Aug 282011
 

ಸಮಸ್ಯೆ, ಭಾಮಿನಿ ಕೊನೆ ಸಾಲು 🙂

ಅರಿಗಳಿಗೆ ಶಸ್ತ್ರಗಳ ವಿತರಿಸಲಧಿಪ ಮೊದಲಾದ

  11 Responses to “ಸಮಸ್ಯೆ, ಭಾಮಿನಿ ಕೊನೆ ಸಾಲು: ಅರಿಗಳಿಗೆ ಶಸ್ತ್ರಗಳ ವಿತರಿಸಲಧಿಪ ಮೊದಲಾದ :)”

  1. ತಕ್ಷಣಕ್ಕೆ ಅನಿಸಿದ್ದು…

    ನೆರೆಯ ರಾಜನ ಪೀಡೆ ಹೆಚ್ಚಿ ಸ
    ಮರದೊಳವನನು ಗೆಲಲು ಸಾಗದೆ
    ಪರಮವೈರಿಗಳವನಿಗಾರೆನೆ ಶೋಧಿಸುತಲವರ
    ನೆರವ ಕೋರುತ ಸಂಗರದ ಪರಿ-
    ಕರವ ಸಾಗಿಸಿ ನಿಜವಿರೋಧಿಯ
    ಅರಿಗಳಿಗೆ ಶಸ್ತ್ರಗಳ ವಿತರಿಸಲಧಿಪ ಮೊದಲಾದ

  2. ಮೌಳಿಯವರೇ,

    ಶತ್ರುವಿನ ಶತ್ರುವಿಗೆ ಎಂಬ ಪರಿಹಾರ ಚೆನ್ನಾಗಿದೆ.

    ನನ್ನ ಪರಿಹಾರಗಳು ಸಾಧುವಲ್ಲ ಎಂದು ತಿಳಿಯಿತು, ನಾನು 'ಡಿಂಗರಿಗಳಿಗೆ' ಎಂದು ಪರಿಹಾರ ಕೊಡೋಣ ಅಂತ ಇದ್ದೆ. ಡಿಂಗರ, ಡಿಂಗರಿಗ = ಸೇವಕ
    ಆದರೆ ಡಿಂಗರರಿಗೆ, ಡಿಂಗರಿಗರಿಗೆ ಎನ್ನುವುದಷ್ಟೇ ಸಾಧು ರೂಪ ಎಂದು ತಿಳಿಯಿತು.

    ಬಹಳ ಯೋಚನೆ ಮಾಡಿದೆ… ಆದರೂ… ನನ್ನ ಬಳಿ ಬೇರೆಯ ಪರಿಹಾರ ಸಿಗುತ್ತಿಲ್ಲ

    ಕ್ಷಮೆಯಿರಲಿ

  3. ಅಡ್ಡಿಯಲ್ಲ. ಈಗ ಇನ್ನೊಂದು ಪೂರಣ…

    ಸರಿಸಮನೆ ಸ್ತ್ರೀಪುರುಷರೆಲ್ಲರ
    ಧುರಸಮರ್ಥರ ಮಾಡೆ ನಾರೀ
    ಜನರಿಗಾಹವ ತಂತ್ರಗಳ ಮಂತ್ರಗಳ ಬೋಧಿಸುತ
    ಪುರದ ಯುವತಿಯರೆದ್ದುನಿಲೆ ಸಂ-
    ಗರದೊಳೆರಡುರಸ ಮೆರೆಯೆ ವಿಭಾ-
    ವರಿಗಳಿಗೆ ಶಸ್ತ್ರಗಳ ವಿತರಿಸಲಧಿಪ ಮೊದಲಾದ

    ಎರಡುರಸ = ಶೃಂಗಾರ, ವೀರ

    ವಿಭಾವರಿ = ಸ್ತ್ರೀ

  4. ಪರರ ಲಂಪಟತನವ ನೋಡುತ
    ಭರದಿ ದೋಚುವರನ್ನು ಸಹಿಸುತ
    ಪರಮ ಸಾತ್ವಿಕನೆಂಬ ಮನಮೋಹನನು ಮರುಳಾದ |
    ಮೆರೆದಹಮ್ಮಿನ ಕುಟಿಲ ಮಂತ್ರಿಗ –
    ಳೊರೆದ ಸಲಹೆಯ ಕಾರ್ಯಕಿಳಿಸುತ
    ಅರಿಗಳಿಗೆ ಶಸ್ತ್ರಗಳ ವಿತರಿಸಲಧಿಪ ಮೊದಲಾದ ||

  5. ಮರೆಯುವೆವೆ ನಾವಂದಿನಾ ದಿನ
    ಚರಿತೆಯಲ್ಲೀ ನಮ್ಮ ರಾಜ್ಯದ
    ಮೆರೆದು ಬಹುಮತ ಭಾಜಪವು ಗೆಲಿದತಿಯ ಮಧುರ ಚಣ
    ಪೊರೆಯುತಲಿ ಬರಿ ನೆಂಟರಿಷ್ಟ್ರರ
    ತೊರೆದು ಸದ್ಗುಣ,ಗುಟ್ಟಲೊಳಗಿನ
    ಅರಿಗಳಿಗೆ ಶಸ್ತ್ರಗಳ ವಿತರಿಸಲಧಿಪ ಮೊದಲಾದ

