Jul 022011
 
ಹಂಪೆಗೆ ಪಯಣ

ತಂಪು ದೇಶದಲೆಲ್ಲ ಹರಡಿರೆಹಂಪೆಯತ್ತೆಡೆ ಪಯಣ ಹೊರಡೆನೆಗುಂಪುಗೂಡಿತು ತುಂಬು ಹರುಷದಿ ಸಾನುರಾಗದಲಿ ||ಪೆಂಪ ನಾಡಿನ ಕೆಂಪ ಸೆರೆಯೋಸೊಂಪು ರಾಷ್ಟ್ರದ ಕಂಪ ನೆನಪೋಕಂಪನವೊ ಸಮಹೃದಯರಲಿ ಗೆಳೆತನದ ಸೆಳೆತಗಳೋ || [ಇನ್ನೂ ಸೇರಿಸುವರಿದ್ದರೆ ಒಳ್ಳೆಯದು] – ರಾಮಚಂದ್ರ

Jul 012011
 
ಧನುರ್ಭಂಗ

ಧನುರ್ಭಂಗ ಅದು ಮಹಾಸಭೆ – ಸೀತಾ ಸ್ವಯಂವರಾರ್ಥ ಅಲ್ಲಿಸೇರಿಹರ್ – ಫಳಫಳಹೊಳೆವ ಭೂಷ ಣಂಗಳ ಖಂಡಖಂಡಾತರದ ದೊರೆಗಳು ಶಿವಧನುರ್ಭಂಗಕ್ಕೆ ಆಗಮಿಸಿದವರು ಸಾಲುಗಳನ್ನು ತಿದ್ದಿಮಹಿಪಾಲರು ಸ್ವರ್ಣಸುಪೀಠವೇರಿರಲ್ ಸೇರಿದವೆಲ್ಲ ದೃಷ್ಟಿ ನಯನಂಗಳ ಶೋಭಿಪ ದೊಡ್ಡಬಿಲ್ಗೆ, ಶೃಂ ಗಾರ ಮಧೂಕಮಾಲಿಕೆಯು ಕೈಲಿರೆ ಜಾನಕಿಯನ್ನು ನೋಡಿ ಬಾ ಯೂರಿತು ಕಂಡಭೂಪರಿಗೆ ತಂದೆಯ ಪಕ್ಕಕುಮಾರಿ ನಿಂತಿರಲ್ ಆಕೆಯ ಕಣ್ಗಳಲ್ಲಿ ನೆರೆಸೂಸುವುದುಜ್ವಲ ದಿವ್ಯದೀಪ್ತಿ ಮು- ಲ್ಲೋಕಗಳಾಳ್ವ ರಾಜಸವು ತಾನೊದಗಲ್ – ರಘುರಾಮಮೂರ್ತಿ ತಾ ನಾಕೃತಿಗೊಂಡ ವೀರರಸದಂತೆ ಮುನೀಂದ್ರನ ಹಿಂದೆ ನಿಂತ ನಾ ಜೂಕಿನ ಭಂಗಿಯಲ್ಲಿ ಸಹಜಾತನ […]

