Jun 032012
 

ಶಾಸನ ಧಿಕ್ಕಾರವೇ ಪ್ರಶಸ್ತವದಲ್ತೇ ಆಧಾರ : ತೆಲುಗಿನ ಬ್ಲಾಗ್ “ಶಂಕರಾಭರಣಂ”   ಲೇಸೈ  ಪದ್ಯಾಪೂರಣ’ ರಾಸಿಕ್ಯದ ರಾಜಧಾನಿ ರಸಪದಪಾನಂ ಯೀಸುಲಭ ಸಮಸ್ಯೆಯನು ಸ ಲೀಸಾಗಿಸಬಲ್ಲರಲ್ತೆ ಲೀಲೋತ್ಸಾಹರ್

May 272012
 

“ದಂತಂ ಪದದಿಂದೆ ಪುಟ್ಟಿ ಕಡಿದುದು ಕಿವಿಯಂ” – ಎಂಬ ಸಾಲುಳ್ಳ ಕಂದ ಪದ್ಯವನ್ನು ಪೂರಣಿಸಿ ಹಲ್ಲು, ಕಾಲಿಂದ ಹುಟ್ಟಿ ಕಿವಿಯನ್ನು ಕಡಿಯಿತು ಎಂಬ “ಅರ್ಥವಿರದ ಹೇಳಿಕೆಯಂತೆ” ತೋರುವ ಸಾಲಿಗೆ ಅರ್ಥವನ್ನು ನೀಡುವ ಪದ್ಯ ರಚಿಸಿರಿ  

May 132012
 

“ಮಾವು ಬೆಸಲೆಯಾದುದೀಗಳೀಂತುದು ಮಗಳೇ” – ಎಂಬ ಸಾಲನ್ನೊಳಗೊಂಡ ಕಂದ ಪದ್ಯವನ್ನು ರಚಿಸಿರಿ ಅರ್ಥ – ಮಾವು (ಮರ ಅಥವಾ ಹಣ್ಣು) ಬಸುರಿಯಾಗಿ ಇದೀಗ ಹೆತ್ತಿದೆಯಮ್ಮಾ ಮಗಳೇ

Apr 292012
 

“ಗಡ್ಡಂ ಬೋಳಿಸಿಕೊಳ್ ! ಎನುತ್ತೆ ನುಡಿದಂ ಪ್ರೇಯಂ ನಿಜಪ್ರೀತೆಗಂ” ಶಾರ್ದೂಲ ವಿಕ್ರೀಡಿತ ಛಂದಸ್ಸಿನ ಪದ್ಯದ ಯಾವುದಾದರೊಂದು ಸಾಲು ಹೀಗಿರುವಂತೆ ಪದ್ಯ ರಚಿಸಿರಿ [ ಶಾ.ವಿ :: ನಾನಾನಾನನನಾನನಾನನನನಾ | ನಾನಾನನಾನಾನನಾ ]

Apr 292012
 

ಅಂಶ ಛಂದಸ್ಸಿನಲ್ಲಿ (ಸಾಂಗತ್ಯ, ತ್ರಿಪದಿ ಅಥವಾ ಸೀಸ) ಯಾವುದಾದರು ವಿಷಯದ ಮೇಲೆ ಕರುಣ ರಸಮಯವಾದ ಪದ್ಯಗಳನ್ನು ರಚಿಸಿರಿ. ಅಂಶ ಛಂದಸ್ಸಿನ ವಿವರಗಳು ಇಲ್ಲಿವೆ

Apr 272012
 

ಈ ಪ್ರಹೇಳಿಕೆಯನ್ನು ಬಿಡಿಸಿ ದಂತೈರ್ಹೀನಃ ಶಿಲಾಭಕ್ಷೀ ನಿರ್ಜೀವೋ ಬಹುಭಾಷಕಃ ಗುಣಸ್ಯೂತಿ ಸಮೃದ್ಧೋಪಿ ಪರಪಾದೇನ ಗಚ್ಚತಿ ದಂತಹೀನವದು ತಿಂಬುದು ಕಲ್ಗಳ ನಂತಭಾಷಕ ಜೀವವಿಲ್ಲ ಸ್ವಂತ ಸುಗುಣಗಣಿ ಯಾದರೇನನ್ಯ ಪ ದಾಂತ ಪಿಡಿದು ಚರಿಸುವುದು