ಈ ಕಂದ ಪದ್ಯದ ಪಾದಕ್ಕೆ, ಉಳಿದ ಮೂರು ಪಾದಗಳನ್ನು (ಸಾಲುಗಳನ್ನು) ಪೂರಣಿಸಿ ಸಮಸ್ಯೆಯನ್ನು ಬಗೆಹರಿಸಿರಿ :: ” ಸೊಂಟದ ಮೇಲ್ ಸೀರೆಯೆತ್ತಿ ಸುಂದರಿ ನಡೆದಳ್ “
ಬರಲಿರುವ ಯುಗಾದಿಗೆ ಸಂಬಂಧಪಟ್ಟಂತೆ ಪದ್ಯಗಳನ್ನು ನಿಮಗಿಷ್ಟವಾದ ಛಂದಸ್ಸಿನಲ್ಲಿ ರಚಿಸಿರಿ
“ಶಕುನಿ”, “ಕರ್ಣ”, “ಸುಯೋಧನ”, “ದುಶ್ಯಾಸನ” – ಈ ಶಬ್ದಗಳನ್ನುಪಯೋಗಿಸಿ, ರಾಮಯಣದ ಮೂಲವಾದ ಕ್ರೌಂಚ ಪ್ರಸಂಗಕ್ಕೆ ಹೊಂದುವಂತೆ ನಿಮಗಿಷ್ಟವಾದ ಛಂದಸ್ಸಿನಲ್ಲಿ ಪದ್ಯಗಳನ್ನು ರಚಿಸಿರಿ.
ಪದ್ಯ ಕಲಿಕೆಯ ಪಾಠಗಳಿಗೆ ಒಂದು ಹೊಸದನ್ನು ಕೂಡಿಸಲಾಗಿದೆ. ಈ ಪಾಠವು ಅಂಶ ಛಂದಸ್ಸಿನದ್ದಾಗಿದ್ದು, ಜಾನಪದದಲ್ಲಿ ಜನಪ್ರಿಯವಾಗಿರುವ ಸಾಂಗತ್ಯ, ತ್ರಿಪದಿ ಮತ್ತು ಸೀಸ ಪದ್ಯಗಳ ಛಂದೋಬಂಧಗಳನ್ನು ತಿಳಿಸುತ್ತದೆ. ಪಾಠವು ಮೇಲಿನ “ಪದ್ಯ ವಿದ್ಯೆ” ಯ ಕೆಳಗೆ ಲಭ್ಯವಿದೆ ಹಾಗೂ ಇಲ್ಲಿ ಕ್ಲಿಕ್ಕಿಸುವುದರಿಂದಲೂ ಸಿಗುತ್ತದೆ.
ನಿಮಗಿಷ್ಟವಾದ ಛಂದಸ್ಸಿನಲ್ಲಿ ಪದ್ಯಗಳನ್ನು ರಚಿಸಿ ಇಲ್ಲಿ ತೋರ್ಪಡಿಸಿರಿ
“ಜಾರಂ ಸುಳಿಯಲ್ಕೆ ಸಾಧ್ವಿ ಸಂಭ್ರಮಗೊಂಡಳ್” ಕಂದಪದ್ಯದ ಉಳಿದ ೩ ಸಾಲುಗಳನ್ನು ಪೂರಣಿಸಿರಿ.
ಛಂದೋಬದ್ಧ ಪದ್ಯ ರಚನಾಸಕ್ತರಿಗೋಸ್ಕರ ಇನ್ನು ಕೆಲವು ಕಲಿಕೆಯ ಸಾಮಗ್ರಿಯನ್ನು ಪದ್ಯಪಾನದಲ್ಲಿ ಅಳವಡಿಸಲಾಗಿದೆ. ಇವು – ನರಸಿಂಹಾಚಾರ್ಯರು, ಕಾಳಿದಾಸನ ರಘುವಂಶದಿಂದ ಕನ್ನಡಕ್ಕೆ ಅನುವಾದಿಸಿರುವ ಎರಡು ಸರ್ಗಗಳು – “ದಿಲೀಪ ಚರಿತೆ” ಹಾಗು “ಅಜ ನೃಪ ಚರಿತೆ“. ಇವುಗಳಲ್ಲಿ ಪದ್ಯಗಳು ಸರಳ ಸುಂದರವಾಗಿದ್ದು, ಪದ್ಯ ರಚನಾಕಾರರಿಗೆ ಉತ್ತಮ ಸಾಮಗ್ರಿಯಾಗಬಹುದೆಂಬ ಭಾವದಿಂದ ಇಲ್ಲಿ ಹಾಕಿದ್ದೇವೆ. ಇವುಗಳನ್ನು ಉಳಿದ “ಕಲಿಕೆಯ ಸಾಮಗ್ರಿ” ಪುಟಕ್ಕೂ ಕೂಡಿಸಲಾಗಿದೆ.
ರಾಮನಪೂಜೆ ಮೆರೆಯೆ ಶಿವರಾತ್ರಿಯು ಸೊಗಸೈ ಕಂದಪದ್ಯದ ಉಳಿದ ಮೂರು ಸಾಲುಗಳನ್ನು ರಚಸಿ ಪೂರಿಸಿರಿ.
ನಿಮಗಿಷ್ಟವಾದ ಛಂದಸ್ಸಿನಲ್ಲಿ ಯಾವುದಾದರು ಇತರ ಭಾಷೆಯ ನಿಮಗಿಷ್ಟವಾದ ಪದ್ಯವನ್ನು ಅನುವಾದಿಸಿರಿ (ಉದಾ :: ಸಂಸ್ಕೃತದಿಂದ ಕನ್ನಡಕ್ಕೆ, ತೆಲುಗಿನಿಂದ ಸಂಸ್ಕೃತಕ್ಕೆ, ಅಂಗ್ರೇಜಿಯಿಂದ ಕನ್ನಡಕ್ಕೆ, ಇತ್ಯಾದಿ) ದಯವಿಟ್ಟು ಮೂಲ ಪದ್ಯವನ್ನೂ ಬರೆಯಿರಿ.
Auto (ಆಟೊ), Rickshaw (ರಿಕ್ಷ), Volvo (ವೊಲ್ವೊ), Lorry (ಲಾರಿ) ಪದಗಳನ್ನುಪಯೋಗಿಸಿ ಶ್ರೀ ಹರಿಯು, ಭಕ್ತನ ನೆರವಿಗೆ ಬಂದ ಸಂದರ್ಭವನ್ನು ವಿವರಿಸಿ. ನಿಮ್ಮಿಷ್ಟದ ಛಂದಸ್ಸನ್ನು ಆಯ್ದುಕೊಳ್ಳಿರಿ