Jan 012018
 

ಎಲ್ಲಾ ಪದ್ಯಪಾನಿಗಳಿಗೂ ೨೦೧೮ರ ಶುಭಾಶಯಗಳು 🙂

ಈಗ ನಿಶ್ಚಯಗಳ(resolutions) ಸಮಯವಾದದ್ದರಿಂದ, ಮಾಲಿನೀ, ಸ್ರಗ್ಧರಾ, ಮಹಾಸ್ರಗ್ಧರಾ ಮುಂತಾದ ವೃತ್ತಗಳ ಪಾದಾಂತ್ಯಕ್ಕೆ ಹೊಂದುವ ಕೆಳಗಿನ ಸಾಲನ್ನು ಅಳವಡಿಸಿ ಪದ್ಯಪೂರಣವನ್ನು ಮಾಡಿರಿ

ನಿಶ್ಚಯಂಗೆಯ್ವುದಲ್ತೇ

 

  34 Responses to “ಪದ್ಯಸಪ್ತಾಹ ೨೮೮: ಪದ್ಯಪೂರಣ”

  1. ಎಚ್ಚರಾಗುತೆ ನಾವು ದೇಶಕಾಲಾಂತರದೆ
    ಹೊಚ್ಚುಕೊಳ್ಳುವ ಮನವ ನೆಚ್ಚದಂತೆ |
    ಸಚ್ಚಿದಾನಂದದಲಿ ವರ್ತಮಾನದೊಳಿರುವ
    ನಿಚ್ಚಯದ ನಿಶ್ಚಯಂಗೆಯ್ವುದಲ್ತೇ ||

    ಅರಿವು – ಇರವು – ನಲಿವು !!

  2. ಪೊತ್ತಾಗುತ್ತುಂ ಮಂಚದಿಂದೆದ್ದು ಕಾಲಂ
    ಮತ್ತಂ ವ್ಯರ್ಥಂಗೊಳ್ವವೊಲ್ ಚಿತ್ತಮೆಂತೋ
    ಸುತ್ತಾಡುತ್ತುಂ ಪೋದುದೀ ವರ್ಷಮಿಂತುಂ
    ಮತ್ತೇನಿರ್ಕುಂ ನಿಶ್ಚಯಂಗೈವುದಲ್ತೇ?!

    ಹೊತ್ತಾಗಿ ಹಾಸಿಗೆಯಿಂದೆದ್ದು ಮತ್ತೆ ಕಾಲವು ವ್ಯರ್ಥವಾಗುವಂತೆ ಚಿತ್ತ ಎತ್ತೆತ್ತಲೋ ಸುತ್ತಾಡುತ್ತ, ಈ ವರ್ಷ ಹೋಯಿತು. ಮತ್ತಿನ್ನೇನು? ಮತ್ತೆ ನಿಶ್ಚಯ ಮಾಡುವುದಲ್ಲವೇ!

  3. ರಮಮಾಣಂ ಮಾನಸಾಂತಂ ಸಹೃದಯಹೃದಯಾಂತರ್ಯಮಂ ಪೊಂದುತಾನಂ-
    ದಮನೀವಂದಂ ಸುವರ್ಣಚ್ಛವಿ ನವನಯದಿಂ ಮಿಂಚೆ ಕುಂಚಂಗೊಳುತ್ತುಂ
    ಸುಮನಾಭಂ ಗೈದ ಲೀಲಾವಿಲಸಿತಚರಿಯಂ ಚಿತ್ರಿಸಲ್ ನಟ್ಟ ಚಿತ್ತ-
    ದ್ರುಮಮೆಂತುಂ ಕೀಳದಂದಂ ಕೃತಿಯನೆಸಗಲಾಂ ನಿಶ್ಚಯಂಗೈವುದಲ್ತೇ

  4. ಪದಪಿನುಲಿಗಳಿಂದಂ ಮಾತೆ ಮತ್ತಾಗುವಂದಂ
    ಸದರದೆ ಬರಿದೇ ನೀಂ ನಿಶ್ಚಯಂಗೆಯ್ವುದಲ್ತೇ-
    ನೊದವಿದೊಡಮದಂ ತಕ್ಕಂತೆದುರ್ಗೊಂಡು ಪೂರೈ-
    ಪುದು ಪಿರಿದುರೆಕಜ್ಜಂ ಮೆಚ್ಚಿದೆಲ್ಲರ್ಗಮಕ್ಕುಂ

