಸಲ್ಪಟ್ಟಿತ್ತೆ೦ಬುದು ತಿಳಿಯುತ್ತದೆ.
ಈವಾರಕೇನು? ಪೂರಣ
ಕಾವ ಸಮಸ್ಯೆ ಯಿರದೇನು? ಎನ್ನುತ ನೋಳ್ಪಾ
ನೀವಿರುವಿರೆಂದು ತಂದೆನ್ ::
“ಬೇವದು ಪೂದಳೆಯೆ ಪಣ್ಣು ನಿಂಬೆಯೆ ದಿಟದೊಳ್” –
ಸಮಸ್ಯಾ ಪಾದವನ್ನುಪಯೋಗಿಸಿ ಕಂದ ಪದ್ಯವನ್ನು ಪೂರೈಸಿರಿ
ಕಥಾ ಸರಿತ್ಸಾಗರದಿಂದ ಆಯ್ದ ಕಥೆಯೊಂದು ಹೀಗೆ ಶುರುವಾಗುತ್ತದೆ.
“ವತ್ಸದೇಶದ ಕೌಶಾಂಬಿಯೆಂಬ ನಗರದಲ್ಲಿ ಶತಾನೀಕನೆಂಬ ರಾಜನು ಆಳುತ್ತಿದ್ದನು. ಅವನಿಗೆ ವಿಷ್ಣುಮತಿಯೆಂಬ ರಾಣಿಯಿದ್ದಳು. ಅವಳಲ್ಲಿ ಸಹಸ್ರಾನೀಕನೆಂಬ ಮಗನು ಹುಟ್ಟಿದನು. ಶತಾನೀಕನು ಅವನಿಗೆ ಸಕಾಲದಲ್ಲಿ ಯುವರಾಜ ಪಟ್ಟ ಕಟ್ಟಿ ಹೆಸರು ಮಾತ್ರಕ್ಕೆ ರಾಜ್ಯಭಾರವನ್ನು ಹೊತ್ತಿದ್ದನು. ದೇವಾಸುರ ಯುದ್ಧದಲ್ಲಿ, ಇಂದ್ರನಿಗೆ ಸಹಾಯ ಮಾಡಲು ಹೋಗಿ, ಯುದ್ಧದಲ್ಲಿ, ಶತಾನೀಕನು ಮಡಿದನು.
ಮುಂದೆ ಸಹಸ್ರಾನೀಕನು ರಾಜನಾಗಿ ಅಯೋಧ್ಯಾಧಿಪತಿಯಾದ ಕೃತವರ್ಮನ ಮಗಳು ಮೃಗಾವತಿಯನ್ನು ಮದುವೆ ಮಾಡಿಕೊಂಡನು. ಅವಳು ಗರ್ಭವತಿಯಾಗಿ ರಕ್ತದ ಕೊಳದಲ್ಲಿ ಮೀಯಬೇಕೆಂದು ಅಪೇಕ್ಷೆ ಪಟ್ಟಳು. ರಕ್ತಕ್ಕೆ ಬದಲಾಗಿ ಅರಗಿನ ರಸದಿಂದ ಒಂದು ಕೊಳವನ್ನು ತುಂಬಿಸಿ ರಾಜನು ಅವಳ ಬಯಕೆಯನ್ನು ಸಲ್ಲಿಸಿದನು. ಅದರಲ್ಲಿ ಸ್ನಾನ ಮಾಡುತ್ತಿದ್ದವಳನ್ನು ಒಂದು ಮಾಂಸಖಂಡವೆಂದು ಭಾವಿಸಿ, ಗರುಡವಂಶದ ಪಕ್ಷಿಯೊಂದು ಹೊತ್ತುಕೊಂಡು ಹೋಯಿತು…”
ಈ ಕಥೆಯನ್ನು ಛಂದೋಬದ್ಧ ಪದ್ಯರೂಪದಲ್ಲಿ ನಿರೂಪಿಸಿರಿ ಹಾಗು ನಿಮ್ಮ ಕಲ್ಪನೆಯಂತೆ ಮುಂದುವರಿಸಿ, ವಿಸ್ತರಿಸಿ, ಪೂರ್ಣಗೊಳಿಸಿರಿ
ಕಥೆಯ ಕೃಪೆ – ಎ.ಅರ್. ಕೃಷ್ಣ ಶಾಸ್ತ್ರಿಗಳ ಕಥಾಮೃತ ಚಿತ್ರದ ಕೃಪೆ – www.pbase.com
ಈ ಚಿತ್ರಕ್ಕೆ ಸೂಕ್ತ ಪದ್ಯವನ್ನು ನಿಮಗಿಷ್ಟವಾದ ಛಂದಸ್ಸಿನಲ್ಲಿ ರಚಿಸಿರಿ ::
ಚಿತ್ರದ ಕೃಪೆ – ಅಂತರ್ಜಾಲ
“ವಿಷ, ಶೂಲ, ಗಲ್ಲು, ಗನ್ನು “ ಈ ಪದಗಳನ್ನುಪಯೋಗಿಸಿ, ದುಷ್ಯಂತ, ಶಕುಂತಲೆಯರ ಭೇಟಿಯನ್ನು ಛಂದೋಬದ್ಧ ಕವಿತೆಯಲ್ಲಿ ವರ್ಣಿಸಿರಿ
“ಗುರುಪತ್ನಿಯ ಕೋರಿ ಧನ್ಯನಾದನು ಶಿಷ್ಯನ್”
ಎಂಬ ಸಾಲನ್ನುಪಯೋಗಿಸಿ ಕಂದ ಪದ್ಯದ ಉಳಿದ ಮೂರು ಸಾಲುಗಳನ್ನು ಪೊರೈಸಿರಿ.
ಸಮಸ್ಯೆಯ ಭಾವ – ತೆಲಗಿನ ಶಂಕರಾಭರಣ ಬ್ಲಾಗಿನ ಕೃಪೆ