Aug 152016
 

ನಿಮಿಚ್ಛೆಯ ಛಂದಸ್ಸಿನಲ್ಲಿ “ಸ್ವಾತಂತ್ರ್ಯ”ವನ್ನು ಕುರಿತು ಪದ್ಯರಚನೆ ಮಾಡಿ

  30 Responses to “ಪದ್ಯಸಪ್ತಾಹ ೨೧೫: ವರ್ಣನೆ”

  1. ವೃತ್ತದವೊಲ್ ಸ್ವತಂತ್ರತೆಯ ಪೂರ್ಣತೆಯಪ್ಪುದು ಕೇಂದ್ರದಂತಿರಲ್
    ಚಿತ್ತದೊಳಂಕಿಸಿರ್ದ ಚಲಮಿಲ್ಲದ ಲಕ್ಷ್ಯಮದೊಂದು ಬಾಳ್ತೆಗಂ
    ಸುತ್ತಿರುತಂತು ಮೇಣ್ ಪರಿಧಿಯಂತಿರೆ ಧರ್ಮದ ರೀತಿನೀತಿಗಳ್
    ಕತ್ತೆಯ ನರ್ತನಂ ಬರಿದೆ ಕಾಂಬೊಡನೊಂದಿರದಿರ್ದೊಡುಂ ಕಣಾ

    ಸ್ವಾತಂತ್ರ್ಯಕ್ಕೆ ವೃತ್ತದ ಪರಿಪೂರ್ಣತೆ ಸಲ್ಲುವುದು ಅದಕ್ಕೆ ಜೀವನದ ಧ್ಯೇಯದ ಕೇಂದ್ರ, ಮತ್ತು ಧರ್ಮದ ಪರಿಧಿ ಇದ್ದಾಗ. ಇವೆರಡರಲ್ಲಿ ಒಂದಿಲ್ಲ ಅಂದರೂ ಅದು ಕತ್ತೆಯ ಕುಣಿತವಾಗುತ್ತದೆ.

  2. The words of Sri S. L. Bhyrappa:
    ಬಂದುದೇನಲ್ಲ ನಲವತ್ತೇಳರೊಳುಮೆಮ್ಮ
    ಬಾಂದಳಕೆ ಸ್ವಾತಂತ್ರ್ಯಸೂರ್ಯಂ ಗಡಾ|
    ಎಂದಿನಿಂದಲೊ ಕಾಯ್ದುಕೊಂಡುಬಂದಿಹುದದಂ
    ಕುಂದಿಸದೆ ಕಾಣ್ ಸನಾತನಧರ್ಮಮೈ||

  3. ಸ್ವಾತಂತ್ರ್ಯದ ಕುರಿತಾದ ನಿಮ್ಮ ಪದ್ಯಗಳ ಜೊತೆ ದೇಶದ ಕುರಿತಾದ ಒಂದು ಕವಿತೆ 🙂
    ಬಹುವಿಶಾಲಳೀ ಭಾರತಿ ‘ಸರ್ವದಾ’ತೆ ಸುಸ್ಮಿತೆ
    ಧರ್ಮ ಧೈರ್ಯ ಸಿರಿಸಂಸ್ಕೃತಿ ಈ ಮಾತೆಯ ಅಸ್ಮಿತೆ! ।।

    ಹರಿವ ಸುರಿವ ಹನಿನೀರೂ ಸಿಹಿನೀರಿನ ಗಂಗೆ
    ಮಣ್ಣಮಡಿಲಲೊರಗುವವಗೆ ತಂಪನೀವ ಹೊಂಗೆ
    ರಾಮ ಬುದ್ಧ ಯುವವಿವೇಕರುಸಿರಿದೆ ಕಣಕಣದಿ
    ಒಮ್ಮೆ ನೆನೆದು ಧನ್ಯನೆನ್ನು ಭಕ್ತಿದುಂಬಿ ಮನದಿ

