Sep 112012
 

ಬಜಾಜ್(Bajaj), ಯಮಹ(Yamaha), ಕವಸಾಕಿ(kawasaki), ಕೈನೆಟಿಕ್(kinetik) ಈ ನಾಲ್ಕುಪದಗಳನ್ನು ಬಳಸಿ, ನಿಮ್ಮಾಯ್ಕೆಯ ಛ೦ದಸ್ಸಿನಲ್ಲಿ(ಆದಷ್ಟು ಮಟ್ಟಿಗೆ ವರ್ಣವೃತ್ತಗಳನ್ನು ಬಳಸಿ), ಒಬ್ಬಳುಸು೦ದರಿ ಮತ್ತೊಬ್ಬಳ ಗುಣಗಾನವನ್ನು ಮಾಡುವ ವಿಷಯವನ್ನಿಟ್ಟುಕೊ೦ಡು ಪದ್ಯ ರಚಿಸಿ.

Sep 032012
 

ಅವಧಾನ ಕಲೆಯ ಬಗೆಗಿನ ನಿಮ್ಮ ಅನಿಸಿಕೆಗಳನ್ನು ಪದ್ಯ ರೂಪದಲ್ಲಿ ವಿವರಿಸಿರಿ. ಛಂದಸ್ಸಿನ ಆಯ್ಕೆ ನಿಮ್ಮದೇ. ಎಲ್ಲರೂ ಅವಧಾನ ಕಲಾಪ್ರದರ್ಶನವನ್ನು ನೋಡಿರಬಹುದು. ಇಲ್ಲವಾದಲ್ಲಿ, ಮಾಹಿತಿಗಾಗಿ, ಇಲ್ಲಿ ನೀಡಿರುವ ವಿಡಿಯೋಗಳನ್ನು ನೋಡಿರಿ. https://www.youtube.com/watch?v=xVL_IAvuEkg https://www.youtube.com/watch?v=K6zqXpHS8j0 ಇಲ್ಲಿಯೂ ಕೂಡ ಪದ್ಯ ರಚನೆಗೆ ಕೆಲ ಸಾಮಗ್ರಿಯನ್ನು ನೀಡಲಾಗಿದೆ :: ಅವಧಾನ ಕಲೆ :: ‘ಚಿತ್ತೈಕಾಗ್ರ್ಯಮವಧಾನಂ‘ ಎಂದು ವಾಮನನು ಹೇಳಿರುವಂತೆ ಮನಸ್ಸಿನ ಏಕಾಗ್ರತೆಯೇ ಅವಧಾನ.ಸ್ಮರಣೆ, ಸದ್ಯಸ್ಸ್ಫೂರ್ತಿ, ಬುದ್ಧಿ ಮತ್ತು ಕವಿತ್ವಶಕ್ತಿಗಳಿಂದ ನಡೆಸುವ ಒಂದು ವಿದ್ವತ್ಕಲೆಯೇ ಅವಧಾನ. ಅವಧಾನಿಯು ಪೃಚ್ಛಕಪಂಡಿತರು ಒಡ್ಡುವ ಸಮಸ್ಯೆಗಳಿಗೆ ಯಥೋಚಿತವಾಗಿ, ಆಶುವಾಗಿ, ಯಾವುದೇ ಲೇಖನಸಾಮಗ್ರಿಯಿಲ್ಲದೆ, ಛಂದೋಬದ್ಧಪದ್ಯಗಳ ರೂಪದಲ್ಲಿ ಪರಿಹಾರ ನೀಡುವುದು ಈ ಕಲೆಯ ವಿಶೇಷ. ಧಾರಣ ಹಾಗು ಪೂರಣ ಅವಧಾನದ ಮೂಲಧಾತುಗಳು. ಸಮಸ್ಯೆಗಳನ್ನು ನಾಲ್ಕು ಸುತ್ತುಗಳಲ್ಲಿ ಸ್ವಾರಸ್ಯಕಾರಿಯಾಗಿ ಪರಿಹರಿಸುವುದು ಪೂರಣವಾದರೆ, ಸಮಸ್ಯೆ ಮತ್ತು ಹಿಂದಿನ ಸುತ್ತುಗಳಲ್ಲಿ ನೀಡಿರುವ ಪರಿಹಾರಪಾದಗಳನ್ನು ನೆನಪಿನಲ್ಲಿಟ್ಟು, ಮುಂದುವರಿಸುವುದು ಧಾರಣೆ. ಅವಧಾನಗಳಲ್ಲಿ ಅನೇಕ ವಿಧಗಳಿದ್ದರೂ, ಅಷ್ಟಾವಧಾನ ಮತ್ತು ಶತಾವಧಾನಗಳು ಪ್ರಚುರವಾಗಿವೆ. ಅಷ್ಟಾವಧಾನದಲ್ಲಿ, ಎಂಟು ವಿಧವಾದ ಸಮಸ್ಯೆಗಳನ್ನೂ, ಶತಾವಧಾನದಲ್ಲಿ ೧೦೦ನ್ನೂ ಏಕಕಾಲದಲ್ಲಿ ಪರಿಹರಿಸುವುದಾಗುತ್ತದೆ. ಕೊನೆಯಲ್ಲಿ, ಪೃಚ್ಛಕರ ಪರಿಹಾರಗಳೊಡನೆ ಅವಧಾನವು ಪೂರ್ಣವಾಗುತ್ತದೆ. ಅವಧಾನದ […]

