Dec 222020
 

ವರ್ಣನೆಯ ವಸ್ತುಗಳು:

೧. ಸೂಚ್ಯಗ್ರ

೨. ಇರುಳ ಭೀತಿ

೩. ಅನಾಗರಿಕ ವರ್ತನೆ

ಮಂಜುಭಾಷಿಣಿಯ ಸಮಸ್ಯೆ:

ಭರತಂಗೆ ಭಾರ್ಯೆಯಲ ಸೀತೆ ಸರ್ವಥಾ

भरतस्य मैथिलसुता हि गेहिनी

  3 Responses to “ಪದ್ಯಸಪ್ತಾಹ ೪೨೭”

  1. ಸಮಸ್ಯಾಪೂರಣ
    ಮೆರುಗಿಪ್ಪ ಮಾಂಡವಿಯು ತಾನೆ ಪೆಂಡಿರೈ
    ಭರತಂಗೆ, ಭಾರ್ಯೆಯಲ ಸೀತೆ ಸರ್ವಥಾ|
    ವರರಾಮನಿಂಗೆ, ಸಲೆ ಲಕ್ಷ್ಮಣಾಂಗನಾ
    ಸಿರಿಯೂರ್ಮಿಳಾ, ಸೊಸೆಯದಾರು ಚಿಕ್ಕವಳ್?

  2. ಬಟ್ಟೆಯೂ ದಾರವೂ ಒಂದೇ ಕುಲ. ಆದರೆ ಅವೆರಡು ಬೆರೆಯದಿರುವುದು ಕೌಟುಂಬಿಕಕಲಹದೃಷ್ಟಾಂತ.

    ಬಂಧುಬಾಂಧವರೊಳಗೆ ಕಲಹವದು ಸಹಜವಲೆ
    ಸಿಂಧುವಾಗದೆಲಿರ್ಪುದವರೊಳನುಬಂಧಂ|
    ಬಂಧಿಸಲು ನೂಲ ಮೇಣ್ ವಸ್ತ್ರವನು ಬೇಕಲ್ತೆ
    ಬಂಧುರದ ಸೂಜಿಯೆಂದೆಂಬ ದಂಡಿ||

    Kittel> ಬಂಧುರ=injuring (used in the sense of punishing). ದಂಡಿ=punisher

  3. ಗಣಿಸುವರೆ ವಯಸನೇಂ ಗ್ರಾಮಸ್ಥರಿಂದಿಗುಂ
    ಧಣಿಯೇನು, ನೆರೆಯನೇನಪರಿಚಿತನೇಂ|
    ಎಣೆಯಿಲ್ಲದೆಲೆ ಕರೆವರೇಕವಚನದೊಳವರ
    ಗಣಿಸುಗೇನಿದನನಾಗರಿಕಮೆಂದು||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)