Jul 032020
 

ನೀಲಕಂಠ ಕುಲಕರ್ಣಿಯವರ ಪರಿಹಾರ: ಸರಿಯಲ್ ಪರೀಕ್ಷೆ ಕರ್ಣಂ- ಗುರೆ ದೊರೆತನಮೊಪ್ಪಿತಲ್ತೆ ಮೇಣ್ ದೊರೆತನಮಂ| ನೆರೆ ಕೊಟ್ಟಾತಂ ತಾನಾ ದೊರೆತನಕೇಂ ಕಳವಳಿಪ್ಪನೊ ಸುಯೋಧನನಯ್|| ಪರೀಕ್ಷೆ ಮುಗಿದಾದ ಮೇಲೆ ಕರ್ಣ ರಾಜನಾದ. ಆದರೆ ಅವನನ್ನು ರಾಜನಾಗಿಸಿದ ದುರ್ಯೋಧನನೇ ರಾಜನಾಗಲು ಅದೆಷ್ಟು ಕಳವಳಪಟ್ಟ!

Jul 032020
 

1) ಶ್ರೀ ರಾ. ಗಣೇಶರ ಪರಿಹಾರ: ಪದಪಿಂ ಪಾರ್ವತಿಯಂದು ಚಂದದ ತಪಸ್ಸಂ ಗೆಯ್ದು ಸರ್ವೇಶನಂ ಸದಯಾನಂದನಚೈತ್ರನಂ ಮದುವೆಯಾಗಲ್ಕೆಂದು ನೋನಲ್ ಸ್ವಯಂ| ಚಿದಚಿದ್ರೂಪಧರಂ ಸಮೀಪಿಸಿ ಕರಂಗೊಳ್ವಾಗಳೆಂಬರ್ ಬುಧರ್ ನದಿಯಂ ಕಂಡೊಡನೋಡಿಬಂದುದೊಲವಿಂದಂ ಸೇರ್ದುದಯ್ ಸಾಗರಂ|| 2) ಶಶಿಕಿರಣ್ ರವರ ಪರಿಹಾರ: ಕಲ್ಯಸ್ಫಾಯದತೀವ್ರರಾಗವಿಗಲದ್ವೈಶದ್ಯಕಲ್ಪಾಂ ಕವಿ- ಸ್ಫೂರ್ತಿಸ್ಫೂರ್ಜಿತವಕ್ರವಾಗನುಕೃತಿಂ ತಾಂ ಕೃತ್ರಿಮತ್ವಾತಿಗಾಮ್| ಸ್ಮೃತ್ವಾ ಸ್ಮೇರತತಿಂ ಪಿತಾ ಪ್ರಿಯಶಿಶೋರ್ಲೀನಕ್ಲಮಃ ಸ್ಯಾತ್ತಥಾ ಸಿಂಧುಂ ಸತ್ವರಮೀಕ್ಷ್ಯ ತತ್ತನುತನೌ ಸಂಲೀಯತೇ ಸಾಗರಃ|| (ಮುಂಜಾನೆ ಎಲ್ಲೆಡೆ ಹರಡಿರುವ ನವುರಾದ ಕೆಂಪಿನಲ್ಲಿಯ ವಿಶದತೆಯಂತಿರುವ, ಕವಿಯ ಸ್ಫೂರ್ತಿಯಿಂದ ಮಿಂಚಿದ ವಕ್ರತೆಯನ್ನು ಹೋಲುವ, ಕೃತ್ರಿಮತೆಯ ಲೇಶವೂ […]

Jul 032020
 

ಶ್ರೀಧರ ಸಾಲಿಗ್ರಾಮರ ಪರಿಹಾರ ಲೋಪಮಾಗಳ್ಕೆ ತನ್ನಿಂದಂ ಶಾಪಮೀಯಲ್ ವಿನಾಯಕಂ ಭಾಪಿಂ ಬೆನ್ನನೇತಕ್ಕಂ ತೋರ್ಪನೋ ಚೌತಿ ಚಂದ್ರನಾ ಉಷಾರವರ ಪರಿಹಾರ (ವಿನೋದವಾಗಿ) ಸಾಕಾರನೊಮ್ಮೆಗೆ ನಿರಾಕಾರ ಮಗದೊಮ್ಮೆ ಏಕಾಂತಮಿರುವಾಗೆ ತಾರೆಯರೊಡಂ ಆಕಾರಮಿಪ್ಪತ್ತು ಮತ್ತೇಳು ತಿಂಗಳೊಳ್ ನಾಕಾಣೆನೆಂತು ಮತ್ತೊಂದು ಮೊಗವುಂ ?!! ಹೀಗೊಂದು ಲೆಕ್ಕಾಚಾರದ ಪದ್ಯ !! ತಿಂಗಳಿಗೆ 30 ದಿನ, 1 ದಿನ – ಪೂರ್ಣ ಮುಖ, 1 ದಿನ – ನಿರಾಕಾರ, 27 ದಿನ – 27 ನಕ್ಷತ್ರಗಳು ಜೊತೆ – 20+7 ಬೇರೆಬೇರೆ ಮುಖಗಳು, ಒಟ್ಟು 29 […]

