Apr 072012
 

Trunk (ಟ್ರಂಕ್), Belt (ಬೆಲ್ಟ್), Belly (ಬೆಲ್ಲಿ), Tusk (ಟಸ್ಕ್) – ಈ ಪದಗಳನ್ನುಪಯೋಗಿಸಿ, ಹಳ್ಳಿ ಜೀವನದ ಸೊಗಸಿನ ಬಗ್ಗೆ  ಪದ್ಯಗಳನ್ನು  ನಿಮಗಿಷ್ಟವಾದ ಛಂದಸ್ಸಿನಲ್ಲಿ ರಚಿಸಿರಿ

Mar 112012
 

“ಶಕುನಿ”, “ಕರ್ಣ”, “ಸುಯೋಧನ”, “ದುಶ್ಯಾಸನ” – ಈ ಶಬ್ದಗಳನ್ನುಪಯೋಗಿಸಿ, ರಾಮಯಣದ ಮೂಲವಾದ ಕ್ರೌಂಚ ಪ್ರಸಂಗಕ್ಕೆ ಹೊಂದುವಂತೆ ನಿಮಗಿಷ್ಟವಾದ ಛಂದಸ್ಸಿನಲ್ಲಿ ಪದ್ಯಗಳನ್ನು ರಚಿಸಿರಿ.

 

Feb 192012
 

Auto (ಆಟೊ), Rickshaw (ರಿಕ್ಷ), Volvo (ವೊಲ್ವೊ), Lorry (ಲಾರಿ) ಪದಗಳನ್ನುಪಯೋಗಿಸಿ ಶ್ರೀ ಹರಿಯು, ಭಕ್ತನ ನೆರವಿಗೆ ಬಂದ ಸಂದರ್ಭವನ್ನು ವಿವರಿಸಿ.

ನಿಮ್ಮಿಷ್ಟದ ಛಂದಸ್ಸನ್ನು ಆಯ್ದುಕೊಳ್ಳಿರಿ

Feb 052012
 

Walk(ವಾಕ್), Run(ರನ್), Jump(ಜ೦ಪ್), Dive(ಡೈವ್) ಈ ಪದಗಳನ್ನು ಉಪಯೋಗಿಸಿ, ಗಜರಾಜನ ವರ್ಣನೆಯನ್ನು ಮತ್ತೇಭವಿಕ್ರೀಡಿತದಲ್ಲಿ ಮಾಡಿ. ಪದಗಳನ್ನು ನಿಜಾರ್ಥದಲ್ಲಿ(ಆ೦ಗ್ಲಭಾಷೆಯಲ್ಲಿ) ಬಳಸುವ೦ತಿಲ್ಲ.

ಮತ್ತೇಭವಿಕ್ರೀಡಿತದ ಪ್ರತಿಸಾಲಿನ ವಿನ್ಯಾಸ – ನನನಾನಾನನನಾನನಾನನನನಾ|ನಾನಾನನಾನಾನನಾ

Dec 152011
 

ಪದ್ಯ ಪಕ್ಷದ ಮುಂದಿನೀ ಕಂತಿನಲಿ ನೀವು
ಹೃದ್ಯ ಕವಿತಾಪಾಕವನ್ನೆರೆವಿರ |
ವಿದ್ಯಾವರೇಣ್ಯರೇ ಶಾರದೆಯ ಕಂದಗಳೆ
ಮದ್ಯಪಾನಿಸಿರೋದುಗರ ಚಿತ್ತಕೆ ||

ಪದ್ಯಪಕ್ಷದ ರಸಿಕರಿಗೆ ಒಂದು ನಿವೇದನೆ:
ಇಲ್ಲಿ ನೀಡುವ ಸಮಸ್ಯೆ, ದತ್ತಪದಿ, ಲಹರಿ, ಚಿತ್ರಕ್ಕೆ ಕವಿತೆ ಇತ್ಯಾದಿ ಅಂಶಗಲನ್ನೆಲ್ಲವನ್ನೂ ಎಲ್ಲರೂ ಪೂರೈಸಲೇಬೇಕೆಂಬ ನಿರ್ಬಂಧವಾಗಲಿ, ವ್ರತವಾಗಲಿ, ಗೆಲ್ಮೆಯ ಬಲ್ಮೆಯ ಗುರಿಯಾಗಲಿ ಇಲ್ಲ. ಆಯ್ಕೆಗೆ ಅನೇಕ ಅವಕಾಶಗಳಿರಲೆಂದು  ಈ ಹೊಸ ಯತ್ನ. ದಯಮಾಡಿ ಸ್ನೇಹದಿಂದ ಸಹಕರಿಸಿರಿ, ಸಲಹೆಗಳನ್ನೂ ಸರಿಕಂಡಂತೆ ನೀಡಿರಿ. ನಿಮ್ಮ ರುಚಿಗೊಗ್ಗಿದ ಅಡುಗೆಯನ್ನು  ನಾವಿತ್ತ ಸಾಮಗ್ರಿಗಳ ಪರಿಮಿತಿಯಲ್ಲಿ ಅಟ್ಟು ಸವಿಯಿರಿ,  ನಮಗೂ ಉಣಬಡಿಸಿರಿ:-)

೧. ಸಮಸ್ಯೆ: ಮೀಸೆಯು ಮೋಹಿನಿಯ ಮೊಗದೆ ಚೆಲುವೆನಿಸಿರ್ಕುಂ
(ಇದು ಕಂದದ ಕಡೆಯ ಸಾಲು)