    ಮಾತೇ ಮದವೇರುವಂತೆ ಬರಿದೇ ಆಡಂಬರದ ನಿಶ್ಚಯ ಮಾಡುವುದಲ್ಲ. (ನಿಶ್ಚಯಂಗೈವುದಲ್ತು ಏನೊದವಿದೊಡಂ…) ಮುಂದೆ ಏನೇ ಬಂದರೂ ಅದಕ್ಕೆ ತಕ್ಕಂತೆ ಎದುರಿಸಿ ಪೂರೈಸುವುದು ಹೆಚ್ಚಿನ ಕೆಲಸ. ಇದು ಎಲ್ಲರಿಗೂ ಮೆಚ್ಚಿನದಾಗುವುದು ಕೂಡ.

  5. ಹೊಸವರುಷದಿ ಕಾರ್ಮೋಡಕ್ಕು ನಾಚೋಣವೆಂಬೋ
    ಹಸಿಹರುಷದಿ ಮಿಂದೆದ್ದಿತ್ತು ಲೋಕಾನುಮಾನಾ
    ವಸರದಿ ನೆನಪಾಯ್ತೆನ್ನೀ ವರ್ಷದಾನುಸಾರಾ
    ಗಸದ ಗುರಿಯ ಸಾಕಾರಾಗಿಸಿತ್ತೆನ್ನ ಕಾರ್ಯ

    • ಯಾವ ಛಂದಸ್ಸು?

      • ಮಾಲಿನೀ ವೃತ್ತದಲ್ಲಿ ರಚಿಸಲು ಪ್ರಯತ್ನಿಸಿದ್ದೇನೆ.

    • ಪ್ರಯತ್ನ ಚೆನ್ನಾಗಿದೆ. ಮಾಲಿನಿ ಅಲ್ಲಿ ಇಲ್ಲಿ ತಪ್ಪಿದೆ. ಯತಿಸ್ಥಾನಗಳನ್ನು ನೋಡಿಕೊಳ್ಳಿ. ಹಳಗನ್ನಡದ ಹದ ಇಲ್ಲ. ಸಂಧಿನಿಯಮಗಳನ್ನು ನೋಡಿಕೊಳ್ಳಿ.

      • ಧನ್ಯವಾದಗಳು. ನನ್ನ ಮುಂಬರುವ ಪದ್ಯಗಳಲ್ಲಿ ಈ ಎಲ್ಲಾ ಅಂಶಗಳನ್ನೂ ಗಮನಿಸುತ್ತೇನೆ.

  6. ಇಚ್ಛಾಶಕ್ತಿಜ್ಞಾನಶಕ್ತಿದ್ವಯಕ್ಕಂ
    ಸ್ವಚ್ಛಂದತ್ಯಕ್ತಕ್ರಿಯಾಶಕ್ತಿ ಸಾರಲ್
    ಸ್ವಚ್ಛಸ್ವಾಂತಂ ಲಕ್ಷ್ಯಮಂ ಕಾಣುವಂದಂ
    ತಚ್ಛೀಲಕ್ಕಂ ನಿಶ್ಚಯಂ ಗೆಯ್ವುದಲ್ತೇ

    • ತಾತ್ಪರ್ಯ?

      • ಇಚ್ಛಾಶಕ್ತಿ ಜ್ಞಾನಶಕ್ತಿಗಳಿಂದ resolution ಮಾಡಬಹುದು ಅದನ್ನು ನೆರೆವೇರಿಸುವ arbitrary ಅಲ್ಲದ ಕ್ರಿಯಾಶಕ್ತಿ ಸೇರಲು ತಿಳಿಮನವು ಲಕ್ಷ್ಯವನ್ನು ಕಾಣುವುದು ಆ ಹದದ ಪ್ರವೃತ್ತಿ ಸಿಗಲೆಂದು ನಿಶ್ಚಯಿಸುವುದು.

