ಕುಮಾರವ್ಯಾಸನ ಈ ಪದ್ಯದ ವಿಡಂಬನ (parody) ಮಾಡಿರಿ. ಛಂದಸ್ಸು ನಿಮ್ಮ ಆಯ್ಕೆಯದು. ಹಲಗೆಬಳಪವ ಪಿಡಿಯದೊಂದ ಗ್ಗಳಿಕೆ ಪದವಿಟ್ಟಳುಪದೊಂದ ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ| ಬಳಸಿಬರೆಯಲು ಕಂಠಪತ್ರದ ವುಲುಹುಗೆಡದಗ್ಗಳಿಕೆಯೆಂಬೀ ಬಲುಹು ಗದುಗಿನ ವೀರನಾರಾಯಣನ ಕಿಂಕರಗೆ|| This is what I got when I looked up ‘PARODY’ in Monier Williams dictionary: पशुगायत्री A parody of the sacred गायत्री whispered into the ear of a sacrificial animal:पशु-पाशाय विद्महे शिरश्-छेदाय धीमहि तन् […]
ಈ ಸಮಸ್ಯೆಯ ಉಳಿದ ಸಾಲುಗಳನ್ನು ಒದಗಿಸಿ ಸಮಸ್ಯೆಯನ್ನು ಪರಿಹರಿಸಿ ಸಂಸ್ಕೃತದಲ್ಲಿ दश भवन्ति मनोभवसायकाः (द्रुतविलम्बिता) ಕನ್ನಡದಲ್ಲಿ ಪೂರಣ ಮಾಡಬಯಸುವವರಿಗೆ ಮನಸಿಜನ ಬಳಿ ಹತ್ತುಬಾಣಗಳಿರುವುದೇ ನಿಜವೈ ಅಥವಾ ಮನ್ಮಥನ ಬಳಿ ಹತ್ತುಬಾಣಗಳಿರುವುದೇ ನಿಜವೈ (ಭಾಮಿನೀ ಷಟ್ಪದಿ)
Dagger (ಡಾಗರ್/ಡ್ಯಾಗರ್), Gun, Long, Acid (ಆಸಿಡ್) – ಈ ಪದಗಳನ್ನು ಬಳಸಿ ಸತ್ಯಭಾಮೆಯ ಸೆಡವಿಗೆ ಕಾರಣವನ್ನು ಹೇಳಬೇಕು – 19.01.2013ರಂದು ಬೆಂಗಳೂರಿನ ಕೃಷಿವಿಶ್ವವಿದ್ಯಾಲಯದಲ್ಲಿ ನಡೆದ ಶ್ರೀ ರಾ. ಗಣೇಶರ ಅಷ್ಟಾವಧಾನದಲ್ಲಿ ನಾನು ಕೊಟ್ಟ ದತ್ತಪದಿ ಇದು. ಅಂದು ಅವಧಾನಿಗಳ ಪರಿಹಾರ ಇಂತಿತ್ತು: ಕೊಂಡಾಗರ್ಭ ರವಿಪ್ರಸಾದವಿಭವಪ್ರಖ್ಯಾತಿಯಂ ಪ್ರೀತಿಯಂ ತೊಂಡಾಗಲ್ ತ್ರಿಜಗನ್ಮನೋಹರವಪುಸ್ಸಂಹಾರದಿಂ ಭಾರದಿಂ| ಪಾಂಡಿತ್ಯಂ ಕುಲನಾರಿಯಾ ಕಲಹದೊಳ್ ಕಾಲಾಂಗುಲೀತರ್ಜಿತಳ್ ಚಂಡಾಲಿಪ್ರತಿಮಾನಳಾ ಸಿಡುಕಿಗಂ ಶ್ರೀಕೃಷ್ಣನೇ ಕಾರಣಂ||
