ಸಂಭಾಷಣೆಯ ಪದ್ಯರಚನೆಯ ಉದಾಹರಣೆಗೆ, ಈ ಕೊಂಡಿಯನ್ನು ಬಳಸಿ ಉದಾಹರಣೆ
“ಮುಂಗಾರಿನಾಟೋಪಮಯ್” ಎಂಬ ಪಾದಾಂತ್ಯವನ್ನು ಬಳೆಸಿ ಪದ್ಯಪೂರಣವನ್ನು ಮಾಡಿರಿ. ಈ ಪಾದಾಂತ್ಯವನ್ನು ಮತ್ತೇಭ/ಶಾರ್ದೂಲ, ಪಂಚಮಾತ್ರಾಚೌಪದಿ ಇತ್ಯಾದಿ ಛಂದಸ್ಸುಗಳಲ್ಲಿ ಹೊಂದಿಸಬಹುದು
ಪಾಮರನರಿವಿಂಗೆ ಮಣಿದಪಂ ಪಂಡಿತನುಂ
ಬೇಸಿಗೆ ರಜೆಯ ನಂತರ ಶಾಲೆಯ ಮೊದಲದಿನಕ್ಕಾಗಿ ಹೊರಡುತ್ತಿರುವ ಮಕ್ಕಳ ಪಾಡನ್ನು ವರ್ಣಿಸಿ ಪದ್ಯ ರಚಿಸಿರಿ
ಮಜ್ಜಿಗೆ ಮತ್ತಾದುದಲ್ತೆ ಪಾಲೇ ಬಗೆಯಲ್
ವಸಂತತಿಲಕ ಛಂದಸ್ಸಿಗೆ ಸರಿಹೊಂದುವ ಈ ಪಾದಾಂತ್ಯವನ್ನು ಬಳಸಿ ಪದ್ಯಪೂರಣ ಮಾಡಿರಿ
“ಮುಳಿಸೇಕೆ ಪೆಣ್ಣೇ”
‘ವೈಕಾಸಿ’, ‘ಆಡಿ’, ‘ಐಪಸಿ’, ‘ಪಂಗುನಿ’ ಎಂಬ ತಮಿಳು ಮಾಸಗಳ ದತ್ತಪದಗಳನ್ನು ಬಳೆಸಿ ಮಹಾಕಾಲ(ಶಿವ)ನ ವರ್ಣನೆಯನ್ನು ಮಾಡಿರಿ
ಆತ್ಮೀಯ ಪದ್ಯಪಾನಿಗಳೇ ನಿಮ್ಮೆಲ್ಲರ ಸಹಕಾರದಿಂದ ಪದ್ಯಪಾನವು ಇಂದು ಪದ್ಯಸಪ್ತಾಹದ ೨೦೦ನೇ ಸಂಚಿಕೆಗೆ ಪಾದಾರ್ಪಣೆ ಮಾಡುತ್ತಿದೆ. ಎಲ್ಲಾ ಪದ್ಯರಸಿಕರಿಗೂ ಹಾರ್ದಿಕ ಧನ್ಯವಾದಗಳು ಹಾಗು ಅಭಿನಂದನೆಗಳು 🙂
ಮೂರನೇ ಶತಕದ ಪದ್ಯಸಪ್ತಾಹದ ಸಂಚಿಕಗಳಿಗೆ ನಿಮ್ಮೆಲ್ಲರನ್ನೂ ಸ್ವಾಗತಿಸುತ್ತಾ ಕೆಳಗಿನ ಸಮಸ್ಯೆಯ ಸಾಲನ್ನು ಬಗೆಹರಿಸಬೇಕೆಂದು ವಿನಂತಿಸುತ್ತೇವೆ.
ಉಭಯಭಾಷಾಕವಿಗಳೂ ಭಾಗವಹಿಸಲೆಂದು, ಕನ್ನಡ ಹಾಗು ಸಂಸ್ಕೃತಗಳೆರಡರಲ್ಲೂ ಸಮಸ್ಯೆಯ ಸಾಲನ್ನು ನೀಡಲಾಗಿದೆ.
ಕನ್ನಡ: ಪದ್ಯಪಾನಮಿದು ಮದ್ಯಪಾನಮೇ
ಸಂಸ್ಕೃತ: ಪದ್ಯಪಾನಮಿತಿ ಮದ್ಯಪಾನಿತಾ
“ಸುಡುಬೇಸಿಗೆ ಬೆಂಗಳೂರಿನೊಳ್” ಎಂಬ ಚಂಪಕ-ಉತ್ಪಲಮಾಲೆಗಳ ಪಾದಾಂತ್ಯಕ್ಕೆ ಹೊಂದುವ ಪೂರಣವನ್ನು ಮಾಡಿರಿ
ಸರಿ, ಗಮ, ಪದ, ನಿಸ ಎನ್ನುವ ದತ್ತಪದಗಳನ್ನು ಕ್ರಮವಾಗಿ ನಾಲ್ಕೂ ಪಾದಗಳಲ್ಲಿ ಬಳೆಸಿ ಸೀತಾಮಾತೆಯನ್ನು ಕುರಿತು ಪದ್ಯರಚೆಯನ್ನು ಮಾಡಿರಿ.