ಮೊಣಕೈಗಳಿಂದೆ ಪಾಲ್ವಟ್ಟೆಯಂ ಪೇಳ್ಗುಮಾ – ಕ್ಷೀರಪಥವನ್ನು (milkyway) ತನ್ನ ಮೊಣಕೈಗಳಿಂದ (ಅಳೆದು) ಹೇಳುವನು, ಅವನ ಕ್ಷಣವು ನಮಗೆ ಮನ್ವಂತರವು, ಅವನ ಕಾಲ ಬೆರಳ ಧೂಳಿಯು ಸಾಗರನ ಸನ್ನಿಧಾನವು, ಅಂತ ವಿರಾಟ್ ಪುರುಷನಿಗೆ ನಮಿಸುತ್ತೇನೆ
What a punch! Permit me to rephrase it:
ಒಣಭೂಮಿಯೊಳು ವಾಸಿಪರ್ಗಂಬುರಾಶಿ ತಾಂ
ಪಣಸಿಕ್ಕವೊಲ್ ತೋಷ ನೀಡುಗೆಂದುಂ|
ತೊಣೆಯಂಗೆ ವಾರ್ತ್ತವದರಸ್ತಿತ್ವವವನಿಂಗೆ (ವಾರ್ತ್ತ=ordinary)
ಕಣಮಲ್ತೆ ಸಾಗರನ ಸನ್ನಿಧಾನಂ||
[ಸಾಗರ = ಸಗರ ವಂಶಜ = ರಾಮ]
[ಹನುಮ ರಾಮನ ಸಾನಿಧ್ಯವನ್ನು ಮಾತ್ರ ಕೇಳಿದ. ಅದನ್ನು ರಾಮ ಬಿಚ್ಚುಹೃದಯದಿಂದ ಕರುಣಿಸಿದ. ಆದರೆ, ತಾನು ಗಳಿಸಿದ ಋಣದಿಂದ ರಾಮನನ್ನೇ ಗುಂಡಿಗೆಯಲ್ಲಿ ಬಂಧಿಸಿದ ಹನುಮನಿಗೆ ಸಾಗರನ (ರಾಮನ) ಸನ್ನಿಧಾನ ಕಣಮಾತ್ರವಲ್ತೆ?]
ಗುಣವಂತ ಎಂಬುದು ಸಾಧುರೂಪ. ಇದರಂತೆಯೇ ಧನವಂತ, ಬಲವಂತ, ಯಶೋವಂತ ಇತ್ಯಾದಿ. ಅಕಾರಾಂತೇತರವಾದ ಪದಗಳು ಮಾತ್ರ ಮತ್ವವನ್ನು ಹೊಂದುತ್ತವೆ. ಉದಾ: ಶ್ರೀಮಂತ, ಧೀಮಂತ ಇತ್ಯಾದಿ. ಆದರೆ ಕನ್ನಡದಲ್ಲಿ ಎಷ್ಟೋ ಬಾರಿ ಇವೂ ವತ್ವವನ್ನೇ ತಳೆಯುತ್ತವೆ. ಉದಾ: ಸಿರಿವಂತ, ಮತಿವಂತ, ನೀತಿವಂತ ಇತ್ಯಾದಿ.
ಪೆಜತ್ತಾಯರ ಪರಿಹಾರಗಳು ನಿಜಕ್ಕೂ ತುಂಬ ಸೊಗಸಾಗಿವೆ. ಅಂತೆಯೇ ಸೋಮ, ಪ್ರಸಾದು, ಕಾಂಚನಾ ಮುಂತಾದವರ ಅನರ್ಗಳಪದ್ಯಪ್ರವಾಹವೂ ಇತ್ತೀಚೆಗೆ ಕುದುರಿಕೊಂಡ ಮುಂಗಾರು ಮಳೆಯನ್ನು ನೆನಪಿಸಿವೆ. ರಾಮ್ ಸಹ ಬಹುದಿನಗಳ ಬಳಿಕ ಪದ್ಯಪಾನಕ್ಕಾಗಿ ಚಷಕವನ್ನು(goblet) ಚಾಚಿರುವುದು ಮುದಾವಹ:-)
ಇದೀಗ ನನ್ನದೂ ಒಂದು ಪರಿಹಾರ; ಇದಕ್ಕೆ ನಿಮ್ಮೆಲ್ಲರದೇ ಪ್ರೋತ್ಸಾಹ:
ಗಣಿಸಲಿನ್ನೂ ಸೋಮವಾರಮಿಂದಾಗಳೇ
ಗಣನೆಗೆಟುಕದ ಪದ್ಯಪಾನದಾನ !
ಗುಣಗಣ್ಯಕಾವ್ಯಾಮೃತಾಬ್ಧಿಯೆದುರೆಂದಿಗಂ
ಕಣಮಲ್ತೆ ಸಾಗರದ ಸಂನಿಧಾನ ||
“ವಿಲಕ್ಷಣ” = “ವಿಲಕ್ಕಣ” ವಾಗಬಹುದೇ ? ಇಲ್ಲದಿದ್ದಲ್ಲಿ ಪದ್ಯವನ್ನೇ ಬದಲಿಸಬೇಕಾದೀತು.
“ಆರೊಹದವರೋಧ(ಹ)” = ಸಾಗರದ ಅಲೆಗಳ ಏರಿಳಿತವನ್ನು ಸೂಚಿಸಿದ ಬಗೆ – ಸರಿಯಾಗಲಿಲ್ಲವೇ?
(“ಅಣಿಗೊಳಿಸುತಣಗಿಸಿಹ ತೆರೆತೆರೆಯಬಗೆ ವಿಲ-ಕ್ಷಣ.. ” ಎಂದು ಮೊದಲು ಬರೆದದ್ದು. ಲಘುಬಾಹುಳ್ಯ ತಪ್ಪಿಸಲು ಬದಲಿಸಿದ್ದು.)
ಎಣಿಸಿದೊಳ್ ಸಿಗದ ರುಚಿ ಗುಣಿಸಿದೊಳ್ ಬರದು ಕಡೆ
ಗಣಿಸಿದೊಳ್ ವ್ಯಂಜನಕೆ ಸವಿರುಚಿಯದಿರದು I
ಅಣಕಿಸುತ್ತಿರ್ಪಡುಗೆ ಮನೆ ಲವಣ ಷಡ್ರಸದ
ಕಣಮಲ್ತೆ ಸಾಗರನ ಸನ್ನಿಧಾನಂ II
ಉಪ್ಪು ವ್ಯಂಜನದಲ್ಲಿ ಸರಿಯಾದ ಪ್ರಮಾಣದಲ್ಲಿದ್ದಾಗ (ಎಣಿಸಿದೊಳ್-ಯೋಚಿಸಿದರೆ ) ತಿಳಿಯುವುದಿಲ್ಲ . ಜಾಸ್ತಿಯಾದಾಗ (ಗುಣಿಸಿದೊಳ್ ) ಮತ್ತು ಹಾಕಲು ಮರೆತಾಗ ಸವಿರುಚಿ ಬಾರದು. (ಆ ಸಂದರ್ಭದಲ್ಲಿ ಉಪ್ಪಿನ ಬೆಲೆ ಗುರುತಿಸಲ್ಪಡುತ್ತದೆ). ಪದ್ಯ ಪಾನದಲ್ಲಿ ಈ ಸಮಸ್ಯೆ ನೋಡಿದ ಮೇಲೆ ಅಡುಗೆ ಮನೆಯೊಳಗೆ ಉಪ್ಪಿನ ಜಾಡಿಯೇ ನನಗೊಂದು ಸಮಸ್ಯೆಯಾಗ್ತಾ ಇದೆ ಅದಕ್ಕಾಗಿ ಈ ಪೂರಣ.
