Aug 242015
 

ವರ್ಣನೆಯ ವಸ್ತು ಮತದಾರನ ಬೆರಳಿನ ಮೇಲೆ ಹಾಕುವ ಗುರುತು

  97 Responses to “ಪದ್ಯಸಪ್ತಾಹ ೧೬೫: ವರ್ಣನೆ”

  1. ದುಷ್ಟನನಾಯ್ದೆನೆಯೆಂಬುದು
    ಸ್ಪಷ್ಟಮಿರದೆ ಪೋಪುದೆಂದು ಜನಮಾನಸದೊಳ್
    ಕಷ್ಟಮನುಳಿಯಲ್ಕೆನುತುಂ
    ಮುಷ್ಟಿಯ ಬೆರಳಿಂಗೆ ಸಿತದ/ಕರ್ಪಿನ ಗುರುತೇಂ?

    ತಾನು ಆಯ್ಕೆಮಾಡದವನ ಚಾರಿತ್ರ್ಯದ ಬಣ್ಣವನ್ನು ಬಿಂಬಿಸುವ ಬಣ್ಣವನ್ನು ಲೇಪಿಸುವರೇ?

    • First line last gana 5 matras

    • ಸೋಮ, ದುಷ್ಟನಂ+ಆಯ್ದೆನೆ ಎಂಬ ಎನ್ನುವಲ್ಲಿ ಸಂಧಿಯು ದುಷ್ಟನನಾಯ್ದೆನೆಂಬ ಎಂದೇ ಆಗುವುದಲ್ಲದೆ ದುಷ್ಟನನಾಯ್ದೆನೆಯೆಂಬ ಎಂದಾಗದು. ಹೀಗಾಗಿ ವ್ಯಾಕರಣಶುದ್ಧಿಯನ್ನು ನೋಡಿದಲ್ಲಿ ಛಂದಸ್ಸು ಕೆಡುತ್ತದೆ, ಛಂದಸ್ಸನ್ನು ಗಮನಸಿಕೊಂಡರೆ ವ್ಯಾಕರಣದ ಹಳಿತಪ್ಪುತ್ತದೆ. ಏನು ಮಾಡುತ್ತೀಯೆ? ತೀರ್ಮಾನ ನಿನ್ನದು:-)
      ಅಲ್ಲದೆ ಕಡೆಯ ಸಾಲಿನಲ್ಲಿ ವಿಕಲ್ಪಗಳೆರಡನ್ನೂ ಒಪ್ಪಿದಾಗ ಮಾತ್ರ ಛಂದಸ್ಸು ಸರಿಯಾಗುತ್ತದೆ. ಇದಕ್ಕೇನು ಗತಿ?

  2. ಕೈವೆsರsಳಿಂದsಲೆs ಗಾವಿsಲsನಾದುsದುs
    ಪಾವsಕs ಸ್ಪರ್ಶಂ ತರಮಲ್ತೆs ದಂಡsಕೆs
    ನೋವೆsನೆs ಬರೆಯs ಗುರುತಲ್ತೇ

    • ರಾಮನ ಮೋಹದ ತ್ರಿಪದಿಯನ್ನು ರಾವಣನೇ ಕಸಿದು ಯಶಸ್ವಿಯಾಗಲಿಲ್ಲ; ಆದರೆ ಸೋಮನು ಮಾತ್ರ ಯಶಸ್ವಿಯಾದ!!

  3. ಪೊನ್ನಿನ ನಾಳೆಗಿದೆನುತುಂ
    ಮುನ್ನಂ ನೀಂ ದೀಕ್ಷೆ ಗೆಯ್ದು ಚುನಾವಣೆಯ ಈ
    ಜನ್ನಕೆ ದಾನಮನೀಯಲ್
    ರನ್ನನೆ ಕೋ ರಕ್ಷೆಯೆನಿಪ ಗುರುತೇಂ ಕರಕಂ

    • ಈ ಪದ್ಯದ ಎರಡನೆಯ ಸಾಲಿನಲ್ಲಿ ಛಂದಸ್ಸು ತಪ್ಪಾಯಿತಲ್ಲಾ ಸೋಮಾ!!
      ಉಳಿದಂತೆಲ್ಲವೂ ಚೆಲುವಾಗಿದೆ.

  4. ಮೊರೆಗುಂ ಪ್ರಜೆಗಳ್ ಪ್ರಭುವೀ
    ತಿರೆಗೆಂದೆನೆ ಘೋಷವಾಕ್ಯಮೈದೆ ಪ್ರಭುವೊಳ್
    ಪರಿಕಿಸುಗುಂ ನಿಷ್ಠೆಯನೀ
    ಬೆರಳೊಳ್ ದೊರೆ ಮುನಿಯದಿರ್ಪುದೇ ಸ್ವಾರಸ್ಯಂ

    • ಆಹಾ! ಸೊಗಸಾದ ಪದ್ಯ; ಸುಂದರವೂ ಬಿಗಿಯೂ ಆದ ಸುಭಗಭಾಷೆ. ಅಭಿನಂದನೆಗಳು.

      • ಧನ್ಯವಾದಗಳು ಸರ್

      • Can I request a translation of your halegannada poems to Aadu Bhashe Kannada? That would be of great help for a new bee like me.

        • English first: It should be spelled NEWBIE. New Bee will mean something else 🙁
          Now Kannada: Well, you don’t have to stoop to ADubhAShe in literary pursuits. You can rather graduate to becoming a haLagannaDa versifier by just giving one hour a day for a year – half for the lessons on chandass in this site (learn prosody) and half for reading Kannada classics.

  5. शुभ्रे नखे तावदयं कलङ्कः
    स्पष्टं विधत्ते मतदानलाभम्।
    शुभ्रे स्वदेशेऽपि कलङ्कलोको
    लोकाधिपत्येन कलङ्कयेत् कुम्॥

    • This is a nice verse full of wit and punch. Thanks a lot for the fine poem. But the last word, perhaps “kim”, is mistyped as kum.

      • achaaryaa: pranaama: ku= bhoomi ityarthe prayoga: cintita:| lokaadhipatyena kum api kalankayet iti| nakhaaroodha: kalanka: yatha tatha sthaanaroodha: janopi bhoomim kalankayet iti | sadhu bhavati
        khalu?

