Aug 242011
 
ಪದ್ಯರಚನೆಗೆ ಕೈಪಳಗಲು ಮತ್ತೊಂದು ಸಮಸ್ಯೆ: ಭಾಮಿನೀ ಛಂದ

“ನಿನನು ನಿನ್ನನು ನಿನ್ನ ನಿನ್ನನು ನಿನ್ನ ನಿನ್ನನ್ನು” (ಕೊನೆಯ ಸಾಲು) ಶ್ರೀಶ ರಾಮ ಸೋಮ ಕಾಂಚನೇತರರೂ ಸಹ ಮೊದಲಿಡಬಹುದು

Aug 162011
 
ಕಪಿಯ ವಿವಾಹಗೊಂಡಳುಮೆ-- ಸಮಸ್ಯೆ

ಇದೊಂದು ಅವಧಾನಪ್ರಿಯರೆಲ್ಲರಿಗೆ ತಿಳಿದಿರಬಹುದಾದ ಸಮಸ್ಯೆ. ಪೂರಿಸಲು, ಎರಡು ಛಂದೋಪ್ರಕಾರಗಳಲ್ಲೂ ಪ್ರಯತ್ನಿಸಬಹುದು. ಭಾಮಿನೀ ಷಟ್ಪದಿಯ ಕೊನೆಯಸಾಲಿನಲ್ಲಿ ಕಪಿಯ ವರಿಸಿದಳುಮೆ ತಪಃಫಲಸಾರ್ಥಹರ್ಷದಲಿ ಇದೇಸಮಸ್ಯೆ ಚಂಪಕಮಾಲಾವೃತ್ತದ ಕೊನೆಯಸಾಲಿನಲ್ಲಿ ಕಪಿಯ ವಿವಾಹಗೊಂಡಳುಮೆ ಸಾರ್ಥಕ ಪೂತ ತಪಃಪ್ರಭಾವದಿನ್

Aug 102011
 
ಸಮಸ್ಯಾಪೂರ್ಣ ೨

ಗೆಳೆಯರೇ ಇನ್ನೊಂದು ಸಮಸ್ಯೆ 🙂 ಭಾಮಿನಿ ಷಟ್ಪದಿಯ ಕೊನೆಯ ಸಾಲು ಕೊಟ್ಟಿದ್ದೇನೆ, Aug 15ರೊಳಗೆ ಪರಿಹಾರವನ್ನು(ಗಳನ್ನು) ಎದಿರು ನೋಡಬಹುದೇ? ರಾಣಿಯಗ್ನಿಯೊಳುರಿಯೆ ರಾಜನು ಮುದದಿ ಮಲಗಿದನು

Aug 082011
 
ಒಗಟು: ಯಾರಿವರು ಹೇಳಿರೈ?

ಉತ್ತರನ ತಂಗಿ ಗಂಡನ ಪಿತನು ಯುಧ್ಧದಲಿ ಕುತ್ತಿಗೆಯ ತೆಗೆದವನ ಹೆಂಡತಿಯದಾರು? || ೧ || ಮತ್ಸರದೆ ತಲೆ ಕೊಯ್ದವನ ತಂಗಿ ಮಕ್ಕಳನು ಕತ್ತಲೊಳು ಮಲಗಿರಲು ಶಿರವುರುಳಿಸಿದನಾರ್? || ೨ || ಚಿತ್ರಾಂಗದನ ನಲ್ಲೆಯರ ಗೆದ್ದ ಮಹಿಮನಾ ಮಾತೃವನು ತಲೆಯಮೇಲಿರಿಸಿದವನಾರು? || ೩ || ಕ್ಷಾತ್ರತನವನುಬಿಟ್ಟು ತೀರ್ಥಯಾತ್ರೆಯಗೈದು ಭ್ರಾತೃ ಸಂವೇದನೆಗೆ ಅಪವಾದನಾರು? || ೪ ||

Jul 272011
 
ಸಮಸ್ಯಾಪೂರ್ಣ

ಗೆಳೆಯರೇ, ಪದ್ಯಗಳನ್ನು ಹೊಸವಿಧಾನದಲ್ಲಿ ರಚಿಸೋಣವೇ ?ಸಮಸ್ಯಾಪೂರ್ಣದ ಆಟವಾಡೋಣವೇ ???ಇಗೋ ನನ್ನ ಕಡೆಯಿ೦ದ ಮೊದಲ ಸಾಲು….ಇದು ಭಾಮಿನಿ ಷಟ್ಪದಿಯ ಕೊನೆಯ ಸಾಲು….ಮೊದಲ ೫ ಸಾಲುಗಳನ್ನು ರಚಿಸಿ ನಿಮ್ಮ ಪರಿಹಾರ ತಿಳಿಸಿ….ನಾನು ಕಡೆಯಪಕ್ಷ ೨ ಪರಿಹಾರಗಳನ್ನು ಆಗಷ್ಟ್ ೭ ರ೦ದು ಪೋಸ್ಟ್ ಮಾಡುವೆ….ಸಮಸ್ಯೆ ಇ೦ತಿದೆ: “ನೀರ ತಿನ್ನಲು ಮರಣವಪ್ಪಿದ ರಾಜ ಸಭೆಯೊಳಗೇ”