’ಪದ್ಯಪಾನದಲ್ಲಿ ಈ ಸಮಸ್ಯೆ ನೋಡಿದ ಮೇಲೆ ಅಡುಗೆ ಮನೆಯೊಳಗೆ ಉಪ್ಪಿನ ಜಾಡಿಯೇ ನನಗೊಂದು ಸಮಸ್ಯೆಯಾಗ್ತಾ ಇದೆ’ ಎಂದು ಹೇಳುವ ಮೂಲಕ, ಈ ಸಮಸ್ಯೆಯನ್ನು ಕೊಟ್ಟುದಕ್ಕಾಗಿ:
ಪಲ್ಲವ|| ಇಷ್ಟು ದಿನಗಳು ಸಹಜ ರುಚಿಯಿಂ
ಪುಷ್ಟಗೊಳ್ಳುತ್ತಿದ್ದ ಪಾಕವು|
ಕ್ಲಿಷ್ಟವಾದುದು ಇಂದೆನುತ್ತಲಿ
ದುಷ್ಟನೆಂಬಿರ ಸೋಮನಂ||
ಅರೆ -ಬರೆ ಹಳೆ ಕನ್ನಡದಲ್ಲಿ ಸಾಗರನ ಸಾಮೀಪ್ಯದಲ್ಲಿ ದಂಡಿ ಯಾತ್ರೆಯ(ಉಪ್ಪಿನ ಸತ್ಯಾಗ್ರಹ ) ಬಗ್ಗೆ ಬರೆಯುಲು ಯೋಚಿಸುತ್ತಿದ್ದೆ . ಅಡುಗೆ ಮನೆಯೊಳಗೆ ಉಪ್ಪಿನ ಜಾಡಿ ” ದಂಡಿ ಯಾತ್ರೆಗೆ ಕಾರಣ ನಾನೆ . ನೀನು ದಂಡ” ಎಂದು ನನ್ನನ್ನು ಅಣಕಿಸ್ತ ಇತ್ತು
ಹೊಣೆಯೆನ್ನದೀ ಲೋಗರನು ಕಾವುದೆಂದಾ ಕ-
ರುಣಸಾಗರವು ಕಾಲಕಾಲಕ್ಕೆ ತಾಂ|
ಉಣಿಸವರಿಗೆಂದು ಸೂರ್ಯಂಗೆ ನೀಡಿರುವಂಬು-
ಕಣಮಲ್ತೆ ಸಾಗರನ ಸನ್ನಿಧಾನಂ||
ಎಣೆಯಿಲ್ಲ ವಿಸ್ತಾರವರಬಿಸಾಗರಕೆ ಕೇಳ್ (Arabian Sea)
ಗಣಿಸೆನಿತು ದೇಶಂಗಳದರ ತಟದೊಳ್|
ಎಣಿಸಲಾ ಆಫ್ರಿಕಾ ಖಂಡದಿಂ ವರೆಗೆ ಕೂಂ-
ಕಣಮಲ್ತೆ ಸಾಗರನ ಸನ್ನಿಧಾನಂ||
ಇಣುಕಿ ನೋಡಲು ಸಾಗರದ ತಳದೊಳೆಲ್ಲೆಲ್ಲು
ಬಣಮಲ್ತೆ ಜಲಜೀವರಾಜಿಯದಕೆ|
ನುಣುಪುಪಾಚಿಗ್ರಾಸವಿಹುದಮಿತವದಕೆ ಚಿ-
ಕ್ಕಣಮಲ್ತೆ ಸಾಗರನ ಸನ್ನಿಧಾನಂ|| (ಚಿಕ್ಕಣ=slippery)
ಕುಣಿವಲೆಗಳಾಕ್ರಮಕೆ ಸಿಕ್ಕು ನುಣುಪಾಗಿ ಮೇಣ್
ಮಣಭಾರದಶ್ಮಗಳು ಕಿರಿದಾದವೇಂ|
ಮಿಣಮಿಣನೆ ಪೊಳೆವ ಕೋಟ್ಯಂತರದ ರಸದೃಷ- (ರಸ=gold. ದೃಷತ್ಕಣ=pebble)
ತ್ಕಣಮಲ್ತೆ ಸಾಗರನ ಸನ್ನಿಧಾನಂ||
ಎಲ್ಲ ಪೂರಣಗಳೂ ಚೆಲುವಾಗಿವೆ. ಕೀಲಕಪದಗಳಿಗಾಗಿ ಆನ್ ಲೈನ್ ಡಿಕ್ಷನರಿ ಚೆನ್ನಾಗಿ ಬಳಕೆಗೆ ಬಂದಿದೆ:-)
Mr. Monier Williams conveys his thanks to you
ಕುಣಿಪ ಶಿವನೇ ಬಡುಗಣದ ಬೆಟ್ಟಮೆಟ್ಟೆ ತೆಂ-
ಕಣಮಲ್ತೆ ಸಾಗರನ ಸನ್ನಿಧಾನಂ
ಅಣುವನಾಣ್ಮಂ ದಾಂಟಿದನ್ನೆಗಂ ಕ್ಷಿತಿವೆತ್ತ
ಕಣಕಣಂಗಳ್ ಸಂಸ್ಕೃತಿಯ ಪಾಡುಗುಂ
ಹಿಮಾಲಯದಿಂದ ಹಿಂದೂಮಹಾಸಾಗರದವರೆಗೆ ಪ್ರತಿ ಕಣಕಣವು (ಶಿವ, ರಾಮರ ಆದರ್ಶದ) ಸಂಸ್ಕೃತಿಯನ್ನು ಹಾಡುವುದು
ಬಡುಗಣಾದ್ರಿ – ಅರಿಸಮಾಸವೆ?
ಹೌದು ಪ್ರಸಾದು ಸರಿಪಡಿಸಿದ್ದೇನೆ ಧನ್ಯವಾದಗಳು
ಬಡಗು ಅಥವಾ ಬಡಗಣ ಎಂಬುದೇ ಸಾಧುರೂಪ.
