Aug 122012
 

ಕಥಾ ಸರಿತ್ಸಾಗರದಿಂದ ಆಯ್ದ ಕಥೆಯೊಂದು ಹೀಗೆ ಶುರುವಾಗುತ್ತದೆ.

ವತ್ಸದೇಶದ ಕೌಶಾಂಬಿಯೆಂಬ ನಗರದಲ್ಲಿ ಶತಾನೀಕನೆಂಬ ರಾಜನು ಆಳುತ್ತಿದ್ದನು. ಅವನಿಗೆ ವಿಷ್ಣುಮತಿಯೆಂಬ ರಾಣಿಯಿದ್ದಳು. ಅವಳಲ್ಲಿ ಸಹಸ್ರಾನೀಕನೆಂಬ ಮಗನು ಹುಟ್ಟಿದನು. ಶತಾನೀಕನು ಅವನಿಗೆ ಸಕಾಲದಲ್ಲಿ ಯುವರಾಜ ಪಟ್ಟ ಕಟ್ಟಿ ಹೆಸರು ಮಾತ್ರಕ್ಕೆ ರಾಜ್ಯಭಾರವನ್ನು ಹೊತ್ತಿದ್ದನು. ದೇವಾಸುರ ಯುದ್ಧದಲ್ಲಿ, ಇಂದ್ರನಿಗೆ ಸಹಾಯ ಮಾಡಲು ಹೋಗಿ, ಯುದ್ಧದಲ್ಲಿ, ಶತಾನೀಕನು ಮಡಿದನು.

ಮುಂದೆ ಸಹಸ್ರಾನೀಕನು ರಾಜನಾಗಿ ಅಯೋಧ್ಯಾಧಿಪತಿಯಾದ ಕೃತವರ್ಮನ ಮಗಳು ಮೃಗಾವತಿಯನ್ನು ಮದುವೆ ಮಾಡಿಕೊಂಡನು. ಅವಳು ಗರ್ಭವತಿಯಾಗಿ ರಕ್ತದ ಕೊಳದಲ್ಲಿ ಮೀಯಬೇಕೆಂದು ಅಪೇಕ್ಷೆ ಪಟ್ಟಳು. ರಕ್ತಕ್ಕೆ ಬದಲಾಗಿ ಅರಗಿನ ರಸದಿಂದ ಒಂದು ಕೊಳವನ್ನು ತುಂಬಿಸಿ ರಾಜನು ಅವಳ ಬಯಕೆಯನ್ನು ಸಲ್ಲಿಸಿದನು. ಅದರಲ್ಲಿ ಸ್ನಾನ ಮಾಡುತ್ತಿದ್ದವಳನ್ನು ಒಂದು ಮಾಂಸಖಂಡವೆಂದು ಭಾವಿಸಿ, ಗರುಡವಂಶದ ಪಕ್ಷಿಯೊಂದು ಹೊತ್ತುಕೊಂಡು ಹೋಯಿತು…

ಈ ಕಥೆಯನ್ನು ಛಂದೋಬದ್ಧ ಪದ್ಯರೂಪದಲ್ಲಿ ನಿರೂಪಿಸಿರಿ ಹಾಗು ನಿಮ್ಮ ಕಲ್ಪನೆಯಂತೆ ಮುಂದುವರಿಸಿ, ವಿಸ್ತರಿಸಿ, ಪೂರ್ಣಗೊಳಿಸಿರಿ

ಕಥೆಯ ಕೃಪೆ – ಎ.ಅರ್. ಕೃಷ್ಣ ಶಾಸ್ತ್ರಿಗಳ ಕಥಾಮೃತ             ಚಿತ್ರದ ಕೃಪೆ – www.pbase.com

  39 Responses to “ಪದ್ಯಸಪ್ತಾಹ – ೩೩ – ಕಥನ ಕವನ”

  1. ಮಂಗಲಾಚರಣ – ಕಂದಪದ್ಯದಲ್ಲಿ

    ಕೊನೆಗೂ ಭ್ರೂಣದಿನೆನ್ನಯ
    ಕೊನರೆ ಮುಸಲಮತಿಯು ಬೋಧೆಯಿಂ ಪುಟಗೊಳುತಲ್|
    ವನವನೆರೆದು ಪೋಷಿಸೆ ಗುರು
    ವು ನವದವಯವಗಳ ಪಡೆದು ಬೆಳೆಯುತಲಿಹೆನಾಂ||

    ಗತ್ಯಂತರವಿರದುಜ್ಜುಗಿ
    ಸತ್ಯಂತದ ಕತ್ತೆಚಾಕರಿಯ ಗೈಯುತಲಾಂ|
    ನಿತ್ಯಂ ತೊಡಂಗೆ ನವದಾ
    ಸ್ಥಿತ್ಯಂತರವಾನುಷಂಗಿಕದೆ ಸಿದ್ಧಿಸದೇಂ||

    ಬರೆಗುಮೆನಿತುಮೇನೊಂದುಂ!
    ಬರೆವುದು ಸಂಗತವಿರಲ್ಕೆ ಸಂಗತಿಗೆನುತಲ್|
    ಚರಮಶ್ಲೋಕವಿದಾಗದೊ
    ಲಿರೆ ಸಾಂಕೇತಿಕದೊಳಾಶ್ರಯವು ಸಾಂಗತ್ಯಂ||

    ಪ್ರಸಂಗ – ಸಾಂಗತ್ಯದಲ್ಲಿ

    ದೇವ ತಾನೊಬ್ಬನೆ ಜನಪದವೆಲ್ಲಕೆ?
    ಕಾವರು ಹಲವರು ನೋಡಾ|
    ಗೇವರ ಕಂಡರೆ ಮೋಹ ದ್ಯಾವಂಗೂವೆ
    ಕಾವ ತನ್ನೊಕ್ಕಲ ಮಾತ್ರ||1

    ದ್ಯಾವಂಗ ಕಕಲಾತಿ, ತಾನಿದ್ದರಿರಲ್ಯಾಕ
    ಗೋವಿಂದ ಭಕುತರ ಹಂಗೊಳ್|
    ತಾವೆಂತೋ ತಿಳಿದ ನೀತಿಜ್ಞರಂತಾದೊಡೆ
    ಧಾವಂತಗೊಂಡೀತು ನಾಡು||2

    ಭಾರತದೇಶದದೆಷ್ಟೋ ಮತಂಗಳ
    ಸಾರವನೆಲ್ಲವ ಹರಿಸಿ|
    ಮಾರಾಯ್ರು ಚಂದೇಲ ನೀತಿಜ್ಞ ರಾಜರು
    ಚಾರುಶಿಲ್ಪವ ನಿರ್ಮಿಸಿಹರು||3

    ಖಜುರಾಹೊ ತಾನಿದಿಹುದು ವತ್ಸದೇಶದಿ
    ತಿಜಗವಂದಿತ ದೇವರೆನಿತೋ|
    ರುಜಿನ ನಿವಾರಿಸೆ ನೆರೆದಿರೆ ಬನ್ನಿರಿ
    ಭಜಿಸೆ ಕೃತಾರ್ಥರು ನಾವು||4

    ವಾಮನ ಲಕ್ಷ್ಮಣ ಜಗದಂಬೀ ನಾಲ್ಭುಜ
    ಕಾಮಾರಿ ಮಾದೇವರನ್ನು|
    ನೇಮದಿ ನಮಿಸೋಣ ಜವವೈರಿ ಚಿತ್ರಗು
    ಪ್ತಂ ಮೇಣಾ ಹನುಮಂತನನ್ನು||5

    ವರ್ಷವೈನೂರೊಳು ಸಾವಕಾಶದೆ ಕೆತ್ತಿ
    ದಾರ್ಷರದಾವುದೋ ಶಕ್ತಿ!
    ಕರ್ಷಣೆ ಕಳೆದು ಕಾಡಿಗದನು ಮರಳಿಸಿ
    ತೀರ್ಷೆ ರಹಿತದ ನಿರ್ಲಿಪ್ತಿ!6

    ಕಳೆದುವಿನ್ನೇಳ್ನೂರು ವರ್ಷಂಗಳಜ್ಞಾತ
    ಕಳೆ ಮುಸುಗಿರೆ ಶಿಲ್ಪಸಿರಿಯ|
    ಕೆಳೆಯರ ಕೂಡುತನ್ವೇಷಣ ಕೈಗೊಳ್ಳೆ
    ಸೆಳೆಯಿತು ಸೀಮೆಯ ದೊರೆಯ||7

    ವತ್ಸದೇಶದೊಳು ಕೌಶಾಂಬಿಯೆಂಬೊಂದ
    ದುತ್ಸಾಹ ತುಂಬಿದ ನಗರ|
    ಉತ್ಸವ-ಮೇಳದೊಳೆಂದೆಂದು ಜನವೆಲ್ಲ
    ತಾತ್ಸಾರಬಡದೆ ಪಾಲ್ಗೊಂಬರ್||8

    ಕೌಶಾಂಬಿಯೊಳು ರಾಜನಿದ್ದ ಶತಾನೀಕ
    ಕೋಶವಪರಿಮಿತ ಪೊಂದಿ|
    ಲೇಶಾಂಶವೂ ಧರ್ಮಚ್ಯುತನಾಗದಾಳಿರ್ಪ
    ದೇಶದೆಲ್ಲೆಡೆ ಸೌಖ್ಯ ಮಂದಿ||9

    ರಾಜ್ಯಭಾರದೆ ತಾನು ಮಂತ್ರಾಲೋಚನ ಗೈದು
    ಪೂಜ್ಯ ಮಂತ್ರಿಗಳೊಳೆಂದೂ|
    ಯಾಜ್ಯವು ತನ್ನಯ ಜೀವಿತ ಜನತೆಗೆಂ
    ದು ಜ್ಯೇಷ್ಠತನವನ್ನು ಮೆರೆದನ್||10

    ರಾಜ ಶತಾನೀಕಗನುರೂಪಳಾಗಿಹ
    ಳಾ ಜಲಜಸುನಾಭ-ನಾಮೆ| (The reader is prone to read it as ಜಲಜಸುನಾಭನ+ಆಮೆ. Hence the hyphen)
    ಭಾಜನಳೆನಿಸಿ ತಾನರಸನ ಸದ್ಧರ್ಮ
    ಭ್ರಾಜಕಳ್ ವಿಷ್ಣುಮತಿಯಳು||11

    ಬಭ್ರುವಾಹನ ಘಟೊತ್ಕಚ ಮೇಣೆಲ್ಲಸುತರ
    ದಭ್ರರಿರುವೊಲತಿಪಿತರು| (ಅದಭ್ರ + ಅತಿಪಿತ = Strong + abler than father)
    ಸಂಭ್ರಮಗೊಂಡ ಶತಾನೀಕ ಸತಿ ನೀಡೆ
    ಶುಭ್ರ ಸಹಸ್ರಾನೀಕನ್ನ||12 (Here the ಅತಿಪಿತತ್ವ is revealed in their names: 1000 Vs 100)

    ಪಟ್ಟವ ಕಟ್ಟಿ ಸಹಸ್ರಾನೀಕನಿಗಾತ
    ಹುಟ್ಟಿ ಹತ್ತೊಂಬತ್ತಾದೊಡನೆ|
    ರೆಟ್ಟೆ ಬಲಿಯಲೆಲ್ಲ ವಿದ್ಯೆಯ ಕಲಿಯಲಿ
    ಹಟ್ಟಿಯ ಕಣ್ಮಣಿಯೆಂದು||13

