ಈ ಚಿತ್ರಕ್ಕೆ ಸೂಕ್ತ ಪದ್ಯವನ್ನು, ನಿಮಗಿಷ್ಟವಾದ ಛಂದಸ್ಸಿನಲ್ಲಿ, ರಚಿಸಿರಿ ::
“ಸಿತಾರ್”, “ತಬಲಾ”, “ಸಂತೂರ್”, “ಬೀನ್” ಪದಗಳನ್ನು ಬಳಸಿ ಕರ್ಣಾಟಕ ಸಂಗೀತದ ವರ್ಣನೆಯ ಪದ್ಯಗಳನ್ನು ರಚಿಸಿರಿ. ಛಂದಸ್ಸು ನಿಮ್ಮ ಆಯ್ಕೆ.
“ಗಡ್ಡಂ ಬೋಳಿಸಿಕೊಳ್ ! ಎನುತ್ತೆ ನುಡಿದಂ ಪ್ರೇಯಂ ನಿಜಪ್ರೀತೆಗಂ”
ಶಾರ್ದೂಲ ವಿಕ್ರೀಡಿತ ಛಂದಸ್ಸಿನ ಪದ್ಯದ ಯಾವುದಾದರೊಂದು ಸಾಲು ಹೀಗಿರುವಂತೆ ಪದ್ಯ ರಚಿಸಿರಿ
[ ಶಾ.ವಿ :: ನಾನಾನಾನನನಾನನಾನನನನಾ | ನಾನಾನನಾನಾನನಾ ]
ಅಂಶ ಛಂದಸ್ಸಿನಲ್ಲಿ (ಸಾಂಗತ್ಯ, ತ್ರಿಪದಿ ಅಥವಾ ಸೀಸ) ಯಾವುದಾದರು ವಿಷಯದ ಮೇಲೆ ಕರುಣ ರಸಮಯವಾದ ಪದ್ಯಗಳನ್ನು ರಚಿಸಿರಿ.
ಅಂಶ ಛಂದಸ್ಸಿನ ವಿವರಗಳು ಇಲ್ಲಿವೆ
ಬೇಲೂರಿನ ಈ ಶಿಲಾಬಾಲಿಕೆಯ ಬಗ್ಗೆ ನಿಮಗಿಷ್ಟವಾದ ಛಂದಸ್ಸಿನಲ್ಲಿ ಪದ್ಯ ರಚಿಸಿರಿ ::
“ನಭ, ನಿಭ, ವಿಭ, ಶುಭ” ಪದಗಳನ್ನುಪಯೋಗಿಸಿ ವಿಯೋಗದ ಬಗ್ಗೆ ಪದ್ಯ ರಚಿಸಿರಿ.
ಛಂದಸ್ಸು ನಿಮ್ಮ ಆಯ್ಕೆ
“ಮರಣಂ ಸೊಗಯಿಪ್ಪುದಲ್ತೆ ಮದುಮಕ್ಕಳ್ಗಂ” ಎಂಬ ಸಾಲನ್ನುಪಯೋಗಿಸಿ ಕಂದ ಪದ್ಯವನ್ನು ಪೂರ್ಣಗೊಳಿಸಿರಿ
ಬೇಸಿಗೆಯ ಹಣ್ಣಾದ ಹಲಸಿನ ಹಣ್ಣನ್ನು ವರ್ಣಿಸಿರಿ
ಈ ಚಿತ್ರಕ್ಕೆ ಸೂಕ್ತವಾದ ಪದ್ಯವನ್ನು ನಿಮಗಿಷ್ಟವಾದ ಛಂದಸ್ಸಿನಲ್ಲಿ ರಚಿಸಿರಿ ::
Trunk (ಟ್ರಂಕ್), Belt (ಬೆಲ್ಟ್), Belly (ಬೆಲ್ಲಿ), Tusk (ಟಸ್ಕ್) – ಈ ಪದಗಳನ್ನುಪಯೋಗಿಸಿ, ಹಳ್ಳಿ ಜೀವನದ ಸೊಗಸಿನ ಬಗ್ಗೆ ಪದ್ಯಗಳನ್ನು ನಿಮಗಿಷ್ಟವಾದ ಛಂದಸ್ಸಿನಲ್ಲಿ ರಚಿಸಿರಿ
ಕಂದಪದ್ಯದ ಒಂದು ಸಾಲು ಹೀಗಿದೆ ::
ದಕ್ಷಿಣದೊಳ್ ಭಾನುಬಿಂಬಮಿಂದುದಿಸಿತಲಾ
[ದಕ್ಷಿಣ ದಿಕ್ಕಿನಲ್ಲಿ ಸೂರ್ಯೋದಯವಾಯಿತು ಎಂಬ ಅಸಂಭಾವ್ಯತೆಯ ಸಮಸ್ಯೆ]
ಉಳಿದ ಸಾಲುಗಳನ್ನು ಪೂರ್ಣಗೊಳಿಸಿ, ಸಮಸ್ಯೆಯನ್ನು ಬಗೆಹರಿಸಿರಿ
ಯಾವುದಾದರು ಭಾಷೆಯ ನಿಮಗಿಷ್ಟವಾದ ಸುಂದರ ಪದ್ಯಗಳನ್ನು ಬೇರೊಂದು ಭಾಷೆಗೆ ಅನುವಾದಿಸಿರಿ.
ಛಂದಸ್ಸು – ನಿಮ್ಮನುವಾದಕ್ಕೆ ಅನುಕೂಲವಾದದ್ದು
ದಯವಿಟ್ಟು ಮೂಲದ ಪದ್ಯವನ್ನೂ ಪ್ರಕಟಿಸಿರಿ