Apr 012019
 

೧. ಜಲಾಶಯ

೨. ತಿರುಪತಿಯ ಲಡ್ಡು

೩. ಸಂಜೆಯ ಬಣ್ಣ

  6 Responses to “ಪದ್ಯಸಪ್ತಾಹ ೩೫೨: ವರ್ಣನೆ”

  1. ಕಂಜರ ಕಿರಣ ತಗುಳ್ದುರೆ
    ಹಿಂಜಿದರಲೆಯೋಲ್ ನೆಗಳ್ದ ಮುಗಿಲ ವಿಚಿತ್ರಂ
    ಚಂಜೆಯೊಳೀಪರಿ ದೃಶ್ಯದೆ
    ರಂಜಿಪ “ಗಂಧರ್ವಪತ್ತನ”ವದುಂ ನಭದೊಳ್ !!

    ಮುಸ್ಸಂಜೆಯ ವೇಳೆ ಸೂರ್ಯನ ಕಿರಣಗಳು ಮೋಡಗಳ
    ಮೇಲೆ ಬಿದ್ದಾಗ ಆಗಸದಲ್ಲಿ ಚಿತ್ರ ವಿಚಿತ್ರವಾಗಿ ಕಾಣುವ ದೃಶ್ಯಗಳು –
    ( ಕ್ಷಣಮಾತ್ರದಲ್ಲಿ ತೋರಿ ಇಲ್ಲವಾಗುವ- ವಿಧವಿಧ ಬಣ್ಣಗಳಲ್ಲಿ ಕಂಗೊಳಿಸುವ ) “ಗಂಧರ್ವ ಪಟ್ಟಣ”ದಂತೆ ಕಾಣುವ ಕಲ್ಪನೆ –
    ಈ ಜಗತ್ತು ಕೂಡ ಹಾಗೆ ಅಲ್ಲವೇ?

  2. ಸಂಜೆಯ ಬಣ್ಣ:
    ಇರುಳ್ವೆಣ್ಣಿನ ನಲ್ಬರವಿಗ
    ಮರುಣಂ ಪೋಪಾಗಳೆಂತೊ ಕುಂಕುಮಜಲಮಂ
    ಪರಿಸಿದವೋಲ್ ಗಗನಪಥಂ
    ವಿರಾಜಿಸಿರ್ಕುಂ ವಿಶಿಷ್ಟರಾಗದಿನೀಗಳ್/
    ನಿಶಾವನಿತೆಯ ಸ್ವಾಗತಕ್ಕೆಂದು ಅರುಣನು ಗಗನಪಥದಲ್ಲಿ ಹೋಗುವಾಗ ಕುಂಕುಮದ ನೀರನ್ನು ಸಿಂಪಡಿಸಿದಂತೆ ಈ ಸಂಜೆಗೆಂಪು ತೋರುತ್ತಿದೆ

    ಇರುಳ್ವೆಣ್ಣಿನ ಬಾನ್ಗದಪಿದೊ
    ಬರುವಾ ನಿಜವಲ್ಲಭೇಂದುವಂ ನೆನೆನೆನೆದೀ
    ಪರಿಯಿಂ ನಾಣ್ಚುತೆ ತಾಳ್ದೀ
    ನೆರೆಗೆಂಪಿದು ಸಾಜಮಲ್ತೆ ನಾರೀಗುಣಕಂ//
    ಬರುತ್ತಿರುವ ಗಂಡನಾದ ಚಂದ್ರನನ್ನು ನೆನೆದು ನಿಶಾವನಿತೆಯ ಆಕಾಶವೆಂಬ ಕೆನ್ನೆಯು ನಾಚಿಕೆಯಿಂದ ಕೆಂಪಾದದ್ದು ನಾರಿಯರ ಗುಣಕ್ಕೆ ಸಹಜವಾದದ್ದೇ ಅಲ್ಲವೇ?

  3. When the rays of the setting sun pick up the methane emissions(ಉತ್ಸರ್ಗ)…
    ಅಸ್ತಮಿಪ ಸೂರ್ಯವದು ಸೂಸಿಹುದು ಸುಂದರ ಗ-
    ಭಸ್ತಿಯನು, ಸಾಕದುವೆ ಕಣ್ಣಿಗಂದಂ|
    ವಿಸ್ತರಿಸೆ ಛವಿಯು ಮೀಥೇನಿನುತ್ಸರ್ಗದಿಂ
    ಜಾಸ್ತಿಯಾಯ್ತಲ್ಲಮೇಂ ಸೌಂದರ್ಯವು||

  4. _*

Leave a Reply to Gurudatta K G Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)