    ಮಗನ ಹೆಸರೊಳು ರಾಜ್ಯವನಾಳುತ್ತಿರಲಾಗ
    ವೆಗಟಾಯ್ತು ದೇವಾಸುರರಿಗೆ|
    ಜಗಳದೊಳಿಂದ್ರನ ವಹಿಸುತ್ತೆ ಪರವ ದಂ
    ದುಗದೊಳು ನೀಗಿದನಸುವ||14

    ಮುಂದೆ ಸಹಸ್ರಾನೀಕನು ವರ್ಧಮಾನಕ್ಕೆ
    ಬಂದು ಕೈಗೊಂಡನಾಡಳಿತ|
    ತಂದನೊ ಗಾರ್ಹಸ್ತ್ಯಕ್ಕಯೋಧ್ಯಾ ಕುವರಿಯ
    ಚಂದ ಮೃಗಾವತಿಯಳನು||15

    ಪತಿಯಯೋಧ್ಯೆಗೆ ಮೃಗಾವತಿಪಿತ ಕೃತವರ್ಮ
    ಮಿತವೇನಾತನ ಹಮ್ಮುಬಿಮ್ಮು|
    ಸುತಳಾತನಂತಲ್ಲದಿನ್ನೆಂತದಿರ್ದಾಳು
    ಜಿತವಿಲ್ಲದಾಟಾಟೋಪದವಳ್||16

    ದೈವವವಳಿಗಂತು ನಾಮವು ಸಲ್ಲಲ
    ದಾವ ಘಳಿಗೆಲಿ ಪುಟ್ಟಿಸಿತೊ|
    ಜೀವ ನಿಲ್ಲದು ನಾಮಕ್ಕನ್ವರ್ಥಕಾರ್ಯ ಮೃ
    ಗಾವತಿ ತಾನೆಸಗದಿರೆ||17

    ನಾತಿಕಾಲದೊಳಾಕೆ ಗರ್ಭಿಣಿಯಾದಳು
    ಹೂತಿದ್ದ ಬಯಕೆಯು ಚಿಗಿತು|
    ಚೌತಿಲೆ ರಕುತದ ಕೊಳದೊಳು ನಾ ಮೀವೆ
    ಶೀತವ ಲೆಕ್ಕಿಸೆನೆಂದಳ್||18

    ಮಾಘಮಾಸದಿ ಕೊಳದೊಳು ಮೀವೆಂಬಿವಳದೀ
    ಲಾಘವದಾಲೋಚನೆಯಿದೇನ್!
    ಆಘಾತವೆನ್ನಯ ವಿಧಿಲೇಖ,ವಿದ ಲೋಕ
    ಶ್ಲಾಘಿಸದೆಂದು ಮರುಗಿದನ್||19

    ಕೊರಗುತಲೆಷ್ಟೊತ್ತಿದ್ದಾನು ತಾನರಸನು
    ಪರಿಹರಿಸದೆ ಸತಿಯಾಸೆ|
    ಅರಗಿನ ರಸ ತುಂಬಿ ಕೊಳದೊಳು ಸತಿಯಳು
    ಮೆರೆಯಲಿ ವಾಂಛೆಯನೆಂದ||20

    ಸ್ವೈರದಿಂದಲಿ ಮೀಯುತ್ತಿರುವಾಗ ಬಸುರಿಯು
    ಚೋರತನದಿ ಗೃಧ್ರವೊಂದು|
    ತೋ(ಜೋ)ರಾದ ಮಾಂಸದ ತುಂಡೆಂದು ತಿಳಿಯುತ
    ದೂರಕೆ ಕಚ್ಚಿ ಕೊಂಡೊಯ್ತು||21

    ಚೀರಾಟವೇನಿದಿದಿಷ್ಟು ಸನಿಹದೊಳ
    ದಾರಾಗಸದೊಳಿರುವರು|
    ಪಾರುತ್ತಿರುವ ತನ್ನ ಪಂಜದೊಳಿರುವುದು
    ನಾರಿಯು! ಜೀವದಿಂದಿಹಳು||22

    ಗರುಡನು ನಾನು ಕುಲೀನ ಜಾತಿಯವನು
    ಕುರುಡನಿಂದಾದೆನಯ್ಯೋ|
    ಹರಣವ ಮುಟ್ಟೆನು ಜೀವವು ಮಿಡಿತಿರೆ
    ನರಕವೆ ಗತಿಯಾಯ್ತೆ ನನಗೆ||23

    ವಿಹ್ವಲಗೊಂಡಿದ್ದ ಖಗರಾಜನಂತೆಯೇ
    ಬಹ್ವಪದೊಂದು ಸರಸ್ಸೊಳ್| (ಬಹ್ವಪ = ಬಹು+ಅಪ = ತುಂಬ ನೀರಿರುವ)
    ಜಿಹ್ವೆಯನೂ ತಾಕಿಸದೆಲೆ ಬೀಳಿಸವಳ
    ಗಹ್ವರ ಸೇರಿತು ತನ್ನ||24

    ಪಾಚಿಕಟ್ಟಿದ ಕೊಳಮಧ್ಯದಿಂದೀಜುತ
    ಲಾಚೆ ಬಂದಳು ಕಷ್ಟಪಟ್ಟು|
    ರಾಚುವಂತಿದ್ದ ಕೆಂಬಣ್ಣದ ಮೈಯೀಗ
    ಹೀಚಿನ ಪಚ್ಚೆಯಾಗಿತ್ತು||25

    ಯಾವುದೋ ಹಚ್ಚನೆ ಭೂರಿ ಸಸ್ಯವಿದು
    ಮೇವೆನೀಕ್ಷಣದೊಳಾನೆಂದು|
    ಐವರು ಜೊತೆಯರಿಂದೊಡಗೂಡಿ ಮಿಗವೊಂದು
    ಮೇವ ನೆನೆಯುತಲಿ ಸಾರಲ್||26

    ಕೈವಲ್ಯ ಕಂಡಂತಾಯಿತು ಮೃಗಾವತಿಯಾಗ
    ಕಾವ ದೇವಗೆ ಮೊರೆಯಿಡುತ|
    ಸಾವ ತಪ್ಪಿಸೊ ಸಾರ್ವಭೌಮನೆ ಯಾಕಯ್ಯ
    ಜೀವವ ತಲ್ಲಣಗೊಳಿಪೆ||27

    ತಪ್ಪಿಸಿಕೊಂಡೋಡೋಡುತ್ತಿರುವಾಗಲ್ಲೇ
    ಧೊಪ್ಪೆಂದು ನೆಲಕೆರಗಿದಳು|
    ಯಪ್ಪ!ಯಿದೇನಿದು ಸಸ್ಯವು ಚಲಿಪುದೆ
    ತೆಪ್ಪಗೆ ಮರಳಲು ಜಿಂಕೆ||28

    ಗೆದ್ದೆನೀ ಜನ್ಮದಿನಿನ್ನೆಂದೂ ಮೆರೆಯೆನು
    ಗದ್ದುಗೆಗರ್ವದೊಳಾನು|
    ತಿದ್ದಿಕೊಳ್ಳುವೆನೆನ್ನ ರೀತಿಯ, ಹಾಸುಗೆ
    ಯಿದ್ದಷ್ಟೆ ಚಾಚುವೆ ಕಾಲ||29

    ಬಂದುದನಿತರೊಳೆ ಭಟರ ತಂಡವದಲ್ಲಿ
    ಬೆಂದು ಬಸವಳಿಯುತ್ತಾಗ|
    ಸಂದಿತು ದಣಿವಿನ ಪರಿಣಾಮ ತ್ವರಿತದ
    ಲೊಂದು ಕೂಸನು ಪೆತ್ತಳಲ್ಲೆ||30

    ದಣಿವಿಂದ ಪ್ರಸವಿಸೇಳನೆಯ ತಿಂಗಳೊಳೆ ಕ
    ಣ್ಮಣಿಯಿಂದೆ ದಣಿವದು ಮರೆಯೆ|
    ಗಿಣಿಯಂಥ ಕೂಸನ್ನು ‘ವನರಾಜ’ನೆಂದಳು
    ಗುಣವಿನ್ನೆಂಥದ್ದಾತಂದಿಹುದೋ||31

    ~ ಶಂ ~
    ಎಂದಿರ್ಪೆನಾದಿಲೆ ಸಂಗತ ತಾನಿರ
    ಲೆಂದಿಗು ಸಾಂಗತ್ಯವೆನ್ನ|
    ವಂದಿಸಿರ್ದೊಡೆ ವರ್ಣಿ-ಕನಕ-ಮೇಣಕ್ಕರಿ
    ಗಂದಿಂದಿರುತ್ತಿತ್ತೆ ದ್ವಂದ್ವ||

    (ವಂದಿಸಿರ್ದೊಡೆ = ಅಧ್ಯಯನ ಕೈಗೊಂಡಿದ್ದರೆ)

    • 15ನೆಯ ಪದ್ಯ, 3ನೆಯ ಸಾಲಿನಲ್ಲಿ ಜಗಣ ನುಸುಳಿದೆ:
      ತಂದನಯೋಧ್ಯಾ ಕುವರಿಯ ಗಾರ್ಹಸ್ತ್ಯಕ್ಕೆ
      —-
      23ನೆಯ ಪದ್ಯದ ಉತ್ತರಾರ್ಧದಲ್ಲಿ ದೋಷ:
      ಹರಣವ ಮುಟ್ಟೆನು ಜೀವವು ಮಿಡಿತಿರ
      ಲುರಗವೊಂದಪವಾದ ಹೊರತು||23
      ——-

    • ಪ್ರಸಾದು,
      ಸಾಂಗತ್ಯಗಳೆಲ್ಲ ಸೊಗಸಾಗಿವೆ. ಬೇಗ ಮುಂದುವರಿಸಿ ಪೂರ್ತಿ ಮಾಡಿರಿ..ಅಲ್ಲಲ್ಲಿ ಸ್ವಲ್ಪ ಸವರಣ್ನೆ ಬೇಕಾದೀತು. ನೇರವಾಗಿ ಕಂಡಾಗ ಎಲ್ಲವನ್ನೂ ಒಟ್ಟಿಗೆ ಗಮನಿಸಿ ಸರಿಪಡಿಸಬಹುದು.