ತೃಣಶೈಲಜಡಚೇತನಂಗಳೊಂದೆಬುವರ್
ಗಣಿಪರಧ್ಯಾತ್ಮಮಂ ಸೂಜಿಮೊನೆಯೊಳ್
ಎಣೆಯಿರ್ಪುದೇಂ ದ್ವೈತವಾದಿಗಳ್ಗೆ ಪ್ರತ-
ರ್ಕಣಮಲ್ತೆ ಸಾಗರನ ಸನ್ನಿಧಾನಂ
ಪ್ರತರ್ಕಣ – reasoning
ತೃಣಶೈಲಜಡಚೇತನಂಗಳೊಂದೆಬುವರ್ – ಅದ್ವೈತಿಗಳು
ಅದ್ವೈತಿಗಳಿಗೆ ಅಧ್ಯಾತ್ಮವು ಸೂಜಿಮೊನೆಯಷ್ಟೆ (ನಿರ್ದಿಷ್ಟವಾದದ್ದು), ದ್ವೈತಿಗಳಿಗೆ (ನಾಮ ರೂಪಭೇದಾದಿಗಳ) ತರ್ಕವು ಸಾಗರದ ಸನ್ನಿಧಾನದಂತೆ (ವಿಸ್ತಾರವದದ್ದು)
ಆಹಾ! ಎಂಥ ಸೊಗಸಾದ ಪೂರಣ!!
ಉಣುವುದುಡುವೆಂಬೆರೆಡ ಸಂಚಯದ ಜೋಗಿಗಂ
ಮಣಿದಪೆಂ ಮುಕ್ತಚೇತನದಧಿಪಗಂ
ಗುಣಸತ್ತ್ವಮರಸುತ್ತೆ ಕಾಣಲ್ಕವಂ ರಜ:-
ಕಣಮಲ್ತೆ ಸಾಗರನ ಸನ್ನಿಧಾನಂ
ಇಂದಿನ ಊಟ/ಬಟ್ಟೆಯನ್ನಷ್ಟೆ ಸಂಚಯ ಮಾಡುವ ಜೀವನ್ಮುಕ್ತನಾದ ಯೋಗಿಗೆ ನಮಿಸುತ್ತೇನೆ, ಸಾತ್ತ್ವಿಕಗುಣವನ್ನಷ್ಟೇ ಕಾಣವ ಅವನಿಗೆ (ಸಂಪತ್ತಿನ ಆಕರವಾದ) ಸಾಗರನ ಸನ್ನಿಧಾನ(ವೂ ಕೂಡ) ಧೂಳಿನ ಸಮವಲ್ಲವೇ?
ರಜ:ಕಣ – dust
spello> ಸತ್ತ್ವ
ಪ್ರಸಾದು ಸರಿಪಡಿಸಿದ್ದೇನೆ ಧನ್ಯವಾದಗಳು
ಮೊಣಕೈಗಳಿಂದೆ ಪಾಲ್ವಟ್ಟೆಯಂ ಪೇಳ್ಗುಮಾ
ಚಣಮಿರ್ಪುದೆಮಗೆ ಮನ್ವಂತರಂಗಳ್
ಮಣಿದಪೆಂ ಗಡ ವಿರಾಟ್-ಪುರುಷಂಗೆ ಕಾಲ್ವೆರಳ
ಕಣಮಲ್ತೆ ಸಾಗರನ ಸನ್ನಿಧಾನಂ
ಮೊಣಕೈಗಳಿಂದೆ ಪಾಲ್ವಟ್ಟೆಯಂ ಪೇಳ್ಗುಮಾ – ಕ್ಷೀರಪಥವನ್ನು (milkyway) ತನ್ನ ಮೊಣಕೈಗಳಿಂದ (ಅಳೆದು) ಹೇಳುವನು, ಅವನ ಕ್ಷಣವು ನಮಗೆ ಮನ್ವಂತರವು, ಅವನ ಕಾಲ ಬೆರಳ ಧೂಳಿಯು ಸಾಗರನ ಸನ್ನಿಧಾನವು, ಅಂತ ವಿರಾಟ್ ಪುರುಷನಿಗೆ ನಮಿಸುತ್ತೇನೆ
ಭವ್ಯವಾದ ಪರಿಹಾರ
ನನ್ನ ಸವರಣೆಯನ್ನು ಪರಿಶಿಲಿಸಿ:
———— ಪಾಲ್ವಟ್ಟೆಯನ್ನಳೆವನೈ
ಚಣಮಿರ್ಪುದವಗೆಮ್ಮ ಮನ್ವಂತರಂ
ಮಣಿದಿರ್ಪೆನಾ ವಿರಾಟ್-ಪುರುಷಗಾತನ ಪಾದ-
——
ಸವರಣೆ ಯುಕ್ತವಾಗಿದೆ, ಧನ್ಯವಾದಗಳು ಪ್ರಸಾದು
ಮೊಣಕೈಗಳಿಂದೆ ಪಾಲ್ವಟ್ಟೆಯನ್ನಳೆವನೈ
ಚಣಮಿರ್ಪುದವಗೆಮ್ಮ ಮನ್ವಂತರಂ
ಮಣಿದಿರ್ಪೆನಾ ವಿರಾಟ್-ಪುರುಷಗಾತನ ಪಾದ-
ಕಣಮಲ್ತೆ ಸಾಗರನ ಸನ್ನಿಧಾನಂ
ಋಷ್ಯಾಶ್ರಮಗಳಲ್ಲಿ ಜಿಂಕೆಗೆ ವಿಶೇಷ ಮಾನ್ಯತೆ. ಅವು ಆಶ್ರಮದ ಒಳಾಂಗಣಗಳಲ್ಲೆಲ್ಲ ಓಡಾಡಿಕೊಂಡಿರುತ್ತವೆ.
ಗಣಿಪುದೊಳ್ಳಿತು ಸೃಷ್ಟಿಯೊಳಗೆಲ್ಲ ಸಮರೆಂದು
ಗಿಣಿ-ಸಿಂಹ-ಪಾವಾನೆ-ಮನುಜರೆಂದುಂ| (As it happens in Rishyashramas)
ನುಣುಪುಬಗೆಯಿಂ ಹೃದ್ಯ! ತಾಪಸಾಶ್ರಮಗಳಂ-
ಕಣಮಲ್ತೆ ಸಾಗರನ (ಜಿಂಕೆಯ) ಸನ್ನಿಧಾನಂ||
ಕನ್ನಡದಲ್ಲಿ ’ಜಿಂಕೆ’ ನಪುಂಸಕಲಿಂಗವೇ. ಇಲ್ಲಿ ಪುಲ್ಲಿಂಗವಾಗಿ ಗಣಿಸಿದ್ದೇನೆ. ಮನ್ನಿಸಿ.
ನುಣುಪುಭಾವ ಎಂಬುದು ಅರಿಸಮಾಸ; ಸಾಗರ ಎಂದರೆ ಜಿಂಕೆಯೇ?
ಅರಿಸಮಾಸವನ್ನು ಸರಿಪಡಿಸಿದ್ದೇನೆ.
ಮೊದಲ ೪ ಪದ್ಯಗಳಲ್ಲಿ ನನ್ನ ಕೈಹಿಡಿದ ನಿಘಂಟು ಇಲ್ಲಿ ನನ್ನ ಕೈಬಿಟ್ಟಿತೆ! http://www.spokensanskrit.de ಇಲ್ಲಿ ಹಾಗೆಂದು ಅರ್ಥೈಸಿದ್ದಾರೆ.
