Dec 142013
 

“भृङ्गे बद्धं सरोरुहम्” इति अनुष्टुप् पद्यस्य अन्तिमपादं उपयुज्य समस्यापूरणं कुर्मः

Dec 072013
 

ಪದ್ಯಪಾನಿಗಳೇ, ಮುಕ್ತಕಗಳನ್ನು ಬರೆಯುವಲ್ಲಿ ಕೈಪಳಗಿರುವ ಪದ್ಯಪಾನಿಗಳು ಪದ್ಯಗುಚ್ಛಗಳಲ್ಲಿ ವರ್ಣನೆಯನ್ನು ಮಾಡಬೇಕಾಗಿ ವಿನಂತಿ. ಒಂದೇ ವಸ್ತುವಿಗೆ ಹಲವಾರು ಪದ್ಯಗಳನ್ನು ಅವಿರತವಾಗಿ ಬರೆಯುವ ನಿಮ್ಮ ದಕ್ಷತೆಯನ್ನು ಈ ಕಂತಿನಲ್ಲಿ ಪ್ರದರ್ಶಿಸುವ ಸದವಕಾಶವಿದೆ. ಈ ಕೆಳಗಿನ ನಿಯಮಗಳನ್ನು ಗಮನಿಸಿ: ಐದಕ್ಕೂ(5) ಹೆಚ್ಚಿನ ಪದ್ಯಗಳಲ್ಲಿ ಪ್ರಕೃತಿಯ ಯಾವುದಾದರೂ ಒಂದು ಆಯಾಮವನ್ನು ವರ್ಣಿಸಬೇಕು.  ಪರ್ಯಾಯವಾಗಿ ಪ್ರಕೃತಿವರ್ಣನೆಯ ಯಾವುದಾದರೂ ಮಹಾಕವಿಯ 5ಕ್ಕೂ ಹೆಚ್ಚಿನ ಪದ್ಯವಿರುವ ಗುಚ್ಛವನ್ನು ಅನುವಾದ ಮಾಡಾಬೇಕು. ಸಂಸ್ಕೃತ ಮತ್ತು ಕನ್ನಡದಲ್ಲಿ ಪದ್ಯರಚನೆ ಮಾಡಬಹುದು ಉದಾಹರಣೆಗೆ ಕುಮಾರವ್ಯಾಸಭಾರತದ ಆದಿಪರ್ವದಲ್ಲಿ ಬರುವ ವಸಂತವರ್ಣನೆಯನ್ನು ಕೆಳಗೆ ಕಾಣಬಹುದು: ತೆಗೆದುದಗ್ಗದ […]

Nov 162013
 

‘ದೋಸೆ’, ‘ಸಾರು’, ‘ಪಲ್ಯ’, ‘ಪೂರಿ’ ಪದಗಳನ್ನುಪಯೋಗಿಸಿ ನಿಮ್ಮ ಇಷ್ಟದೇವತೆಯ ಸ್ತುತಿಯನ್ನು ಪದ್ಯರೂಪದಲ್ಲಿ ರಚಿಸಿರಿ. ಛಂದಸ್ಸು ನಿಮ್ಮ ಆಯ್ಕೆ.

Nov 022013
 
ಪದ್ಯ ಸಪ್ತಾಹ ೮೫: ಪದ್ಯಪೂರಣ

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙂 ‘ದಿವ್ಯದೀಪಾವಲಿಶ್ರೀ’ ಎಂಬ ಸೊಲ್ಲನ್ನುಪಯೋಗಿಸಿ ಪದ್ಯವನ್ನು ಪೂರ್ಣಗೊಳಿಸಿರಿ. ಈ ಸಾಲು ಪಂಚಮಾತ್ರಾಚೌಪದಿ, ಭುಜಂಗಪ್ರಯಾತ, ಶಾಲಿನಿ, ಮಾಲಿನಿ, ಮಂದಾಕ್ರಾಂತ, ಸ್ರಗ್ಧರಾ ಹಾಗೂ ಮಹಾಸ್ರಗ್ಧರಾ ವೃತ್ತಗಳಿಗೆ ಹೊಂದುತ್ತದೆ. ‘ದಿವ್ಯದೀಪಾವಲಿಶ್ರೀ:’ ಎಂದು ಸಂಸ್ಕೃತದಲ್ಲೂ ಪೂರಣಗಳನ್ನು ನೀಡಬಹುದು.    

Oct 112013
 

ಉತ್ಪಲಮಾಲೆ ಛಂದಸ್ಸಿನ ಪದ್ಯದ ಮೂರನೆಯ ಸಾಲಿನ ಕೊನೆಯ ಭಾಗ ಹಾಗೂ ನಾಲ್ಕನೆಯ ಸಾಲುಗಳು ಹೀಗಿವೆ :: ………………… ಸುಮಧುರೇ ಮದಿರಾಕ್ಷಿ ಮನೋಹರೇ ವರೇ ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ ಪದ್ಯದ ಉಳಿದ ಭಾಗವನ್ನು ರಚಿಸಿ ಸ್ವಾರಸ್ಯಕರವಾಗಿ ಪೂರ್ಣಗೊಳಿಸಿರಿ ಉತ್ಪಲಮಾಲೆಯ ಬಂಧ ಹೀಗಿದೆ :: ನಾನನನಾನನಾನನನನಾನನನಾನನನಾನನಾನನಾ (ಉತ್ಪಲಮಾಲೆ ಕೋಮಲ ವಿಶಾಲ ಸುಶೀಲ ವಿಲೋಲ ವೃತ್ತಮೈ)

Oct 102013
 

अन्यभाषासु उपलब्धानि रसवत्पद्यानि विभिन्नछन्दांसि आश्रित्य संस्कृतभाषायै भाषान्तरम् करणीयः |