  2. ನಮಾಮಿ ವಿಘ್ನೇಶ್ವರಮಾತ್ಮಯೋನಿಂ ಪ್ರತ್ಯೂಹಶೈಲಾವಲಿಭೇದಿರಂ ಚ |
    ದತ್ವಾ ಕವಿತ್ವಂ ಹೃತಮಂದಬುದ್ಧಿಃ ಮಾಮ್ ಪಾಲಯೇತ್ ಸ ಪ್ರಣತಾದಿತೇಯಃ ||

    ಆಸೀತ್ಪುರಾ ವತ್ಸನೃಪೋ ಮಹಾತ್ಮಾ ಗುಣೀ ಶತಾನೀಕ ಇತಿ ಪ್ರತೀತಃ |
    ಭಾರ್ಯಾ ತಥಾ ವಿಷ್ಣುಮತೀತಿ ತಸ್ಯ ಸರ್ವಾನುಕೂಲಾ ಕುಲಪಾಲಿನೀ ಚ |

    ತಯೋಸ್ತಥಾಸೀತ್ ಪಿತರಂ ಸುಪುತ್ರಃ ಕೀರ್ತ್ಯಾತಿವೃತ್ತೋ ದಶಭಿರ್ಗುಣೈಶ್ಚ |
    ನನಂದತೂ ರಾಜ್ಯಧುರಂ ವಹನ್ತಂ ದೃಷ್ಟ್ವಾ ಚ ದೃಷ್ಟ್ವಾ ಚ ಪಿತರೌ ಯುವಾನಮ್ ||

    ದೈತ್ಯಾರ್ಯಭಿಷ್ಟಿರ್ನನು ವೃದ್ಧರಾಜಃ ಮೃತಃ ಶತಾನೀಕ ಅನಲ್ಪಸತ್ತ್ವಃ |
    ವೀರಸ್ಯ ಯುದ್ಧೇ ವರಮಂತ್ಯಮೇವಂ ಗತಿಂ ಪರಾಂ ಪ್ರಾಪ್ನುತ ಇತ್ಯಭಿಜ್ಞಮ್ ||

    ಮೂರ್ಧಾಭಿಷಿಕ್ತಸ್ತರುಣಸ್ತದಾಭೂತ್ ಭೂರಕ್ಷಣೇ ದೀಕ್ಷಿತ ಆರ್ಯಪಾಲಃ |
    ಪರ್ಯವೃಣೋತ್ ಕೋಸಲರಾಜಪುತ್ರೀಂ ಮೃಗಾವತೀಂ ಪೂರ್ಣಮೃಗಾಂಕಛಾಯಾಮ್ ||

    ಕಾಲಕ್ರಮೇಣೋದರಿಣೀ ಸಗರ್ಭಾ ಸ್ನಾತುಂ ಹ್ರದೈಚ್ಛತ್ ರುಧಿರಪ್ರಪೂರ್ಣೇ |
    ಕೃಚ್ಛ್ರಾವಗಾಹ್ಯಂ ನನು ಗರ್ಭಿಣೀನಾಂ ಚಿತ್ತಂ ವಿಧಾತ್ರ‍ಾಪಿ ಪಿತಾಮಹೇನ ||

    ಅಲಕ್ತಕಾಪೂರಿತಪುಷ್ಕರಿಣ್ಯಾಂ ಮನೋರಥಾಪ್ತ್ಯೈಧಿತಭರ್ತೃರಾಗಾ |
    ಅಶೋಕಪುಷ್ಪಾಭತನುರ್ವಿಶೋಕಾ ಪ್ಲವಪ್ರಸನ್ನಾ ಚ ರರಾಜ ನಾರೀ ||

    ತಾಂ ದರ್ಶನೀಯಾಂ ಗರುಡೋ ನಿವೇಕ್ಷ್ಯ ವಿಚಿಂತ್ಯ ಖಾದ್ಯಾಮಿತಿ ಮಾಂಸಪೇಶೀಂ |
    ಅಪಾಹರತ್ ಪಾರ್ಥಿವಧರ್ಮಪತ್ನೀಂ ದಿಷ್ಟಂ ವಿಜಾನಾತಿ ಕುತೋ ಕಥಂ ಕಃ ||

    ಪತಂಗರಾಜಃ ಭಯದುಃಖತಪ್ತಾಂ ವಿಜ್ಞಾಯ ರಾಜ್ಞೀಮಮೃತಾಂ ಮುಮೋಚ |
    ಋಷ್ಯಾಶ್ರಮಾಸನ್ನಶಿಲಾತಲೇ ತಾಂ ಪುತ್ರೋತ್ಸವಾಧೀಕ್ಷಣ ಏವ ಮಗ್ನಾಮ್ ||

    ತಾಂ ಗರ್ಭಗುರ್ವೀಂ ಕರುಣಾನುವಿದ್ಧಾಃ ದೃಷ್ಟ್ವಾಶ್ರಮಸ್ಥಾಃ ಪರಿರಕ್ಷಣೀಯಾಮ್ |
    ಅಪಾಲಯನ್ ಪುತ್ರಮಸೂಯತಾಸೌ ಅಂಭೋನಿಧಿಶ್ಚನ್ದ್ರಮಿವಾಭಿರಾಮಮ್ ||

    ಋಷ್ಯಾಶ್ರಮೇ ಮುನಿಜನಾ ನೃಪತೇಃ ಕುಮಾರಂ
    ರಾಜ್ಞೀವಿನಿಶ್ವಸಿತವಾಸಿತತೀರ್ಥವಾಕಂ |
    ಪ್ರೀತ್ಯಾಭ್ಯಪಾಲಯನಮುಂ ಜಲಶೋಷಕಾಲೇ
    ಕುಂಭಾಭಿಷೇಕಕರಣಾದಿವ ಬಾಲವೃಕ್ಷಮ್ ||
    (tIrthavAka = m. the hair of the head)

    • ಕವನ ಕಾವ್ಯಕೆ ಕಳೆಯ ತಂದಿರೆ
      ನವುರು ಸಂಸ್ಕೃತದಲ್ಲಿ ಕಥನವ
      ಕವಿಯ ಹೃದಯಕ್ಕೊಪ್ಪುವಂತೆಯೆ ಪೂರ್ಣಗೈದಿಹಿರಿ |
      ಸವಿಯಿಸಲ್ಕೀ ಪಾನ ಪದ್ಯದ
      ತವಕದಿಂ ನಿಮ್ಮಿರುವ ಕೋರುವೆ
      ಹವನಗೈಯ್ಯಲು ಶಾರದೆಗೆ ತರೆ ಪದ್ಯ ಸಮಿತುಗಳ ||

      ಸಂಸ್ಕೃತದ ನಿಮ್ಮ ಪದ್ಯಗಳನ್ನಿಲ್ಲಿ ಕಂಡು ಸಂತೋಷವಾಯಿತು. ಇನ್ನೂ ಬಹಳಷ್ಟು ಪದ್ಯಗಳನ್ನು ನಮಗುಣಬಡಿಸುವಿರೆಂದು ನಂಬಿರುವೆ.

      • ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು.
        ಶಾರದೆಗೆ ಹವನಕ್ಕೆ ಪದ್ಯಸಮಿತ್ತುಗಳು – ಬಹಳ ಚೆನ್ನಾಗಿದೆ.

    • ಇಲ್ಲೊಂದು ವ್ಯಾಕರಣದೋಷ ಕಂಡಿತು. ಸ್ನಾತುಂ ಹ್ರದೇ ಶೋಣಿತಕೇ ಹ್ಯಿಯೇಷ ಎಂಬಲ್ಲಿ
      ಹ್ಯಿಯೇಷ – ಹ+ಇಯೇಷ ಎನ್ನುವುದು ಗುಣಸಂಧಿಯಾಗುವ್ದೇ ಹೊರತು ಯಣ್ ಸಂಧಿಯಲ್ಲ
      ಅದನ್ನು ಹೀಗೆ ತಿದ್ದಿದ್ದೇನೆ
      ಸ್ನಾತುಂ ಹ್ರದೈಚ್ಛತ್ ರುಧಿರಪ್ರಪೂರ್ಣೇ |

    • ಸಲಿಲ೦ ಸಾಜದೆ ತು೦ಬುವ-
      ವೊಲು ಬಿ೦ದಿಗೆಯ೦, ಸಮಸ್ಯೆಯಾ ಪೂರಣವು೦
      ಸುಲಭ೦ ವ್ಯುತ್ಪತ್ತಿಯ ಶ್ರೀ-
      ಲಲಿತೆಗೆ ಚ೦ದಮಿಹ ಸ೦ಸ್ಕೃತದ ಸೊಲ್ಲಿನೊಳು೦

      🙂

    • ಒಳ್ಳೆಯ ಹಾಗು short and sweet ending ಕೊಟ್ಟಿದ್ದೀರ 🙂

    • ಲಾಲಿತ್ಯಪೂರ್ಣಂ ರಸಿಕಾಭಿರಾಮಂ ವತ್ಸೇಶ್ವರೀಯಂ ಕಥನಂ ತ್ವದೀಯಮ್ |
      ಪ್ರಬುದ್ಧಭಾಷಾಭವಿಕಂ ನಿಬದ್ಧಂ ಮುದೇ ನ ಕಸ್ಯ ಪ್ರಸಮೀಕ್ಷಕಸ್ಯ?

      ಲಲಿತೇ! ಲಲಿತೇರಣಪ್ರವೀಣಾ
      ಭವದೀಯಾ ಕವಿತಾ ಹಿತಾಯ ಜಾತಾ|
      ಕಲಯಾ ಕಲಯಾsನಯಾsಸಿ ನೂನಂ
      ಸ್ತವನೀಯಾ ನವಪದ್ಯಪಾನಸಂಘೇ ||

      ಒಂದೆರಡು ಸಣ್ಣ-ಪುಟ್ಟ ಸವರಣೆಗಳನ್ನು ಮುಖತಃ ತಿಳಿಸುತ್ತೇನೆ

  3. ಅಶೋಕಪುಷ್ಪಾಭತನುಃ – Fine

  4. ವತ್ಸದೇಶದಲಿದ್ದ ಶತಾನೀಕನೆಂಬರಸ
    ಸತಿ ವಿಷ್ಣುಮತಿಯೊಡನೆ ಕೌಶಾಂಬಿಪುರವಾಸ
    ವತ್ಸ ಸಹಸ್ರಾನೀಕನಿಗೆ ಯುವರಾಜ ಪಟ್ಟ
    ಶತ ಸಹಸ್ರಾನೀಕರಿಗೆ ಇದು ಸಹಜ ಗಟ್ಟ ||

    ಕೃತವರ್ಮನ ಪುತ್ರಿ ಮೃಗಾವತಿಯ ವರಿಸೆ
    ಕೃತ್ರಿಮತಿಯಾಬಸುರಿ ರಕ್ತದೋಕುಳಿ ಬಯಸೆ
    ಕೃತಕ ಅರಗಿನ ರಸದೆ ಕೊಳವನವ ರಚಿಸೆ
    ಕೃತ್ಸಕರ್ಮನವನೆಸಗಿ ಕೃತಕೃತ್ಯಗೊಳಿಸೆ ||

    ಹದಿಬದೆಯ ಈ ಬಗೆಯ ಹದ್ದುಮೀರಿದ ಬಯಕೆ
    ಹದ್ದುಗಣ್ಣಿಗೆ ಬಿದ್ದು ತಂತು ಈ ಪರಿ ಪರಿಕೆ
    ಹೊತ್ತು ಹಾರಲು ಗರುಡ ಎತ್ತಿ ಅವಳಾಖಂಡ
    ಬಿತ್ತು ಲಾಕ್ಷಾರಸದಿ ಲಕ್ಷಾನೀಕನ ಪಿಂಡ ||

    ಬಸುರಿ ಎದೆಯಾ ಬಯಕೆ ಉತ್ತು ಬಿತ್ತಿದ ರಾಜ
    ಕುಸುರು ಒಡೆದಾ ಮೊಳಕೆ ಬೀಜ ದೊಳಗಿನ ಬೀಜ
    ಕೆಸರ ಒಳಗಿನ ಕಸರು ಹೊರಗೆ ಕಂಡಿದೆ ಹಸಿರು
    ಬಸಿರ ಒಳಗಿನ ಉಸಿರು ಹೊಂದಿ ಬಂದಿದೆ ಹೆಸರು ||

