Jun 092013
 
ಪದ್ಯಸಪ್ತಾಹ – ೭೨ : ಸಾಮೂಹಿಕ ಪದ್ಯ ಕಥಾ ರಚನೆ

ಈ ಬಾರಿ ಸಾಮೂಹಿಕ ಕಥಾರಚನೆಯ ವಿಷಯವನ್ನು ಮಹಾಭಾರತದಿಂದ ಆಯ್ದುಕೊಳ್ಳಲಾಗಿದೆ :: “ದ್ಯೂತ ಕ್ರೀಡೆಯಲ್ಲಿ ದ್ರೌಪದಿಯ ವಸ್ತ್ರಾಪಹರಣದ ಸಂದರ್ಭ“.  ಯುಧಿಷ್ಠಿರ ದ್ರೌಪದಿಯನ್ನು ಪಣವಾಗಿರಿಸಿದಲ್ಲಿಂದ ಮೊದಲ್ಗೊಂಡು, ವಸ್ತ್ರಾಪಹರಣವನ್ನೊಳಗೊಂಡು, ಕೃಷ್ಣ ನೀಡುವ ಅಕ್ಷಯಾಂಬರದ ವರೆಗೆ ವರ್ಣಿಸೋಣ. ಪಾಂಡವರ ನಿಸ್ಸಹಾಯಕತೆ, ಶಕುನಿಯ ಕಪಟ, ಕೌರವರ ದುರಹಂಕಾರ, ದುರ್ನಡತೆ, ರಾಜಸಭೆಯಲ್ಲಿನ ಹಿರಿಯರ ನಿರ್ವೀರ್ಯತೆ, ದ್ರೌಪದಿಯ ಸಂಕಟ, ಕೃಷ್ಣನಲ್ಲಿ ತೋಡಿಕೊಳ್ಳುವ ಅಳಲು, ಕೃಷ್ಣನ ಕಾರುಣ್ಯ – ಎಲ್ಲವನ್ನೂ ತೆಗೆದುಕೊಳ್ಳಬಹುದು. ೨ ವಾರಗಳ ಕಾಲ ಈ ಸಪ್ತಾಹ ನಡೆಯಲಿ [:-)]. ಕಥೆಯನ್ನು, ವರ್ಣನೆಗಳನ್ನು, ಭಾವಗಳನ್ನು ಸವಧಾನದಿಂದ, ವಿಸ್ತಾರವಾಗಿ […]

May 282013
 

ಭಾಮಿನಿ ಷಟ್ಪದಿಯ, ಕೊನೆಯ ಸಾಲಿನ ಎರಡನೆ ಭಾಗ ಇಂತಿದೆ ::‌ ‘ಮಳೆಯು ಮುದವಾಯ್ತು‘. ಇಡಿಯ ಪದ್ಯವನ್ನು ನಿಮ್ಮ ಕಲ್ಪನೆಯಂತೆ ಪೂರಣಿಸಿರಿ.

May 192013
 
ಪದ್ಯಸಪ್ತಾಹ ೭೦ : ಚಿತ್ರಕ್ಕೆ ಪದ್ಯ

ಈ ಕೆಳಗಿನ ಚಿತ್ರದಿಂದ ನಿಮ್ಮಲ್ಲಿ ಉದ್ದೀಪನಗೊಳ್ಳುವ ಭಾವನೆಗಳಿಗೆ ಪದ್ಯಗಳ ರೂಪ ನೀಡಿ ಇಲ್ಲಿ ಪ್ರಕಟಿಸಿರಿ. ಛಂದಸ್ಸು ನಿಮ್ಮ ಆಯ್ಕೆ ಚಿತ್ರದ ಕೃಪೆ – ಅಂತರ್ಜಾಲ

May 122013
 

ಗರ,ದರ,ಸರ,ಕರ ಈ ಪದಗಳನ್ನು ಉಪಯೋಗಿಸಿ ಸಮುದ್ರ ಮಥನವನ್ನು ಕುರಿತು ನಿಮಗಿಷ್ಟವಾದ ಛಂದಸ್ಸಿನಲ್ಲಿ ಪದ್ಯ ಬರೆಯಿರಿ (ಶ್ರೀ ಕೃಷ್ಣರಾಜ ಅವರು ಶತಾವಧಾನದಲ್ಲಿ ನೀಡಿದ ದತ್ತಪದಿ)