        • नाहं खल्वाचार्यः, केवलं कश्चन काव्यभावकः। आस्तां, अत्र यद्यपि कुशब्दस्य भूमिरिति कोशप्रसिद्धिर्व्याकरणसंमतिः, सरसपद्यसन्दर्भे न किलैकाक्षरादीनां युज्यते व्यवहारः। तत्तु केवलमगतिकगत्या चित्रकवितासु वावधाननिषेधाक्षरादिषु लगेत्। समयोsयमालङ्कारिकाणामिति सुविदित एव।

  6. Earlier the marking was done only on the nail. Now it extends to the skin beyond.
    ಭಸ್ಮವೀಭೂತಿಯೊಳು ಮೇಣಿಂ
    ದಸ್ಮಗೋಪೀಚಂದನಗಳೊಳ್
    ವಿಸ್ಮಯವದಾವೊಂದುಮಿಲ್ಲಂ, ಫಾಲಸೀಮಿತಮೈ|
    ಅಸ್ಮದಾಪ್ತರು ತೆಂಕಲೆಯವರು-
    ಮಸ್ಮಿತೆಯಿನಿಂ ತೊಡುವ ನಾಮವು
    ಸುಸ್ಮಯದಿ ಮೂಗಿಗಿಳಿದಿದೆ ಮತದಾನಚಿನ್ಹೆಯೊಲು||

    • ವೀಭೂತಿ ಅಥವಾ ವಿಭೂತಿ?

      • Objection sustained!!
        ರಂಗಪ್ಪನವರಿಗೆ ಹಾರ್ದಿಕಸ್ವಾಗತ.
        @ರಂಗನಾಥಪ್ರಸಾದಪ್ಪನವರೇ! ನಿಮ್ಮ ಮುಂದಿನ ಪದ್ಯ(ಪಾದ)ವಾದಸರಣಿ ಏನು? :-):-)
        ಅಸ್ಮಿತೆಯಿನಿಂ ಎಂಬುದು ಅಷ್ಟಾಗಿ ಹಿತವಲ್ಲದ ವ್ಯಾಕರಣ. ಅಂತೆಯೇ ಕಡೆಯ ಸಾಲಿನಲ್ಲಿ ಗತಿ ಹಿತವಿಲ್ಲ.

        • ಪ್ರಸಾದುಪ್ಪ…. ಪ್ರಸಾದಪ್ಪ.. ಪ್ರಸಾದಪ್ಪ. ವಾದಿಗಳೇ ಬರುತ್ತಿಲ್ಲ ಮಹಾಸ್ವಾಮಿಗಳೇ 🙂

          • Haazir haiiiiiiiiii…
            @ Soma: ವಾದಿಯೋ ಪ್ರವಾದಿಯೋ ಸ್ವಾದಿಯೋ ನಿರ್ಧರಿಸುವುದು ಪದರಂಗ. ಹೂಡು ವಾಕ್ಕುಗಳ ಮಾಡುವೆs ಕರ್ಣಭಂಗsssssss
            @ my namesake and our tutor: Thanks for pointing out the errors. Here is the corrected verse:
            ಭಸ್ಮಲೇಪಿಸೆ ಸ್ಮಾರ್ತರುಂ ಮೇಣ್
            ದಸ್ಮಚಂದನ ಧರಿಸೆ ಮಾಧ್ವರು
            ವಿಸ್ಮಯವದಾವೊಂದುಮಿಲ್ಲಂ, ಫಾಲಸೀಮಿತಮೈ|
            ಅಸ್ಮದಾಪ್ತರ ತೆಂಕಲೆಯರದು-
            ಮಸ್ಮಿತಾಭಾವದಿಹ ನಾಮವು
            ಸುಸ್ಮಯದಿ ನಾಸಿಕಕೆ ಇಳಿದಿದೆ ಮತದ ಚಿನ್ಹೆವೊಲು||

          • ಸೋಮ, ಪ್ರಸಾದು, ನಿಮ್ಮ ವಿನೋದಪ್ರಜ್ಞೆ ಅಸಮಾನ, ರಸಮಾನ; ಅಭಿನಂದನೆಗಳು.

          • One more objection.. ಚಿನ್ಹೆ ಅಲ್ಲವಲ್ಲ. ಅದು ಚಿಹ್ನೆ ಆಗಬೇಕಲ್ಲ..

          • objection overruled: ಚಿನ್ಹೆ, ಚಿಹ್ನೆ, ಚಿನ್ನೆಗಳೆಲ್ಲವೂ ಸಾಧುರೂಪಗಳು

  7. ಕುಸಿದಿರ್ಪೊಡೆ ನಂಬಿಕೆಯೀ
    ಪುಸಿ ತುಂಬಿದ ಜಗದೊಳಾರೆಣಿಪರೈ ತಪ್ಪಂ,
    ಮಸಿಯಂ ಬಳಿಯುತುಮಿಟ್ಟೊಡೆ
    ಹಸನಾಗೆ, ಮತಂಗಳಿತ್ತ ಲೋಗರ ಲೆಕ್ಕಂ!
    (ನಂಬಿಕೆಯು ಕುಸಿದಿರಲಾಗಿ, ಮತ ನೀಡಿದವರನೆಣಿಸಲು ಮಸಿಯನ್ನು ಬಳಿಯುವದು ಉಚಿತವೇ ಆಗಿದೆ)

    • ಪದ್ಯ ಚೆನ್ನಾಗಿದೆ. ಆದರೆ ಕಡೆಯ ಸಾಲಿನಲ್ಲಿ “ಮತಂಗಳಿತ್ತ…………..” ಎಂದು ಸವರಿಸಿದರೆ ಯುಕ್ತ.

  8. ಕಿರಿದೆಂಬುವ,ಕರಿದೆಂಬುವ
    ಬೆರಳಂಚಿನ ವಾಸಮೆಂಬಳುಕು,ಕೊರೆಯೇನೀ
    ವರಭಾರತದೊಳ್ ಪ್ರಜೆಗಳ
    ಕರಾಂಬುಜಂಗಳೊಳೆ ರಾಜಿಸಲ್ಕಳಿಗಳವೊಲ್!