    • ಉಷಾ ಅವರೆ,

      ಪ೦ಚಮಾತ್ರಾ ಗತಿಯ ನಿಮ್ಮ ಪದ್ಯಗಳು ಚೆನ್ನಾಗಿವೆ 🙂

      ಒ೦ದೆರಡ೦ಶವನ್ನು ಗಮನಿಸಬೇಕು:
      ೧. ಗಣಗಲ್ಲಿ ಲಘ೦ ಬರದ೦ತೆ ಬರೆಯುವುದರಿ೦ದ ಗತಿ ಚೆನ್ನಾಗುತ್ತದೆ.
      ಉದಾ: ‘ಶತಾನೀಕ’ ಮೊದಾಲನರಯಾ ಸಾಲಿನಾಲ್ಲಿ ಲಘ೦ ಆಗಿದೆ…
      ನಿಮ್ಮ ಮೂರನೇಯ ಪದ್ಯ ಗತಿಯ ದೃಷ್ಥಿಯಲ್ಲಿ ಬಹಳ ಸರಿಯಾದುದಾಗಿದೆ… 🙂
      ೨. ಪದದ ಮೊದಲಿನ ಅಕ್ಷರಕ್ಕೆ ಸ್ವರದ ಬಳಕೆಯಾದಾಗ ಹಿ೦ದಿನ ಪದದ ಕಡೆಯ ಅಕ್ಷರದೊಡನೆ ಸ೦ಧಿಯನ್ನು ಮಾಡುವ ಸಾಧ್ಯತೆ ಇದ್ದಲ್ಲಿ ಸ೦ಧಿಯನ್ನು ಮಾಡಲೆಬೆಕಾಗುತ್ತದೆ.ಿ ಉದಾ: ಗರುಡ ಎತ್ತಿ – ಗರುಡನೆತ್ತಿ
      ೩. ಪದಗಳನ್ನು ಗಣಗಳಿಗೆ ಹೊ೦ದಿಸುವಾಗ ನಿಭಿಡಬ೦ಧಗಳನ್ನು ಮಾಡುವಾಗ ಒ೦ದೇಪದವನ್ನು ಹಿ೦ದಿನ ಗಣದಿ೦ದ ಎರವಲು ಪಡೆದರೆ
      ಗತಿ ವ್ಯತ್ಯಯವಾಗುತ್ತದೆ:
      ಉದಾ: ನ ಪುತ್ರಿ ಮೃ

      ಈ ಒ೦ದೆರಡ೦ಶಗಳನ್ನು ಸವರಿಸಿದರೆ ಪದ್ಯದ ಸೌ೦ದರ್ಯ ಹೆಚ್ಚುತ್ತದೆ…

    • ಉಷಾರವರೆ,

      ನಿಮ್ಮ ಆಸಕ್ತಿಗಾಗಿ ಧನ್ಯವಾದಗಳು. ಉಳಿದವರು ಸಲಹೆಗಳನ್ನು ನೀಡಿದ ನಂತರ, ನನ್ನದೂ ಒಂದಿರಲಿ ಎಂದು :: 🙂

      ಪದ್ಯದಾದಿಯಲೆ ತರುವ ಪ್ರಾಸಕ್ಕೆ ಗರತಿಯೆಂಬ ತೋಷ
      ಹೃದ್ಯವಾಗಿಯದು ಅಂತ್ಯದಲ್ಲಿಬರೆ ಗಣಿಕೆಯಂತೆ ಪಾಶ
      ಮಧ್ಯದೊಳ್ಬರಲು ಗೆಳತಿಯಾ ಸ್ನೇಹದಿಂದ ಮುದವ ಕೊಡುವ
      ಸದ್ಯಕಾದಿಯನ್ನುಳಿಸಿಯನುಬೆಳೆಸುತಂತ್ಯದೆಡೆಗೆ ನಡೆವ

      ಆದಿಪ್ರಾಸ ಗರತಿ; ಅಂತ್ಯಪ್ರಾಸ ಗಣಿಕೆ, ಅನುಪ್ರಾಸ ಗೆಳತಿ ಎಂದು ಉಪಮೆಯಿದೆಯಂತೆ. ನೀವು ಅಂತ್ಯ ಪ್ರಾಸವನ್ನೂ ಉಳಿಸಿಕೊಳ್ಳಲು ಪ್ರಯತ್ನಿಸಿದ್ದೀರಿ. ಆದಿ ಮತ್ತು ಅಂತ್ಯ ಪ್ರಾಸಗಳೆರಡೂ ತಂದರೆ ಪದ್ಯದ ಭಾವ ಹೊಮ್ಮಿಸುವ ದಾರಿ ಬಹಳ ಸಂಕುಚಿತಗೊಳ್ಳುತ್ತದೆ.
      ಆದ್ದರಿಂದ, ಆದಿ ಪ್ರಾಸವನ್ನು ಮೊದಲು ಗಟ್ಟಿಮಾಡಿಕೊಂಡು, ಅನುಪ್ರಾಸವನ್ನು ಸಾಧ್ಯವಾದಾಗೆಲ್ಲ ತಂದು, ಅಂತ್ಯ ಪ್ರಾಸವನ್ನು ಕಡೆಗೆ ಇಟ್ಟುಕೊಂಡರೆ ಒಳಿತು ಎಂದು ನನ್ನ ಅಭಿಪ್ರಾಯ.

  5. ಉಷಾರವರೆ,
    ಕವಿ ಸೋಮ ಹೇಳಿರುವುದಲ್ಲದೆ, ಮೊದಲ 3 ಪದ್ಯಗಳಲ್ಲಿ ಆದಿಪ್ರಾಸ ಹಾಗೂ ಸಿಂಹ/ಗಜಪ್ರಾಸ ಪಾಲಿತವಾಗಿಲ್ಲ. ಏನು ಮಾಡೋಣ! ಇಲ್ಲಿ ಎಗರಿ ಬೀಳುವವರೇ ಎಲ್ಲ. ಅದನ್ನು ನಾನೂ ಅನುಭವಿಸಿದ್ದೇನೆ. ಕಲಿಕೆಯ ಮಾರ್ಗವೂ ಅದೇ.

  6. ಪ್ರಾಸವನು ಪಾಲಿಪುದು ತ್ರಾಸವದು ಮೊದಮೊದಲು
    ಗ್ರಾಸ ಬುದ್ಧಿಗೆ ವಿಪುಲವೀಯುವನಕ|
    ಹ್ರಾಸವಾಗದಿರಲುತ್ಸಾಹ, ಛಂದವದಿರದು
    ವಿತ್ರಾಸಕರವು ತಾ -ಹಾದಿರಂಪ

    1) ಹ್ರಾಸವಾಗದಿರಲುತ್ಸಾಹ = ಹ್ರಾಸವಾಗದಿರಲಿ+ಉತ್ಸಾಹ
    2) vitraasakara = Terrifying

  7. ಪ್ರಾಸವನು ಪಾಲಿಪುದು ತ್ರಾಸವದು ಮೊದಮೊದಲು
    ಗ್ರಾಸ ಬುದ್ಧಿಗೆ ವಿಪುಲವೀಯುವನಕ|
    ಹ್ರಾಸವಾಗದಿರಲುತ್ಸಾಹ, ಛಂದವದಿರದು
    ವಿತ್ರಾಸಕರವು ತಾ -ಹಾದಿರಂಪ||

    1) ಹ್ರಾಸವಾಗದಿರಲುತ್ಸಾಹ = ಹ್ರಾಸವಾಗದಿರಲಿ+ಉತ್ಸಾಹ
    2) vitraasakara = Terrifying

  8. ಕೊನೆಯ ಸಾಲು ಕೆಟ್ಟಿತು:

    ಪ್ರಾಸವನು ಪಾಲಿಪುದು ತ್ರಾಸವದು ಮೊದಮೊದಲು
    ಗ್ರಾಸ ಬುದ್ಧಿಗೆ ವಿಪುಲವೀಯುವನಕ|
    ಹ್ರಾಸವಾಗದಿರಲುತ್ಸಾಹ, ಛಂದವದು ವಿ
    ತ್ರಾಸವೇನಲ್ಲ ತಿಳಿ -ಹಾದಿರಂಪ

  9. making some assumptions, have expanded the story to make a “mega serial” with huge plot holes 😀 with a mixture of few chandas. so be warned!!

    valedictory verses

    आशातु चित्ते मम चास्त्यनेकः किं प्रार्थनं चाद्य करोमि चेत्त्वां |
    दत्तार्धदेहं गिरिराजपुत्र्यै आत्मनमेकं ह्यसुराधिपत्ये ॥ १ ॥
    अस्त्रञ्च शस्त्रञ्च किरीटिने च वासस्तु ते चेत् श्वशुरे हिमद्रौ |
    तृप्तः कथं ह्यात्मनि त्वं विचित्रः तत् ह्यत्मतृप्तिं च ददातु मे त्वं ॥ २ ॥

    main story

    अपराह्णे तदा बालाः सुकथाश्रोतुमुत्सुकाः |
    ग्रामवृद्धञ्च ते जग्मुः वत्सवृत्तान्तकोविदम् ॥ १ ॥

    वत्सराजकथासक्तान् दृष्ट्वा तान् हर्षनिर्भरः |
    विस्मयं कथयाञ्चक्रे सुसाहाय्येन स स्मृतेः ॥ २ ॥

    कौशाम्बी नगरी नाम वत्सदेशे स्थिता पुरा |
    राजा तस्याः शतानीकः धर्माचरणतत्परः ॥ ३ ॥

    भार्या विष्णुमतिःतस्य सच्चारित्र्यांशरूपिणी |
    पुत्रो दशगुणस्तस्य चन्द्रवंशप्रदीपकः ॥ ४ ॥

    सकाले सुमुहूर्तेच गुरुपण्डितसंमुखे |
    युवराजपदं दत्त्वा योग्यपुत्राय तस्य चेत् ॥ ५ ॥

    केवलं नाम मात्रेण राज्यभारञ्चकार सः |
    साहाय्यं कृतवान्तस्य युवराजाय मन्त्रिवत् ॥ ६ ॥

    प्रार्थनं देवराजस्य श्रुत्वा धर्मपरायणः |
    जगाम दनुजान् हन्तुं धर्मयुद्धोत्सुको नृपः ॥ ७ ॥

    वैतरणामिवस्रोताः कृतवान्धरणीश्वरः |
    सौभद्र इव संग्रामे वीरस्वर्गमवाप सः ॥ ८ ॥

    आसनं राजसिंहस्य प्राप्तवान् युवराज सः |
    पितृवियोगदुःखेऽपि राज्यभारञ्चकार सः ॥ ९ ॥

    मृगावतीं नाम वधूं मृगाक्षीं कृत्वा विवाहं च मृगेन्द्रतुल्यः |
    यथा तु चन्द्रो भवति प्रवृद्धः पूर्णं ह्यभूदब्जकुल प्रसूतः ॥ १० ॥

    बभूव न ग्रासमिदं विचित्रं संयोगमेतत्खलु सूर्यचन्द्रौ |
    यथा तु रामेण बभूव सीता सद्गर्भगुर्वी च बभूव राज्ञी ॥ ११ ॥

    सरोवरे शोणितयुक्तचित्रे स्नातुं ह्यभीष्टा कमलायताक्षी |
    मनोरथं देशपतौ वदित्वा राज्ञी ह्युवोदीक्ष च बन्धनाय ॥ १२ ॥