೨.ದತ್ತಪದಿ:  ಕರಿ, ಹರಿ, ಗಿರಿ, ಸಿರಿ ಎನ್ನುವ ಪದಗಳನ್ನು ಬಳಸಿ ವಿಘ್ನೇಶ್ವರನನ್ನು ಚತುರ್ಮಾತ್ರಾಗಣದ ಚೌಪದಿಯಲ್ಲಿ ಸ್ತುತಿಸಬೇಕು ಗಣಪತಿಯ ವಂದನೆ ಮಾಡದೆ ಪದ್ಯಪಾನ/ಪಕ್ಷಗಳು ಮೊದಲಾದುಷ್ಟೆ! ಹೀಗಾಗಿ ಎದರುಗಳು ಬರಬಾರೆಂದು ಎಡರ್ಗೇಡಿಯನ್ನು ಮೊತ್ತಮೊದಲು ನಮಿಸೋಣ:-)
(ಈ ಚೌಪದಿಯಲ್ಲಿ ಮೊದಲ ಹಾಗೂ ಮೂರನೆಯ ಸಾಲುಗಳಲ್ಲಿ ನಾಲ್ಕು ಮಾತ್ರೆಗಳ ನಾಲ್ಕು ಗಣಗಳೂ ಎರಡನೆಯ ಮತ್ತು ನಾಲ್ಕನೆಯ ಸಾಲುಗಳಲ್ಲಿ ನಾಲ್ಕು ಮಾತ್ರೆಗಳ ಮೂರು ಗಣಗಳೂ ಕಡೆಯಲ್ಲೊಂದು ಗುರುವೂ — ಇದು ಲಘ್ವಕ್ಷರವು ಪಾದಾಂತ್ಯದಲ್ಲಿ ಗುರುವಾಗುವ ಬಗೆಯಲ್ಲಿಯೂ ಇರಬಹುದು — ಇರಬೇಕು. ಆದಿಪ್ರಾಸ ಕಡ್ಡಾಯ. ಈ ಪದಗಳನ್ನು ಪಾದಗಳ ಯಾವುದೇ ಎಡೆಯಲ್ಲಾದರೂ ಬಳಸಿಕೊಳ್ಳಬಹುದು;  ನೇರವಾಗಿ ಆದಿಪ್ರಾಸಕ್ಕೂ ಬಳಸಿಕೊಳ್ಳಬಹುದು)

೩.  ವರ್ಣನೆ: ಕುಸುಮಷಟ್ಪದಿಯಲ್ಲಿ ಹೇಮಂತದ ಸೊಗಸನ್ನು ಕಟ್ಟಿಕೊಡಬೇಕು.

೪.  ಲಹರಿ:  ನಿಮ್ಮ ಖಯಾಲಿಯ ವಸ್ತು-ಛಂದಸ್ಸುಗಳನ್ನು ಬಳಸಿ ಕಲ್ಪನಾನುಶೀಲಿತವಾದ ಕವಿತೆಯ ನಿರ್ಮಾಣ.

೫. ಚಿತ್ರಕ್ಕೆ ಪದ್ಯ: ಈ ಚಿತ್ರಕ್ಕೆ ಸೂಕ್ತ ಪದ್ಯವನ್ನು ನಿಮಗಿಷ್ಟವಾದ ಚಂದಸ್ಸಿನಲ್ಲಿ ಬರೆಯಿರಿ

 

ಯೇಸು ಕ್ರಿಸ್ತನ ಜನ್ಮ

ಕ್ರಿಸ್ಮಸ್ - ಯೇಸು ಕ್ರಿಸ್ತನ ಜನ್ಮ

Nov 302011
 

೧೫ ದಿನಗಳಿಗೊಮ್ಮೆ ಒಂದು ಸರತಿಗೆ ೫ ಸಮಸ್ಯೆಗಳನ್ನು ಗೊಂಚಲಾಗಿ ಕೊಡುವುದೆಂದು ಮಾತನಾಡಿದ್ದೆವು. ಆ ಪ್ರಕಾರ, ಡಿಸೆಂಬರಿನ ಮೊದಲ ಪಕ್ಷಕ್ಕೆ ಸಮಸ್ಯೆಗಳು ಹೀಗಿವೆ

ಸಮಸ್ಯಾಪೂರ್ಣ ::

ಕಂದ ಪದ್ಯದ ಕೊನೆಯ ಸಾಲು ಹೀಗಿದೆ – “ಮಾಡದೆ ಮಾಡುವುದೆ ಸಜ್ಜನರ ಗುಣಮಲ್ತೇ“. ಉಳಿದ ಸಾಲುಗಳನ್ನು ಪೂರೈಸಿರಿ

ದತ್ತಪದಿ ::

walk, rock, lock, lake (ವಾಕ್, ರಾಕ್, ಲಾಕ್, ಲೇಕ್) – ಈ‌ ಪದಗಳು ಸಾಲಿಗೊಂದರಂತೆ ಬರುವಂತೆ ಪಂಚಮಾತ್ರಾ ಚೌಪದಿಯಲ್ಲಿ ಸರಸ್ವತಿಯನ್ನು ಸ್ತುತಿಸಿರಿ

ವರ್ಣನೆ ::

ಕವಿತೆಯ ಬಗ್ಗೆ ಭಾಮಿನಿ ಷಟ್ಪದಿಯಲ್ಲಿ ರಚಿಸಿರಿ

ಲಹರಿ ::

ಯಾವುದಾದರು ಪದ್ಯವನ್ನು ಬರೆಯಿರಿ

ಚಿತ್ರಕ್ಕೆ ಕವಿತೆ ::

ಈ ಚಿತ್ರಕ್ಕೆ ಸೂಕ್ತ ಪದ್ಯ ಬರೆಯಿರಿ – ಛಂದಸ್ಸು ನಿಮ್ಮ ಆಯ್ಕೆ