  6. ಧರ್ಮಯುದ್ಧವದಾರಭಗೊಳ
    ಲ್ಮೊದಲು ಹಿಂಜರಿದಾ ಕಿರೀಟಿ ಮು
    ರಹರ ಬೋಧಿಸಲಾಗ ಧರ್ಮವ ಮನದೆ ಕಾಣುತಲಿ|
    ಸಮರಗೈದಲ್ಲದುಪದೇಶಿಸ
    ದನೆ ಶತಾನೀಕಾದಿ ತನ್ನಾ
    ಮರಿಗಳಿಗೆ ಶಸ್ತ್ರಗಳ ವಿತರಿಸಲಧಿಪ ಮೊದಲಾದ||

  7. ಚಂದ್ರ ಮೌಳಿ, ರಾಮ್, ಕಾಂಚನ, ಪ್ರಸದು ಅವರೇ

    ನನ್ನ ಸಮಸ್ಯೆ ಎಡವಟ್ಟಾಗಿದ್ದರು… ಅದಕ್ಕೆ ಪರಿಹಾರ ಕೊಟ್ಟಿದ್ದೀರ ಧನ್ಯವಾದಗಳು 🙂

    ಪ್ರಸಾದ್ ಅವರು (ನನ್ನ ಪ್ರಕಾರ) ಮೊದಲಸಲ ಪ್ರಯತ್ನ ಪಟ್ಟಿದ್ದಾರೆ ಕಾವ್ಯ ಕುತೂಹಲದಲ್ಲಿ… ಅವರಿಗೆ ವಿಶೇಷ ಧನ್ಯವಾದಗಳು… ದಯವಿಟ್ಟು ಭಾಗವಹಿಸುತ್ತ ಇರಿ 🙂

  8. ಅಮೇರಿಕಾದ ಷಡ್ಯ೦ತ್ರ:

    ಕರೆದು ಮ೦ತ್ರಿಯ ತನಿಖೆ ಗೈಯುತ
    ಲರಿತ ಲರಸನು ಸತತವಾಯುಧ
    ಪರದಿ ಯೊಳ್ಕರ ತು೦ಬಿಬಿಡುವುದು ರಾಜ್ಯಬೊಕ್ಕಸವಾ|| (ಪರದು – ಮಾರಾಟ)
    ತರಿಸಿ ಹಳೆಯಾಯುಧವ ಹೊತ್ತಿಸ
    ವರವರೊಳಗಡೆ ಜಗಳ ವೆನ್ನುತ
    ಲರಿಗಳಿಗೆ ಶಸ್ತ್ರಗಳ ವಿತರಿಸಲಧಿಪ ಮೊದಲಾದ ||

  9. ಹೀಗೆ ೫ ವರ್ಷ ಹಿಂದೆ ಕೇಳಿದ್ದ ಸಮಸ್ಯೆಗೆ ಈಗ ಪೂರಣ ಬರೆಯುವುದು ಪದ್ಯಪಾನದ ನಿಯಮಗಳಿಗೆ ವಿರುದ್ಧವೋ ಗೊತ್ತಿಲ್ಲ. ನಾನು ಪದ್ಯಪಾನಕ್ಕೆ ಹೊಸಬನಾದ್ದರಿಂದ, ಹಾಗೂ ಸಮಸ್ಯೆಯನ್ನು ಇತ್ತೀಚೆಗಷ್ಟೇ ನೋಡಿದ್ದರಿಂದ,ಮತ್ತು ಪದ್ಯರಚನೆಯಲ್ಲಿ ನಾನಿನ್ನೂ ಪ್ರಾಥಮಿಕ(ಅಥವಾ ಶೈಶವ) ಹಂತದಲ್ಲಿರುವುದರಿಂದ ಪರಿಹಾರ ಬರೆಯುವುದು ತಪ್ಪಲ್ಲವೆಂದು ಭಾವಿಸಿ ಬರೆಯುತ್ತಿದ್ದೇನೆ.ಹೀಗೆ ಹಳೆಯ ಪ್ರಶ್ನೆಗಳಿಗೆ ಈಗ ಉತ್ತರವೀಯುವುದು ನಿಯಮಬಾಹಿರವಾದರೆ ದಯವಿಟ್ಟು ತಿಳಿಸಿ.ಪದ್ಯದಲ್ಲಿ ತಪ್ಪುಗಳಿದ್ದರೂ ತಿಳಿಸಿ ತಿದ್ದಿ.

    ಸುರರು ದಾನವರೊಮ್ಮೆ ಕಾದಿರೆ
    ಧರೆಯು ಗಗನವು ನಡುಗಿಹೋಗಿರೆ
    ಮುರರ ಕೈಮೇಲಾಗೆ ದಿವಿಜರು ಹೆದರುತೋಡುತಿರೆ
    [ದುರುಳ ರಕ್ಕಸತನದ ತಾಂಡವ ಬಿಡದೆ ನಡೆಯುತಿರೆ]
    ನೆರವನೀಯಲು ಬಂದ ಪಾರ್ವತಿ-
    -ಹರರು,ಸರಸೊತಿ-ಬೊಮ್ಮ,ಲಕ್ಷ್ಮೀ-
    -ಹರಿಗಳಿಗೆ ಶಸ್ತ್ರಗಳ ವಿತರಿಸಲಧಿಪ(ಇಂದ್ರ) ಮೊದಲಾದ

    • ತುಂಬ ಚೆನ್ನಾಗಿದೆ. ಛಂದೋಬದ್ಧತೆಯೊಂದೇ ನಿಯಮ ಇಲ್ಲಿ. ಬೇರೆ ಯಾವ ನಿಯಮವೂ ಇಲ್ಲ 🙂 ಬರೆಯುತ್ತಿರಿ…

Leave a Reply to CHANDRAMOWLY Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)