    ಇಲ್ಲದಿರುವುದನ್ನು ನೆನೆದು ಮರುಗಬೇಡ ನೀ ವೃಥಾ
    ಇರುವ ಸಿರಿಯ ಕಂಡು ಸುಖಿಸು ನುಡಿವೆಯೇಕೆ ಅನೃತ
    ಭಾರತೀಯನೆಂಬ ಪದವಿಗಿಂತ ಸಿರಿಯು ಬೇಕೇ?
    ಒಮ್ಮೆ ಅರಿತು ಹೆಮ್ಮೆ ಪಡಲು ಬೇರೆ ಸುಖವು ಬೇಕೇ?!

    ಕವನತನಯ

    • ತಮಗೆ ಪದ್ಯಪಾನಕ್ಕೆ ಸ್ವಾಗತ. ನಿಮ್ಮ ಪದ್ಯಭಾವ ಚೆನ್ನಾಗಿದೆ. ಅಭಿನಂದನೆಗಳು. ಪದ್ಯಪಾನವು ಛಂದೋಬದ್ಧಕವಿತಾರಚನೆಗೆ ಮೀಸಲಾಗಿರುವ ಜಾಲತಾಣ. ಛಂದಸ್ಸು-ಅಲಂಕಾರಗಳ ಬಗೆಗಿನ ವಿಡಿಯೊಪಾಠಗಳಿಲ್ಲಿವೆ. ಸಾವಕಾಶವಾಗಿ ನೋಡಿ ಕಲಿತು ಯತ್ನಿಸಿ. ಶುಭವಾಗಲಿ.

  4. ನಮಸ್ಕಾರ. ಸ್ವಾತಂತ್ರ್ಯವೆಂದರೆ ಮನಸ್ಸಿನ ಸ್ವಾತಂತ್ರ್ಯವೆಂಬ ಭಾವದಲ್ಲಿ ಈ ಪದ್ಯವನ್ನು ಭಾಮಿನೀ ಷಟ್ಪದಿಯಲ್ಲಿ ಬರೆಯಲು ಪ್ರಯತ್ನಿಸಿದ್ದೇನೆ.

    ಹಗುರವಾಗಿರೆ ಮನದ ಭಾರವು
    ಮುಗಿದುಹೋಗಿರೆ ದುಗುಡವೆಲ್ಲವು
    ಮೊಗದ ತೋಟದಿ ನಗುವ ಹೂವಿನ ಮೊಗ್ಗು ಬಿರಿಯುತಿರೆ
    ಜಿಗಿಯುತೋಡಿರೆ ಮನದ ಜಿಂಕೆಯು
    ಮಗುವಿನಂದದ ಮುಗುದಭಾವದಿ
    ಮುಗಿಲನಂತವು ಮನವ ತುಂಬಿರಲದುವೆ ನಿಜಮುಕುತಿ
    [ಮುಗಿಲ ಗಾತ್ರಕೆ ಮನವು ಹಿಗ್ಗಿರಲದುವೆ ನಿಜಮುಕುತಿ]

    • ಪದ್ಯವು ಸರಳಸುಂದರವಾಗಿದೆ. ಬಿಡದೆ ಪ್ರತಿವಾರವೂ ಪದ್ಯರಚನೆಯಲ್ಲಿ ತೊಡಗಿಕೊಳ್ಳಿ.
      ಮುಗಿಲನಂತವು = ಮುಗಿಲು+ಅನಂತವು ಎಂದೇ ವೇದ್ಯವಾಗುತ್ತದೆ. ಮುಗಿಲನಂತದೆ (ಮುಗಿಲು+ಅನಂತದೆ) ಎಂದು ಸವರಿದರೆ ಸರಿಯಾಗುತ್ತದೆ.
      ಇವುಗಳು ದೋಷಯುಕ್ತವೆಂದೇನೂ ಅಲ್ಲ. ಆದರೆ ಹೀಗೆ ಸಮಸ್ತಪದವಾಗಿಸುವುದು ಮುಂದಿನ ಮಜಲು:
      ಮನದ ಭಾರವು – ಚಿತ್ತಭಾರವು
      ಮನದ ಜಿಂಕೆಯು – ಮಾನಸೈಣವು (ಮಾನಸ+ಏಣ=ಜಿಂಕೆ)
      ’ನಗುವ ಹೂವಿನ’ ಎಂಬುದು ಸರಿಯಾಗಿಯೇ ಇದೆ. ’ಹಾಸಪುಷ್ಪದ’ ಎಂದೂ ಹೇಳಬಹುದು.

