Oct 192014
 

ನರಕಚತುರ್ದಶಿ, ಅಮಾವಾಸ್ಯೆಯ ಲಕ್ಷ್ಮೀ ಪೂಜೆ, ಬಲಿಪಾಡ್ಯಮಿ, ಪಟಾಕಿಗಳು, ದೀಪದಸಾಲಿನ ಅಲಂಕಾರ, ಆಕಾಶದಬುಟ್ಟಿ, ಸಿಹಿತಿಂಡಿಗಳು ಹೀಗೆ ದೀಪಾವಳಿಯ ಮೆರಗು ಒಂದೇ ಎರಡೇ… ಈ ಅದ್ಭುತವಾದ ಹಬ್ಬವನ್ನು ಕುರಿತು ಕನ್ನಡ ಅಥವಾ ಸಂಸ್ಕೃತದಲ್ಲಿ ಕನಿಷ್ಠ ಐದು ಪದ್ಯಗಳನ್ನು ಸಾಲಂಕೃತವಾಗಿ ರಚಿಸಿರಿ.

ವಿ. ಸೂ: ಐದು ಪದ್ಯಗಳಿಗಿಂತ ಒಂದೆರಡು ಕಡಿಮೆಯಾದರೂ ಅಡ್ಡಿಯಿಲ್ಲ ನಮ್ಮೊಡನೆ ಪದ್ಯದ ಸಿಹಿಯನ್ನು ಹಂಚಿಕೊಳ್ಳಿರಿ 🙂

Mar 102013
 

ಶಿವನನ್ನು ಕುರಿತು ವಿವಿಧ ಛಂದಸ್ಸುಗಳಲ್ಲಿ ಪದ್ಯಗಳನ್ನು ರಚಿಸಿರಿ. ಒಂದು ಛಂದಸ್ಸು ಈ ಸರಣಿಯಲ್ಲಿ ಆಗಲೇ ಉಪಯೋಗಿಸಲ್ಪಟ್ಟಿದ್ದರೆ, ಬೇರೊಂದು ಛಂದಸ್ಸಿನಲ್ಲಿ ರಚಿಸಿರಿ

ಶಿವ ಪಾರ್ವತಿ

ಶಿವ ಪಾರ್ವತಿ

Dec 312012
 

ಸ್ನೇಹಿತರೆ,

ಕಳೆದ ವರ್ಷವನ್ನು ಕಳುಹಿಸಿ ಕೊಟ್ಟು, ಹೊಸ ವರ್ಷವನ್ನು ಪದ್ಯಗಳಿಂದ ಸ್ವಾಗತಿಸೋಣವೇ?

ಹೊಸ ವರ್ಷದ ಬಗೆಗಿನ ನಿಮ್ಮ ಭಾವನೆಗಳಿಗೆ ಛಂದೋಬದ್ಧ ಪದ್ಯಗಳ ರೂಪ ನೀಡಿರಿ

Nov 242012
 

ಪದ್ಯಪಾನದಲ್ಲಿ ಪುಷ್ಪೋತ್ಸವ! ನಿಮಗಿಷ್ಟವಾದ ಹೂವಿನ ಬಗೆಗೆ ಪದ್ಯವನ್ನು ನಿಮಗಿಷ್ಟವಾದ ಛಂದಸ್ಸಿನಲ್ಲಿ ರಚಿಸಿ.

 

ಪದ್ಯನಿದರ್ಶನಂ – ೪:
ಪಂಪನ ಆದಿಪುರಾಣದಿಂದ (ಚಂಪಕಮಾಲೆ):
ಎಸೞ್ಗಳನೆಯ್ದೆ ಕಂಡರಿಸಿ ಮುತ್ತಿನೊಳಲ್ಲಿ ಸುವರ್ಣಚೂರ್ಣಮಂ
ಪಸರಿಸಿ ಕೇಸರಾಕೃತಿಯೊಳಲ್ಲಿಗೆ ಕರ್ಣಿಕೆಯಂದಮಾಗೆ ಕೀ
ಲಿಸಿ ಪೊಸತಪ್ಪ ಮಾಣಿಕದ ನುಣ್ಬರಲಂ ಮಧು ಮನ್ಮಥಂಗೆ ಬ
ಣ್ಣಿಸಿ ಸಮೆದಂತೆ ತೋಱುವುದು ಪೂಗಳೊಳೇಂ ಸುರಹೊನ್ನೆ ಚೆನ್ನಮೋ
[ಉಚ್ಛಾರದಲ್ಲಿ ೞ್ ಳ್ ಗೂ, ಱ್ ರ್ ಗೂ ಸಮೀಪ.]
ಎಯ್ದೆ = ಚೆನ್ನಾಗಿ, ವಿಶೇಷವಾಗಿ. ಕರ್ಣಿಕೆ = ಹೂವೊಂದರ ನಟ್ಟನಡುವಿನ ಭಾಗ. ನುಣ್ಬರಲಂ = ನುಣ್ + ಪರಲಂ, ಪರಲಂ = ನುಣ್ಣಗಿರುವ ಚೂರು
ಎಸೞ್ಗಳ = ಶಿಥಿಲದ್ವಿತ್ವವಿರುವುದರಿಂದ, ಇಲ್ಲಿ ಎಲ್ಲವೂ ಲಘುವೇ ಆಗಿರುತ್ತವೆ. ಚಿತ್ರ ಇಲ್ಲಿದೆ.

 

ಶತಾವಧಾನಸಂಭ್ರಮಂ:
ಇನ್ನುಂದು ವಾರದಲ್ಲಿ ಶತಾವಧಾನಾರಂಭ. ವಿವರಗಳು ಇಲ್ಲಿವೆ.