  9. ಶತಶತಸ೦ಖ್ಯೆಯೊಳ್ ಸುತರನಿತ್ತವೊಲೇ ಧೃತರಾಷ್ಟ್ರನಿ೦ದಮಾ
    ಸತಿ ಮತಿಹೀನರ೦ ನೆಲದ ನಚ್ಚಿನೊಳಾಯ್ದು ಜನಕ್ಕೆ ನೀಳ್ವ ಪ-
    ದ್ಧತಿಯ ಚುನಾವಣಾಕ್ರಿಯೆಯಲಾ, ವರಧರ್ಮಿ ಯುಧಿಷ್ಠಿರ೦ಗೆ ದ-
    ಕ್ಕಿತಲೆ ನಖಾಳಿ ಸೀದ ಗತಿ ಅ೦ತಿದು ದಲ್ ಮತವೀವಗ೦ ಗಡಾ

    ಮತದಾರ ಶಾ೦ತಿ ಧರ್ಮಗಳನ್ನು ಬಯಸುವ ಯುಧಿಷ್ಠಿರನ೦ತೆ. ತದ್ವಿರುದ್ಧರಾದ ನೂರಾರು ಮಕ್ಕಳನ್ನು ಹೆತ್ತ, ಹೆರುವ ಗಾ೦ಧಾರಿಯ೦ತೆ ಚುನಾವಣೆ ಪ್ರಕ್ರಿಯೆ ಅನೇಕ ಪು೦ಡ ಪುಢಾರಿಗಳನ್ನು ಕೊಡುತ್ತದೆ. ಗಾ೦ಧಾರಿ ಯುಧಿಷ್ಠಿರನ ಬೆರಳ ಉಗುರು ಸುಟ್ಟಹಾಗೆ ಮತದಾರನ ಉಗುರೂ ಸುಟ್ಟ ಕಲೆಯನ್ನು ಪಡೆಯುತ್ತದೆ.

    • ಸ್ತುತಮತಿ ನೀಲಕಂಠ ಕವಿ! ನಿಮ್ಮಯ ಮಾತಿಗದೆಂತು ದಕ್ಕಿತೋ
      ಅತುಲಿತ ಮಾಧುರೀಮಹಿಮೆ! ಹಾ! ತಿಳಿದೆಂ! ಭುವನೈಕಮೋಹನೋ
      ದ್ಧತಸುಕುಮಾರಕಾವ್ಯವನಿತಾಜನತಾಘನತಾಪಹಾರಿ ಸಂ
      ತತಮಧುರಾಧರೋದಿತಸುಧಾರಸಧಾರೆಯನೀಂಟುತಿರ್ಪುದೇ||
      😉 😛

    • ತುಂಬ ಚೆನ್ನಾಗಿರುವ ಪದ್ಯ ಹಾಗೂ ಪ್ರತಿಪದ್ಯ. ನೀಲಕಂಠರಿಗೆ ಹಾಗೂ ಕೊಪ್ಪಲತೋಟರಿಗೆ ಧನ್ಯವಾದಗಳು.

      • ನೀಲಕಂಠರ ಪದ್ಯ ತುಂಬ ಸೊಗಸಾಗಿದೆ. ಕೊಪ್ಪಲತೋಟನ ಪ್ರತಿಕ್ರಿಯೆಯೂ ಸಮಯೋಚಿತವಾಗಿದೆ. ಮೂಲದ ತೆಲುಗಿನ ತೆನಾಲಿ ರಾಮಕೃಷ್ಣನ ಪದ್ಯವನ್ನು ಅದೆಂದು ಕಂಠಪಾಠ ಮಾಡಿದನೋ ಕೊಪ್ಪಲತೋಟ!!

        • 🙂 ನೀಲಕಂಠರ ಬಗ್ಗೆ ಒಂದು ಸಾಲು ಚಂಪಕಮಾಲೆ ಬರೆಯೋಣ ಎಂದುಕೊಂಡೆ “ಸ್ತುತಮತಿ” ಎಂದು ಪ್ರಾರಂಭ ಮಾಡಿದೆ.. ತತ್‌ಕ್ಷಣ ತೆನಾಲಿ ರಾಮನ ಕುಚೋದ್ಯದ ಪದ್ಯದ ನೆನಪಾಗಿ ಹಾಗೇ ಮುಂದುವರೆಸಿದೆ 😉

          • ಹ್ಮ… ಒಟ್ಟಿನಲ್ಲಿ ನಿಮ್ಮ ಕುಚೋದ್ಯಕ್ಕೆ ಪಕ್ಕಾಗಲು ಈ ಮರಿ ಕಿರಿ ಕಿರಿಕಿರಿ ಕವಿ ನೀಲಕ೦ಠನೇ ಬೇಕಾಯ್ತೊ? 🙂 ಧನ್ಯವಾದಗಳು ಮೆಚ್ಚುಗೆಗೆ!

        • ಧನ್ಯವಾದಗಳು ಮೇಡಮ್, ಧನ್ಯವಾದಗಳು ಸರ್.

  10. ಬಯ್ಗಳಂ ಕೇಳ್ದವರ್ ಬಾಯ್ಗಳೊಳ್ ಪುಸಿಯಿರ್ಪರ್
    ಕಯ್ಗಿತ್ತುದೇನೆಂದುಲಿಯಲ್ಕೆ| ಕಲೆಯೊಂದೆ
    ಮೆಯ್ಗೆಲ್ಲ ಬಳಿಯದಿರೆ ಪುಣ್ಯಂ ||೧||

    ಮತದಾನಮಂ ಮಾಳ್ಪಂ ಹಿತಮನೆಂದಿಗೆ ಕಾಣ್ಬಂ?
    ಅತಿಶೀಘ್ರಮಾಗಿ ಶುಭದಿನಂ| ಬರ್ಪುದೆ-
    ನ್ನುತೆ ಹಸ್ತರೇಖೆ ಮೂಡಿತೇಂ||೨||

    ಉಗುರಿನಿಂ ಚರ್ಮಕ್ಕೆ ತಗುಳ್ದತ್ತು ಮಸಿಗೀರು
    ಜಗದೆಲ್ಲ ತಮಮಂ ಚಿವುಟಿರ್ಪ | ಮತದಾತೃ-
    ವಿಗೆ ಸಂದ ಬಲ್ಮೆಗುರುಪಾಗಿ || ೩||
    (ಬಲ್ಮೆ+ ಕುರುಪು> ಬಲ್ಮೆಗುರುಪು)

    ಯಂತ್ರದೊಳ್ ಬಿಸುಪಿಂದತಂತ್ರಮಾಗಿರ್ದತ್ತು
    ಯಾಂತ್ರಿಕಸ್ನೇಹಂ ಜಾರುಕಂ | ಕರ್ಪಿಂದ
    ಮಂತ್ರಿತಹಸ್ತಕ್ಕಡರಿತ್ತು||೪||
    (Voting machine ಒಳಗಿದ್ದ lubricant oil (ಕಾಲ್ಪನಿಕ) ಕಪ್ಪಾಗಿ (ರಾಜಕಾರಣಿಗಳಿಂದ) ಮಂತ್ರಿತನಾದ ಮತದಾರನ ಕಯ್ಗೆ ಹತ್ತಿಕೊಂಡಿತು)

    ಗೆಲ್ದನ ಕೀರ್ತಿಗಿಂದೊಲ್ದ ಜಯಶ್ರೀಯು
    ಬಲ್ ದೆಸೆಗಳನು ತಿರುಗಾಡಿ| ಬಂದು ಬ-
    ಳಲ್ದಳ ನೆರಳೀ ಗೆರೆಯಾಯ್ತು||೫||

    ಪುಸಿಯನೆ ದಿಟಮೆಂದು ಪೊಸದಾಗಿ ನಂಬಿಪ್ಪ
    ಕಿಸುವಾಯ ಜನರ ಸಂಕೇತ| ನಿಂತಿತ್ತು
    ಮಸಿಗೆರೆಯಾಗಿ ಕಯ್ಯೊಳು||೬||

    ಕಡ್ಡಿಯಂ ಮುಳುಗಿಸಿ ಬುಡ್ಡೆಯ ಶಾಯಿಯಿಂ
    ಗಿಡ್ಡಮಾಗೊಂದು ಗೀರನ್ನು | ಬರೆಯೆ ಕ-
    ಣ್ಗೆಡ್ಡಮಾದತ್ತು ಕಯ್ಗಳೊಳ್||೭||

    ನಾಮಮಂ ನೋಡುತ್ತೆ ಸಾಮಾನ್ಯವ್ಯಕ್ತಿಗಳ್
    ತಾಮಾರ್ಗೊ ಮತವಂ ನೀಳ್ದಾಗ| ಹಣೆಗಿಟ್ಟ
    ನಾಮದಂತಿರ್ಕುಂ ಮಸಿಗೀರು||೮||

    ಮಾನದ ಕಳೆಯನ್ನು ಮಾನವರ್ಗಿತ್ತರೇ
    ಮಾನದೆ ಹಂಚಿ ಶಾಸಕರ್ |ಇದೊ ವೃತ್ರ-
    ದಾನವಹತ್ಯಾದೋಷಮೇ||೯||

    ಬೇಲಿಯಂ ತೆರೆದಿಟ್ಟು ಕೋಲನ್ನು ಬದಿಗಿಟ್ಟು
    ಪಾಲಕನಿತ್ತ ಮೇಯಲ್ಕೆ | ಕಯ್ಗೆಯ್ದ
    ನೀಲದ ರೇಖೆ ಕುರಿಬಾಲ*||೧೦||
    (ಬೇಲಿಯನ್ನು ತೆರೆದು ಕೋಲನ್ನು ಬದಿಗಿಟ್ಟು ಪಾಲಕ ಮೇಯಲು ಇತ್ತ(ಕೊಟ್ಟ) ಆಗ ಕಯ್ಗೆ ಬಂದ ನೀಲರೇಖೆ ಕುರಿಯ ಬಾಲ ಎಂದು ತಾತ್ಪರ್ಯವು.
    *ಇಲ್ಲಿ ಮೇಷಪಾಲರಹಸ್ಯಾಲಂಕಾರವನ್ನು ಕಾಣಬಹುದು 😛
    (ಕುರಿಯ ಬಾಲ ಹೇಗೆ ಇದ್ದರೂ ಅದು ಮೇಯುವ ಪ್ರಮಾಣಕ್ಕೆ ಯಾವ ರೀತಿಯಲ್ಲೂ ವ್ಯತ್ಯಾಸವಾಗಲಾರದು- ಇದೇ ಮೇಷಪಾಲರಹಸ್ಯಾಲಂಕಾರವು- ಅಂತೆಯೇ ಮೇಯಲು ನಿಂತ ರಾಜಕಾರಣಿಗಳು ಯಾವ ಪಕ್ಷದವರಾದರೂ ಮೇಯುವ ಪ್ರಮಾಣ ಕಡಿಮೆಯಾಗದು ಎಂಬುದು ಗೂಢಾರ್ಥವು )

    • ತುಂಬ ಸೊಗಸಾಗಿದೆ, ಕೊಪ್ಪಲತೋಟರೆ, ಧನ್ಯವಾದಗಳು. ಎಂಟನೆಯ ಪದ್ಯ ( ಹಣೆಗಿಟ್ಟ ನಾಮ) ತುಂಬ ಹಿಡಿಸಿತು. 🙂

      • ನಿಮ್ಮ ಮೆಚ್ಚುಗೆಗಳಿಗೆ ಧನ್ಯವಾದಗಳು 🙂

    • ಒಂದೊಂದು ಕಲ್ಪನೆಯೂ ಚೆನ್ನಾಗಿದೆ – ೨ನೆಯ ಪದ್ಯದ್ದು ಅತ್ಯುತ್ತಮವಾದದ್ದು. ಇನ್ನು diction ಬಗೆಗೆ ಹೇಳಲೇಬೇಕಿಲ್ಲ. ಒಳ್ಳೆಯ ಖಂಡಕಾವ್ಯ.
      ದಿಟ್ಟಿಬೊಟ್ಟು: ೨ ನೆಯ ಪದ್ಯದ ಕೊನೆಯ ಪದ: ಮೂಡಿತ್ತೇಂ

      • ತುಂಬ ಸೊಗಸಪ್ಪ ಪದ್ಯಾವಳಿಯನೊಡರ್ಚಿ
        ಬಿಂಬಿಸಿರ್ದಪಯ್ ತ್ರಿಪದಿಯಂ ರಚಿಸಲಾರ್ಪಿಂ|
        ತುಂಬಿಬಂದತ್ತು ಬಲ್ಮೆಯೆಂದೀಗಳಿಲ್ಲಿ;
        ಕೊಂಬು ಬೆಳೆಸಿದಯ್ ಮೈರಾವಣಂಗೆ ಗೆತ್ತುಂ|| 🙂 🙂

