Nov 202018
 

  4 Responses to “ಪದ್ಯಸಪ್ತಾಹ ೨೩೪: ಚಿತ್ರಕ್ಕೆ ಪದ್ಯ”

  1. ಕೋಟಿ ಹಸಿರು ಕೋಟಿಯುಸಿರು ತಳೆವುವೆನಿತೊ ಬಗೆಯ ಹೆಸರು
    ಸಾಟಿಯೆಂತು ಜಗದೆ ನಡೆವ ಜೀವಜಾತ್ರೆಗಂ ।
    ನಾಟಿಗೊಳದೆ ಬೆಳೆದು ಬಣ್ಣವೊಗೆವ ಸೊಗದ ಪುಷ್ಪಪಾತ್ರ
    ಮೇಟಿಗೆನುತೆ ಕಳೆವರಯ್ಯೊ ಕಳೆಯ ಕಳೆಯನುಂ ।।

    ತಂತಾನೇ ಬೆಳೆದ, ಹೆಸರೇ ಇರದ “ಕಳೆ”ಗಿಡಗಳ ಸೊಗಸು(ಕಳೆ) ಮತ್ತು ವ್ಯವಸಾಯಕ್ಕಾಗಿ ಅವುಗಳ ನಾಶದ ಬಗೆಗಿನ ಕಳಕಳಿಯ ಪದ್ಯ

  2. ಕುರುಚುಗಳ ನಡುವಿನೊಳ್ ಕರ್ಣಕುಂಡಲಧರಂ
    ಸ್ಪುರಿಸೆ ನೀಲಾಂಬರದೆ ಪಂಚ ಪಾಂಡವರೊಡಂ ।
    ಇರಲಾಗೆ ಕುಂತಿ ಕೃಷ್ಣೆಯು ಕೂಡೆ ಪಕ್ಕಿಯೊಲ್
    ಮರಳಿ ನೆನಪಾದುದವರಜ್ಞಾತವಾಸವುಂ ।।

    ಸುತ್ತ “ಕುರು”ಚಲು ಗಿಡಗಳು – ನಡುವೆ “ಕರ್ಣ”ಕುಂಡಲ / ನೀಲಾಂಬರ ಹೂ ಗಿಡಗಳು
    ನೀಲಿ ಉಡುಗೆಯಲ್ಲಿ ಐದು ಹಕ್ಕಿ – ಪಂಚ ಪಾಂಡವರು / ಉಳಿದೆರಡು ಹಕ್ಕಿ – ಕುಂತಿ & ದ್ರೌಪದಿ

    ಪಕ್ಕನೆ ಪಾಂಡವರ “ಅಜ್ಞಾತವಾಸ “ವನ್ನು ನೆನಪಿಸುತ್ತಿದೆ !!

  3. ಧೂಳು-ಹೊಗೆ-ಶಬ್ದಗಳ ನಗರವಾಸದೆ ದಣಿದು
    ತಾಳದೆಲೆ ಸಂಕಟವ ಪೋದೆ ವನಕಂ|
    ಗಾಳಿಯಿಂ ಮನದ ಬೇನೆಯು ’ಮಾಯೆ’ ಕುಣಿಯಲುಂ (ಹೋದೆ)
    ಕೇಳಲ್ಲಿ ನೋಡಿದೆಂ ಬರಿದೆ ’ಮಾಯೆ’!! (ಹಕ್ಕಿಯಂತೆ ಕಾಣುವ ಹೂವು)

Leave a Reply to Usha Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)