ಪ್ರಸಾದು – ಅದು ಒಂದು ಬಗೆಯ ಜಿಂಕೆಯ ಬದಲಿಗೆ, ಒಂದು ಜಿಂಕೆಯಾಗಿರಬಹುದು
Thanks for the idea Ram. Let us consider ‘sAgara’ as the name of your deer
ಸೋಮ ಪ್ರಸಾದರ ಈ ಭಾರೀ ಪದ್ಯಗಳ ಮಳೆಯಲ್ಲಿ ನನ್ನದೊಂದು ಪನಿ
ಗಣಿಕೆಗೂ ಮೀರಿರ್ದ ಜಗದವಿಸ್ತಾರವನು
ಪಣದಿಂದ ಮಾನವನಳೆವ ಮೂಢನು|
ಚಣದೆ ಮೂರ್ಲೇಕಮನ್ನಾಡಿಸುವ ದೇವನಿಗೆ
ಕಣಮಲ್ತೆ ಸಾಗರನ ಸನ್ನಿಧಾನಂ|
ಒಳ್ಳೆಯ ಪರಿಹಾರ.”ಮೂರ್ಲೋಕವನ್ನಾಡಿಸುವ…’ ಎಂಬುದಕ್ಕಿಂತ ಮೂಜಗಮನಾಡಿಸುತಿರ್ಪ ಎನ್ನುವ ಸವರಣೆ ಯುಕ್ತ.
(ಇ)ದೇನೆಂಬೆ ಚೀದಿ ನೀ, ಜಗದವಿಸ್ತಾರವದು
ಪೀನಮೇಂ ಮೀರ್ವವೋಲ್ ಗಣಿಕೆಯರನುಂ!
ಐನಾತಿ ಕಸುಬದೈ ದೇಶ-ಕಾಲಾತೀತ
ಮಾನಪ್ರಚುರೆ ಸಲ್ವಳೆಲ್ಲೆಲ್ಲಿಯುಂ!!
—–
ಸೋಮನೀವರೆಗೆ ಕಬ್ಬವ ನಾಲ್ಕ ರಚಿಸಿಹನ್
ನಾಮಾಂಕ ಹಾದಿರಂಪನುಮೈದನುಂ|
ಪೂಮಾಲೆಯಂ ಸಲ್ಲಿಸಿಹೆ ಕಕ್ಕುಲತೆಯಿಂದೆ
ಜಾಮಿಯಂಗಿದು ನ್ಯಾಯಮೇನು ಚೀದಿ?|
(ಜಾಮಿ = ಅಣ್ಣ/ ತಮ್ಮ/ ಕಸಿನ್)
ಪಣತೆಯೊಲ್ ಬೆಳಗುತಿರಲಂಧಕಾರವನು ಸ
ದ್ಗುಣಿಗಳೊಪ್ಪದ ಸಂಗಮಿಂದು ಬಾಳೊಳ್
ಚಣಗಾಲಮೆಂಬೆಣಿಕೆಯೇಂ?ಸಖಿಯೆ,ಕಾವ ಕಂ-
ಕಣಮಲ್ತೆ?ಸಾಗರನ ಸನ್ನಿಧಾನಂ!
(ದೊಡ್ಡವರ ಸಾಮಿಪ್ಯವು ಬದುಕಿನಲ್ಲಿ ಚಣಕಾಲ ದೊರೆತರೂ,ಅದು ಕಾಯುವ ಕಂಕಣ)
ಸಾಗರ=ದೊಡ್ಡವ,ಗುಣಸಾಗರ)
ತುಂಬ ಸೊಗಸಾದ ಪೂರಣ. ” ಅಂಧಕಾರವನು…” ಎಂದು ತಿದ್ದಿದಲ್ಲಿ ನಡುಗನ್ನಡಕ್ಕೆ ಹೆಚ್ಚು ಸಹಜವಾಗುವುದು.
ಮೆಚ್ಚುಗೆಗೂ ಮತ್ತು ಸವರಣೆಗೂ ಧನ್ಯವಾದಗಳು.
ಇಣುಕಿತೇಂ ತನಿವೆಳಕು ದಿನನಿತ್ಯ ಬದುಕಿನೊಳ್
ಕುಣಿಕೆ ಮೀಂಗಳಿರದಿರೆ ಬೆಸ್ತಕುಲದಾ?
ತಣಿಸುತಲೆ ಬಯಕೆಯಂ,ಸಂತೈಸೆ,ಜೀವನದ
ಕಣಮಲ್ತೆ?ಸಾಗರನ ಸನ್ನಿಧಾನಂ?
ಕಣ=ಕಿಡಿ
’ರಲಾಶಾ’ ಎಂಬುದು ಲಗಾದಿ ಆಯಿತಲ್ಲ!
ಸರಿ ಪಡಿಸಿದ್ದೇನೆ. Thank you
ಗುಣವಂತರಿಂಗಾವ ಕಾಯಕಮಸಾಧ್ಯಮಯ್
ಗಣಿಸಲ್ಕೆ ಸಿಗದೊಂದುಮೀ ಧರಾತಳದೊಳ್ |
ಚಣದೊಳ್ ಸಮಂತು ಪೀರಿದಗಸ್ತ್ಯಗಂ ನೀರ
ಕಣಮಾಯ್ತು ಸಾಗರನ ಸನ್ನಿಧಾನಂ ||
ಒಣಭೂಮಿಯೊಳ್ವಾಸಿಪರ್ಗೆ ತೋಷವಹುದುಂ
ಪಣಸಿಕ್ಕವೊಲ್ ರಾಶಿಯಂಬುವಿಂದಂ
ತೊಣೆಯೊಳಿರ್ಪಮರಿಗೇಂ ಬೆಲೆಯಿದರ? ಮತ್ತವಗೆ
ಕಣಮಲ್ತೆ ಸಾಗರನ ಸನ್ನಿಧಾನಂ?
ತೊಣೆ=ಒಡನಾಟ
(ಸಮುದ್ರದ ನೆರೆಯಲ್ಲಿರುವವರಿಗೆ ಅದರ ಸಾಮಿಪ್ಯವು ತೀರಾ ಸಣ್ಣ ವಿಷಯ)
What a punch! Permit me to rephrase it:
ಒಣಭೂಮಿಯೊಳು ವಾಸಿಪರ್ಗಂಬುರಾಶಿ ತಾಂ
ಪಣಸಿಕ್ಕವೊಲ್ ತೋಷ ನೀಡುಗೆಂದುಂ|
ತೊಣೆಯಂಗೆ ವಾರ್ತ್ತವದರಸ್ತಿತ್ವವವನಿಂಗೆ (ವಾರ್ತ್ತ=ordinary)
ಕಣಮಲ್ತೆ ಸಾಗರನ ಸನ್ನಿಧಾನಂ||
ರಣರಣಕದಿಂದಿಕ್ಕೆಲದೆ ದೇವದಾನವರ
ಗಣಮಂಬುನಿಧಿಮಥನಲೀಲೆಗಂ ತೊಡಗಲ್ |
ಗುಣಮಾದನಾ ಶೇಷ ಗಿರಿಯೆ ಕಡೆಗೋಲಾಯ್ತು
ಕಣಮಾಯ್ತು ಸಾಗರನ ಸನ್ನಿಧಾನಂ ||
ಕಣ = ಕ್ರೀಡಾಂಗಣ.
