ಕೇಡಿಗನೆಯಿರಲಿಲ್ಲವೆಂದು ಸಾರುವನೊಬ್ಬ,ಜಾಡರಿಸಿ ಥಳಿಸಿದವ ನಾನೆಂಬನೊಬ್ಬ,ಮಾಡಿಮಡಿದವನೆನ್ವ ಬಹುಮತಾಂಧರಿಗೊಬ್ಬನೋಡು ಮೂವರು ಖಳರೆ ರೂಪ ಬೇರೆ ||
ಹಲಸು ಮಾವುಗಳೆಂಬ ಹಣ್ಣುಗ – ಳಿಳೆಯ ಸೊಗಸುಗಳಲ್ಲಿ ಶ್ರೇಷ್ಠವ – ದುಳಿದ ರುಚಿಗಳನೆಲ್ಲ ಬಡಿಯುತ ನರ್ತಿಪುದು ಮುದದಿ || ಚಳಿಯು ಮುಗಿಯುವ ಕಾಲ ಬಂದೊಡೆ ಸೆಳೆಯುತೆಲ್ಲರ ತಮ್ಮೆಡೆಗೆ ಮನು – ಕುಲದ ಜಿಹ್ವೋದರಗಳನ್ನಾಳುತಲಿ ನಿರ್ಭಯದಿ || ೧ || ಬದಿಗೆ ಪಾಕಗಳೆಲ್ಲ ಸರಿಯಲಿ ಕದದ ಹಿಂದೋಡಡಗಿಕೊಳ್ಳಲಿ ಸದೆದಹಂಗಳ ತಳೆದ ಮೌನವು ನಾಕು ತಿಂಗಳನಕ || ಕದಡಿ ಸಿಹಿಯುಳಿಯಾ ಸಮಾಗಮ – ವದಕದಮೃತವ ಭೂರಿ ಭರಿಸಿದ ಪದಗಳೀ ಹಣ್ಣುಗಳ ತಳದಲಿ ಬಾಳ್ವೆ ಸಾಕವಕೆ || ೨ || ಬೊಕ್ಕೆ […]
ಲಂಚ ಕೋರರು ಮೆರೆವ ಸಡಗರವಂಚನೆಯು ತಾರಕವನೇರಿರೆಕೊಂಚವೇ ನಿರ್ಭಿಡೆಯು ಜನರಿಗದಿಲ್ಲವೇನಕಟ ||ಸಂಚು ಮಾಡಿಹ ಕಳ್ಳ ಕೊರಮರಹೊಂಚಿ ದೋಚುವ ಹೀನ ಮನುಜರನಂಚಿನಿಂ ಬಂಧಿಸಲದಾಶಿಪ ಸಾಸಿರೆಗೆ* ನಮನ || ೧ || ಸಾಕು ಸಾಕೆಂದಾದ ಸಮಯದಿ ಲೋಕದುನ್ನತಿ ಶೋಕಿಸುತಲಿರೆ ಮೂಕದನಿಗಳಲುದಯಿಸಿದನೀ ರಂಧ್ರದೊಂಗಿರಣ || ಲೋಕಪಾಲದ ನಿಯಮ ಜನತೆಯ ಬೇಕು ಬೇಡಗಳನಳವಡಿಸಿರೆ ಹಾಕಲಿರುವುದು ಹುಚ್ಚು ಕುದುರೆಗೆ ಭಯದ ಕಡಿವಾಣ || ೨ || *ಸಾಸಿರೆ = ಹಜಾರೆ 🙂 [ಇಷ್ಟವಿದ್ದವರು ಇದನ್ನು ಇನ್ನೂ ಮುಂದುವರಿಸಿ – ಸಾಕಷ್ಟು ಬೆಳೆಸಬಹುದು] – ರಾಮಚಂದ್ರ
ವರುಷದಂತೆಯೆ ಮರಳಿ ವಾಸಂತಪಲ್ಲವವು ಬರೆಯಲರಳುತಲಿಹುದು ಹೊಸಯುಗದ ಕಾವ್ಯವನುಖರಲೇಖನಿಯ ನಿಬ್ಬಿಗೆರೆಸಿ ಮಿದುಹಸಿರನ್ನು ಬಾ ರಮಣಿ ಮಧುವೀಂಟು ಮೀಂಟು ವೀಣೆಯ ತನುವ. ನೋವು ನಲಿವಿನ ಧರ್ಮ ಕಾಲನಿಬ್ಬಗೆಯಂತೆ ಬೇವು ಬೆಲ್ಲದ ಹದವು ಬಾಳ ಋತವನಿವಾರ್ಯ ಕಾವುದಾತನ ಕರ್ಮ ಕಾಯುವುದು ಭವಕಾರ್ಯನಾವು ಬಯಸುವ ನೆಮ್ಮದಿಯ ಜೀವ ಸಂಕುಲಕೆ. ತುಂಬು ಸಿಹಿ ಫಸಲುಕ್ಕಿ ಸುಗ್ಗಿ ತುಂಬಲಿ ಕಣಜ ನಂಬುಗೆಯ ಪದ ಬಂಧಿಸಲಿಯೆಮ್ಮ ಜನಪದವ ಅಂಬ! ಹಸಿವೆನ್ನುತಲಿ ಮಕ್ಕಳಳದಿರಲೆಂದು ದುಂಬಿ ಗುನುಗುನುನಾದವರಳಲುದ್ಯಾನಗಳಲ್ಲಿ. ಉತ್ತರೋತ್ತರಕೊಳಿತ ಬಯಸುತ್ತ ಸುಖಿಸೋಣ ಮತ್ತೆ ಚೈತ್ರದ ಕಾಲಕಾನೊ ನೀನೋ ಕಾಣೆ..