Jul 252011
 
ಹಂಪೆ - ೪ [ ಪತನ ]

ರಾಯಚೂರಿನ ಯುದ್ಧದಲಿ ಇಸ –ಮಾಯಿಲನ ಸೋಲಿಸಿದ ಕೃಷ್ಣನುರಾಯ ತರಿದರಿಸಿದನಲಾ ವೈರಿಯ ಮನೋಬಲವ ||ರಾಯನಂತರದಲವನನುಜನುಅಚ್ಯುತನು ಬಲು ಲಂಪಟನು ಬಹುಸಾಯಬಡಿದನು ಕ್ರೂರತನದಿಂ ರಾಜ್ಯಧರ್ಮವನು || ೧ || ತನ್ನ ಜನರೊಡೆ ಭೇಧ ಕೆದಕುತ –ಲಿನ್ನಿತರ ಹಿರಿ ಪಥದಿ ಪಥಿಸದೆಸನ್ನಿವಾತದ ಜೊರದವೋಲವನರಿಯ ಕರೆತಂದ ||ಕನ್ನವಿಟ್ಟನು ತನ್ನ ಬೊಕ್ಕಸ –ಕಿನ್ನು ತಗೆದಿಪ್ಪತ್ತು ಲಕ್ಷದಹೊನ್ನನಿಬ್ರಾಹಿಮಗೆ ತೆತ್ತನು ಕಪಟ ಸ್ವಾರ್ಥದಲಿ || ೨ || ಮುಂದೆಯಾಳಿದ ರಾಮರಾಜನುಹೊಂದಣಿಸಿ ವೈರಿಗಳ ನಡುವೆಯೆಕುಂದುಗಳ ವೈರಿಗಳ ಭೇಧವೆ, ರಕ್ಷೆಯೆಂ ತಿಳಿದು ||ಮಂದಮತಿಯಾ ಗರ್ವದಮಲಲಿನೊಂದ ಮುಸಲರ ಮತದುಪೇಕ್ಷೆಯುತಂದಿತಾ ವೈರಿಗಳನೊಟ್ಟಿಗೆ ರಾಜ್ಯದಂತಕನಂ || […]

Jul 242011
 
ಹಂಪೆ - ೩

ರೆಕ್ಕೆ ಬಂದುದು ಹಿಂದು ಧರ್ಮಕೆ ಹಕ್ಕನಾಗಿರೆ ಮೊದಲ ರಾಜನು ಬುಕ್ಕ ಕಂಪರು ಬೆನ್ನಿನನುಜರು ಸೊಂಟಕಟ್ಟಿರಲು || ಉಕ್ಕಿಸುತಲುತ್ಸಾಹವಿವರಲಿ ರೊಕ್ಕವನು ಹೊಂದಿಸುತ ರಾಜ್ಯದ ಟೆಕ್ಕೆಯನು ಹಾರಿಸಲು ಮಾಧವ ಸಾಯನರ ದೀಕ್ಷೆ || ೧ || ಪರುಠವಣೆಯ ಭರಾಟೆ ಸಾಗುತೆ ಹರಡಿದವು ರಾಜ್ಯಾಂಗ ಗಡಿಗಳ – ವರಿಗಳಾ ಮಟ್ಟಣಿಸಿ ಜಯದಿಂ ರಾಜ್ಯ ಬೆಳೆದೊರೆದು || ವರುಷವೆರಡೂವರೆಶತಂಗಳ ವರೆಗು ಮೆರುಗಿದ ವಿಜಯನಗರವ ಸಿರಿಯ ಸಂಗಮ, ಸಾಳುವರು, ತುಳುರಾಯರಾಳಿದರು || ೨ || ವಿಜಯನಗರದ ರಾಜಕುಲ ಸಾ – ಮಜನು ಕೃಷ್ಣs ದೇವರಾಯನು […]

Jul 232011
 
क्षुत्क्षामोपि जराकृशोपि शिथिलप्रायोपि... ಕನ್ನಡದಲ್ಲಿ

ಆದಿಪ್ರಾಸವಿರದ ವಾರ್ಧಕ ಷಟ್ಪದಿ ಕ್ಷಾಮವತಿಯದೊಡೇನ್? ರೋಗದಿಂ ಕೃಶನಾಗೆಶಿಥಿಲಪ್ರಾಯವು ಬಡಿದು ಹತ್ತಾರು ಕಷ್ಟಗಳ –ನಿಂದ ಬುಧ್ಧಿಯು ಸಮತೆ ಕಳೆಚಿರಲು ದೇಹದಿಂ ಪ್ರಾಣಜಾರುತಲಿರ್ದೊಡೇನ್?ಮದಗಜಗಳಧಿಪನಲಿ ನೆತ್ತಿ ಸೀಳುತ ಕವಳಸವೆಯ ಬಯಸುವವೊಂದೆ ಮನದಾಸೆ ಹೊಂದಿರ್ಪಮಹನೀಯಮಾನಿಗಳ ಮೊದಲಿಗನು ಕೆಸರಿಯು ಜೀರ್ಣಿಪನೆ ಹುಲ್ಲ ತಿಂದು?