        • ಧನ್ಯವಾದಗಳು ಸರ್ 🙂
          ಆವ ತೆರದಿಂದೆ ಪೀಡಿಪುದೊ ನೋಳ್ಪೆನೆಂದು
          ನೋವನುಂಡಿಂತು ಬರೆದಪೆಂ ದಶಕಮಂ ಮೇಣ್|
          ರಾವಣಾಸ್ಯಂಗಳೆಲ್ಲಮುಂ ಪೇಳ್ದೊಡಿಂತು
          ಭಾವಿಸಲ್ ಸಂದುದಲ್ಲಮೇ ಭೃಂಗಿನೃತ್ಯಂ|

      • ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು 🙂

  11. ಕಲ್ಲುಮಳೆ ಸುರಿಯುವುದ ತಪ್ಪಿಸಲು ದ್ವಾರನಾಮ *
    ಕಲ್ಲೆಣ್ಣೆಯ ಪಡೆದುದಕೆ ಗುರುತಾಗಿ ಫಾಲನಾಮ**
    ಕಾಲದಿಂದ ಅಮಾಯಕರ್ಗೆ ಹಾಕಿಹರ್ ಧೂರ್ತನಾಮ
    ಸಾಲಿನಲ್ಲಿ ನಿಂತ ಶ್ರೀಸಾಮಾನ್ಯನಿಗೆ ಬೆರಳ ನಾಮ

    ನಮ್ಮನು ಆಳುವವರಾರೆಂದು ಬಿಂಬಿಸಲ್
    ಬಿಮ್ಮನೆ ಮತಗಟ್ಟೆಗೆ ಬಂದು ಪುಗುತಿರಲ್
    ಸುಮ್ಮನೆ ಹರಕೆಪಶುಗಳ್ ಬಲಿಗಮ್ಬವೇರುವೋಲ್
    ಕೆಮ್ಮನೆ ಅಂಗುಲಿಯ ಮೇಲರ್ಧನ್ಗುಲದ ಮಸಿಯ ಲೇಪ

    * During 1940-50s, people believed that, the stone throws on their houses at night was handiwork of witches. To get over this problem, they wrote 3 namas and “nale baa” on their doors.

    ** During the second world war, Kerosene was on weekly rations and to mark the sale, a violet “nama” was stamped on buyers’ forehead.

    • ನಿಮ್ಮಲ್ಲಿ ಸಾಮರ್ಥ್ಯ ಇದೆ. ದಯವಿಟ್ಟು ಛಂದೋನಿಯಮಗಳ ಪರಿಚಯವನ್ನು ಮಾಡಿಕೊಳ್ಳಿರಿ. ಮೊದಲನೆಯ ಪದ್ಯದದಲ್ಲಿ ಪ್ರಾಸಸಂಕರವಾಗಿದೆ. ಎರಡನೆಯದರಲ್ಲಿ ಪ್ರಾಸವನ್ನು ಪಾಲಿಸಿರುವಿರಿ. ಎರಡರಲ್ಲೂ ಗಣಗಣಿತವು ತುಸು ಎಡವಿದೆ.

  12. ಒಂದು ಪ್ರಯತ್ನ

  13. वृत्वा भर्तारमिष्टं सुरुचिरवचनं राज्यलक्ष्मीः प्रजानाम्
    अङ्गुल्यग्राधिवासा मृगमदतिलकं मोदमाना चकार।
    पश्चात्त्वन्यत्र सक्तं तमविनयजुषं वीक्ष्य भग्नान्तरङ्गा
    नाद्यापि स्वं ललाटं विगलिततिलकं खण्डितालङ्करोति।।

    ಪ್ರಜಾಪ್ರಭುತ್ವದಲ್ಲಿ ಬೆರಳಿನಿಂದ ವೋಟಿಂಗ್ ಮಿಶಿನ್ನಿನ ಗುಂಡಿಯನ್ನು ಒತ್ತುವುದರ ಮೂಲಕ ಆಳುವವನನ್ನು ಆರಿಸುವುದರಿಂದ ರಾಜ್ಯಲಕ್ಷ್ಮಿಯು ಬೆರಳ ತುದಿಯಲ್ಲಿ ಇರುತ್ತಾಳೆ ಎಂಬ ಕಲ್ಪನೆಯೊಂದಿಗೆ.

    • ಆಹಾ ತು೦ಬ ಚೆನ್ನಾಗಿದೆ 🙂

    • ಮಾನ್ಯಾಯ ವಾಙ್ನಿಧಿಮುಷೇ ಪವನಾಯ ಹಾರ್ದಂ
      ವ್ಯಾಹೃತ್ಯ ಸ್ವಾಗತಸುಮಾಂಜಲಿಮಾತ್ಮತೋಷಮ್|
      ಭಾಷೇ ಭವತ್ಕವನಗುಂಫನಕೌಶಲೇನ
      ಸಂಮೋಹಿತೋsಹಮತಿವೇಲಮನೋಹರೇಣ||

      • धन्योस्मि मान्याः!
        विलोक्य रागेण हृदाभिनन्द्यं न्यस्तं पदं काव्यनिबन्धमार्गे।
        चेतो मदीयं मुदितं सुराजं चित्वाङ्कितं साधु यथा कराग्रम्।।

  14. ಅಳಿವೊಡೆ ಚಿಹ್ನೆ, ನಾಲ್ಕುದಿನದೊಳ್,ಮತದಾನದನಂತರಂ,ದಿಟಂ
    ಕಳೆವೊಡೆ ಕಾಳಕಷ್ಟನಿಕರಂಗಳವೇ ಬಿರುಸಿಂದಮಾದೊಡಿ
    ನ್ನುಳಿಗುಮದೇ ನಿರಂತರವುಮಾ ಧನಮೆಬ್ಬುವ ಧೂರ್ತಹಸ್ತದಿಂ
    ಬಳಿದಿರೆ ನಾಯಕರ್ ಕರಿಯವಣ್ಣಮನಾಸ್ಯದೆ ಭಾರತಾಂಬೆಯಾ!

    (ಮತದಾನದ ಗುರುತು ೪ ದಿನದಲ್ಲಿ ಅಳಿವುದು,ನಮಗೆ ಬರುವ ಕಪ್ಪನೆಯ ಕಷ್ಟಗಳು ಬಿರುಸಿಂದ ಕಳೆದುಹೋಗುವದು,ಆದರೆ ನಾವು ಆರಿಸುವ ನಾಯಕರು ಭಾರತಾಂಬೆಯಾಸ್ಯದಲ್ಲಿ ಬಳಿವ ಕರಿಬಣ್ಣ ಮಾತ್ರ ಶಾಶ್ವತವಾಗಿರುವದು)

    • very good idea. Thanks a lot. There are one or two arisamaasa-s and grammatical bottlenecks. Let me correct in person in the next Saturday’s kaadaMbari class.

