ಕೃಪೆ: ಅಂತರ್ಜಾಲ
“ಚೆನ್ನಂ ವಸಂತೋತ್ಸವಂ” ಎಂಬ ಪಾದಾಂತ್ಯವನ್ನು ಬಳೆಸಿ ಪದ್ಯಪೂರಣವನ್ನು ಮಾಡಿರಿ. ಈ ಪಾದಾಂತ್ಯವನ್ನು ಮತ್ತೇಭ/ಶಾರ್ದೂಲ, ಪಂಚಮಾತ್ರಾಚೌಪದಿ ಇತ್ಯಾದಿ ಛಂದಸ್ಸುಗಳಲ್ಲಿ ಹೊಂದಿಸಬಹುದು
ಅರಸುಗಳಿಗಿದು ವೀರ ದ್ವಿಜರಿಗೆ
ಪರಮವೇದದ ಸಾರ ಯೋಗೀ-
ಶ್ವರರ ತತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ
ವಿರಹಿಗಳ ಶೃಂಗಾರ ವಿದ್ಯಾ-
ಪರಿಣತರಲಂಕಾರ ಕಾವ್ಯಕೆ
ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ
ಕುಮಾರವ್ಯಾಸನ ಈ ಪದ್ಯದ ವಿಡಂಬನೆಯನ್ನು (parody) ಮಾಡಿರಿ. ಈ ಹಿಂದೆ ಪದ್ಯಪಾನದಲ್ಲಿ ವಿಡಂಬನೆಯ ಕುರಿತ ಸಪ್ತಾಹದ ಪೂರಣಗಳ ಮಾಹಿತಿಯನ್ನು ಈ ಕೊಂಡಿಯಲ್ಲಿ ಪಡೆಯಬಹುದು http://padyapaana.com/?p=1480
ಪೃಥ್ವೀ ಛಂದಸ್ಸಿನ ಕೆಳಗಿನ ಸಾಲನ್ನು ಬಳೆಸಿ ಸಮಸ್ಯಾಪೂರಣವನ್ನು ಮಾಡಿ:
ಕರಂಗೆನೆನುತಿರ್ಪನಯ್ ಜಲದೊಳಿರ್ಪ ವಿಘ್ನೇಶ್ವರಂ
ಮಾಲಿನೀ, ,ಸ್ರಗ್ಧರಾ, ಮಹಾಸ್ರಗ್ಧರಾ ಮುಂತಾದ ವೃತ್ತಗಳ ಪಾದಾಂತ್ಯಕ್ಕೆ ಹೊಂದುವ ಕೆಳಗಿನ ಸಾಲನ್ನು ಅಳವಡಿಸಿ ಪದ್ಯಪೂರಣವನ್ನು ಮಾಡಿರಿ
“ಪೆಣ್ಣ ಚಿದ್ವೃತ್ತಿಯಲ್ತೇ”
ವಿನೀಲಮಲ್ಲೀನವಮಾಲೆಯೊಪ್ಪುಗುಂ
ಮಾಲಿನೀ, ,ಸ್ರಗ್ಧರಾ, ಮಹಾಸ್ರಗ್ಧರಾ ಮುಂತಾದ ವೃತ್ತಗಳ ಪಾದಾಂತ್ಯಕ್ಕೆ ಹೊಂದುವ ಕೆಳಗಿನ ಸಾಲನ್ನು ಅಳವಡಿಸಿ ಪದ್ಯಪೂರಣವನ್ನು ಮಾಡಿರಿ
“ಮತ್ತದೇ ಕೌತುಕಂ ದಲ್”
ಸ್ವಾಗತದ ಈ ಸಮಸ್ಯೆಯ ಸಾಲನ್ನು ಪರಿಹರಿಸಿರಿ
ಕತ್ತಿಗುo ಹರಿತಮಿರ್ಪುದು ಪುಷ್ಪo
ಚಂಪಕೋತ್ಪಲಮಾಲೆಗಳಿಗೆ ಹೊಂದುವ ಈ ಪಾದಾಂತ್ಯವನ್ನು ಬಳೆಸಿ ಪದ್ಯರಚನೆಯನ್ನು ಮಾಡಿರಿ
“ನೆತ್ತರೊಪ್ಪುಗುಂ”