Jul 182011
 
ಹುಣ್ಣಿಮೆ ಚಂದ್ರನ ಬಗ್ಗೆ

ಕಳೆಯೆ ರಾಜ್ಯವು ಯುದ್ಧದಲಿ ತಾ ಬೆಳಕು ಸೋಲಲಿ ಕುಂದಿರಲ್ ಬೆಳಕನಾವರಿಸುತಲಿ ಸೀಮೆಯ ಪಹರೆ ನಡೆಸಿತೆ ಕತ್ತಲೆ? ಇಳೆಗೆ ಕವಚಿತೆಯಿರುಳ ಬಾಣಲೆ ಹಗಲು ಸೋರಿತೆ ರಂಧ್ರದೋಳ್? ಛಳಿಗೆಯೊಳಸರೆಸುತಲಿ ಹೊರಮೈ ಬೆಳಕು ಕುಗ್ಗಿತೆ ವೃತ್ತದೋಳ್? ಇರುಳ ರಾಣಿಗೆ ದೃಷ್ಟಿ ಬೊಟ್ಟೆನೆ ಚಂದ್ರನಿರುವನೆ ನಭದೊಳು? ತಿರುಳಿನೊಳು ಪರಬಮ್ಮನಿರುವೆನೆ ತಮದ ದೆಹಾವೃತದೊಲು?

Jul 152011
 
ಹಂಪೆ - ೨

ವಾಲಿ ಸುಗ್ರೀವಾದಿ ವಾನರಪಾಲಕರ ಕಿಷ್ಕಿಂಧೆ ನಾಡಿದುಬಾಲಕನು ಹುಟ್ಟಿದ್ದುದಂಜನದೇವಿಗಿಲ್ಲೆಂದು ||ವಾಲಿಯಾ ಭಯದಿಂದ ತಮ್ಮನುಕಾಲ ಕಳೆದನು ಬಂಟರೊಡನೆಂಪೇಳುವರು ಹೊಂಚಿದ್ದುದನು ಮಾತಂಗ ಪರ್ವತದಿ || ೧ || ನದಿಯು ಪಂಪೆಯು, ತುಂಗಭದ್ರೆಯೆಯದರ ಬಳಿಯಲೆ ಋಷ್ಯಮೂಕವ –ದೆದುರು ಆನೆಯಗುಂದಿಯೆಡೆ ಪಂಪಾಸರೋವರವು ||ಕದಿದು ರಾವಣನೊಯ್ಯೆ ಸೀತೆಯುವೊದಗಿದಾಗೊಗೆದಿದ್ದ ತೊಡವ –ನ್ನದನು ಬಿದ್ದಾ ಕಾಯ್ದ ತಾಣವನಿಲ್ಲೆ ತೋರುವರು || ೨ || ಕೊಂದು ವಾಲಿಯ ರಾಮಚಂದ್ರನುತಂದು ಸುಗ್ರೀವನನು ರಾಜನನಂದು ಮಾಡಿಸಿ ನುಳಿದ ಬೆಟ್ಟದಿ ಮಾಲ್ಯವಂತದಲಿ ||ಹಿಂದೆ ರಾಮಾಯಣದಲಾ ಕಿ –ಷ್ಕಿಂಧೆ ಕಾಂಡದ ತಾಣಗಳನಾವಿಂದು ಕಂಡರೆ ಮೂಢರಾ ನಂಬಿಕೆಗಳೋ […]

Jul 082011
 
ಹಂಪೆ - ೧

ಲಿಂಗ ಪಂಪಾಪತಿಯದಾಲಯ ತುಂಗಭದ್ರೆಯ ಬಲದ ತಟದಲಿ ಭಂಗಗೊಂಡಿಹ ಹಂಪೆಯೂರಲಿ ಕಂಡು ನಿಂದಿಹುದು || ಸಿಂಗ ಸಂಗಮ ರಾಯರಾಳಿದ ಸಾಂಗ ವಿಜಯದ ನಗರ ಮೆರುಗಿದ ಜಂಘ ಕಡಿದಾ, ಶೌರ್ಯ ನೀಗಿದ ಪಾಳು ಸಾಕ್ಷಿಯಲಿ || ೧ || ಎತ್ತ ನೋಡಿದರತ್ತ ಗುಡಿಗಳ ಕೆತ್ತನೆಯು ಮುಕ್ಕಾದ ನೋಟವೆ ಸತ್ತ ನಗರದ ಶೋಭೆಯಿಂದಿಗು ಮುದವ ತರಲಹುದೇ? || ಎತ್ತ ಮಹಿಷರ ಭವ್ಯದರಮನೆ ? ಮತ್ತೆ ಅಂದಿನ ಸಿರಿತನಾದಿಗ – ಳೆತ್ತಣಿನ ಕಲ್ಮಣ್ಣು ಪೇಳವೆ ಗತದ ನಲ್ಗತೆಯಾ? || ೨ || ಕತ್ತಲಿನ […]