      • ಧನ್ಯವಾದಗಳು ಪ್ರಸಾದು ಸರ್. ಮುಗಿಲನಂತವು ಎಂಬಲ್ಲಿ ಮುಗಿಲ+ಅನಂತವು ಅನ್ನುವುದು ನನ್ನ ಉದ್ದೇಶವಾಗಿತ್ತು(ಮನಸ್ಸು ಮುಗಿಲಿನಷ್ಟು ವಿಶಾಲವಾದಾಗ ಅನ್ನುವ ಭಾವದಲ್ಲಿ). ನಿಮ್ಮ ಸಲಹೆಗಳೊಂದಿಗೆ ಪದ್ಯವನ್ನು ಈ ಕೆಳಗಿನಂತೆ ತಿದ್ದಿದ್ದೇನೆ.

        ಹಗುರವಾಗಿರೆ ಚಿತ್ತಭಾರವು
        ಮುಗಿದುಹೋಗಿರೆ ದುಗುಡವೆಲ್ಲವು
        ಮೊಗದ ತೋಟದಿ ಹಾಸಪುಷ್ಪದ ಮೊಗ್ಗು ಬಿರಿಯುತಿರೆ
        ಜಿಗಿಯುತೋಡಿರೆ ಮಾನಸೈಣವು
        ಮಗುವಿನಂದದ ಮುಗುದಭಾವದಿ
        ಮುಗಿಲ ಗಾತ್ರಕೆ ಮನವು ಹಿಗ್ಗಿರಲದುವೆ ನಿಜಮುಕುತಿ

        • ನನ್ನ ಹೆಸರು ಹೇಗೆ ಗೊತ್ತು ನಿಮಗೆ?

          • ನಿಮ್ಮ ಮನಃಪ್ರಸಾದಕರವಾದ ಸಲಹೆವಸೂಚನೆಗಳಿಂದಾಗಿ ನಿಮಗೆ ಅವರು ಇಟ್ಟ ಅನ್ವರ್ಥನಾಮ ಅದು.

          • ಅನ್ವರ್? ನಾನು ಸನಾತನಿ; ಮುಸ್ಲಿಂ ಅಲ್ಲ.

          • ತಪ್ಪಾಯ್ತು ಕ್ಷಮಿಸಿ ಗುರುಗಳೇ _/_..ನಿಮ್ಮ ಹೆಸರು ರಂಗನಾಥ ಪ್ರಸಾದರೆಂದು ಗೊತ್ತು.
            “ರಥೋದ್ಧತ ರೀ!! ಪಾಪ ಪ್ರಸಾದರೂ ಹೇಳಿದ್ದಾರಲ್ಲ…
            ನಾನು ಪಾಪಪ್ರಸಾದನೆ? ನೀವು ಬಿಡಿಸಿಬರೆದಿದ್ದರೂ, ’ಪಾಪ’ಕ್ಕೆ ಪ್ರತ್ಯಯವಿಲ್ಲದಿರುವುದರಿಂದ ಅದು ಸಮಾಸವೇ!”
            ಕಳೆದ ವಾರದ ನಿಮ್ಮಿಬ್ಬರ ಈ ಕಮೆಂಟುಗಳಿಂದ ಈ ಊಹೆ ಮಾಡಿದೆ. ಊಹೆಯೂ ಕವಿಗಿರಬೇಕಾದ ಗುಣ ಅಲ್ಲವೇ 🙂
            “ಅನ್ವರ್” ಥ ನಾಮ ಅಲ್ಲ. ಅನವರತವೂ ನಿಮ್ಮ ಆಶೀರ್ವಾದ ಇರ್ಲಿ ಅಂತ ಇತ್ತ ನಾಮ ಅಂತ ಅಂದುಕೊಳ್ಳಬಹುದು.(ಕ್ಷಮೆಇರಲಿ -ಹಾಗೂ ಹೀಗೂ ನಾಮ ಹಾಕಿದ್ರಿ ಅನ್ಬೇಡಿ 🙂 )