        • ಸೋಮರೇ, ವಿವೇಕಾನಂದರ ಜ್ಞಾನಯೋಗ ಪಾಠಗಳನ್ನು ಓದಿದಂತಾಯಿತು 🙂
          ಸ್ವಚ್ಛಂದತ್ಯಕ್ತಕ್ರಿಯಾಶಕ್ತಿ – ತ್ಯಕ್ತಸ್ವಚ್ಛಂದಕ್ರಿಯಾಶಕ್ತಿ ಎಂತಾಗಬೇಕಲ್ಲವೇ. ಸ್ವಚ್ಛಂದಂಬಿಟ್ಟ ಕ್ರಿಯಾಶಕ್ತಿ ಅಂತೇನರೆ ಮಾಡಬಹುದು. ಆದರೆ ಇಲ್ಲೂ ಯತಿಯಿಂದಾಗಿ ….ಬಿಟ್ಟ ಅಕ್ರಿಯಾಶಕ್ತಿ ಎಂದು ಭಾಸವಾಗುತ್ತದೆ. 🙂

        • ಸ್ವಚ್ಛಂದೋಹೀನಕ್ರಿಯಾಶಕ್ತಿ 🙂

        • ಹೀನ ಗೀನ ಬೇಡ. ಸಚ್ಛಾಸ್ತ್ರೋಕ್ತಂ ದಲ್ ಕ್ರಿಯಾಶಕ್ತಿ ಸಾರಲ್ 🙂

  7. ನಿಶ್ಚಯಂಗೈವುದು> ನಿಶ್ಚಯ’ವು’ ಗೈವುದು> ’ನಿಶ್ಚಯ’ವೆಂಬುದು ಏನ ಮಾಡಿದೆಯೋ ನನಗೆ ತಿಳಿಯದು, ನಾನೇನು ನಿಶ್ಚಯ’ವನ್ನು’ ಮಾಡಿದೆ ಎಂಬುದರ ಬಗೆಗೆ ಮಾತ್ರ ಹೇಳುವೆ.
    ಆರುಂಟು ಕಂಡವರು ಏನ ಗೈದಿಹುದೆಂದು
    ಘೋರವನೊ ಒಳ್ಳಿತನೊ ’ನಿಶ್ಚಯ’ವದು|
    ನೂರಾರ ನಾನು ಮಾಡಿಹೆನು ನಿಶ್ಚಯವನ್ನು
    ಆರನೋ ಏಳನೋ ಪಾಲಿಸಿರ್ಪೆಂ||

  8. ಒಳ್ಳೆಯ ವಿಷಯ. ನಿಮಗೂ ಶುಭಾಶಯಗಳು.

  9. ಮದಗಜಬಲಭೀಮಂ, ಧರ್ಮರಾಜೇಂದ್ರನುಂ ಮೇಣ್
    ಕುದಿಯುವ ಮನಮಾಗಳ್ ತನ್ನೊಳಿರ್ದುಂ, ಜಸಕ್ಕಂ
    ಬಿದಿಯೆ ಜೊತೆಯೊಳಿರ್ದುಂ ಪಾರ್ಥನಾದಂ ದಿವಾಂಧಂ
    ಬದುಕಿನೊಳತಿಕಷ್ಟಂ ನಿಶ್ಚಯಂಗೆಯ್ವುದಲ್ತೇ?

    ಬಲಯುತನಾದ ಭೀಮ,ಧರ್ಮರಾಜ,ಮನಸ್ಸಿನಲ್ಲಿ ಅತಿಯಾದ ಕೋಪ, ಯಶಸ್ಸನ್ನು ಕರುಣಿಸಲು ಸಾಕ್ಷಾತ್ ವಿಧಿಯೇ ತನ್ನ ಜತೆಗಿದ್ದರೂ ಅರ್ಜುನ ಹಗಲುಗುರುಡನಾಗಿ ವೈರಿಗಳನ್ನು ಕೊಲ್ಲಬೇಕೆಂಬ ನಿಶ್ಚಯಗೈಯಲು ಚಡಪಡಿಸಿದ.ಬದುಕಿನಲ್ಲಿ ಅತ್ಯಂತ ಕಷ್ಟವಾದ್ದು ದೃಢನಿರ್ಧಾರ ಕೈಗೊಳ್ಳುವ ಕೆಲಸ- ಅನ್ನುವ ಪ್ರಯತ್

Leave a Reply to ಸೋಮ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)