      • ಆಗಬಹುದು,ಧನ್ಯವಾದಗಳು ,
        (ಪದ್ಯವನ್ನು ಸರಿಪಡಿಸಿದ್ದೇನೆ, ಧನ್ಯವಾದಗಳು ಸರ್ )

  15. ಸೋಮ, ಕೊಪ್ಪಲತೋಟರಿಂದ ಪ್ರೇರಣೆ ಪಡೆದು, ನನದೂ ಒಂದಷ್ಟು ತ್ರಿಪದಿಗಳಿರಲೆಂದು … :
    [ಕೆಲ ಪದಗಳು repetitive ಆಗಿರುವುದನ್ನು ಓದುಗರು ಕ್ಷಮಿಸಬೇಕು]

    ಉಗುರಿsನs ಬುಡದಲ್ಲಿs ಸೊಗಮೇನುs ಮಸಿಯಾಗೆs
    ಮೊಗದs ಚಂದ್ರಿಕೆಯs ಪಾಲ್ಗೆನ್ನೆs – ಯೊಳ್ ತೇಲೆs
    ತೆಗೆದs ಕೀಳ್ದಿಟ್ಟಿsಗೆರವಪ್ಪೆs ॥ 1 ॥

    ಬೆರಳಿsನs ಮಸಿಯಾಗುsತೊರೆಸsದs ಬೊಟ್ಟಾದೆs
    ಬಿರಬಿsರs ಬೆಳೆವಂತುಗುರಿsನs – ಮಾಪಿsನs
    ಗುರುತೆ ಕ್ರsಮೇಣs ಮರೆಯಾದೆs ॥ 2 ॥

    ದೇಸsದೊsಳೆಲ್ಲೆಲ್ಲುs ಲೇಸೆಂಬs ಬೆರಳಿsಗೆs
    ಮೋಸsದs ಮತದs ತಡೆಗೆಂದುs – ಹಚ್ಚಿsದs
    ಮಾಸsದs ಮಸಿಯs ಜನತಂತ್ರs ॥ 3 ॥

    ಉಗುರಿsನs ಸೊಗವನ್ನುs ತೆಗೆಯುsವs ಮಸಿಯೆಂದುs
    ಹಗರsಣs ಮಾಳ್ಪs ಪರಿಯಿಂತುs – ಸರಿಯಲ್ತುs
    ಹಗುರಾಗಿs ಮಾತಾಡುವುದಲ್ತುs ॥ 4 ॥

    ಮಸಿಯಾದs ಬೆರಳಿಂದs ಕಸುವಲ್ತೆs ದೇಸಕ್ಕೆs
    ಬೆಸಗೊಳ್ಳsಲೆಮ್ಮs ಮತದಾನs – ದನುದಾನs
    ಜಸಗೊಳ್ಳೆs ಜನರs ಮನದಾಸೆs ॥ 5 ॥

    ಬೆಟ್ಟಿನs ಬೊಟ್ಟಿsಗೆs ಕೊಟ್ಟsರುs ಪ್ರಾಣsವs –
    ನಟ್ಟುsತೆs ಪರತಂತ್ರದ ಪೀಡೆs – ವೀರsರುs
    ತೊಟ್ಟsರುs ನೇಣs ಕೊರಳಾಗೆs ॥ 6 ॥

    ಬೆಟ್ಟಿsಗೆs ಬಳಿದಿsಹs ಬೊಟ್ಟಿsನs ಕರ್ಪಿಂದುs
    ಮೆಟ್ಟಿsದೆs ಪರತಂತ್ರದ ಹೀನs – ಜೀವsನs
    ಹುಟ್ಟಿsಸೆs ಸ್ವಾತಂತ್ರ್ಯದ ಭಾವs ॥ 7 ॥

    ದೇಸsವsನಾಳ್ವsನs ಮೀಸೆsಗಡ್ಡಗಳಲ್ಲಿs
    ಲೇಸಿಂದೆs ಹೊಳೆವs ಬೆಳ್ಪಿsನs – ಕೀರ್ತಿsಗೆs
    ಸಾಸಿsರs ಕೋಟಿs ಕರಿಬೊಟ್ಟುs ॥ 8 ॥

    ಮಸಿಯನ್ನುs ಬಳಿದಾನೋ ಮಸಿಯನ್ನುs ತೊಳೆದಾನೋ
    ಮಸಿತೊಟ್ಟುs ನೀಳ್ದs ಮತದಿಂದs – ಗೆಲ್ದsವs
    ಹಸನಾಗಿsಸುವನೋ ವಸನsವs ॥ 9 ॥

    • ಧಾರಾಳಶೈಲಿಯೊಳ್ ಶ್ರೀರಾಮಶರಪಾತ-
      ಮೋರಂತೆ ಸುಳಿವs ಪರಿಯಿಂದಂ| ತ್ರಿಪದಿಯ|
      ಸೂರೆವೋದತ್ತೆಂದೆನುತಿರ್ಪೆಂ||

      • _/\_
        ತಿರುಕನ ಪದಗಳ ಸೊರಗಿದ ಶರಗಳು
        ಗುರಿಮುಟ್ಟೆ ನಿಮ್ಮ ಹೃದಯದ – ಪರಿಧಿಯ
        ಹರುಷದ ಸಿರಿಯ ಪಡೆದತ್ತು ॥

        • ಹೂಂ. ಮುಂದುವರಿಸಿ. ಪಡೆದು ಅತ್ತು… ಆನಂದಬಾಷ್ಪದ ನಂತರ ಏನಾಯಿತು?