Apr 292013
 

ಈ ಬಾರಿಯ ಸಾಮೂಹಿಕ ಕಥಾರಚನೆಯ ವಿಷಯ :: “ರಾಮ, ಲಕ್ಷ್ಮಣ ಹಾಗೂ ಸೀತೆಯರು ವನವಾಸಕ್ಕೆಂದು ಅಯೋಧ್ಯೆಯಿಂದ ತೆರಳಿದ್ದು“. ವನವಾಸಕ್ಕೆ ತೆರಳುವುದೇ ಹೌದೆಂದು ರಾಮ ನಿರ್ಧಾರ ಮಾಡಿದ್ದಾನೆ ಎಂಬಲ್ಲಿಂದ ತೆಗೆದುಕೊಂಡು, ಅಯೋಧ್ಯೆಯನ್ನು ದಾಟುವ ವರೆವಿಗು ಕಥೆಯನ್ನು ತೆಗೆದುಕೊಂಡೊಯ್ಯೋಣ. ಈ ಕಥೆಯಲ್ಲಿ, ಲಕ್ಷ್ಮಣ ಹಾಗೂ ಸೀತೆಯರು ತಾವೂ ಬರಬೇಕೆಂದು ಹಠ ಮಾಡಿದ್ದು, ಅವರನ್ನು ನಿರಾಕರಿಸುವುದಕ್ಕೆ ರಾಮ ಮಾಡಿದ ಪ್ರಯತ್ನ, ಹೋಗಬೇಡ ಎಂದು ಕೆಲವರು ದುಂಬಾಲು ಬಿದ್ದದ್ದು, ಅಯೋಧ್ಯೆಯ ಪ್ರಜೆಗಳು ಹಿಂಬಾಲಿಸಿದ್ದು, ಎಲ್ಲವನ್ನು ವಿಷಯಕ್ಕೆಂದು ತೆಗೆದುಕೊಳ್ಳಬಹುದು. ಎಂದಿನಂತೆ, ನಿಧಾನವಾಗಿ ಅನೇಕ ವರ್ಣನೆಗಳಿಗೆ […]

Apr 222013
 

ಮತ್ತೇಭ ಅಥವಾ ಶಾರ್ದೂಲ ವಿಕ್ರೀಡಿತ ಛಂದಸ್ಸುಗಳ, ಕೊನೆಯ ಸಾಲಿನ ಎರಡನೆ ಭಾಗ ಇಂತಿದೆ ::‌ ‘ಚೆಲ್ವಾಯ್ತು ಚಂದ್ರೋದಯಂ‘ ಇಡಿಯ ಪದ್ಯವನ್ನು ನಿಮ್ಮ ಕಲ್ಪನೆಯಂತೆ ಪೂರಣಿಸಿರಿ. [ಇದು ಸಮಸ್ಯಾಪೂರಣದ ಒಂದು ಪ್ರಬೇಧವೇ ಆಗಿದೆ. ಆದರೆ, ಇಲ್ಲಿ ಸಮಸ್ಯೆಯಿಲ್ಲ. ಕೇವಲ ಕಲ್ಪನೆಗೆ ಸಾಕಗುವಷ್ಟು ಸೂಚನೆಯಷ್ಟೇ ಇದೆ. ಹಾಗಾಗಿ ಅನೇಕ ವಿಧವಾದ ಕಲ್ಪನೆಗಳಿಗೆ ಅವಕಾಶವಿದೆ. ನಿಮ್ಮ ಸರ್ಜನತೆಯನ್ನು ಹುರಿದುಂಬಿಸಿರಿ ಹಾಗೂ ಪದ್ಯಾಮೃತವನ್ನು ಕುಡಿಸಿರಿ. ]