    नृपस्तु श्रुत्वा विशमञ्च कामं कर्तुं कथं ह्यैतदिदं विचिन्त्य |
    मनोरथं गर्भधराञ्च तोष्टुं लाक्षारसायुक्त सरः स चक्रे ॥ १३ ॥

    सरोवरे स्नानकृतौ निमग्नां दृष्ट्वा स राज्ञीं खलु चारुपर्णः |
    विचिन्त्य मांसं ननु तीक्ष्णदृष्टिः लाक्षारसेन ग्रहणं चकार ॥ १४ ॥

    ज्ञात्वा कुवार्त्तां नृपतिः सरोषः आज्ञामिदं चन्द्रकुलप्रसूतः |
    चक्रे यदी दृष्ट इदन्तु राज्ये हन्तव्य तं कोऽपि तदा सुपर्णः ॥ १५ ॥

    सरोवरे ह्योपवनैक राज्ये वासाश्च दृष्ट्वा किल राजहंसाः |
    इदं किमेतत्तु विचित्रदृश्यं मत्वा तु चक्रुः परिहासमेतत् ॥ १६ ॥

    किंनामधेयं तव चारुपर्णः मन्दोऽपि मूढो ह्यपि मन्ददृष्टिः |
    पप्रच्छुरित्यादि च तीक्ष्णदृष्टिं सरोवरे स्थापितराजहंसाः ॥ १७ ॥

    ज्ञात्वा स दोषं गहनं सुपर्णः प्रत्यागमाकान्क्षिगरुत्मताप्तः |
    वत्सप्रदेशं प्रतिगन्तुमीप्सुः मार्गे विरुद्धे तु तदा जगाम ॥ १८ ॥

    प्रवेषितस्तां नगरीं यदा सः अस्त्राश्च शस्त्राश्च बहूनि बाणाः |
    उपस्थितास्ते नृपतेर्भटाश्च कर्तुं च सेवां ह्युपचारपूर्णं ॥ १९ ॥

    पलायनं स्यादुचितं तु मत्वा दृष्ट्वैति सैन्यं विविधप्रकारं |
    दधाव राज्याद्भयविःवलश्च आसीत्खगेन्द्रः खलु जीवदाता ॥ २० ॥

    मनुष्यमांसं न च खाधनीयं ज्ञातो न चेत्त्वं खलु तीक्ष्णदृष्टे |
    इदन्तु दोषञ्च बभूव किन्त्वया प्रश्नं चकारेति समं खगेन्द्रः ॥ २१ ॥

    श्रुत्वा खगेन्द्रश्च कथां विचित्रां निश्चित्य दोषं प्रथमञ्च तस्य |
    क्षमञ्च सख्या गरुडस्तु दत्त्वा हंसैःपराभूतिरलं तु शिक्षा ॥ २२ ॥

    अग्रे सखे त्वं करणीयमेतत् रक्षा च राज्ञ्याः तव देवधर्मः |
    उक्त्वा तु विष्णोः सुसखेति तस्मै वत्सप्रदेशं प्रति वै जगाम ॥ २३ ॥

    यथा हनूमान्पतितस्तु लङ्के बाणान्तु चोल्लङ्घित राक्षसानां |
    तथा ह्यपेतः खलु पत्रिभिस्ते राज्ञः गरुत्मान् भवने पपात ॥ २४ ॥

    स्वस्था तु राज्ञी तव भूमिपालः रोषञ्च त्वं संत्यजतु प्रगल्भः |
    क्षन्तव्य चासौ प्रथमो हि दोषः कारुण्यपूर्णःकिल चेति राजन् ॥ २५ ॥

    उवाच वाक्यानि च चारुपर्णः श्रुत्वा तु वाक्यानि मृगेन्द्रतुल्यः |
    विचिन्त्य राजा सुमतिः प्रतापः आलोचनं चात्मनि मन्त्रिवर्गे ॥ २६ ॥

    कृत्वा नरेन्द्रः शतपत्रिणः प्रभुः चक्रे स घोषं ह्युचितंच निर्णयं |
    स्वस्था च राज्ञी ह्यथ तीक्ष्णदृष्टेः अर्हः क्षमायै प्रथमश्च दोषः ॥ २७ ॥

    हर्षेण दत्वा गरुडः सुपर्णः राज्ञीं पुनः चन्द्रकुलात्मजाय |
    जगाम राज्याच्च बहिर्वनं सः पश्चाच्च वैद्येन चिकित्सिता सा ॥ २८ ॥

    सा जाग्रिताभूच्चकिता च राज्ञी आशा तु चित्रं फलतस्विचित्रं |
    आशेच्च सामान्यमलं न चित्रं चेत्ग्रामवृद्धो बटुकानुवाच ॥ २९ ॥

    पश्चात्सुपुत्रस्य बभूव माता श्रोतव्य पुत्रस्य कथां रसोक्तं |
    आसीच्च संध्यासमयं तु किन्तु गन्तव्य चाथाद्य शिवालयं चेत् ॥ ३० ॥

    उक्त्वा स वृद्धस्तु जगाम याम्यं बालाश्च वृद्धेन जगाम सार्धं |
    देवालये चापि यदा स्थितास्ते आमन्द्रशब्दाद्भुत शुश्रुवुस्ते ॥ ३१ ॥

    • ರಾಘವೇ೦ದ್ರ ಅದ್ಭುತ ಕಣಯ್ಯ 🙂
      ಬಹಳ ಸೊಗಸಾಗಿದೆ, ನಿನ್ನ ಪ್ರಯತ್ನದಿ೦ದ ನನಗೂ ಸ೦ಸ್ಕೃತದಲ್ಲಿ ಬರೆಯುವುದನ್ನು ಪ್ರಾರ೦ಭಿಸುವ ಆಸೆಮೂಡಿದೆ… ಆದರೆ ಶಕ್ತಿ ಕಡಿಮೆ 🙁

      ದೂರುತ್ತೆ ಸ೦ಸ್ಕೃತವು ಕ್ಲಿಷ್ಟವದೆ೦ಬ ಭಾವ೦
      ಸ್ವಾರಸ್ಯಪೂರ್ಣಕಥೆಯಿ೦ದಲಿ ರಾಘವೇ೦ದ್ರ೦
      ತೋರಿರ್ಪ ಸ೦ಸ್ಕೃತದೊಳು೦ ಬೆಳೆಸಲ್ಕೆ ಶಕ್ಯ೦
      ಸಾರಸ್ವತರ್ಗಳಿಗಿದಲ್ತೆ ರಸಾಲ ಭಕ್ಷ್ಯ೦

    • ಭಲೇ ಭಲೇ ರಾಘವೇಂದ್ರ. ಮೊದಲ (almost) ಓಟದಲ್ಲೇ ಮಾರಥೋನ್ (Marathon) ಓಡಿದ್ದೀರ. 🙂
      ನಿಮ್ಮ ಹಾಗು ಶ್ರೀಲಲಿತಾರ ಪ್ರಯತ್ನಗಳು, ಪದ್ಯಪಾನದಲ್ಲಿ ಸಂಸ್ಕೃತಕ್ಕೆ ಬಲ ತಂದಿವೆ. ಶಂಕರ, ಬಾಪಟ್ ಹಾಗು ಸುಧೀರರೂ ಕೈ ಜೋಡಿಸಿದರೆ ಇನ್ನೂ ಮೆರಗು ಬರುವುದು ಖಚಿತ.

      • ರಾಮಚಂದ್ರ ಮತ್ತು ಸೋಮ,
        ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು
        @ಸೋಮ, ಪದ್ಯದ ಮೂಲಕ ಧನ್ಯವಾದ ಹೇಳೋಣ ಅಂದ್ಕೊಂಡೆ ಆದ್ರೆ ಸದ್ಯಕ್ಕೆ ಏನು ಹೊಳಿತಿಲ್ಲ 😛 ಅದಿಕ್ಕೆ ಗದ್ಯದಲ್ಲಿ ಹೇಳ್ತಾ ಇದ್ದೀನಿ

    • small correction
      last verse last pada
      अद्भुत should have taken some vibhakti which it hasn’t so replacing that pada with
      आमन्द्रशब्दञ्च बभूव चाभ्रे

    • ಆನುಷ್ಟುಭೇ ಮಹಾವೃತ್ತೇ ರಮಣೀಯವಿಧಾನತಃ |
      ಸುದೀರ್ಘಂ ಕಥಿತಂ ಯತ್ತತ್ ಸ್ಪೃಹಣೀಯಂ ಸಮಂತತಃ ||
      ತ್ವದೀಯವಾಗ್ವಿಲಾಸೇನ ಧಾರಾಕಾರಪ್ರವಾಹಿಣಾ |
      ಸರ್ವೇ ಸಂಸ್ಕೃತಪದ್ಯಾನಾಂ ನಿರ್ಮಾತಾರೋ ಭವಂತ್ಯಲಮ್ ||
      ಅನೇನಾಶ್ಚರ್ಯಕಾರೇಣ ಹರ್ಷವರ್ಷೇಣ ಸರ್ವಥಾ |
      ಭವದ್ಯತ್ನೇನ ತಷ್ಟೋsಸ್ಮೀತ್ಯಲ್ಪಮಾತ್ರಮುದೀರ್ಯತೇ ||

      ಅನುಷ್ಟುಪ್ ಶ್ಲೋಕಗಳೆಲ್ಲ ಬಲುಮಟ್ಟಿಗೆ ಸೊಗಸಾಗಿವೆ. ಉಪಜಾತಿಗಳಲ್ಲಿ ಸ್ವಲ್ಪ ಸವರಣೆ ಬೇಕಿದೆ. ನೇರವಾಗಿ ತಿಳಿಸುತ್ತೇನೆ. ಜಯವಿಜಯೀ ಭವ:-)

  10. ಪದ್ಯ ಪಾಠದ ನಂತರದ ಪ್ರಥಮ ಪದ್ಯಾಭ್ಯಾಸ.
    ಎಚ್ಚರದ ಅಂಶಗಳೆಲ್ಲಕ್ಕೂ ಉದಾಹರಣೆ ದೊರೆತಿದೆ.
    ಸರಿಪಡಿಸಿಕೊಳ್ಳುವ(ಲಗಂ ತೆಗೆಯುವ), ಸಂದೇಹಗಳನ್ನು ಬಗೆಹರಿಸಿಕೊಳ್ಳುವ ಬಗೆ ತಿಳಿಸಿ.
    ನಿಜ,
    ಸಿಂಹ, ಗಜ?(sAdu ವಾದರೂ),ಶರಭ ಗಳೊಡನೆ “ಎಗರಿ” ಬಿದ್ದದ್ದೇ !
    ತಪ್ಪು “ಎಸಗಿ” “ಎರಗಿ” ಬಿದ್ದದ್ದು . “ಎರಡೂ” ಸರಿ.

    ಆದಿಪ್ರಾಸ ಶಿಷ್ಟ – ಕಷ್ಟ,
    ಅಂತ್ಯಪ್ರಾಸ ಇಷ್ಟ – ನಷ್ಟ,
    ಆದ್ಯಂತಗಳ ಅನುಪ್ರಾಸ “ಸ್ಪಷ್ಟ”.

    ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಧನ್ಯವಾದಗಳು.