          • ಮಹಾಪ್ರಾಣ ಮಾಡುವಷ್ಟು ಆನ೦ದವೇನೂ ಆಗಿಲ್ಲ ಅನಸ್ತದೆ, ಆನ೦ದಬಾಷ್ಪದಲ್ಲಿ… 🙂

          • ಈಚೀಚೆಗೆ ನಿಮ್ಮ ಮಾತೇ ಅರ್ಥವಾಗುತ್ತಿಲ್ಲ 😉

          • ಹ್ಮ… objection sustainable ಆದಾಗ ಯಾರಿಗೂ ಏನೂ ಅರ್ಥವಾಗುವುದಿಲ್ಲ 🙂

          • haha

    • ಪದ್ಯ ೫: ಕಾವ್ಯದೃಷ್ಟಿಯಿಂದ, ’ಮತದಾನs – ದನುದಾನs’ ಎಂಬಲ್ಲಿ, ’ಮತದಾನ’ ಎಂಬ ಪೂರ್ಣಪದವನ್ನು ಖಂಡವಾಗಿಸಿ ಮುಂದುವರಿಸಿರುವ ಬಗೆಯು ಮನೋಹರವಾಗಿದೆ. ಮೌಲ್ಯದೃಷ್ಟಿಯಿಂದ ನೋಡಿದರೆ ಪದ್ಯವು ಆಶಾಭಾವಪೂರಿತವಾಗಿದೆ.
      ಹೈದನೆ ಕೇಳಯ್ಯ ಐದನೆ ಪದ್ಯವು
      (ನುಡಿದಡೆ ಲಿಂಗಮೆಚ್ಚಿ) ಹೌದುಹೌದೆಂಬಂತಿರುವುದು| ಎರಡನೆ
      ಪಾದದೊಳ್ ಖಂಡವೈನಹುದು||

  16. ಭಾರತದೊಳೆಲ್ಲೆಲ್ಲು ಕರ್ಣಾಟನಾಡನ್ನು
    ಭೂರಿಗೈದಿಹ ಬಲುಹು ಮೂರಿಹವು ಕೇಳ್|
    ಸೌರ(ದೇವೇ)ಗೌಡರು, ತಂತ್ರದಧಿಗಮವು (IT) ಮಗುಳೆ ಮೈ-
    ಸೂರಿನುತ್ಪತ್ತಿ ಮತದಾನಮಷಿಯು||

    • ಒಳ್ಳೆಯ ರಿಸರ್ಚನ್ನೇ ಮಾಡಿದ್ದೀರಿ!!

      • ಶಾಸ್ತ್ರವಾಕ್ಕು. ಕವಿತ್ವವನ್ನು ಕುರಿತು ಏನೂ ಇಲ್ಲ. ಹ್ಙ್ಂ… ಇಷ್ಟೇ ಲಭ್ಯ 🙁

        • ಯಾವ ಕವಿತ್ವ?!!

          • ಮಧ್ಯದಲ್ಲಿರುವ ವ್ಯಂಗ್ಯಪದವೂ ಕಾಣುತ್ತಿದೆ (ಮಹಾ)

          • ಭವಿ ಕಾಣದ್ದನ್ನು ಕವಿ ಕ೦ಡ ಎನ್ನೋಣವೋ, ಕು೦ಬಳಕಾಯಿ ಕಳ್ಳ ಎ೦ದರೆ ಹೆಗಲು ಮುಟ್ಟಿಕೊ೦ಡ ಎನ್ನೋಣವೋ? :))

  17. ಪಿಂತೆಲ್ಲ ತೋರುವೆರಲಿಂಗಿತ್ತು ಶಾಯಿಯನು-
    ಮೆಂತೊ ಕೊರ್ವಿಹರೀಗ ರಾಜಕೀಯರ್|
    ಕಂತಿರಲು ಪ್ರಜೆಗಳೊಳು ಜಾಗೃತಿಯುಮದರಿಂದೆ
    ಮುಂತೆಮ್ಮ (ಮೊದಲಿಗೇ) ಹೆಬ್ಬೆಟ್ಟ ಪಡೆವರದಕೆ (ನಾಮವನ್ನು ಬಳಿಯುವುದಕ್ಕೆ)||

  18. ಕರಮೋ ಕಮಲಮೊ ಪೊರಕೆಯೊ
    ಪರಿಪರಿಗುರುತುಗಳವೊತ್ತ ಮತಗಳ ಗುರಿಯುಂ
    ಕುರುಡಾಗಿರ್ದುದಕೆಯೆ ಬರಿ
    ಕರಿಯಂ ಲೇಪಿಸವರೆಮ್ಮ ಚೆಂದದ ವೆರಳ್ಗಂ

    • Fine idea. ಕುರುಡಾಗಿರ್ಪುದರಿಂ ಬರಿ. Last line spello (ಸು). ಶಿ.ದ್ವಿ. is okay. If you want to avoid it – ರಮ್ಯಾಂಗುಲಿಗಂ.

      • ಪದ್ಯಭಾವವೇನೋ ತುಂಬ ಚೆನ್ನಾಗಿದೆ. ಆದರೆ ಕೊನೆಯ ಸಾಲಿನ ಭಾಷಾರೀತಿಯು ಸ್ಪಷ್ಟವಾಗಲಿಲ್ಲ.

  19. ಖತಿಯ ಗೈಯ್ಯುವ ಖಳರ್ಗಳಿಗೆ ಸ-
    ಮ್ಮತಿಯೊಳಿಂ ಸೈಯೆನುತೆ ಪಾಪಿಗ
    ಳತಿಶಯದ ಪುಸಿನುಡಿಗಳಿಗೆ ಮರುಳಾದೆನೋ ಕಾಣೆ|
    ಮತವ ನೀಡುವ ಗುರುತ ನೋಡಲ್
    ಪ್ರತಿದಿನವು ನಾಂ ಗೈದ ತಪ್ಪನು
    ಮತಿಗೆ ಕೇಳುವೆನೇನಿದೇನಿದ ಮಾಡಿದಿಹೆನೆಂದು|

  20. करेण किं कालधनावगाहिना
    बिसेन वा सेवितपङ्कराजिना।
    चितेन वा मार्जनकेन पांसुभिः
    कलङ्कितं संगतमङ्गुलीमुखम्।।

    ಚೀದಿಯವರ ಪದಾವಳಿಯಿಂದ ಪ್ರೇರಿತ.

