Dec 292020
 

ವರ್ಣನೆಯ ವಸ್ತುಗಳು:

೧. ಹುಣಸೆ ಮರ

೨. ಗೋಣು (ಕತ್ತು)

೩. ಭಸ್ಮ

ಸಮಸ್ಯೆ:

ಚೀನದ ರೋಗಂ ಬರಲ್ಕೆ ಬದುಕೇ ಕೆಡುಗುಂ 

चीनामय एव जीवनानि हिनस्ति

  2 Responses to “ಪದ್ಯಸಪ್ತಾಹ ೪೨೮”

  1. ಬೇನೆಗಳಾ ಪ್ರಾಚೀನದ
    ಊನಂ ಗೈದವೆ? ಸುಧಾರಿಸಿದೆವಾಮೇಗಳ್|
    ತಾನೇನೀಗಳಿದರ್ವಾ-
    ಚೀನದ ರೋಗಂ ಬರಲ್ಕೆ ಬದುಕೇ ಕೆಡುಗುಂ||

  2. ಹುಣಸೆ ಮರ
    ಎಳೆಚಿಗುರು ಪಲ್ಯಕಾದುದು, ಕಾಯಿ ತೊಕ್ಕಿಗಂ,
    ಬಳಸುವೆವು ಸಾರು-ಗೊಜ್ಜುಗಳಿಂಗೆ ಹಣ್ಣ|
    ತೊಳೆಯೆ ಶಾಟಿಯನಿದರ ತೊಗಟೆಯೊಳು ಸನ್ಯಾಸಿ
    ಬೆಳಗುವುದು ಕಾವಿಬಣ್ಣದಿನಿಂದದು||

Leave a Reply to ಹಾದಿರಂಪ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)