  11. ಒಡಹುಟ್ಟಿದವನೊರ್ವನನುಸರಿಸಿದಾ ಪಾದ
    ಮಡದಿಯ೦ ಕಾನನಕದೊಯ್ದಪಾದ
    ತೊಡೆದಪಾದುಕೆಯಿ೦ದ ರಾಜ್ಯಮಾಳಿದ ಪಾದ
    ಬಿಡದೆಪಿಡಿಯುವೆ ಪೊರೆವ ರಾಮಪಾದ

    ಪೂರ್ವದೊಳ್ ನಡೆದಿರ್ಪ ಕಥನದುಲ್ಲೇಖಮ೦
    ಪೇಳ್ವುದೆ೦ಬಾಸೆ ಪೊಸ ಪದ್ಯಗಳೊಳು
    ತಾಳ್ವಬಯಕೆಯುಮಲ್ಲ ಗೈಯಲೆತ್ನಿಪೆನಿ೦ದೆ
    ತೋರ್ವುದೇ೦ ಪಥಮೆನಗೆ? ಕಾ೦ಬೆನಯ್ಯ

    ಉತ್ತು೦ಗಮೇರಿರ್ಪ ವತ್ಸದೇಶದ ಕೀರ್ತಿ-
    ಯೆತ್ತಿಪಿಡಿದಿಹ ರಾಜವ೦ಶದೊಳಗ೦
    ಪೆತ್ತಳೈ ಪಟ್ಟದರಸಿಯು ಶತಾನೀಕನಾ
    ಹೊತ್ತು ಮ೦ಗಳಮೆ೦ದು ಬುಧರು ಪೇಳ್ವರ್

    ಎಳೆಗ೦ದನ೦ ಬಾಲಲೀಲೆಗಳ್ ಹಲವಿರ್ಕು
    ಬೆಳೆದನಯ್ ಕಲೆಯಧಿಪ ಚ೦ದ್ರಮನೊಲು
    ಪೊಳೆವ ತಾರುಣ್ಯದೊಳ್ ರಾಜಪದವಿಯ ಪೊತ್ತು
    ಥಳಥಳಿಪ ಕೌಶಾ೦ಬಿಯ೦ ಗೆದ್ದನಯ್

    ಕೌಶ೦ಬಿಯಧಿಪ ಕುವರಿಯ ವಿಷ್ಣುಮತಿಯತಾ೦
    ದೇಶದೊಡೆಯ೦ಗಿತ್ತು ಕಲ್ಯಾಣದೊಳ್
    ದ್ವೇಶದಿ೦ದೆಸಗಿರ್ಪ ಪಾತಕ೦ಗಳನಳೆಸೆ
    ಕಾಶಿಯ೦ ಪರಿವರ್ತನೆಗೆ ಪೊಕ್ಕನಯ್

    ಪತಿವ್ರತಾ ವಿಷ್ಣುಮತಿ ಮ೦ತ್ರಿಯು೦ ರಾಜ೦ಗೆ
    ಸತಿ ರಾಜನೀತಿಯ೦ ತಿಳಿದಿರ್ದಳೈ
    ಕತಿಪಯ೦ ಸ೦ವತ್ಸರಗಳುರುಳೆ ಪುತ್ರನ೦
    ಪತಿಗಿತ್ತಳಾ ಸಾಧ್ವಿ ಕುಲದಕುಡಿಯ೦

    ಪೆತ್ತಕುವರಗೆ ಸಹಸ್ರಾನೀಕ ನಾಮವ-
    ನ್ನಿತ್ತ ಪುತ್ರೋತ್ಸವ೦ ರಾಜ್ಯದೊಳ್ಗೆ
    ಎತ್ತೆತ್ತರದ ತೋರಣ೦ಗಳ೦ ಕಟ್ಟಿರ್ದು
    ಸುತ್ತಮುತ್ತಣ ಜನರ ಸೆಳೆಯಿತಯ್ಯ

    ಇ೦ತಿರಲ್ ದಾನವರ್ ಕೆಣಕಲಿ೦ದ್ರ೦ಗಡಾ-
    ಕ್ರಾ೦ತಿಯ೦ ಸೆಣೆಸಲ್ಕೆ ಬದ್ಧನಾದ೦
    ಸ್ವ೦ತಿಕೆಯ ರಾಜ್ಯಾಧಿಕಾರಮ೦ ಮಡದಿ೦ಗೆ
    ತ೦ತುವಿತ್ತ೦ ಸುತಗೆ ನಾಮಪದಮ೦

    ದೇವಾಸುರರ್ ಸೆಣೆಸೆ ಘೋರಕಾಳಗದೊಳ೦
    ಕಾವೇರಿತಯ್ ಶತಾನೀಕಶೌರ್ಯ೦
    ಮೂವತ್ತು ದಿನ ಕಾದಿರಲ್ಕಸುರ ಕೃತ್ರಿಮದೆ
    ಸಾವನಪ್ಪಿದ ರಾಜ ಕೀರ್ತಿಶೇಷ೦

    ತೊಟ್ಟ ರಾಜ್ಯದ ಭಾದ್ಯತೆಯ ಪತಿವಿಯೋಗಿಯಾ
    ಪಟ್ಟದರಸಿಯು ಛಲದೆ ನೆರವೇರಿಸಲ್
    ನಿಟ್ಟುಸಿರ ವರ್ಷಗಳುರುಳೆ ಸಹಸ್ರಾನೀಕ
    ಪಟ್ಟಮ೦ ಮಾತೆಯಿ೦ದಲಿ ಪಡೆದನಯ್

    ನೆರೆಯಧಿಪ ಕೃತವರ್ಮಪುತ್ರಿ ತಾ೦ ಕಾನನದೆ
    ಬಿರುಸಿನೊಳ್ ಬೇಟೆಯ೦ ಗೈಯುತಿರಲು
    ಕರಿಯೊ೦ದರಿ೦ದವಳ ಪ್ರಾಣಮ೦ ಕಾಪಿಟ್ಟ
    ಪರಿಯಿ೦ದವಳಮನವ ಗೆದ್ದನಲ್ತೆ

    ಕೃತವರ್ಮಸುತೆ ಮೃಗಾವತಿಯ ವರೆಸಲ್ ರಾಜ
    ಪ್ರತಿರೋಧವಿತ್ತಯೋಧ್ಯಯ ಸೈನ್ಯಮ೦
    ಕ್ಷತಿಸಲ್ಕೆ ಕಲ್ಯಾಣಮೇರ್ಪಟ್ಟಿತಯ್ ಮುದದೆ
    ಕೃತ ತಾ೦ ಸ್ವಪುತ್ರಿಯ೦ ಬೀಳ್ಕೊಟ್ಟನಯ್

    ಬಸಿರಪೊತ್ತಳ್ ಮೃಗಾವತಿಯು ಕೆಲ ಮಾಸದೊಳ್
    ಪಸರಿಸಿತು ರಜಗೃಹದೊಳ್ ಸ೦ತಸ೦
    ಪಿಸುಮಾತೊಳ೦ ಪೇಳಿದಳ್ ಬಸಿರ ಬಯಕೆಯ೦
    ಪುಸಿಮಾಡದಿರ್ ರಾಜ ಮನದಾಸೆಯ೦

    ಯುಕ್ತಮಾದುದ ಕೇಳ್ವಳೆ೦ದಧಿಪ ಮಾತಿತ್ತ
    ಶಕ್ತನಿಹೆ ನಾ೦ ಪೇಳು ಬಯಕೆಯ೦ ನೀ೦
    ರಕ್ತದೊಳ್ ಮೀಯುವಾಸೆಯತೋರೆ ಪತ್ನಿಯು ವಿ-
    ರಕ್ತನಾದ೦ ಸಹಸ್ರಾನೀಕ ತಾ೦

    ಪೊಳೆಯಿತೈ ಪರಿಹಾರಮರಗಿನೊಳ್ ಕೆ೦ಪಾದ
    ಕೊಳವಮೀಯಲು ಸತಿಗದಿತ್ತನಯ್ ಕೇಳ್
    ಝಳಝಳಿಪ ನೆತ್ತರ೦ ಪೋಲ್ವ ಕೊಳದೊಳ್ ರಾಣಿ
    ಮುಳುಗೆದ್ದು ಪ್ರತಿದಿನ೦ ಸುಖಮಪ್ಪಿದಳ್

    ಗೃಧ್ರನೊರ್ವ೦ ವ್ಯೋಮಮಾರ್ಗದೊಳ್ ಸ೦ಚರಿಸೆ
    ಛಿದ್ರದೇಹ೦ ರಕ್ತ ಮಡುವೆ೦ದು ತಾ೦
    ಸುಗ್ರಾಸಮಿದುಮೆ೦ದು ಮನದಿ ಚಿ೦ತಿಸುತಿಳಿಯು-
    ತುಗ್ರನೊಯ್ದ೦ ಮೀಯುತಿರ್ಪಳ೦ ತಾ೦

    ಮ೦ದಿಯಟ್ಟಿದ ರಾಜ ಶೋಧಿಸಲ್ ಮಡದಿಯಾ-
    ಕ್ರ೦ದನದೆ ಕಳೆದನ೦ ಮಾಸಗಳನ೦
    ಚ೦ದದಾ ಮಡದಿಯ ವಿಯೋಗಮ೦ ತಾ೦ ಸಹಿಸ-
    ಲೆ೦ದು ಸ೦ಸಾರಮ೦ ಕೇಳ್ ತ್ಯಜಿಸಿದ೦

    • ಎಂದಿನಂತೆ ಸೊಗಸಾದ ಶೈಲಿಯಲ್ಲಿ, ರಸಭಾವಗಳ ಹೊಯ್ಲಿನಲ್ಲಿ ಸೋಮನ ಪದ್ಯನದಿ ಉಕ್ಕೇರಿದೆ. ಅಲ್ಲಲ್ಲಿ ಬಂಡೆಗಲ್ಲುಗಳಿವೆಯಾದರೂ ಗತಿಗೆ ತುಂಬ ತೊಡಕಾಗಿಲ್ಲ; ಈಜುಗಾರರಿಗೆ ತುಂಬ ಹಿಂಸೆಯಾಗಿಲ್ಲ:-)…ಕೆಲವೊಂದು ಸವರಣೆಗಳನ್ನು ನೇರವಾಗಿಯೇ ತಿಳಿಸುತ್ತೇನೆ. ಎಲ್ಲರಿಗೂ ಹೀಗೆಯೇ ಹೇಳಿದ್ದೇನೆ. ಏಕೆಂದರೆ ತುಂಬಪದ್ಯಗಳಿರುವ ಕಾರಣ ಈ ತಾಣದಲ್ಲಿ ವಿಸ್ತರಿಸಿ ಬರೆಯುವುದು ಕಷ್ಟ. ಇದಕ್ಕಾಗಿ ಯಾರೂ ಇನ್ನೇನೂ ತಪ್ಪು ತಿಳಿಯಬಾರದೆಂದು ವಿನಂತಿ.