Jun 142011
 
ಕಗ್ಗದ ಶೈಲಿಯಲ್ಲಿ ದಂಪತಿಗಳಿಗೊಂದು ಕಿವಿಮಾತು

5 5 5 5 5 5 5 3 5 5 5 5 5 5 5 1 ಘಂಟೆಗಳ ಮುಳ್ಳೊಂದು ನಿಮಿಷಗಳಿಗೊಂದು, ನಾ ಭಂಟ ಕ್ಷಣಕೆನೆವೊಂದು ದುಡಿಯೆ, ಅನ್ಯೋನ್ಯನಂಟಿನರಿವಲಿ ಸಮಯಸೂಚಿತಾ ಸಾಗುವೆನೆಜಂಟಿ ದಾಂಪತ್ಯವನುಸರಿಸು ಜಾಣ(ಣೆ) |೧| ಬೇರೊಂದರಿಂದಹುದೆ ಕಾಂಡವಷ್ಟೆಯೆ ಸಾಕೆ ನೀರ ಹೀರುವ ಬೇರೆ ಸಸ್ಯಕಾಧಾರ ಸಾರದೂಟವು ಎಲೆಗಳಿನ್ದೆಂಬ ತೆರೆದಿ ಸಂ- ಸಾರ ಕೆಲಸದಿ ಮೇಲು-ಕೀಳೆಮ್ಬುದಿಲ್ಲ |೨| ಆಗಸದಿ ಧಗಧಗಸೆ ಸೂರ್ಯ ಭೂಮಿಗೆ ಬೆಳಕು ಸಾಗರದಿ ಮುಳುಗೆ ರವಿ ಚಂದಿರನೆ ಗತಿಯು ಸಾಗುವುದು […]

Jun 122011
 
ಪೂರ್ವಾರ್ಧ ಮತ್ತು ಉತ್ತರಾರ್ದಧ ಸಾಲುಗಳಲ್ಲಿ allitration ಪ್ರಯತ್ನ ಮಾಡಿದ್ದೇನೆ ಭಾಮಿನಿಯಲ್ಲಿ

ಬಾಬಾ ರಾಮದೇವ ಇಂದು ಸರ್ಕಾರ ಅವರ ಬೇಡಿಕೆಗಳನ್ನ ಈಡೇರಿಸದಿದ್ದರು ಉಪವಾಸ ಮುಗಿಸಬೇಕಾಯ್ತು, ಆದರೆ ಬಾಬಾ ರಾಮ್ದೇವ್ ಅವರ ಪ್ರಯತ್ನ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸಿದೆ… ಇದರ ಹಿನ್ನೆಲೆಯಲ್ಲಿ ಒಂದು ಪದ್ಯ. ಸಾವಿರದ (1000) ಜನ ಶಾಂತ ಧರಣಿಯ ಕೋವಿಧರದಳವಟ್ಟಿ ಚೆದುರಿಸೆ ‘ಬಾವಿ’ ಜಲಿಯಾವಾಲಭಾಗಿನ ನೆನಪು ಹಸಿರಾಯ್ತು ಸಾವಿರದ (ಸಾವು ಇರದ) ಚಳುವಳಿಗೆ ಕಿಚ್ಚನು ಕೋವಿದರ ಸಮ್ಮತಿಯ ಬಲದಲಿ ಭಾವಿಯಾಡಳಿತವನು ತಿದ್ದಲು ನಾಂದಿಯೀ ಘಟನೆ

Jun 092011
 
ಚಂದಿರ

ಸುನೀತಾ ಅವರ ಪರವಾಗಿ ಇಲ್ಲಿ ಹಾಕಿದ್ದೇನೆ ಚಂದಿರ ನಿನ್ನಯ ಚೆಲುವನು ಬಣ್ಣಿಸೆ ಪದಗಳು ಎನಗಿಲ್ಲನಿನ್ನಯ ಬೆಳಕನು ಎಲ್ಲೆಡೆ ಚೆಲ್ಲುವೆ ಚಿತ್ರಿಪರಾರಿಲ್ಲ || ದಿನದಿನ ಬೆಳೆಯುತ ಬೆಳಕನು ಚೆಲ್ಲುತ ಬಾನಲಿ ನೀನಿರುವೆನಿನ್ನನೆ ನೋಡುತಲಂದವ ಸವಿಯುತ ರಜನಿಯ ನಾ ಕಳೆವೆ || ಒಂದೆಡೆ ನಿಲ್ಲದೆ ಅಲ್ಲಿಂದಿಲ್ಲಿಗೆ ಸರಿಯುವೆ ನೀನೇಕೆ?ಮೋಡಗಳೊಂದಿಗೆ ಓಡುವ ತೆರದಲಿ ಕಾಣುವೆಯದು ಏಕೆ? || ತಾರೆಯು ಸಾವಿರ ಮಿನುಗಲು ಬಾನಲಿ ನಿನಗದು ಸಮವೇನು?ನೀನೊಂದಿಲ್ಲದ ಬಾನದು ರಸಿಕಗೆ ಸವಿಯಲು ಬಹುದೇನು? || ದಿನಕರನುದಯಿಸಲಡಗುವೆ ಎಲ್ಲೀ ಹಗೆತನ ನಿನಗೇಕೆ?ಹಗಲೊಳು ನಿನ್ನನು ಕಾಣುವ […]

Jun 032011
 
ಮಗುವೇ ...

