Dec 142020
 

ವರ್ಣನೆಯ ವಸ್ತುಗಳು

೧. ಹುತ್ತವಿಲ್ಲದ ಹಾವು

೨. ಇಂದ್ರನ ಸಂಯಮ

೩. ಬೆಕ್ಕು ಇಲಿಯ ಕದನ

ಸಮಸ್ಯೆ:

ಕನ್ನಡ (ಕಂದ) –  ಧುರದೊಳ್ ಶಸ್ತ್ರಾಸ್ತಮಿಲ್ಲದೆಯೆ ಜಯಿಸಿರ್ಪಂ 

ಸಂಸ್ಕೃತ (ಇಂದ್ರವಜ್ರ) – ಶಸ್ತ್ರಾಸ್ತ್ರಹೀನೋಪಿ ರಣೇ ಜಿಗಾಯ 

  4 Responses to “ಪದ್ಯಸಪ್ತಾಹ ೪೨೬”

  1. ೧. ಹುತ್ತವಿಲ್ಲದ ಹಾವು
    (ಪಂಚಮಾತ್ರಾ ಚೌಪದಿ)
    ಛವಿಯಿಂದೆ ಕಟ್ಟಿದೊಡೆ ಗೂಡಗೆದ್ದಲವುಳುವು
    ಜವನಂತೆ ಬಂದೆರಗಿ ಕಸಿವುದೆಂದು
    ಕಿವುಡಾದೊಡಂ ಲೋಗನಿಂದೆಗಂ ಮರಗುತುಂ
    ಪವಡಿಸುವುದಯ್ ಪಾವು ತೊರೆದುಮನೆಯಂ

    ೨. ಇಂದ್ರನ ಸಂಯಮ
    (ಕಂ)ಎಡೆಯಿಲ್ಲದ ವಿಭವಂಗಳ್
    ತುಡಿಯುವ ಮನಮಿರ್ದು ದೇವಲೋಕದ ಪಟ್ಟಂ
    ತಡಿಲ್ಲತೆಗಮಾಕರಕಂ
    ಗುಡುಗದಿರೆಂಬುವೊಲೆ ವಜ್ರಿ ಸಂಯಮಮಲ್ತೆ

    ೩. ಬೆಕ್ಕು ಇಲಿಯ ಕದನ
    (ಕಂ)ಮೂಗಿಲಿಯಂ ಪೆಗ್ಗಣಮಂ
    ದೇಗುಲಮಿದರೊಳ್ ವಿಶೇಷದಿಂ ಕಾಂಬರ್ ದಲ್
    ಮೂಗಂ ಮುರಿವರ್ ಬೆಕ್ಕನೆ
    ಸಾಗುವುದಯ್ ಇಲಿಯ ಭಾಗ್ಯಮುಳಿಯುತೆ ಕದನಂ

    ಸಮಸ್ಯೆ:
    ಒರೆಗಲ್ಲೇಂ ಧೀರಂಗಂ
    ಧುರದೊಳ್ ಶಸ್ತ್ರಾಸ್ತಮಿಲ್ಲದೆಯೆ ಜಯಿಸಿರ್ಪಂ
    ಬೆರೆಸಲ್ ಸಾಮಂ ದಾನಂ
    ಸುರಿಸುತೆ ಬೇಧಂಗಳೊಟ್ಟಣಂ ಚಾಣಾಕ್ಯಂ

  2. ಹಲವಿಹವು ಹುತ್ತಗಳು ಹೂಡಿರ್ಪವದರೊಳಗೆ
    ಅಲೆವಲೆವ (ಇರುವೆ)ವಲ್ಮಿಗಳು ಸಂಸಾರವಂ|
    ಕೆಲಗಾಲದೊಳು ಹುತ್ತವನು ತೊರೆದು ಪೋಪುವವು
    ನಲವಿನಿಂದನ್ನೆಗಂ ಕಾದಿರುವೆನಾಂ||

  3. ಇಂದ್ರನ ಸಂಯಮ:
    ಪ್ರಚುರವಿರಲಾಸ್ಥಾನದೊಳು ರಂಭೆ-ಊರ್ವಶಿಯು
    ರುಚಿರಮೇನಕೆ-ಘೃತಾಚಿ-ತಿಲೋತ್ತಮೆ|
    ಲೊಚಗುಟ್ಟುತಲಿ ಕಾಲಿಡುವ ಮನೆಯೊಳಾವಗಂ
    ಶಚಿಯೊಳೇವೇಳ್ವೆ ವಾಸವಸಂಯಮಂ!!

  4. ಸಮಸ್ಯಾಪೂರಣ:

    ಅರಿಷಡ್ವರ್ಗಮನಿದಿರಿಪ
    ನರಜೀವನಮಲ್ತೆ ಘೋರಸಂಗ್ರಾಮಂ ಮೇಣ್
    ನಿರತಂ ಧ್ಯಾನನಿರತನಾ
    ಧುರದೊಳ್ ಶಸ್ತ್ರಾಸ್ತಮಿಲ್ಲದೆಯೆ ಜಯಿಸಿರ್ಪಂ ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)