ಈ ಕೆಳಗಿನ ಚಿತ್ರಕ್ಕೆ ಒಪ್ಪುವಂತಹ ಪದ್ಯಗಳನ್ನು ನಿಮಗಿಷ್ಟವಾದ ಛಂದಸ್ಸಿನಲ್ಲಿ ಬರೆಯಿರಿ ::
ಈ ಕೆಳಗಿನ ಸಾಲು ಕೊನೆಯಲ್ಲಿರುವಂತೆ ಉಳಿದ ಸಾಲುಗಳನ್ನು ಭರಿಸಿ ಸಮಸ್ಯೆಯನ್ನು ಪರಿಹರಿಸಿರಿ. ಕೆಂಡಗಳ ಮಳೆಗೆಂದು ಬಟ್ಟೆಯ ಕೊಡೆಗಳನೆ ಪಿಡಿದಿರ್ಪರಯ್! ಇದು ಮಾತ್ರಾ ಮಲ್ಲಿಕಾಮಾಲಾ ಎಂಬ ಭಾಮಿನಿಯ ಓಟದ ಮಿಶ್ರ ಲಯದ ಛಂದಸ್ಸು. ಪದ್ಯದ ಎಲ್ಲ ಸಾಲುಗಳ ಮಾತ್ರಾ ಗಣ ವ್ಯವಸ್ಥೆಯು ಇಂತಿದೆ :: ೩ + ೪ + ೩ + ೪ + ೩ + ೪ + ೩ + ೨ (ಕೊನೆಯದು ಊನ ಗಣ)
ನಿಮಗೆ ಇಷ್ಟವಾದ ಛಂದಸ್ಸಿನಲ್ಲಿ “ಚೊಚ್ಚಲ ಬಸಿರಿ“ನ (ಮೊದಲ ಬಸಿರು) ವರ್ಣನೆಯ ಪದ್ಯಗಳನ್ನು ಬರೆಯಿರಿ
ನಾನಾ, ನೀನೀ, ನುನು, ನೆನೆ ಪದಗಳನ್ನು ಬಳಸಿ, ನಿಮ್ಮಿಷ್ಟದ ಛಂದಸ್ಸಿನಲ್ಲಿ ಸಂಕ್ರಾಂತಿಯ ಬಗ್ಗೆ ಪದ್ಯ ಬರೆಯಿರಿ
೨೦೧೨ರ ಮೊದಲ ವಾರದ ಸಮಸ್ಯೆ :: ಕಂದ ಪದ್ಯದ ಸಾಲು :: ರಾಮಂ ರುಕ್ಮಿಣಿಯನೊಲ್ದು ಭರತನಿಗಿತ್ತಂ ಪದ್ಯದ ಉಳಿದ ಸಾಲುಗಳನ್ನು ಪೂರೈಸಿರಿ [ ಪದ್ಯ ಪಕ್ಷವು ಬಹಳ ಪೆಡಸಾಗಿ ಬೆಳೆದು, ಓದುಗರಿಗೆ ಕಷ್ಟವಾಗುವುದರಿಂದ, ಪ್ರತಿಯೊಂದು ವಿಭಾಗವನ್ನೂ ಬೇರೆ ಕವಲುಗಳಲ್ಲಿ ನಿಭಾಯಿಸಬೇಕೆಂದು ತೀರ್ಮಾನವಾಗಿದೆ. ಇದನ್ನು ಕೆಲ ದಿನಗಳು ಪ್ರಯತ್ನಿಸಿ ನೋಡೋಣ. ]
ಪದ್ಯ ಪಕ್ಷದ ಮುಂದಿನೀ ಕಂತಿನಲಿ ನೀವು ಹೃದ್ಯ ಕವಿತಾಪಾಕವನ್ನೆರೆವಿರ | ವಿದ್ಯಾವರೇಣ್ಯರೇ ಶಾರದೆಯ ಕಂದಗಳೆ ಮದ್ಯಪಾನಿಸಿರೋದುಗರ ಚಿತ್ತಕೆ || ಪದ್ಯಪಕ್ಷದ ರಸಿಕರಿಗೆ ಒಂದು ನಿವೇದನೆ: ಇಲ್ಲಿ ನೀಡುವ ಸಮಸ್ಯೆ, ದತ್ತಪದಿ, ಲಹರಿ, ಚಿತ್ರಕ್ಕೆ ಕವಿತೆ ಇತ್ಯಾದಿ ಅಂಶಗಲನ್ನೆಲ್ಲವನ್ನೂ ಎಲ್ಲರೂ ಪೂರೈಸಲೇಬೇಕೆಂಬ ನಿರ್ಬಂಧವಾಗಲಿ, ವ್ರತವಾಗಲಿ, ಗೆಲ್ಮೆಯ ಬಲ್ಮೆಯ ಗುರಿಯಾಗಲಿ ಇಲ್ಲ. ಆಯ್ಕೆಗೆ ಅನೇಕ ಅವಕಾಶಗಳಿರಲೆಂದು ಈ ಹೊಸ ಯತ್ನ. ದಯಮಾಡಿ ಸ್ನೇಹದಿಂದ ಸಹಕರಿಸಿರಿ, ಸಲಹೆಗಳನ್ನೂ ಸರಿಕಂಡಂತೆ ನೀಡಿರಿ. ನಿಮ್ಮ ರುಚಿಗೊಗ್ಗಿದ ಅಡುಗೆಯನ್ನು ನಾವಿತ್ತ ಸಾಮಗ್ರಿಗಳ ಪರಿಮಿತಿಯಲ್ಲಿ ಅಟ್ಟು ಸವಿಯಿರಿ, […]
೧೫ ದಿನಗಳಿಗೊಮ್ಮೆ ಒಂದು ಸರತಿಗೆ ೫ ಸಮಸ್ಯೆಗಳನ್ನು ಗೊಂಚಲಾಗಿ ಕೊಡುವುದೆಂದು ಮಾತನಾಡಿದ್ದೆವು. ಆ ಪ್ರಕಾರ, ಡಿಸೆಂಬರಿನ ಮೊದಲ ಪಕ್ಷಕ್ಕೆ ಸಮಸ್ಯೆಗಳು ಹೀಗಿವೆ ಸಮಸ್ಯಾಪೂರ್ಣ :: ಕಂದ ಪದ್ಯದ ಕೊನೆಯ ಸಾಲು ಹೀಗಿದೆ – “ಮಾಡದೆ ಮಾಡುವುದೆ ಸಜ್ಜನರ ಗುಣಮಲ್ತೇ“. ಉಳಿದ ಸಾಲುಗಳನ್ನು ಪೂರೈಸಿರಿ ದತ್ತಪದಿ :: walk, rock, lock, lake (ವಾಕ್, ರಾಕ್, ಲಾಕ್, ಲೇಕ್) – ಈ ಪದಗಳು ಸಾಲಿಗೊಂದರಂತೆ ಬರುವಂತೆ ಪಂಚಮಾತ್ರಾ ಚೌಪದಿಯಲ್ಲಿ ಸರಸ್ವತಿಯನ್ನು ಸ್ತುತಿಸಿರಿ ವರ್ಣನೆ :: ಕವಿತೆಯ ಬಗ್ಗೆ ಭಾಮಿನಿ […]
ಕನ್ನಡ ಕಾವ್ಯದ ಮುಖ್ಯ ಪ್ರಕಾರಗಳಲ್ಲೊಂದಾದ ವಚನಗಳ ಶೈಲಿಯಲ್ಲಿ ಈ ಎರಡು ಬರಹ. ಹಿನ್ನೆಲೆ: ಇತ್ತೀಚಿಗೆ ಕೇಳಿಬರುತ್ತಿರುವ “ಕನ್ನಡ ಶುದ್ಧೀಕರಣ”ದ ಕೂಗು, ಅದರ ಹಿಂದಿರುವ ಭಾಷೇತರ ದುರುದ್ದೇಶಗಳಿಂದ ನುಡಿಯ ನಿಜದ ಸೊಗಸು ಕೆಡುವುದೆಂಬ ಕಳಕಳಿ. (೧) ಕಾಗೆ ಕರುಬಿ ಮಾವಿನ ಚಿಗುರುಂಡೊಡೆ ಬಾಯಿ ಕಹಿಗೊಂಡಿತ್ತಲ್ಲದೆ ಕೋಗಿಲೆಯ ಸೊಲ್ಲು ದೊರಕೊಂಡಿತೇ ಕಾಡ ಮಂಗ ಸಿರಿಗಂಧದ ಮರಕೆ ಜೋತೊಡದರ ನಡೆ ಸಿರಿಗೊಂಡಿತೇ? ಭಾವದ ಮಿಂಚೊಡೆದ ಬೆಡಗಿಂಗೆ ಮೈಯಿಕ್ಕದೆ ಮನವೀಯದೆ ಬರಿದೇ ನುಡಿನುಡಿಯೆಂದುರೆ ಬೊಬ್ಬೆ ಹೊಯ್ದೊಡೆ ಆ ಬೊಬ್ಬೆ ನುಡಿಯೇ? ಹೊಯ್ದವ ನುಡಿಗನೇ? […]