      • ಧನ್ಯನಾದೆ ಸರ್:), ನಿಮ್ಮೊಡನೆ ಸವರಣೆಗಳನ್ನು ತಿಳಿದುಕೊಳ್ಳುತ್ತೇನೆ

  12. ಕಥಾಸರಿತ್ಸಾಗರದ ಕಥೆಯ ಈ ಭಾಗವನ್ನು ಭಾಮಿನಿಯಲ್ಲಿ ಪ್ರಸ್ತುತ ಪಡಿಸುವ ಒಂದು ವಿನಮ್ರ ಪ್ರಯತ್ನ ಹೀಗಿದೆ:

    —೧—-

    ವತ್ಸ ದೇಶದ ಕೌಶಾಂಬಿಯಲಿ
    ಸತ್ಸುಖನು ನೃಪ ಶತಾನೀಕನು
    ವತ್ಸಲದ ವಿಷ್ಣುಮತಿಯೆಂಬಾ ರಾಣಿಯಾತನಿಗೆ |
    ಕುತ್ಸಿತದ ಮನವಿರದ ರಾಜಗೆ
    ವತ್ಸ ಸಹಸ್ರನಿಕನು ಜನಿಸಿದ
    ವತ್ಸರದಿ ದೊರೆ ಪಟ್ಟಗಟ್ಟಿದ ರಾಜನೀತಿಯೊಳು ||

    —೨—

    ಧರಣಿಪಾಲನಯೋಧ್ಯೆ ರಾಜ್ಯದ
    ಕರುಳಕುಡಿ ಕೃತವರ್ಮಕುವರಿಯ
    ಪರಿಣಯವ ಕೈಗೊಂಡ ಮುದದೊಳಗಾಮೃಗಾವತಿಯ |
    ತರುಣಿಗರ್ಭವ ಧರಿಸಿ ರಕ್ತದಿ-
    ಭರಿತವಾಗಿಹ ಕೊಳದ ಹರವಲಿ
    ಹರವಿ ಮೀಯುವಪೇಕ್ಷೆ ತೋರ್ದಳು ಕುಂಕುಮಾವತಿಯು ||

    —೩—

    ಒರಗಿ ಕುಳಿತಾ ರಾಜ ಚಿಂತಿಸಿ
    ತಿರೆಯಲ್ಕೇಳದ ಈ ವಿಚಿತ್ರಕೆ
    ಅರಗಿನಾರಸದಿಂದ ನಿರ್ಮಿಸಿ ಮಡದಿಗರುಹಿದೊಡೆ |
    ತೆರೆದ ಆಗಸಗಾಮಿಯಾಗಿಹ
    ಗರುಡವಂಶದ ಪಕ್ಷಿಯಾಡುತ
    ಭರದಿ ಎರಗಿತು ಮಾಂಸವೆನ್ನುತ ಸ್ನಾನಕಿಳಿಡೊಡನೆ ||

    —೪—

    ಏರುತಾಗಸದೆತ್ತರಕೆ ಭಕ
    ಹಾರುತಿರ್ದೊಡೆ ವಾಯುವೇಗದಿ
    ಚೀರುವಾಕೆಯ ಹದ್ದು ಇಳಿಸಿತು ಪರ್ವತದ ತುದಿಗೆ |
    ಘೋರಕಾನನಕಿಳಿದು ಸಾಗುತ
    ಸೇರಿ ಜಮದಗ್ನಿಯ ಕುಟೀರವ
    ಕೋರುತಾಶ್ರಯ ಹೆತ್ತಳುದಯನನೆಂಬ ಕುಲಕುಡಿಯ ||

    —೫—

    ವರನೃಪಾಲನು ಮಡದಿಗಿತ್ತಿಹ
    ಪರಮಸುಂದರ ಕೈಗಡಗ ತಾ
    ಹಿರಿದು ಹೊರಟನು ಉದಯನನು ತನ್ನಪ್ಪನನು ಹುಡುಕಿ |
    ತ್ವರಿತಗೊಳಿಸುತ ಶೋಧನೆಯಪರಿ
    ಸರಿದ ಮುಂದಕೆ ಸಂಧಿಸುತಲಲಿ ಶ-
    ವರನೊಟ್ಟಿಗೆ ತಲುಪಿ ತನ್ನಯ ರಾಜಧಾನಿಯನು ||

  13. ಕತೆಯ ಪೇಳ್ವೆನು ಮತ್ಸದೇಶದ
    ವಿತತ ಕೌಶಾಂಬೀ ನಗರದೊಳು
    ಮತಿಯ ಚೋದಿಪ ಸಂಕಟವದೇರಿಳಿದ ವೈಖರಿಯ |
    ಪಿತನದುನ್ನತ ಗುಣಗಳಂ ತಾ –
    ನತುಲ ಭಕ್ತಿಯ ಭಾವದೊಳು ಕಾ –
    ಣುತ ಸಹಸ್ರಾನೀಕ ಬೆಳೆದನು ರಾಜ ಭವನದಲಿ || ೧ ||

    ರಾಜನು ಶತಾನೀಕ ವೀರನು
    ತೇಜಮಂತ ಸಾಹಸಿಯು ಧೀರನು
    ಸಾಜವಾಗಿ ಪ್ರಜೆಗಳನು ಸುತರಂತೆ ಪರಿಗಣಿಪನ್ |
    ಮೋಜ ಪಡೆಯಲು ನೃತ್ಯ ನಾಟಕ
    ಮೆಜವಾನಿಯ ಕಾವ್ಯ ಗೀತವು
    ಮೂಜಗದೊಳವ ದಾನ ಧರ್ಮಕು ಜಸವ ಪಡೆದಿರ್ದ || ೨ ||

    ನೆತ್ತಿ ಮೇಲೇರಿರ್ಪ ಭಾಸ್ಕರ
    ಹೊತ್ತು ಹೋಗುತಲಿಳಿಯುವಂದದೊ –
    ಳಿತ್ತು ರಾಜ್ಯವ ಸುತಗೆ ವಿರಮಿಪುದೆಂದು ತಾ ಬಗೆದು |
    ಪೊತ್ತು ರಾಜ್ಯಾಡಳಿತವೊರೆ ಮೂ –
    ವತ್ತು ವರ್ಷಗಳೆನಕ ದಣಿದಪೆ
    ನಿತ್ತ ತೋರುವುದೆಳೆಯ ಭುಜಗಳನೆನ್ನುತಲೆ ರಮಿಸಲ್ || ೩ ||

    ಬಪ್ಪ ನಾವೆಸರಲ್ಲಿ ನಿನಗಿಂ –
    ತಿಪ್ಪೆನೈ ದಶಗುಣಿಕನಾದರು
    ಮುಪ್ಪ ತೀಡಿಪ ನಿನ್ನ ದಶಗುಣ ಭಾಗಕಾನಿಲ್ಲೈ |
    ತಪ್ಪ ತೋರಿಸಿ ದಾರಿಗಾಣಿಸ –
    ಲೊಪ್ಪಿದೊಡೆ ನೀನೆನ್ನ ಸಂಗಡ
    ವಿಪ್ಪುದಾದರೆ ತೋಷದಿಂ ನಾ ರಾಜ್ಯಮಂ ಪಡೆವೆ || ೪ ||

    ಇಂತು ಪೇಳುವ ರಾಜಸುತ ಗುಣ
    ವಂತ ರೂಪದೆ ಮನ್ಮಥ ಶ್ರೀ –
    ಮಂತ ನಡತೆಯ ಪುತ್ರನಂಕಂಡುಬ್ಬಿದನು ದೊರೆಯು |
    ಕಾಂತಿ ಸೂರ್ಯನದೆರಕವಾಗಿ –
    ರ್ಪಂತ ರೂಪಸಿ ಮೃಗವತಿಯಳೆಂ
    ಶಾಂತ ಕೋಮಲ ಸುಂದರಾಂಗನೆ ಸೊಸೆಯನೈತಂದ || ೫ ||

    ಆಡಳಿತಮಂ ಮೆಲ್ಲ ಮೆಲ್ಲಗೆ
    ದೂಡುತಲಿ ಮಗನತ್ತ ರಾಜನು
    ಕಾಡ ದಾರಿಯ ನೋಡುತಿರೆ ವಿಧಿ ತಂದ ಸೂಚನೆಯು
    ಕೇಡಿಗರು ದಾನವರ ಸಮ ಹೋ –
    ರಾಡುತಿರ್ದಾ ದೇವರಿಗೆ ತಾ
    ನೀಡೆ ಹಸ್ತಸಹಾಯಕೆಂ ಸದ್ಗತಿಯ ಹೊಂದಿದನು || ೬ ||

    ಸತ್ತ ರಾಜಂಗಪರ ಕರ್ಮವ –
    ನಿತ್ತನಾ ಶತನೀಕ ಗುರುವವ –
    ಗಿತ್ತ ನಿರ್ದೇಶನಗಳಂ ಪಾಲಿಸಿದ ನೇಮದೊಳು |
    ತೊತ್ತೆನಿಸಿತೈ ರಾಜ್ಯ ಲಕ್ಷ್ಮಿಯು
    ಪೆತ್ತ ಪಿತನಾಶ್ರಯವದಿಲ್ಲದ
    ಕುತ್ತು ಬಂದಂಥವನ ಸಂತೈಸಿದಳು ಮೃಗವತಿಯು || ೭ ||

    ಕಾಲವುರುಳುತ ನೋವ ಮರೆತಿರೆ
    ಮೇಲೆ ಮಳೆ ಬೆಳೆ ಸಾರ್ಥವಾಗಿರೆ
    ತೇಲಿದರು ದಂಪತಿಗಳೀರ್ವರು ಸುಖದ ಸಾಗರದೊಳ್ |
    ಕೀಲಿನೊಲ್ ಮೋಹವದು ಹೊಮ್ಮಿರೆ [ ಕೀಲು = ಬೆಂಕಿ, ಅಗ್ನಿ ]
    ಕೂಲ ಕೂರ್ಮೆಯು ಬೆಂದು ರಾಣಿಯು [ ಕೂಲ = ರಾಶಿ; ಕೂರ್ಮೆ = ಪ್ರೇಮ ]
    ಬಾಲಚಂದ್ರನ ಬೆಸಲೆಯಾದಳದಾಣ್ಮನಿಂಗಿತದೊಳ್ || ೮ ||

    ಬಳಿಯು ಬೆಳೆದಿರಲುದರದೊಳ್ ಕಳ
    ಕಳಿಯದಾರೈಕೆಯಲಿ ಮೆರುಗಿರ –
    ಲೆಳಸಿದಳು ಪೈಶಾಚದನುಭವ ರಕ್ತದೋಕುಳಿಯ |
    ಅಳಿಸಲಾರದೆ ನಲ್ಲೆಯಾಶೆಯ
    ಕೊಳದೆ ತುಂಬಿಸಿ ಲಾಕ್ಷ ರಸಮಂ
    ಎಳೆಯ ಬೆಸಲೆಗೆ ಮೀಸಲೆಡೆ ಮಾಡಿದನು ನಿರ್ಧರದೊಳ್ [ನಿರ್ಧರ = ಧೃಡ, ಸ್ಥಿರ] || ೯ ||

    ಬಗೆಯ ಬಯಕೆಯ ಪೂರ್ಣಗೈಯಲು
    ಚಿಗುರುವಲರನು ಮುಡಿದ ರಾಣಿಯು
    ಮಿಗೆಯ ಮನದೊಳಗೀಜಿದಳು ಸಮರಕ್ತದಾ ಕೊಳದೊಳ್ |
    ಗಗನದೊಳು ಹಾರಾಡುತಿರ್ದನು
    ಖಗಪತಿಯ ವಂಶಜನು ಹಸಿವಲೆ
    ಬಗೆದು ಮಾಂಸದ ಖಂಡವೆಂದಾ ಕೊಳದಿ ತೇಲಿದಳ || ೧೦ ||