ನಿನಗಾಗಿ ನಾ ಪಡುವೆನೆನಲಾದ ಕಷ್ಟಗಳ –ವೆನಗಾದ ಸಂತೋಷದಣುಮಾತ್ರವು  ||ನಿನ ಸ್ವಾಗತದ ನಗುವಿನಪ್ಪುಗೆಯ ಸಂತಸಕೆನನ ದುಡಿತದಾ ದುಗುಡ ತೃಣಮಾತ್ರವು  || ೧ || ಪೂರಣಿಸಿದೇಯೆನ್ನ ಭಾವಗಳ ನ್ಯೂನತೆಯ ಸಾರವನು ದೊರಕಿಸಿದೆ ನೀನೀ ಬಾಳಿಗೆ ||ಬಾರ ಕುಡಿಯೇ ವಂಶ ಸಾರಾಂಶದಾ ಮಿಡಿಯೆತಾರ ಬದುಕಿಗೆ ನೀ ಮಹೋತ್ಸಾಹವಾ || ೨ || ಬಾಡಿ ಜ್ವರದಿಂ ನೀನು ನರಳಿದ್ದ ರಾತ್ರಿಯಲಿಮಾಡಿದ್ದ ಸೇವೆಯನೆ ಹಿರಿದೆಂದೆನು ||ಕಾಡಿರುವ ಸಂಕಟವನಾನನುಭವಿಸುವಾಗ ನೋಡಿ ನಿನ ಸೈರಣೆಯ ಕಿರಿದಾದೆನು ||‌‌ ೩ || ಜೀವನದಲೆಷ್ಟೆಷ್ಟು  ಅಡೆತಡೆಗಳೇ ಬರಲಿನೋವು ಸಾವಿನ ದಡಕೆ […]

May 292011
 
ಸುಮಹಿಮಾಲಯ

ಸುಮಹಿಮಾಲಯ ದಿವಿಷತ್ತರಂಗಿಣೀ ತೀರ ಸುರಸುಂದರೀ ಕರಕಂಕಣ ಕ್ವಣ ಕ್ವಣನ ವೀಣಾರಾವ ಕಲಿತ ಹರವಿಜಯ ಮಂಗಳಗೀತಿಕಾ ಪ್ರತಿ ಧ್ವನಿತ ಕಂದರನು, ಹಿಮವದ್ಗಿರೀಂದ್ರನೆ ನಾನು ಬಹುಪುಣ್ಯ ನದನದೀ ಲಹರೀ ಮುಹುರ್ಮುಹುರ್ ಮಹನೀಯದರ್ಶನ ಸ್ಪೃಹಣೀಯನೇ ನಾನು ಭರತರಾಜ್ಞೀ ಶಿರೋಭಾಸಮಾನ ಮನೋಜ್ಞ ವಜ್ರಕೋಟೀರ ಹಿಮವದ್ಗಿರೀಂದ್ರನು ನಾನು ಹರ ಜಟಾಜೂಟಾಗ್ರ ತರುಣೇಂದು ದರಹಾಸ ಲೀಲಾ ಸಮುಲ್ಲಾಸ ಕೈಲಾಸನೇ ನಾನು ರಾಜಹಂಸ ವಿಹಾರ ರಮಣೀಯ ರಾಜೀವ ರಾಜೀ ವಿರಾಜಿ ನವರಸ ಮಾನಸನು ನಾನು ಉಪನಿಷತ್ ಸುಂದರೀ ಸುಪವಿತ್ರ ಪದಕಂಜ ಮಂಜು ಮಂಜೀರ ಶಿಂಜಿತವೆ ತುಂಬಿಹುದಿಲ್ಲಿ ಚೈತನ್ಯವುಕ್ಕಿ […]