ಎಲ್ಲ ಪದ್ಯಪಾನಿಗಳಿಗೆ ನಮಸ್ಕಾರ. ಈ ವೇದಿಕೆಯಲ್ಲಿ ಹಲವು ಹತ್ತು ಬಾರಿ ಅರಿಸಮಾಸ, ಶಿಥಿಲದ್ವಿತ್ವ, ಹಳಗನ್ನಡ/ನಡುಗನ್ನಡವ್ಯಾಕರಣಶುದ್ಧತೆ ಇತ್ಯಾದಿ ವಿಚಾರಗಳು ಚರ್ಚೆಗೆ ಬರುತ್ತಿವೆ ಮತ್ತು ಎಲ್ಲವೂ ತುಂಬ ಆರೋಗ್ಯಕರವಾದ ನಿರಭಿನಿವಿಷ್ಟವೂ ಆದ ಅಧ್ಯಯನ ಮತ್ತು ಜಿಜ್ಞಾಸೆಗಳಿಂದ ಕೂಡಿದ್ದು, ಪರಸ್ಪರ ಕೊಡುಕೊಳ್ಳುವಿಕೆಯ ಮೈತ್ರೀಭಾವದಿಂದಲೇ ಸಾಗಿವೆ. ಈ ಸೌಖ್ಯ-ಸಂತೋಷಗಳಿಗಾಗಿ ಎಲ್ಲ ಗೆಳೆಯರಿಗೂ ಧನ್ಯವಾದ. ಆದರೆ ಕೆಲವೊಮ್ಮೆ ಹಳೆಯ ಚರ್ಚೆಗಳೇ ಮರುಕಳಿಸುವಾಗ ಒಂದುಮಟ್ಟದ ಸ್ಪಷ್ಟೀಕರಣವನ್ನು ನೀಡುವುದು ಹಾಗೂ ಪದ್ಯಪಾನದ ಸಾಮಾನ್ಯರೀತಿಯ ನಿಲವನ್ನು ನಿವೇದಿಸುವುದು ಯುಕ್ತವೆಂದು ತೋರಿ ಈ ವಿವರಣೆ: ಎಲ್ಲರೂ ಬಲ್ಲಂತೆ ಪದ್ಯಪಾನವು ಅಭಿಜಾತಪದ್ಯರಚನೆಯನ್ನೂ […]
ಈ ಬರುವ ವಾರದಲ್ಲಿ ಕುಮಾರವ್ಯಾಸ ಜಯಂತಿ. ಆ ನಿಟ್ಟಿನಲ್ಲಿ “ನಾರಣ”(ನಾರಣಾ ಎಂದರೂ ಆದೀತು) ಎಂದು ಪ್ರತಿಪಾದದ ಮೊದಲಲ್ಲಿಯು ಇಟ್ಟು (ಯಮಕಾಲಂಕಾರ) ನಿಮಗಿಷ್ಟವಾದ ಛಂದಸ್ಸಿನಲ್ಲಿ ಪದ್ಯ ಬರೆಯಿರಿ. ಈ ಪದ್ಯವು ಕುಮಾರವ್ಯಾಸನಬಗ್ಗೆಯೊ ಅಥವಾ ಅವನಿಗೆ ಸಂಬಂಧ ಪಟ್ಟ ಯಾವುದೋ ವಿಷಯದ ಬಗ್ಗೆಯೊ ಇದ್ದಲ್ಲಿ ಒಳಿತು.
ಮತ್ತೇಭ ವಿಕ್ರೀಡಿತ ಛಂದಸ್ಸಿನ ಈ ಸಮಸ್ಯಾಪಾದವನ್ನು ಪದ್ಯದ ಉಳಿದ ಪಾದಗಳನ್ನು ಪೂರೈಸಿ ಪರಿಹರಿಸಿರಿ :: ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ? ಇರ್ವರೇ?
ಈಮೇಲ್, ಚಾಟ್, ಗ್ರಾಮ್, ಫೋನ್(ಅಥವಾ ಪೋನ್) ಈ ಪದಗಳನ್ನು ಉಪಯೋಗಿಸಿ ವಕ್ರಮಾರ್ಗದ ರಾಜಕಾರಣಿಯು ಉದಯೋನ್ಮುಖ ರಾಜಕಾರಣಿಗೆ ಕೊಡುವ ಕಿವಿಮಾತನ್ನು ನಿಮಗಿಷ್ಟವಾದ ಛಂದಸ್ಸಿನಲ್ಲಿ ವಿವರಿಸಿ. (ರಾಘವೇಂದ್ರ ಹೆಬ್ಬಳಲು ಅವರು ಶತಾವಧಾನದಲ್ಲಿ ನೀಡಿದ ದತ್ತಪದಿ)
ಸ್ನೇಹಿತರೆ, ಕಳೆದ ವರ್ಷವನ್ನು ಕಳುಹಿಸಿ ಕೊಟ್ಟು, ಹೊಸ ವರ್ಷವನ್ನು ಪದ್ಯಗಳಿಂದ ಸ್ವಾಗತಿಸೋಣವೇ? ಹೊಸ ವರ್ಷದ ಬಗೆಗಿನ ನಿಮ್ಮ ಭಾವನೆಗಳಿಗೆ ಛಂದೋಬದ್ಧ ಪದ್ಯಗಳ ರೂಪ ನೀಡಿರಿ
‘ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ’ ಎಂಬ ಕಂದ ಪದ್ಯದ ಸಾಲಿಗೆ ಉಳಿದ ಸಾಲುಗಳನ್ನು ಕೂಡಿಸಿ ಪದ್ಯಗಳನ್ನು ರಚಿಸಿರಿ.