ರಣರಣಕ = ಅತ್ಯುತ್ಸಾಹ.
ಛೆ! ನಾನು ರೈತ. ’ಕಣ’ ಎಂಬುದನ್ನು ಅಂಗಣ ಎಂಬ ಅರ್ಥದಲ್ಲಿ ಸದಾ ಕೇಳಿಬಲ್ಲವನು. ಆದರೂ ಇಲ್ಲಿ ಹಾಗೆ ಬಳಸಲು ಹೊಳೆಯಲಿಲ್ಲ. ಛೆ!
Nimage hoLeyade iddaddu nanna bhAgya sir
This verse and your next one (in SL. 16) are so nice that I am expressing my ‘like’ again after reading them the n’th time.
ಪ್ರಣಮಿಸುತೆ ರಾಮಗಂ ಕಡುಪಿಂದೆ ಮುನ್ನೀರ್ಗೆ
ಗುಣಿಸಲ್ಕೆ ಸೇತುವಂ ಸೇರ್ದ ಮಂಗಗಳಾ |
ಗಣದ ಲೋಕಕಮಕ್ಕಜಮನೀವ ಸಾಸಕಂ-
ಕಣಮಾಯ್ತು ಸಾಗರನ ಸನ್ನಿಧಾನಂ |
ಸಾಸಕೆ ( ಸಾಹಸಕ್ಕೆ ) ಅಂಕಣ ( ಸ್ಥಳ )
ಪೆಜತ್ತಾಯರೆ – ಎಲ್ಲ ಪೂರಣಗಳೂ ಇಷ್ಟವಾಯಿತು. ಸಾಸಕಂಕಣಮಾಯ್ತು ಎಂಬ ಪ್ರಯೋಗ ಬಹಳ ಚೆನ್ನಾಗಿದೆ.
ಹೌದು ರಾಮ್. ಇವರ ಎಲ್ಲ ಪೂರಣಗಳೂ ಪ್ರಶಸ್ತವಾಗಿವೆ.
Ramachandra-PrasAdarige DhanyavAdagaLu
ತೃಣಮಾಗೆ ಜೀವನವು ಗ್ರಹಚಾರದಿಂ ಬಿದಿಯು
ಹಣಿದಿರ್ದು ಕಾಡಿರ್ದುದೈ ಪಾಪಿಯಂ
ಗಣಿಸುವನ್ನೆಗು ಬರಿಯ ಜಲಮಾದ ದುರ್ದಶೆಗೆ
ಕಣಮಲ್ತೆ ಸಾಗರನ ಸನ್ನಿಧಾನಂ
[ಸಾಗರದಲ್ಲಿ ಕಳೆದು ಹೋದವನ ದುರ್ದಶೆಯ ಬಗೆಗೆ]
ಭಣಭಣಿಪ ರತ್ನಂಗಳಾಕರಂ ಪೊರೆಯುವಂ
ಗುಣಗಾತ್ರದಾ ತಿಮಿಂಗಳನಿಕರಮಂ
ಅಣುವ ಪೋಲುವ ಜೀವರಾಶಿಗಳಿಗಿರ್ಕೆ ಕಣ-
ಕಣಮಲ್ತೆ ಸಾಗರನ ಸನ್ನಿಧಾನಂ
ಪಣಮಿರ್ದೊಡೇಂ ಗೆಯ್ಮೆಯೌದ್ಯೋಗಮುತ್ಕರಿಸು-
ತಣಿಗೊಳಿಸಲಾ ಬೃಹಜ್ಜಲಯಾನಮಂ
ಚಣದ ವಿಧಿಯಾಟಕ್ಕೆ ವಿಪ್ಲವಮೆ ದಿಟವು ಕಣ-
ಕಣಮಲ್ತೆ ಸಾಗರನ ಸನ್ನಿಧಾನಂ
ಟೈಟಾನಿಕ್ ಹಡಗು ಮುಳುಗಿದಬಗ್ಗೆ ಪೂರಣ
ಗುಣವಂತ ರಾಮನೊಡೆ ಸಾನ್ನಿಧ್ಯ ಬೇಡಲ್ ಕ-
ರುಣಿಸಿರ್ದನೈ ಬಿಚ್ಚುಹೃದಯದಿಂದೆ
ಋಣದಿ ಗುಂಡಿಗೆಯಲ್ಲೆ ಬಂಧಿಸಿದ ಹನುಮಂಗೆ
ಕಣಮಲ್ತೆ ಸಾಗರನ ಸನ್ನಿಧಾನ
[ಸಾಗರ = ಸಗರ ವಂಶಜ = ರಾಮ]
[ಹನುಮ ರಾಮನ ಸಾನಿಧ್ಯವನ್ನು ಮಾತ್ರ ಕೇಳಿದ. ಅದನ್ನು ರಾಮ ಬಿಚ್ಚುಹೃದಯದಿಂದ ಕರುಣಿಸಿದ. ಆದರೆ, ತಾನು ಗಳಿಸಿದ ಋಣದಿಂದ ರಾಮನನ್ನೇ ಗುಂಡಿಗೆಯಲ್ಲಿ ಬಂಧಿಸಿದ ಹನುಮನಿಗೆ ಸಾಗರನ (ರಾಮನ) ಸನ್ನಿಧಾನ ಕಣಮಾತ್ರವಲ್ತೆ?]
ಅದು ’ಸಾನ್ನಿಧ್ಯ’ ಎಂದಾಗಬೇಕು.
ಸರಿಪಡಿಸಿದ್ದೇನೆ. ಧನ್ಯವಾದ.
ಇದೀಗ ಸರಿಯಾಯಿತು. ಇನ್ನು ಟೈಪೊ ಸರಿಪಡಿಸಿಧ
ರಾಯಿತು ಅಷ್ಟೆ!
ಗುಣವಂತ ಎಂಬುದು ಸಾಧುರೂಪ. ಇದರಂತೆಯೇ ಧನವಂತ, ಬಲವಂತ, ಯಶೋವಂತ ಇತ್ಯಾದಿ. ಅಕಾರಾಂತೇತರವಾದ ಪದಗಳು ಮಾತ್ರ ಮತ್ವವನ್ನು ಹೊಂದುತ್ತವೆ. ಉದಾ: ಶ್ರೀಮಂತ, ಧೀಮಂತ ಇತ್ಯಾದಿ. ಆದರೆ ಕನ್ನಡದಲ್ಲಿ ಎಷ್ಟೋ ಬಾರಿ ಇವೂ ವತ್ವವನ್ನೇ ತಳೆಯುತ್ತವೆ. ಉದಾ: ಸಿರಿವಂತ, ಮತಿವಂತ, ನೀತಿವಂತ ಇತ್ಯಾದಿ.