May 062011
 
ಕಾಮ ನಮನ ಆಯ್ತು, ಆದರೆ ಕಾಮ ಹೆಚ್ಚಿನ ಸಂಧರ್ಬಗಳಲ್ಲಿ ವಿವೇಕವನ್ನು ಮರೆಸಿಬಿಡುತ್ತದೆ ಮತ್ತು ದೊಡ್ಡ ದೊಡ್ಡ ಆಭಾಸಗಳಿಗೆ ಕಾರಣವಾಗುತ್ತದೆ. ಈ ವಸ್ತುವಿನಲ್ಲಿ ಪದ್ಯ:

ಎಳೆಯ ಕಂದಗಳೆನಿತೊ ನದಿಯಲಿ ಮುಳುಗಿ ಸಾವನ್ನಪ್ಪುತಿದ್ದರು ಬಿಳಿಯ ಗಂಗೆಯ ಮೋಹ ಪಾಶದೆ ಜನಕ ಮರುಳಾದ ಸುಳಿಯೆ ಬೆಸ್ತರ ಕನ್ಯೆಯೋರ್ವಳು ಇಳೆಯವಯದಲು ರಾಜ ಶಂತನು ಸೆಳೆದ ಪುತ್ರನ ತುಂಬು ಹರೆಯವ, ರಾಜ ಪದವಿಯನು

May 062011
 
ಪುಷ್ಪವಿಲಾಪ

ಪುಷ್ಪವಿಲಾಪ (ಮೂಲ ತೆಲುಗು ಕವನ: ಕರುಣಶ್ರೀ : ಕನ್ನಡ ಪದ್ಯಾನುವಾದ : ಚಂದ್ರಮೌಳಿ) (English Translation by Sri Kandregula Amba Prasada Rao) ನಿನ್ನ ಪೂಜೆಗೆ ಪ್ರಭೂ ಹೂಗೊಯ್ಯಲೆಂದು ಮುಂಬೆಳಗಿನಲಿ ತೋಟದೊಳಬಂದು ನಿಂತೆ ಎಳೆನೇಸರೆಳೆಗೆಂಪು ಬೆಳಗಿಸಿತು ಹೂಬನವ ಪುಷ್ಪಬಾಲಕರೆಲ್ಲ ತಾಯ ಮಡಿಲನ್ನು ಅಪ್ಪಿ ಮುದ್ದಾಡಿ ತೂಗಾಟ ನಡೆಸಿರೆ ಆಗ… Pushpa Vilapam nEnoka poolamokkakaDa nilci civa’luna kommavamci gOra’neDunamtalOna virulanniyu ja’liga nOLLu vippi “ma’pra’Namu diituva’?” yanucu ba’vuru mannavi – kRumgipOti, […]

May 032011
 
ಕಾಮ(,) ನ ಮನ

ಭಾಮಿನಿ:——– ಆರ ಮಹಿಮೆಯ ಬಲದಿ ಬಾಳಿನಸಾರ ಬೆಳಗಿತೊ ಜಗದಿ ಮತ್ತಿನ್ನಾರ ಮೋಡಿಯು ಜೀವ ಚಲನಕೆ ತೈಲ ವೆರೆದಿಹುದೋ|ಮೂರು ಲೋಕದ ಜೀವ ಸ೦ಕುಲಸೇರಿ ಭಜಿಸುವ ಧರುಮ ನೆಲ್ಲವಮೀರಿ ನಿ೦ದಿರುವಾಸೆಗಪ್ಪಗೆ ನಮಿಪೆ ತಲೆಬಾಗಿ || ಶರ:—- ಹುಟ್ಟಿಸಿ ಬಯಕೆಯಹುಟ್ಟಿಸಿದಪ್ಪಗೆತಟ್ಟಿತು ಶಾಪವು ಭೋಣಿಗೆಗೇ || (ಮೊದಲ ಪ್ರಯೋಗಕ್ಕೇ)ಗಟ್ಟಿಗ ನೀನೇಮೆಟ್ಟಿಬರುತಲಿಹೆಸುಟ್ಟರು ಸುಡದೆಯೆ ಸರ್ವರಲೀ || ಕುಸುಮ:=====ನೀನಿರಲು ಸ೦ಸಾರನೀನಿರದೆ ದುಸ್ಸಾರಬಾನಿನಲಿ ರವಿಕಾಣದ ದಿನದ೦ತೆ |ಏನಿಲ್ಲದ ಬದುಕೂನೀನಿರಲು ಬೆಳಗುವುದುನೀನತಿಯೆನಲೊಡೆವುದು ಸ೦ಬ೦ಧವು ||