          • hha hha. ಹಾಗೂ ಮತ್ತು ಹೀಗೂ ನಾಮವನ್ನು ಹಾಕಿದರೆ, ಅದು ಸ್ಮಾರ್ತ-ಶ್ರೀವೈಷ್ಣವಗಳ (ಕಲಸುಮೇಲ್)ಓಗರವಾಗುತ್ತದೆ!

  5. ನೀರು ನೈದಿಲೆಗಾಗೆ,ಮುಗಿಲು ತಾರೆಗದಾಗೆ,
    ಪಾರಿಬಹ ಪಕ್ಕಿಗಳ್ಗಾಗೆ ಮರನು-
    ಮಾರು ಪೇಳುಗುಮಿಂದು ವಸುಧೆಯೊಳ್ ತಂಗಿರ್ದು
    ಬೂರಿ ಗರ್ವದಿನೆ ಸ್ವತಂತ್ರನೆಂದು!

  6. ಸ್ವಾತಂತ್ರಂ ತ್ರಿಮತಸ್ಥರಿಂದೆಮಗದೆಂದುಂ ಸಲ್ಲದೀ ದೇಶದೊಳ್
    ಶ್ವೇತಪ್ರೇತದವೊಲ್ ವಿಹಾರಿಸುತೆ ಸೌಹಾರ್ದಕ್ಕೆ ಕುತ್ತಾಗಿರಲ್
    ಜಾತಿದ್ವೇಷದ ಪಾಕಮಂ ಕುಡಿಸುತುಂ ಮತ್ತೇರಿಸಿರ್ಪರ್ ಗಡಾ
    ನೇತಾರರ್ಕಳ ಕೂಡೆ ತಾಂ ಮರೆತರೇಂ ಧರ್ಮಾಂಧದೊಳ್ ಸ್ವೇಛ್ಛೆಯಂ

    • ಸರಿಯಾಗಿ ಅರ್ಥವಾಗಲಿಲ್ಲ. ತ್ರಿಮತಸ್ಥರು ಯಾರು? ವಿಹರಿಸುತೆ ಎಂಬುದು ಸರಿಯಾದ ರೂಪ ಅಲ್ಲವೇ? ವಿಹಾರಿಸು ಎಂದರೇನು? ಧರ್ಮಾಂಧದೊಳ್ ಸರಿಯಾದ ರೂಪ ಅಲ್ಲ. ಧರ್ಮಾಂಧತೆಯೊಳ್ ಎಂದಾಗಬೇಕು. ಸ್ವೇಚ್ಛೆಯಿಂ ಆಗಬೇಕಾ?

      • ತ್ರಿಮತಸ್ಥರು ಎಂದರೆ ಹೇಗಾದರು ಬಳಸಿಕೊಳ್ಳಬಹುದು.. ಮುಖ್ಯವಾಗಿ, ಹಿಂದು, ಮುಸ್ಲಿಮ್, ಕ್ರೈಸ್ತ.. ವಿಹಾ-ವಿಹ ಆಗಬೇಕಿತ್ತು..typo ಆಗಿದೆ.. ಕಡೆಯ ಸಾಲನ್ನು – ………………..ಮರೆತರೇಂ ಸ್ವೇಚ್ಛಾಸುಖಂ ಎಂಬುದಂ..