ಪೆಜತ್ತಾಯರ ಪರಿಹಾರಗಳು ನಿಜಕ್ಕೂ ತುಂಬ ಸೊಗಸಾಗಿವೆ. ಅಂತೆಯೇ ಸೋಮ, ಪ್ರಸಾದು, ಕಾಂಚನಾ ಮುಂತಾದವರ ಅನರ್ಗಳಪದ್ಯಪ್ರವಾಹವೂ ಇತ್ತೀಚೆಗೆ ಕುದುರಿಕೊಂಡ ಮುಂಗಾರು ಮಳೆಯನ್ನು ನೆನಪಿಸಿವೆ. ರಾಮ್ ಸಹ ಬಹುದಿನಗಳ ಬಳಿಕ ಪದ್ಯಪಾನಕ್ಕಾಗಿ ಚಷಕವನ್ನು(goblet) ಚಾಚಿರುವುದು ಮುದಾವಹ:-)
ಇದೀಗ ನನ್ನದೂ ಒಂದು ಪರಿಹಾರ; ಇದಕ್ಕೆ ನಿಮ್ಮೆಲ್ಲರದೇ ಪ್ರೋತ್ಸಾಹ:
ಗಣಿಸಲಿನ್ನೂ ಸೋಮವಾರಮಿಂದಾಗಳೇ
ಗಣನೆಗೆಟುಕದ ಪದ್ಯಪಾನದಾನ !
ಗುಣಗಣ್ಯಕಾವ್ಯಾಮೃತಾಬ್ಧಿಯೆದುರೆಂದಿಗಂ
ಕಣಮಲ್ತೆ ಸಾಗರದ ಸಂನಿಧಾನ ||
ಪ್ರೋತ್ಸಾಹ ದೊರೆತ ನೆಪವೊಡ್ಡಿ, ಪದ್ಯಪಾನಿಗಳಿಗೆ ಪ್ರೋತ್ಸಾಹಸಾಗರವನ್ನೇ ಕರುಣಿಸಿದ ಬಗೆ..ಚೆನ್ನಾಗಿದೆ.
DhanyavAdagaLu sir
meccuge sUsuva padyavannE pUraNavannAgisida rIti tumbA iShTavAyitu 
ಗಣಿಸುವರೆ ಗಾತ್ರಗಳ ಹಿರಿಕಿರಿಯ ಭೇದ ನಿ –
ರ್ಗುಣಿಗಳ್ಗೆ ಸಮವೆಲ್ಲವೀ ವಿಶ್ವದೊಳ್
ಅಣುಮೇಣು ಬ್ರಹ್ಮಾಂಡದಂತರವ ಕಾಣದಗೆ
ಕಣಮಲ್ತೆ ಸಾಗರನ ಸನ್ನಿಧಾನ
ಪಣತೊಟ್ಟು ಬಿಜ್ಜೆಯಂ ಕಲಿಯುತ್ತುಮನುದಿನಂ,
ತೃಣಮೆಂದು ತೊರೆಯುತ್ತೆ ಭೋಗಂಗಳಂ,|
ಮಣಿದೆಂಬೆನೀ ಜ್ಞಾನಶರಧಿಯಿದಿರೊಳ್ ಸದಾ,
ಕಣಮಲ್ತೆ ಸಾಗರನ ಸನ್ನಿಧಾನಂ ||
ಮಂಜುಭಾಷಿಣಿವೃತ್ತಕ್ಕೆ ಅಳವಡಿಸಿಕೊಂಡಿದ್ದೇನೆ:
ಸೆಣಸುತ್ತುಮಾಕ್ರಮಿಪರನ್ನು ಕಾವೆವೌ
ಹಣೆಯಿಟ್ಟು ವಂದಿಪೆವು ಭಾರತೀಕ್ಷಿತೀ|
ಭಣಿತಂ ಹಿಮಾಲಯವದುತ್ತರಕ್ಕೆ ತೆಂ-
ಕಣಮಲ್ತೆ ಸಾಗರನ ಸನ್ನಿಧಾನ ತಾಂ|
‘ಭಾರತೀಕ್ಷಿತೀ’ ಸರಿಯೆ?
ಆಹಾ! ತುಂಬ ರಚನಾತ್ಮಕವಾದ ಅಳವಡಿಕೆ. ಸಮಸ್ಯಾಪಾದದ ರೂಪಣವೂ ಪರಿಹಾರವೂ ಚೆನ್ನಾಗಿವೆ. ಭಾರತೀಕ್ಷಿತೀ ಎಂಬ ಸಂಬೋಧನರೂಪವೂ ಸಾಧು. ಸಮಸ್ಯಾಂತದಲ್ಲಿ ’ಸಂನಿಧಾನಮಯ್’ ಎಂದೋ ’ಸಂನಿಧಾನಮೌ’ ಎಂದೋ ಸರಿಸಿಕೊಂಡರೆ ಹಳಗನ್ನಡದ ಚೆಲುವು ಎದ್ದು ತೋರೀತು.
ಕೃತಜ್ಞತೆಗಳು ಸರ್.
ನಿಮ್ಮ ಈ ಮಂಜುಭಾಷಿಣೀಸಮಸ್ಯಾಪಾದವು ವೃತ್ತರಚನಾಪಕ್ಷಪಾತದ ನನ್ನನ್ನು ಸಹಜವಾಗಿಯೇ ಪೂರಣಕ್ಕೆ ತೊಡಗಿಸಿದೆ:
ಗುಣರಾಗಿಯಪ್ಪ ಸಖನೊಲ್ಮೆ ಸಂದಿದರಲ್
ಋಣಮುಕ್ತಭಾವಮೆರ್ದೆಯಲ್ಲಿ ಪೊಂಗಿರಲ್ |
ಘೃಣಿಯಸ್ತಮಾನದೆ ಕೃತಾರ್ಥರಮ್ಯಚಿ-
ಕ್ಕಣಮಲ್ತೆ ಸಾಗರನ ಸಂನಿಧಾನಮೇ ||
(ಒಳ್ಳೆಯ ಜೀವನಸಂಗಾತಿ ದಕ್ಕಿರುವಾಗ ಹಾಗೂ ಯಾವುದೇ ಹೊಣೆ-ಋಣಗಳಿಲ್ಲದ
ಬಾಳು ಸಿದ್ಧಿಸಿರುವಾಗ ಸೂರ್ಯಾಸ್ತದ ಕಾಲದಲ್ಲಿ ಕಾಣಸಿಗುವ ಸಮುದ್ರ ತುಂಬ ಸುಂದರ ಎಂದು ತಾತ್ಪರ್ಯ)
ಹೊಣೆ-ಋಣಗಳಿರದ ದಾಂಪತ್ಯದಾಯತನಕ್ಕ-
ಮಣಿಗೊಳ್ಳುತಮೆರಿಕೆಗೆ ಪೊರಟೆಯೀಗಳ್|
ಘೃಣಿಯಸ್ತವನ್ನುಮಟ್ಲಾಂಟಿಕೊಳೊ ಪೆಸಿಫಿಕೊಳೊ
ಗೆಣೆಯ/ಗಣಿಯೆ ನೋಡುವೆ ಯಾರ ಸಾಹಿತ್ಯದೊಳ್?!