Jul 032020
 

1) ಶ್ರೀಲಲಿತಾ ರೂಪನಗುಡಿಯವರ ಪರಿಹಾರ: महायुद्धे पूर्णे भुवन-बहु-भारे विगलिते बृहद्वृक्षस्याधो हसितवदनेन क्रमविदा । हृषीकेशेनान्ते प्रतिगमननाट्यं स्वमनसो विनोदार्थं सार्थं घटितमथ मृत्यु-प्रकरणम् ॥ (ಶ್ರೀಕೃಷ್ಣ ನಿರ್ಯಾಣ) 2) ಉಷಾ ಉಮೇಶರ ಪರಿಹಾರ-೧: ಅನೂಚಾನಂ ಸಾವೈ, ನಶಿಸುತುದಿಸಲ್ ಮಾನವರೊಳಿಂ ತನಂತಂ ಚೈತನ್ಯಾನ್ವಿತಕಣಚಯಂ ತಾಮನುದಿನಂ| ಪುನರ್ಜನ್ಮಕ್ಕಂ ನಿಶ್ಚಿತಮದನಿವಾರ್ಯಂ ಮರುಳೆ ಕಾಣ್ ವಿನೋದಕ್ಕಂ ತಕ್ಕಂತೊದವಿದುದು ಮೃತ್ಯು ಪ್ರಕರಣಂ!! ಮಾನವ ಶರೀರದಲ್ಲಿ ಅಸಂಖ್ಯ ಜೀವಕಣಗಳು ಸತ್ತು ಹುಟ್ಟುತ್ತಿರುವಾಗೆ – ಪುನರ್ಜನ್ಮಕ್ಕಾಗಿ ನಿಶ್ಚಿತ ಮರಣದಾಟದ ಬಗೆಗಿನ ಪೂರಣ 3) ಉಷಾ […]

Jul 032020
 

1) ಅವಧಾನಿ ಗಣೇಶಭಟ್ಟ ಕೊಪ್ಪಲತೋಟರ ಪರಿಹಾರ: ಖಂಡಿಸಿ ಸಿದ್ಧಾಂತಂಗಳ ಮಂಡನೆಯಂ ಮಾಡದಿರ್ಪರಿವರಿಂತೀ ವೈ-| ತಾಂಡಿಕವಾದಂಗೆಯ್ದಿರೆ ಪಂಡಿತರುಂ ಸೋಲ್ತರಲ್ತೆ ಪಾಮರರಿದಿರೊಳ್|| (ಪಾಮರರಾದರೂ ಖಂಡನೆ ಮಂಡನೆಗಳನ್ನು ಸರಿಯಾಗಿ ಮಾಡದೇ ಬರಿದೇ ವಿತಂಡವಾದ ಮಾಡಿದ ಕಾರಣ ಪಂಡಿತರೂ ಅವರ ಎದುರು ಸೋತರು) 2) ಶ್ರೀ ಕೆ. ಬಿ. ಎಸ್. ರಾಮಚಂದ್ರರ ಪರಿಹಾರ: ದಂಡದ ಮಾತಾಡುತಲೆ ವಿ- ತಂಡವ ಮಾಳ್ದವನ ಕೂಡೆ ಸೋಗಂ ಬಿಡುತಿ-| ನ್ನುಂಡಾಗಿರೆ ಸುಖನಿದ್ರೆಗೆ ಪಂಡಿತರುಂ ಸೋಲ್ತರಲ್ತೆ ಪಾಮರನೆದುರೊಳ್|| 3) ಶ್ರೀಧರ ಸಾಲಿಗ್ರಾಮರ ಪರಿಹಾರ: ಭಂಡಂ ಪುಸಿಯುಲಿಯಿಂದಂ ಕೊಂಡಾಡಲ್ ಮದ್ಯಪಾನಕಾಹ್ವಾನಿಸಿರಲ್| […]