Apr 072013
 

ಸದ್ಯದ ಶತಾವಧಾನದಲ್ಲಿ ಶ್ರೀ ಬಿ. ಆರ್. ಪ್ರಭಾಕರ್ ರವರು ನೀಡಿದ ಸ್ರಗ್ವಿಣೀ ಛಂದಸ್ಸಿನ ಈ ಸಮಸ್ಯೆಗೆ ನಿಮ್ಮ ಪೂರಣಗಳನ್ನು ನೀಡಿರಿ :: ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ [ಸಾಗರವು ಆಳದಲ್ಲಿ ಮೊಳಕಾಲಿನಷ್ಟೇ ಎಂಬ ಭಾವ]

Mar 172013
 

ಎಲ್ಲರೂ ಕೂಡಿ ಸೀತಾ ಕಲ್ಯಾಣದ ಕಥೆಯನ್ನು ಬೆಳೆಸೋಣವೇ? ವಿಶ್ವಾಮಿತ್ರರು ರಾಮ ಲಕ್ಷ್ಮಣರನ್ನು ಕರೆದುಕೊಂಡು ಮಿಥಿಲೆಯೆಡೆಗೆ ಬರುತ್ತಿದ್ದಾರೆ. ಅಹಲ್ಯಾ ಪ್ರಕರಣ ಮುಗಿದಿದೆ. ಇಲ್ಲಿಂದ ಶುರುಮಾಡಿ ಸೀತಾ-ರಾಮರ ಕಲ್ಯಾಣದವರೆವಿಗೂ ಕಥೆಯನ್ನು ಬೆಳೆಸೋಣ. ನಿಧಾನವಾಗಿ ಅನೇಕ ವರ್ಣನೆಗಳಿಗೆ ಅವಕಾಶವಿಟ್ಟುಕೊಂಡು ಬರೆಯೋಣ – ಅಂದರೆ ನಾಗಲೋಟದಲ್ಲಿ ಕಥೆಯನ್ನು ಓಡಿಸುವುದು ಬೇಡ. ಯಾವ ಛಂದಸ್ಸು ಬೇಕಾದರೂ ಆಯ್ದುಕೊಳ್ಳಬಹುದು. ವರ್ಣನೆಗಳಿಗೆ ಅನೇಕ ಅವಕಾಶಗಳಿವೆ. ಉದಾರವಾಗಿ ಬಳಸಿಕೊಳ್ಳಿ. 🙂

Mar 102013
 
ಪದ್ಯಸಪ್ತಾಹ – ೬೨: ಶಿವನ ಪದ್ಯಗಳು

ಶಿವನನ್ನು ಕುರಿತು ವಿವಿಧ ಛಂದಸ್ಸುಗಳಲ್ಲಿ ಪದ್ಯಗಳನ್ನು ರಚಿಸಿರಿ. ಒಂದು ಛಂದಸ್ಸು ಈ ಸರಣಿಯಲ್ಲಿ ಆಗಲೇ ಉಪಯೋಗಿಸಲ್ಪಟ್ಟಿದ್ದರೆ, ಬೇರೊಂದು ಛಂದಸ್ಸಿನಲ್ಲಿ ರಚಿಸಿರಿ

Mar 032013
 
ಪದ್ಯಸಪ್ತಾಹ – ೬೧: ಚಿತ್ರಕ್ಕೆ ಪದ್ಯ

ನಲವಿಂ ತೋರಿಪೆ ತೆಂಗ ಚಿತ್ರವಿದೆಕೋ ತೋಯಕ್ಕೆ ಬಾಗಿರ್ಪುದಂ ಬಲದಿಂ ವರ್ಣಿಪಲಾಗುಮೇ ಪ್ರಕೃತಿಯೊಳ್ ವೈಚಿತ್ರ್ಯದೀ ಲಾಸ್ಯಮಂ ಈ ಚಿತ್ರದಿಂದ ಮೂಡುವ ನಿಮ್ಮ ಕಲ್ಪನೆಗಳಿಗೆ ಛಂದೋಬದ್ಧ ಕವಿತೆಯ ರೂಪ ನೀಡಿರಿ. ನಿಮ್ಮ ಆಯ್ಕೆಯ ಛಂದಸ್ಸು ಬಳಸಿರಿ.