’ಕಣ’ವಿಲಕ್ಷಣ ದಕ್ಷಿಣಾಂಕುರಾರ್ಪಣ ಸೊಗಂ !
ತಣಿಪ ತೆರೆನೊರೆ ಮೊರೆಯೆ, ಮರೆಯ ಮಂಥನಕೆ ಕಾ-
ರಣಮಲ್ತೆ ಸಾಗರನ ಸಂವಿಧಾನಂ ।
ಚಣಚಣವು ಲವ-ಲವಣ- ಲಾವಣ್ಯ-ಲಾಸ್ಯ ದಂ-
ಕಣಮಲ್ತೆ ಸಾಗರನ ಸನ್ನಿಧಾನಂ ।।
ಬೆಸಪಾದಗಳಲ್ಲಿ ಲಘುಬಾಹುಳ್ಯವಿದ್ದರೂ ಶ್ರವಣಕ್ಲೇಶವಿಲ್ಲ. ಗಣೇಶರು ಹೇಳಿರುವ ‘ಪದಪದ್ಧತಿ’ ಇದೇ ಇರಬೇಕು. ಪದ್ಯ ಚೆನ್ನಾಗಿದೆ. ನಿಮ್ಮ ಛಾಪು ಇದೆ.
ಬಣದೊಳುಟ್ಟಂಕಣಿಪ ಚೌಪದೋತ್ಕಣದ ಕಂ
ಕಣಮತರ್ಕಣಮೆ ಪೂರಣರಣದೊಳೇಂ
“ಪ್ರೇರಣದ ಒಕ್ಕಣೆಯೆ ಪೂರಣಕೆ ಕಾರಣವು” – ಎಲ್ಲರಿಗೂ ಧನ್ಯವಾದಗಳು.
ಒಳ್ಳೆಯ ಪದಪದ್ಧತಿಯೊಡವರಿದ ಪೂರಣ.
ಅಣುಗಳೊಂದುತ್ತೆ ನವನವಸೃಷ್ಟಿಯಾಗೆ,ಕಾ-
ರಣಮಿರಲ್ ಸೂಕ್ಷ್ಮಮೇ ಸ್ಥೂಲಕೆಂದುಂ,|
ಋಣದಿಂದೆ ಶರಧಿ ತನ್ನೊಡಲ ಪನಿಪನಿಗೆ,ಜಲ-
ಕಣಮಲ್ತೆ ಸಾಗರನ ಸನ್ನಿಧಾನಂ ||
ಜಲಕಣವನಾಗಸಕ್ಕಿತ್ತವರದಾರೆಂಬೆ
ಜಲಧಿಯೇ ತಾನಲ್ತೆಲಿನ್ನು ಋಣಮೇಂ|
ಸಲಿಲವಹುದೇಂ ಕ್ಷಾರವಿಳಿವಾಗ ಮೋಡದಿಂ
ಸಲೆ ಋಣಿಗಳಾವಲ್ತೆಲರ್ಕನಿಂಗಂ||
ತಣಿಜಗದ ಬೆಣಚಾಗಿ,ಬಿಸಿಲಾಗಿ,ಬೆಮರಿರಲ
ರುಣ,ಸೌಖ್ಯವಾತನದ ಕಾಯಲೆಂದೇ,
ಉಣಿಸೆ ತಂಪನು ದೇವ,ರವಿಗಿತ್ತ ವಿರಮದಂ
ಕಣಮಲ್ತೆ?ಸಾಗರನ ಸನ್ನಿಧಾನಂ?
ಪರ್ಸೆಪ್ಶನ್ ಚೆನ್ನಾಗಿದೆ. ಬೆಮರಲ್ಕರುಣ = ಬೆಮರಲ್ಕೆ+ಅರುಣ = ’ಬೆವರುವುದಕ್ಕೋಸ್ಕರ’ ಎಂದಾಗುತ್ತದೆ. ನೀವು ಹೇಳಚಿಚ್ಛಿಸಿರುವುದು ’ಬೆವರುತ್ತಾನಾಗಿ’ ಅಲ್ಲವೆ?
ಧನ್ಯವಾದ . ಸವರಣೆಯನ್ನು ಮಾಡಿದ್ದೇನೆ
ಋಣಮೆನುವ ಜೀವಾರ್ಥವಂ ಕಾಮದಿನೆ ಪೊಂದಿ
ಎಣೆಮೀರ್ದು ಧರ್ಮಕಾರ್ಯವನೆ ಗೈದು
ಕುಣಿದು ಕಡೆಯೊಳ್ ನದಿಯು ಕಾಂಬತೀ ಪುಣ್ಯದಂ
ಕಣಮಲ್ತೆ?ಸಾಗರನ ಸಂನಿಧಾನಂ?
ಋಣ=ನೀರು
ಎಣಿಸಲಾಗದ ತೆರೆಯನಳಿಸಲಾರದ ತರವು
ಗುಣಿಸಲಾ ಹರವ ತಾ ಮಣಿಯೆ ನರನುಂ ।
ಅಣಿಗೈದುದಾರೋಹದವರೋಧ(ಹ)ವಿದು ವಿಲ-
ಕ್ಷಣಮಲ್ತೆ ಸಾಗರನ ಸನ್ನಿಧಾನಂ ।।
ಸಮಸ್ಯಾಪಾದವನ್ನೇ ಬದಲಾಯಿಸಿಬಿಟ್ಟಿರಿ (ಷಣಮಲ್ತೆ …..)! ಪದ್ಯದ ಒಟ್ಟು ತಾತ್ಪರ್ಯವಾಯಿತು. ಆದರೆ ‘ಆರೋಹದ ಅವರೋಹ’ ಎಂದರೇನು?
“ವಿಲಕ್ಷಣ” = “ವಿಲಕ್ಕಣ” ವಾಗಬಹುದೇ ? ಇಲ್ಲದಿದ್ದಲ್ಲಿ ಪದ್ಯವನ್ನೇ ಬದಲಿಸಬೇಕಾದೀತು.
“ಆರೊಹದವರೋಧ(ಹ)” = ಸಾಗರದ ಅಲೆಗಳ ಏರಿಳಿತವನ್ನು ಸೂಚಿಸಿದ ಬಗೆ – ಸರಿಯಾಗಲಿಲ್ಲವೇ?
(“ಅಣಿಗೊಳಿಸುತಣಗಿಸಿಹ ತೆರೆತೆರೆಯಬಗೆ ವಿಲ-ಕ್ಷಣ.. ” ಎಂದು ಮೊದಲು ಬರೆದದ್ದು. ಲಘುಬಾಹುಳ್ಯ ತಪ್ಪಿಸಲು ಬದಲಿಸಿದ್ದು.)