Aug 262012
 

ಈವಾರಕೇನು? ಪೂರಣ ಕಾವ ಸಮಸ್ಯೆ ಯಿರದೇನು? ಎನ್ನುತ ನೋಳ್ಪಾ ನೀವಿರುವಿರೆಂದು ತಂದೆನ್ :: “ಬೇವದು ಪೂದಳೆಯೆ ಪಣ್ಣು ನಿಂಬೆಯೆ ದಿಟದೊಳ್” – ಸಮಸ್ಯಾ ಪಾದವನ್ನುಪಯೋಗಿಸಿ ಕಂದ ಪದ್ಯವನ್ನು ಪೂರೈಸಿರಿ

Aug 122012
 
ಪದ್ಯಸಪ್ತಾಹ – ೩೩ – ಕಥನ ಕವನ

ಕಥಾ ಸರಿತ್ಸಾಗರದಿಂದ ಆಯ್ದ ಕಥೆಯೊಂದು ಹೀಗೆ ಶುರುವಾಗುತ್ತದೆ. “ವತ್ಸದೇಶದ ಕೌಶಾಂಬಿಯೆಂಬ ನಗರದಲ್ಲಿ ಶತಾನೀಕನೆಂಬ ರಾಜನು ಆಳುತ್ತಿದ್ದನು. ಅವನಿಗೆ ವಿಷ್ಣುಮತಿಯೆಂಬ ರಾಣಿಯಿದ್ದಳು. ಅವಳಲ್ಲಿ ಸಹಸ್ರಾನೀಕನೆಂಬ ಮಗನು ಹುಟ್ಟಿದನು. ಶತಾನೀಕನು ಅವನಿಗೆ ಸಕಾಲದಲ್ಲಿ ಯುವರಾಜ ಪಟ್ಟ ಕಟ್ಟಿ ಹೆಸರು ಮಾತ್ರಕ್ಕೆ ರಾಜ್ಯಭಾರವನ್ನು ಹೊತ್ತಿದ್ದನು. ದೇವಾಸುರ ಯುದ್ಧದಲ್ಲಿ, ಇಂದ್ರನಿಗೆ ಸಹಾಯ ಮಾಡಲು ಹೋಗಿ, ಯುದ್ಧದಲ್ಲಿ, ಶತಾನೀಕನು ಮಡಿದನು. ಮುಂದೆ ಸಹಸ್ರಾನೀಕನು ರಾಜನಾಗಿ ಅಯೋಧ್ಯಾಧಿಪತಿಯಾದ ಕೃತವರ್ಮನ ಮಗಳು ಮೃಗಾವತಿಯನ್ನು ಮದುವೆ ಮಾಡಿಕೊಂಡನು. ಅವಳು ಗರ್ಭವತಿಯಾಗಿ ರಕ್ತದ ಕೊಳದಲ್ಲಿ ಮೀಯಬೇಕೆಂದು ಅಪೇಕ್ಷೆ ಪಟ್ಟಳು. ರಕ್ತಕ್ಕೆ […]