ವಿದ್ಯೆಯಾರ್ಜನೆ ಬ್ರಹ್ಮಚಾರಣೆಹೃದ್ಯವಾಗಿಸುವಾನುಮೋದನೆಸದ್ಯ ತಂದಿಹ ಕಂದನೋಪನಯನದ ಶುಭ ಕಾರ್ಯ ||ಖಾದ್ಯ ಚೋದ್ಯದ ಮಿತದ ಹಿತದಿಂದಧ್ಯಯನ ದಿನನಿತ್ಯ ಸಂಧ್ಯಾs[ಅಧ್ಯವಸನವು ಮಿಡಿಯುತಲಿ ನಿನ ದೇಹ ಮನಗಳಲಿ]ರಾಧ್ಯ ಸವಿತಾ ಪಿತೃಋಷಿಂಗಳ ವಂದನೆಯ ಪರಿಯು || ೧ || ನುಡಿಯು ಸತ್ಯದ ಮೇಲೆ ನಿಲ್ಲಲಿಕೊಡದೆಯವಕಾಶವನಧರ್ಮಕೆಕಡು ವಿವೇಕವು ಹೊಳೆಯುತಲಿ ಧೀ ಶಕ್ತಿ ಬೆಳೆಮೆಯಲಿ ||ಬಿಡದೆ ಮನೆತನ ಸಂಪ್ರದಾಯವಕಡಿಯುತಲಿ ಕಡಿದಾದ ಕಷ್ಟವಮಡಗು ನೀ ಹಿರಿದಾದ ಹೆಸರನು ಮನೆಗೆ ಗುರುಕುಲಗೆ || ೨ || ಕಾಯು ನೀ ನಿನ ಧರ್ಮ ಕರ್ಮವಬಾಯಿ ಮನಸಿನ ವಿಮಲ ಸೌಷ್ಠವಪಾಯಸದ ತರ ದಕ್ಕುವುದು […]
ಅಲೆದಲೆದು ಸುಸ್ತಾಗಿ ಮನುಜ ಕಟ್ಟಿದ ಗೂಡುಗಳು ಸೇರಿ ಒಟ್ಟಂದದಲಿ ಪೇಟೆಯಾಯ್ತಲ್ಲ!ಕಲೆತು ಮಲೆತರು ನರರು ನೆಲೆಯೂರಬೇಕಲ್ಲ,ಬೆಲೆ ಕಟ್ಟಿದರು ಮಲಗಲಡಿಯ ಲೆಕ್ಕದಲಿ. ಪ್ಲಾಟಿನಂ ಚಿನ್ನ ನಗ ಕಾರು ಬಂಗಲೆ ಬೇಕು ಸ್ಲೇಟದಿನ್ನೆಲ್ಲಿಯದು ಲ್ಯಾಪ್ ಟಾಪು ಹಣೆಬರವುಪ್ಲೇಟು ಬಂದಿತು ಬಾಳೆಮರಗಳೋ ಬಾಗಿದವು ಕಾಟು ಮೇಲ್ ಕುರ್ಲಾನೆ ಪ್ರಸ್ಥವಾಗಲು ಬೇಕು. ನಾಗರೀಕರೊ ನಾಗರಿಕರೊ, ಪಾಣಿನಿಯೆಲ್ಲಿ?ನಾಗಮಂಡಲಪಾತ್ರಿ ಕುಣಿಯುವುದ ಮರೆತಂತೆ ಭೋಗ–ರೋಗದ ಯೋಗ ಕಡೆಗಂತೆ ಮಡಿಕಂತೆಕಾಗುಣಿತ ಕ್ಯಾ ಕುಣಿತ, ಕ್ಯಾಲ್ಕುಲೇತರದೆಲ್ಲಿ? ಬರಿಕಾಲು ಬಿಳಿಶಾಲು ಹೊದ್ದು ಹೊರಡುವ ಬಾರಪೇಟೆತೀಟೆಯು ಸಾಕು, ಅರಿವ ಮಣ್ಣಿನ ಸಾರ.