    … ಮುಂದುವರಿಯಲಿದೆ

    • ಭಳಿರೇ ಪರಾಕ್ರಮ ಕಂಠೀರವ! ತಡವಾಗಿಯಾದರೂ ರಾಮಚಂದ್ರರಿಂದ ಭಾಮಿನಿ ಹರಿದು ಬಂದಿದ್ದು ಖುಷಿ ತಂದಿತು. ಗಂಗಾಪ್ರವಾಹದಂತೇ ಮುಂದುವರಿಯಲಿ……

    • ಶಿವನ ಬಾಣದ ಗುರಿಯೊಲಂತುಟೆ
      ಜವನ ಪಾಶದ ಪರಿಯ ಧೃಡತೆಯ –
      ಲವಳ ಭುಜ ಪಿಡಿದೆತ್ತಿತಾ ಖಗ ಭಯದಿ ಬೆವೆತವಳ |
      ಅವನಿ ಬಿಟ್ಟೇರಿರಲು ಭರ್ರನೆ
      ಕವಿದ ಕಣ್ಗತ್ತಲೆಯ ಕೂಪದ
      ಗವಿಗೆ ನುಗ್ಗುತ ಕಾರುತಿರ್ದಳು ತಪ್ಪಿದೆಚ್ಚರದಿ || ೧೧ ||
      [ಕಾರು = ವಾಂತಿ ಮಾಡು]

      ರಾಣಿಯನು ಹೊತ್ತೊಯ್ಯುತಿರೆ ಖಗ
      ವೋಣಿಗಳ ತೆರೆಬಾಯ ಜನ ಕಾಣ್ –
      ಕಾಣುತಿರ್ದಂತೆಯೆನೆ ಹಾರಿತು ದೂರದೇಶದೆಡೆ |
      ದೇಣಿಗೆಯ ಸೆಳೆವರಸನಂತೊಲು
      ಕಾಣುತಲೆ ದೋಚಿರ್ದ ಖಳನಿವ
      ಪ್ರಾಣಕಳೆಯುವ ಯಮನೊ ರಾಕ್ಷಸ ಕೂಟ ಸಂಚಕನೊ || ೧೨ ||
      [ಓಣಿ – ದಾರಿ, ಸಾಲು, ಕೇರಿ; ಸಂಚಕ = ಸಂಚಿನಲ್ಲಿ ಪಾಲುದಾರ]

      ಹೇರಳದೊಳುಣಿಸಿಂದು ದಕ್ಕಿತು
      ಯಾರದಡ್ಡಿಗಳಿರದ ತಾಣಕೆ
      ದೂರದೂರಿನ ಬಳಗದಾಬಳಿಗೊಯ್ವ ಹಂಬಲದೆ |
      ಭಾರವದು ಪೊರಲಾರದಿರ್ದರು
      ಮೀರಿದಾಶೆಯು ಸಾಗಿಸುತ್ತಿರೆ
      ತೀರುತಿರ್ದು ವಿವೇಚನೆಯು ಮೇಣ್ ಮತಿಯು ವಿರಳಿದುದು || ೧೩ ||
      [ವಿರಳಿದುದು = ವಿರಳವಾದುದು]

      ಪೊತ್ತ ಪೆಣ್ಣಿನ ತಲೆಯು ಪಕ್ಷಿಯ
      ನೊತ್ತುತಿರೆ ಜಠರಾಂಗ ಭಾಗದಿ
      ಸುತ್ತಲಾಕೆಯ ದೇಹ ವಾಲಿರೆ ಖಗನು ದಣಿದಪನು |
      ಹತ್ತು ಮತ್ತೈವತ್ತು ಯೋಜನ
      ವುತ್ತರಕೆ ಹಾರಿರ್ದ ಪಕ್ಷಿಯ
      ಪಿತ್ತ ನೆತ್ತರಕೇರೆ ಕುಸಿದನು ಹಿಮದ ಪರ್ವತದಿ || ೧೪ ||

      ಹಿಮದಿ ಹೊರಹೊರಳುತ್ತಲಲ್ಲೆ ಗು –
      ಣಮತಿ ಮತಿಯಂ ತಿಳಿದಳೆದ್ದಳು
      ಗಮನಿಸುತ್ತಾ ನಡೆದ ಘಟನೆಯನೆಲ್ಲವನ್ನರಿತು |
      ಗಮಿಸಲಾಗದೆ ಬಿದ್ದ ಪಕ್ಷಿಯ –
      ದಮಿತಸಂಕಟ ಕಂಡು ಕೋಮಲ
      ಮಮತೆ ಪರಿದುದು ಸಬಲೆ ಮನದೊಳಗಬಲ ಜೀವಿಯೆಡೆ || ೧೫ ||

      ಮನದೆ ನೆನೆದಳು ಪತಿಯ,ದೇಶವ
      ಹನುಮ, ಲಕ್ಷ್ಮಣ, ರಾಮ, ಶ್ರವಣರ –
      ನನುವು ಗೊಂಡಳು ಮಾತೆಯಂದದಿ ಸೇವಿಸಲ್ ಖಗನಂ |
      ತಿನಿಸುಗಳ ತಾ ಹುಡುಕಿ ತಂದವ –
      ಳಿನಿಸು ಸವಿ ಮಾತುಗಳ ಪೇಳುತ
      ತನುವ ತೀಡುತ ವತ್ಸಲೆಯು ಸಲಹಿದಳು ತಾಳ್ಮೆಯಲಿ || ೧೬ ||

      … ಮುಂದುವರಿಯಲಿದೆ

    • ತಿನ್ನಲೆಳಸಿದ ಪೆಣ್ಣದೀಪರಿ
      ತನ್ನ ಕಾಪಡುವುದ ನೆನೆಯುತ –
      ಲಿನ್ನು ತಡೆಯದೆ ನೀರ ಕೋಡಿಯೆ ಹರಿಯೆ ಕಣ್ಣಿಂದ |
      ಮನ್ನಿಸೆನ್ನನು ತಾಯೆ ನಿನ್ನಯ –
      ದುನ್ನತದ ಗುಣವಿಲ್ಲವೆಲ್ಲಿಯು
      ರನ್ನ ಚಿನ್ನಗಳೆಲ್ಲ ನೀನಿರೆ ಕಲ್ಲು ಮಣ್ಣುಗಳೌ || ೧೭ ||

      ನಿನ್ನ ನಾ ಬಲು ದೂರ ತಂದೆನು
      ಕನ್ನಿಕೆಯೆ ನೀನೆಷ್ಟು ಬಳಲಿದೆ
      ಚೆನ್ನದೂರಿಗೆ ಮರಳಿ ನಾ ನಿನ್ನನ್ನು ಕೊಂಡೊಯ್ವೆ |
      ಮುನ್ನಿನಾ ಚೈತನ್ಯ ಧೈರ್ಯವು
      ಬೆನ್ನಿನಾ ಕಸು ರೆಕ್ಕೆ ಶಕ್ತಿಯು
      ನಿನ್ನ ದಯೆಯಿಂದೆನಗೆ ಮರಳಿರಲೇಳು ಪೋಗುವನ || ೧೮ ||

      ಪಕ್ಷಿ ನುಡಿಯನು ಕೇಳುತಲಿ ನಳಿ
      ನಾಕ್ಷಿ ನಕ್ಕಳು ಬೇಡವಂತಾ –
      ರಿಕ್ಷ ಯಾನದ ಭಯವದೆನಗಿರೆ ನಿನಗು ಸರಿಯಲ್ಲ |
      ಶಿಕ್ಷಣವು ನಮಗಾಗಲೀಕಥೆ
      ತಕ್ಷಕಾರಿಯೆ ಮುಂದೆ ಯೋಚಿಸು
      ರಕ್ಷಕನು ನೀ ಸಣ್ಣ ಮರಿಗಳ ಮನೆಗೆ ನೀ ತೆರಳು || ೧೯ ||

      ಹುಡುಕಿ ಬರುವರು ನನ್ನ ರಾಜ್ಯದ
      ಪಡೆಗಳಲಿ ಸೈನಿಕರು ರಾಜನು
      ಅಡಗೊ ಮುನ್ನವೆ ಇಂದಿನಾ ರವಿ ನನ್ನ ಕೂಡಿಪರು |
      ಮಡಗರೇ ಬಾಣವನು ಬಿಲ್ಲಿಗೆ
      ಬೆಡಗಿನೊಳ ನಿನ್ನನ್ನು ಕಂಡೊಡೆ
      ನಡೆಯು ನೀನಿನ್ನಿಲ್ಲಿ ನಿಲ್ಲದೆ ಹಾರು ನನ ಕಂದ || ೨೦ ||

      ನಮಿಸಿ ಜೀವವ ನೀಡಿದಬ್ಬೆಗೆ
      ತಮವ ನೀಗಿದ ಕಾಲನಾಟಕೆ
      ಗಮಿಸಿತಾ ಖಗ ಗಗನ ಮಾರ್ಗಕೆ ರೆಕ್ಕೆ ಬೀಸಿನಲಿ |
      ಕ್ರಮದಿ ಕಂಡಿತು ರಾಜ ಪಡೆಯದು
      ಹಿಮದ ಗಿರಿಯನ್ನೇರುತಿರ್ಪುದ –
      ನುಮೆಯೆ ಶಿವನೊಡೆ ಕೂಡುವೊಲು ದಂಪತಿಯ ಸಂಗಮವ || ೨೧ ||

      — ಸಮಾಪ್ತವಾಗಿದೆ —

  14. ಗಣೇಶ್ ಸರ್ ಹೇಳಿದಂತೆ ಸರ್ಗಾಂತದಲ್ಲಿ ಬೇರೆಯ ಛಂದಸ್ಸಿನಲ್ಲಿ ಒಂದು ಪದ್ಯ

    ಋಷ್ಯಾಶ್ರಮೇ ಮುನಿಜನಾ ನೃಪತೇಃ ಕುಮಾರಂ
    ರಾಜ್ಞೀವಿನಿಶ್ವಸಿತವಾಸಿತತೀರ್ಥವಾಕಂ |
    ಪ್ರೀತ್ಯಾಭಿಪಾಲಯನಮುಂ ಗಗನಾಂಬ್ವಭಾವೇ
    ಕುಂಭಾಭಿಷೇಕಕರಣಾದಿವ ಬಾಲವೃಕ್ಷಮ್ ||
    (tIrthavAka = m. the hair of the head)

    • ಮೂರನೆಯ ಸಾಲಿನಲ್ಲಿ ಒಂದು ತಪ್ಪಾಗಿದೆ, ಮತ್ತು ಗಗನಾಂಬ್ವಭಾವೇ ಎಂಬ ಶಬ್ದ ಕೇಳಲು ಚೆನ್ನಾಗಿಲ್ಲ.
      ಅದನ್ನು ಹೀಗೆ ಸವರಿಸಿದ್ದೇನೆ.

      ಪ್ರೀತ್ಯಾಭ್ಯಪಾಲಯನಮುಂ ಜಲಶೋಷಕಾಲೇ

    • ಈ ಪದ್ಯವನ್ನು ಮತ್ತು ಹಿಂದೆ ನೀವು ಸರಿಪಡಿಸಿದ ವ್ಯಾಕರಣವನ್ನು ಮೂಲ ಪದ್ಯದಲ್ಲಿಯೇ ಅಳವಡಿಸಲಾಗಿದೆ.

Leave a Reply to prasAdu Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)