Jul 232012
 

“ಗುರುಪತ್ನಿಯ ಕೋರಿ  ಧನ್ಯನಾದನು ಶಿಷ್ಯನ್” ಎಂಬ ಸಾಲನ್ನುಪಯೋಗಿಸಿ ಕಂದ ಪದ್ಯದ ಉಳಿದ ಮೂರು ಸಾಲುಗಳನ್ನು ಪೊರೈಸಿರಿ. ಸಮಸ್ಯೆಯ ಭಾವ – ತೆಲಗಿನ ಶಂಕರಾಭರಣ ಬ್ಲಾಗಿನ ಕೃಪೆ

Jul 012012
 

“ತಂದೆಯನೇ ಕೊಂದು ತಿಂಬ ಸುತನತಿ ರಮ್ಯಂ” ಎಂಬುದು ಕಂದ ಪದ್ಯದ ಕೊನೆಯ (ಅಥವಾ ಎರಡನೆ) ಸಾಲು. ಪದ್ಯದ ಉಳಿದ ಸಾಲುಗಳನ್ನು ಪೂರಣಿಸಿ, ಈ ಸಾಲಿನ ಅನರ್ಥ ತೊಡೆಯಿರಿ.

Jun 242012
 

ಕಥಾಸರಿತ್ಸಾಗರದಲ್ಲಿ ಬರುವ ಈ ಕೆಳಗಿನ ಪ್ರಸಂಗವನ್ನಾಧರಿಸಿ ಪದ್ಯಗಳನ್ನು ಬರೆಯಿರಿ. ಇಲ್ಲಿರುವ ಪ್ರಸಂಗವನ್ನು ಬೇಕೆಂದಂತೆ ವಿಸ್ತರಿಸಿ. ಸಾಧ್ಯವಾದಷ್ಟೂ ವರ್ಣನೆಗಳನ್ನು ಅಳವಡಿಸಿರಿ ಕನಿಷ್ಠ ೪-೫ ಪದ್ಯಗಳನ್ನಾದರೂ ಬರೆಯಿರಿ. ಪೂರ್ತಿ ಮುಗಿಸಲಾಗದಿದ್ದರೆ, ಎಷ್ಟು ಬರೆದಿದ್ದೀರೋ, ಅಷ್ಟೇ ಹಾಕಿ ಛಂದಸ್ಸುಗಳ ಆಯ್ಕೆ ನಿಮ್ಮದೇ ! ಪ್ರಸಂಗ :: ವ್ಯಾಡಿ, ಇಂದ್ರದತ್ತ ಹಾಗು ವರರುಚಿ ಎಂಬ ಮೂವರು ಸಬ್ರಹ್ಮಚಾರಿಗಳು (ಒಂದೇ ಗುರುವಿನ ಬಳಿ ಕಲಿಯುತ್ತಿರುವವರು) ಗುರುದಕ್ಷಿಣೆಗಾಗಿ ಒಂದು ಕೋಟಿ ಹೊನ್ನು ಕೊಡುವುದು ಬರುತ್ತದೆ. ನಂದರಾಜನು ಇದನ್ನು ಕೊಟ್ಟಾನು ಎಂದು ಮೂವರೂ ಒಟ್ಟಿಗೆ ಅಲ್ಲಿ ಹೋಗುತ್ತಾರೆ. […]