May 032011
 
ಹಿಮದ ಮಳೆ ಮತ್ತು ನೀರಿನ ಮಳೆ ಸಂವಾದ (ಕಗ್ಗದ ಶೈಲಿಯಲ್ಲಿ )

ಮೊದಲನೇ ಪದ್ಯದಲ್ಲಿ ಪ್ರತಿ ಸಾಲಿನಲ್ಲೂ ಪೂರ್ವಾರ್ಧ ಹಿಮ ಹೇಳಿದರೆ ಉತ್ತರಾರ್ಧ ನೀರಿನದು.ಎರಡನೇ ಪದ್ಯದಲ್ಲಿ ಮೊದಲೆರಡು ಸಾಲು ಹಿಮದ ಹೇಳಿಕೆ, ಕಡೆ ಎರಡು ಸಾಲು ನೀರಿನ ಹೇಳಿಕೆ 🙂 ಪರ್ವತಕೆ ನಾಮಕುಟ, ಬಿಸಿಲೊಳೇನ್ ನಿನ್ನಗತಿ?ಹಾರ್ವ ಹಾಲ್ಹನಿಗಳವ, ಕುಡಿಯಲಹುದೇನೋ?ಓರ್ವನನ್ನಲೆಬಿಳುಪು, ಕರ್ತನೇಳ್ಬಣ್ಣಗಳಸೋರ್ವನೀನೇತಕೆಲೊ?ನಿರ್ಮಲತೆಗೆ || ೧ || ನಳನಳಿಪ ಸುರ ಪಾರಿಜಾತ ದಳಗಳ ಪೋಲ್ವಫಳಫಳನೆ ಹೊಳೆವಂಬರವು ತಿರೆಗೆ ನಾನುಬಿಳಿಗಂಟನಿನ್ನೊಡಲಳಾರ್ದ್ರತೆಯದೆಲ್ಲಿಹುದು? ಇಳೆ ಗರ್ವವೇಳಿಗೆಯು ತಿಳಿ ಮರುಳನೇ || ೨ ||

May 022011
 
ನೆ(ಜ)ಲಸಮನಾದ ಒಸಮ

ಹಸನ ಮಾಳ್ಪೆನು ಜಗವನೆಂದೆನು ತೊಸರುತಲವರಿವರನೆತ್ತರನು ಜಸವಪಡೆವೆಂದುಬ್ಬಿ ಹರಿದಿಹುದು ಹುಂಬುಹೊನಲು | ಅಸಮನೆಂದಿಹನೊಸಮನಬ್ಧಿ ಗೆಸದೆನೆಂದೊಬಮನೂರತಡ ಹಿಸಲು ಸೀರೊಡೆದೇಳಲಿಹುದು ರಕುತಬೀಜಗಳು || ಹಸನಮಾಳ್ಪೆನು ಜಗವನೆಂದೆನು ತೊಸರುತಲವರಿವರರಕುತವನು ಜಸವಪಡೆದೆನುತಲುಬ್ಬಿ ಹರಿದಿಹುದೋ ಹುಂಬುಹೊನಲು | ಅಸಮನೆಂದಿಹನೊಸಮನಬ್ಧಿಯ ಲೆಸದೆನೆಂದೊಬಮನೂರತಡವ ರಿಸೆ ರಕುತಬೀಜನಕುಡಿಯು ಸಾವಿರದೆ ಸಿಡಿದೇಳ್ವುದು ||