        ಈಗ ಸರಿಯಾಯ್ತೇ.

        • ಇಲ್ಲ 🙂 ವಿಹಾ-ವಿಹ ಎಂದರೇನು? ಸುಖಂ ಎಂಬುದಂ ವಿಸಂಧಿ ಆಗಿದೆ.

  7. ಮಹವೀರ ಬುದ್ಧ ಶಿವರ್ಗೆ
    ಮಹಾತ್ಮ್ಯವಮ್ ನೀಡಿ ಮೆರೆಸಿಹ ಸ್ವಾತಂತ್ರ್ಯಮ್ /
    ಮಹಿಯೊಳ್ ಮಹತ್ತಿನದು ಕೇಳ್
    ದಹಿಪುದು ಕರ್ಮದೊಣ ಪುರುಳೆಗಳ ತಾಂ ಭರದಿಂ//

    ಸ್ವಾತಂತ್ರ್ಯ ಎಂಬುದನ್ನು ಮುಕ್ತಿ ಎಂಬರ್ಥದಲ್ಲಿ ಬಳಸಿದ್ದೇನೆ . ತಪ್ಪಿದ್ದಲ್ಲಿ ತಿದ್ದಬೇಕಾಗಿ ವಿನಂತಿ .

    • ಚೆನ್ನಾಗಿದೆ. ಒಳ್ಳೆ ಪ್ರಯತ್ನ! ಆದರೆ ಮಹವೀರ ತಪ್ಪು. ಅದು ಮಹಾವೀರ ಆಗಬೇಕು. ಆದರೆ ಹಾಗೆ ಮಾಡಿದರೆ ಛಂದಸ್ಸು ತಪ್ಪುತ್ತದೆ. ಮೊದಲ ಸಾಲ ಕೊನೆಯ ಗಣ ಜಗಣವಾಗಿದೆ. ಹಾಗಾಗಬಾರದು. ಮಹಾತ್ಮ್ಯ ತಪ್ಪು. ಮಾಹಾತ್ಮ್ಯ ಆಗಬೇಕು.

      • ರೆಹಮಾನ ಬುದ್ಧ ಶಿವರಂ
        ಮಹಾತ್ಮರಂ ಮಾಡಿ ಮೆರೆಸಿಹ ಸ್ವಾತಂತ್ರ್ಯಮ್ /
        ಮಹಿಯೊಳ್ ಮಹತ್ತಿನದು ಕೇಳ್
        ದಹಿಪುದು ಕರ್ಮದೊಣ ಪುರುಳೆಗಳ ತಾಂ ಭರದಿಂ //

        ರೆಹಮಾನ =ರೆಹಮಾನ್ ಜಾಮಿ- ಸೂಫಿಸಂತರು
        ಈಗ ಸರಿಹೋಯಿತೇ?

        • ಸರಿಯಾಯಿತು. ಆದರೆ ಛಂದಸ್ಸಿಗೋಸುಗ ಮಹಾವೀರ ತೀರ್ಥಂಕರರನ್ನೇ ಓಡಿಸಿದ್ದು ತುಂಬ ಅನ್ಯಾಯ 🙂

          • ಏನೂ ಅನ್ಯಾಯವಿಲ್ಲ . ಬುದ್ಧ-ಮಹಾವೀರರು ಹಿಂದೂ ಧರ್ಮದ ಶಾಖೆಗಳು. ಆದರೆ ,ಏಸುವಿಗೆ ಅನ್ಯಾಯವಾಗಿರಬಹುದು. ಆತನ ಧರ್ಮದ ಯಾವುದೇ ಜ್ಞಾನಿಯ ಹೆಸರು ಬರಲಿಲ್ಲವಲ್ಲ

        • ಹಾಗಾದರೆ ರೆಹಮಾನ ಏಸು ಶಿವರಂ ಎಂದು ಮಾಡಿ!

Leave a Reply to Kanchana Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)