    • रसमयी समयॊचिता किल कविता भवता कृता।

  21. ಪೃಥ್ವೀ|| ಚುನಾವಣೆಯೊಳೆಮ್ಮನುಂ ಬೆಸೆವರೊಮ್ಮೆ ಬಲ್ ಕೂರ್ಮೆಯಿಂ-
    (fraudulent)ದನಾರ್ಜವದ ನಾಯಕರ್ ಮತವ ಬೇಡುವಾಗೆಮ್ಮದಂ|
    (praised)ಪನಾಯಿತರಿಗಯ್ಯೊ ಕಾಣ್ ತಗುಲಿತೀಗಳೈ ದೃಷ್ಟಿಯೆಂ-
    (imperishable)ದನಾಶು ಮಸಿಬೊಟ್ಟನುಂ ಬಳಿವರಂಜನಾಕಾರದೊಲ್||

  22. ( ವಿಷಯಾಂತರಿಸುತ್ತಿರುವುದಕ್ಕಾಗಿ ನನ್ನನ್ನು ಕ್ಷಮಿಸಿರಿ:-) )

    ಪೂಜ್ಯಸೋದರರಾದ ಶತಾವಧಾನಿ ಡಾ |ರಾ ಗಣೇಶರಿಗೆ ಹಾಗೂ ಇತರ ಆತ್ಮೀಯಸೋದರರೆಲ್ಲರಿಗೆ ರಕ್ಷಾಬಂಧನದ ಹಾರ್ದಿಕಶುಭಾಶಯಗಳು.

    ಬಿಗಿಗೊಳಿಸುತೆ ಬಾಂಧವ್ಯವ,
    ನಗೆಯನರಳ್ಚುತ್ತೆ ಸೋದರಮುಖಾಂಬುಜದೊಳ್,|
    ಬಗೆಯೊಳ್ ಹರ್ಷಿಸೆ ಸೋದರಿ,
    ಸುಗುಣಂಗಳ ಪರ್ಬಮಲ್ತೆ ರಕ್ಷಾಬಂಧಂ ? || 🙂

    • ಚೋದ್ಯಮಿದಾದುದು ನಿಮ್ಮೀ
      ಪದ್ಯಮುಕುರದೊಳ್ ಸರೋಜಮಾಗೆಮ್ಮ ಮೊಗ೦!
      ಹೃದ್ಯಮೆನೆ ಭವದ್ವರತರ-
      ಪದ್ಯ೦ಗಳ ಬ೦ಧಮಲ್ತೆ ರಕ್ಷಾಬ೦ಧ೦ 🙂

      • ಸೋದರನೀಲರ್ ನೀಡಲ್,
        ಸಾದರದಿಂದೆನಗೆ ಚೆಲ್ವ ಪದ್ಯಕುಸುಮಮಂ,|
        ಮೋದಂಗೊಂಬೆಂ, ಶ್ರುತಿಲಯ-
        ನಾದಾತ್ಮಕಮಾದ ಗೀತಮಂ ಕೇಳಿದವೋಲ್ ||

      • ನೀಲಕಂಠರೆ, ನಿಮ್ಮ ಪದ್ಯದ ಪ್ರಥಮಪಾದದ ಪ್ರಥಮಾಕ್ಷರವು ಹ್ರಸ್ವವಾಗಬೇಕಿತ್ತಲ್ಲವೆ ?

        • ಹಾಗೇನಿಲ್ಲವಲ್ಲ ಮೇಡಮ್, ನನ್ನ ತಿಳಿವಳಿಕೆಯ ಪ್ರಕಾರ…

          • ನೀವೆಂದಿರುವುದು ಸರಿಯಿರಬಹುದು, ನೀಲಕಂಠರೆ. ಗೊಂದಲದಿಂದಾಗಿ ಸಂದೇಹವಾಯಿತು.

          • ಗೊ೦ದಲದೊಳ್ ಸ೦ದೇಹಮೊ
            ಸ೦ದೇಹದೆ ಗೊ೦ದಲ೦ಗಳೋ ಮೇಣೆರಡು೦
            ಬ೦ದವೊ ಮಾಯೆಯೊಳಿ೦ದಮೊ,
            ಇ೦ದಿರೆಯರಸನೊಳೆ ಸ೦ದುದೆಲ್ಲ೦ ಚೆಲ್ವಿ೦

    • ಉದರಸಹಿತಮುಖಾಂಬುಜ!!!
      ’ಕಮಲೇ ಕಮಲೋತ್ಪತ್ತಿಃ’
      ರಮಣೀಯಮಿರುವುಪಮಾನಮಿದನಾಂ ಬಲ್ಲೆಂ|
      ಸುಮುಖಾಂಬುಜದೊಳುದರಮೇಂ!?
      ನಮಿಪೆನು ಪೇಳಿರಿ ಇದಾವುದಕುಪಮೆಯೆಂದುಂ||

      • ನಾರಾಯಣನ ಉದರಕಮಲದಲ್ಲಿ (ನಾಭಿ) ಹುಟ್ಟಿದ ಬ್ರಹ್ಮನ ಮುಖಕಮಲಗಳು 😉

      • ಉದರಸಹಿತಮುಖಕಮಲವ
        ಮುದದಿಂ ಪೊಂದಿರ್ಪ ಮಹಿಮರಿಂಗಾಂ ನಮಿಪೆಂ |
        ಸದಯದೆ ನೀಂ ಪೇಳೆ ತಿಳಿದು
        ಪದದುಪಮೆಯನೆನಗೆ, ಧನ್ಯೆಯಪ್ಪೆನರಿತದಂ ||

  23. ಹೀಗೊಂದು ಸ್ವಾನುಭವದ ಪದ್ಯ !!

    ತಕ್ಕಾದ ರಾಜsನ ಹೆಕ್ಕಿಯಾರಿಸೆ ಕಪ್ಪು
    ಚಿಕ್ಕಿsಯನಿಕ್ಕುವಂತೆಯೋಲ್ । ತುದಿಬೆರ್ಳ್ಗೆ
    ಕಕ್ಕ ಮೆತ್ತಿದೆಯೆ ಪುಟ್ಟಣ್ಣ !!

    • ತಕ್ಕಾದ ರಾಜsನ ಹೆಕ್ಕಿರಲಂತು ಕರಿ-
      ಚಿಕ್ಕಿsಯನಿಕ್ಕುವೋಲಂತೆ। ತುದಿಬೆರ್ಳ್ಗೆ
      ಕಕ್ಕ ಮೆತ್ತಿದೆಯೆ ಪುಟ್ಟಣ್ಣ !!

  24. ಕುತ್ತುಗಳೊತ್ತರದಿಂ ಕಾ
    ಡುತ್ತೆ,ದಿಟಮುಮುಳಿಸೆ ಕರ್ಪನೊಂದನೆ ಬಗೆಯೊಳ್,
    ಥುತ್ತ್ತೆಂದು ದೂಷಿಸುವರೇಂ
    ತುತ್ತತುದಿಯೊಳಂಟಿದೀ ಕರಿಮಸಿಯ ಕಲೆಯಂ?

Leave a Reply to neelakanth Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)