ಉಪ್ಪಿನ ಜಾಡಿಯೇ ಸಾಗರನ ಸನ್ನಿಧಾನ …
ಎಣಿಸಿದೊಳ್ ಸಿಗದ ರುಚಿ ಗುಣಿಸಿದೊಳ್ ಬರದು ಕಡೆ
ಗಣಿಸಿದೊಳ್ ವ್ಯಂಜನಕೆ ಸವಿರುಚಿಯದಿರದು I
ಅಣಕಿಸುತ್ತಿರ್ಪಡುಗೆ ಮನೆ ಲವಣ ಷಡ್ರಸದ
ಕಣಮಲ್ತೆ ಸಾಗರನ ಸನ್ನಿಧಾನಂ II
ಉಪ್ಪು ವ್ಯಂಜನದಲ್ಲಿ ಸರಿಯಾದ ಪ್ರಮಾಣದಲ್ಲಿದ್ದಾಗ (ಎಣಿಸಿದೊಳ್-ಯೋಚಿಸಿದರೆ ) ತಿಳಿಯುವುದಿಲ್ಲ . ಜಾಸ್ತಿಯಾದಾಗ (ಗುಣಿಸಿದೊಳ್ ) ಮತ್ತು ಹಾಕಲು ಮರೆತಾಗ ಸವಿರುಚಿ ಬಾರದು. (ಆ ಸಂದರ್ಭದಲ್ಲಿ ಉಪ್ಪಿನ ಬೆಲೆ ಗುರುತಿಸಲ್ಪಡುತ್ತದೆ). ಪದ್ಯ ಪಾನದಲ್ಲಿ ಈ ಸಮಸ್ಯೆ ನೋಡಿದ ಮೇಲೆ ಅಡುಗೆ ಮನೆಯೊಳಗೆ ಉಪ್ಪಿನ ಜಾಡಿಯೇ ನನಗೊಂದು ಸಮಸ್ಯೆಯಾಗ್ತಾ ಇದೆ
ಅದಕ್ಕಾಗಿ ಈ ಪೂರಣ.
’ಪದ್ಯಪಾನದಲ್ಲಿ ಈ ಸಮಸ್ಯೆ ನೋಡಿದ ಮೇಲೆ ಅಡುಗೆ ಮನೆಯೊಳಗೆ ಉಪ್ಪಿನ ಜಾಡಿಯೇ ನನಗೊಂದು ಸಮಸ್ಯೆಯಾಗ್ತಾ ಇದೆ’ ಎಂದು ಹೇಳುವ ಮೂಲಕ, ಈ ಸಮಸ್ಯೆಯನ್ನು ಕೊಟ್ಟುದಕ್ಕಾಗಿ:
ಪಲ್ಲವ|| ಇಷ್ಟು ದಿನಗಳು ಸಹಜ ರುಚಿಯಿಂ
ಪುಷ್ಟಗೊಳ್ಳುತ್ತಿದ್ದ ಪಾಕವು|
ಕ್ಲಿಷ್ಟವಾದುದು ಇಂದೆನುತ್ತಲಿ
ದುಷ್ಟನೆಂಬಿರ ಸೋಮನಂ||
ಎಣೆಯಿಲ್ಲದೆನ್ತೊ ಭೂಖಣ್ಡಗಳ ಬಡಗು-ಪಡು
ವಣಮೆಲ್ಲಮಾವರಿಸಿ ತೆಙ್ಕು-ಮೂಡಂ|
ಮಿಣಮಿಣನೆ ಬೆಳ್ಳಿಯೊಲ್ ಪೊಳೆದಿರ್ಪ ಮಿಱುಗುಕ-
ಙ್ಕಣಮಲ್ತೆ ಸಾಗರನ ಸನ್ನಿಧಾನಂ||
ಪ್ರಣಮಿಪೆ ಪಯೋಧಿಯನ್ನಬ್ಧಿ-ಅಮ್ಬುಧಿ-ಮುತ್ತ-
ಗಣಿ-ಅರ್ಣವ-ನದೀಶ-ಉದಧಿ-ಜಲಧಿ|
ಎಣೆಯಿರದ ವಾರಿಧಿ-ಸಮುದ್ರ-ಸಿನ್ಧುವೆನುತೊ-
ಕ್ಕಣಮಲ್ತೆ ಸಾಗರನ ಸನ್ನಿಧಾನಂ||
(ಒಕ್ಕಣೆ> ಒಕ್ಕಣಂ)
ಅರೆ -ಬರೆ ಹಳೆ ಕನ್ನಡದಲ್ಲಿ ಸಾಗರನ ಸಾಮೀಪ್ಯದಲ್ಲಿ ದಂಡಿ ಯಾತ್ರೆಯ(ಉಪ್ಪಿನ ಸತ್ಯಾಗ್ರಹ ) ಬಗ್ಗೆ ಬರೆಯುಲು ಯೋಚಿಸುತ್ತಿದ್ದೆ . ಅಡುಗೆ ಮನೆಯೊಳಗೆ ಉಪ್ಪಿನ ಜಾಡಿ ” ದಂಡಿ ಯಾತ್ರೆಗೆ ಕಾರಣ ನಾನೆ . ನೀನು ದಂಡ” ಎಂದು ನನ್ನನ್ನು ಅಣಕಿಸ್ತ ಇತ್ತು
ವೃಥಾ ಏಕೆ ಉಪ್ಪನ್ನು ಬೈಯುವಿರಿ. ಅದರ ಬಗೆಗೇ ನೀವು ಲೇಖನ ಬರೆದರೆ ನಿಮ್ಮ ಉಪ್ಪಿನಋಣವನ್ನು ಎಂದೂ ನೆನೆಯುತ್ತದೆ ಅದು; ’ದಂಡ’ ಎಂದು ಬೈಯುವುದಿಲ್ಲ.
’ಉಪ್ಪಿನ ಋಣ’ಮೆಂಬರು ನಾಣ್ಣುಡಿಯೊಳು
ಸಪ್ಪೆಯ ಮಾತೇಕೆಂಬಿರಿ ನೀಂ|
ಒಪ್ಪದೆ ತನ್ನಯ ಬಗೆಗೇ ಬರೆದೊಡೆ?
ತಪ್ಪೆಣಿಸುವುದೇಂ ನಿಮ್ಮೊಳದು?|
sl.no 31 kke -ನಿಮ್ಮ ಪ್ರಶ್ನೆಗೆ ಉತ್ತರಿಸಿದ್ದೆ .ತಪ್ಪಿ ಇಲ್ಲಿ ಕ್ಲಿಕ್ಕಿಸಿದೆ . ಕ್ಷಮಿಸಿ
ನೀವು ಫೋಟೊಗ್ರಾಫರ್ ಅಲ್ಲ ತಾನೆ?
ಕ್ಲಿಕ್ಕಿಸಿದೊಡಮೆಲ್ಲೆಂದೊಡಮಲ್ಲಿಯೆ,
ಚಿಕ್ಕದು ದೋಷವು, ಮೌಸಿನೊಳು|
ಕ್ಲಿಕ್ಕಿಸಿದೊಡೆ ಕ್ಯಾಮರದೊಳಗಂತೆಯೆ
ಎಕ್ಕುಟ್ಟೋಗ್ವುದು ಚಿತ್ರವು ತಾಂ||