Feb 052012
 

Walk(ವಾಕ್), Run(ರನ್), Jump(ಜ೦ಪ್), Dive(ಡೈವ್) ಈ ಪದಗಳನ್ನು ಉಪಯೋಗಿಸಿ, ಗಜರಾಜನ ವರ್ಣನೆಯನ್ನು ಮತ್ತೇಭವಿಕ್ರೀಡಿತದಲ್ಲಿ ಮಾಡಿ. ಪದಗಳನ್ನು ನಿಜಾರ್ಥದಲ್ಲಿ(ಆ೦ಗ್ಲಭಾಷೆಯಲ್ಲಿ) ಬಳಸುವ೦ತಿಲ್ಲ. ಮತ್ತೇಭವಿಕ್ರೀಡಿತದ ಪ್ರತಿಸಾಲಿನ ವಿನ್ಯಾಸ – ನನನಾನಾನನನಾನನಾನನನನಾ|ನಾನಾನನಾನಾನನಾ

Jan 292012
 

ಕಂದ ಪದ್ಯದ ಎರಡನೆ ಅಥವಾ ನಾಲ್ಕನೆ ಪಾದ ಹೀಗಿದೆ :: ದುರ್ಗಾ ಭರ್ಗರನುಪಾಸಿಸಲ್ ದುರಿತ ಫಲಂ ಪದ್ಯದ ಉಳಿದ ಪಾದಗಳನ್ನು ಪೂರೈಸಿರಿ

Jan 242012
 
ಪದ್ಯವಿದ್ಯೆಯ ಬಳಕೆ, ಮತ್ತೊ೦ದಿಷ್ಟು ಸೂಚನೆಗಳು

ಪ್ರೀತಿಯ ಪದ್ಯಪಾನಿಗಳೇ, ಪದ್ಯಪಾನವು ಹುಟ್ಟಿದಾಗಿನಿ೦ದ ಇಲ್ಲಿಯವರೆಗೂ ಉತ್ಸಾಹದಾಯಕವಾಗಿ – ಪದ್ಯವನ್ನು ಬರೆಯುತ್ತ, ಸದ್ದಿಲ್ಲದೆ ಓದುತ್ತಾ, ಕಾಮೆ೦ಟುಗಳ ಮೂಲಕ ಸದ್ದುಮಾಡುತ್ತಾ –  ಭಾಗವಹಿಸುತ್ತಾ ಅದರ ಬೆಳವಣಿಗೆಗೆ ಕಾರಣರಾಗಿದ್ದೀರಿ. ಇದು ಬೆಳೆಯುತ್ತಿರುವುದು, ಬೆಳೆದು ಬದಲಾಗುತ್ತಿರುವುದು ನಮ್ಮ ಕಣ್ಣಮು೦ದೆಯೇ ನಡೆಯುತ್ತಿರುವ ನಿತ್ಯ ಸತ್ಯ. ಈ ಬೆಳವಣಿಗೆಯು ಸು೦ದರವಾಗಿರಲೆ೦ದು, ಮುನ್ನವೇ ಆಲೋಚಿಸಿ ಒ೦ದಿಷ್ಟು ಕಲಿಕೆಯ ಸಾಮಗ್ರಿಗಳನ್ನು ತಯಾರಿಸಿ “ಪದ್ಯವಿದ್ಯೆ” (ಕೆಳಗಿನ ಚಿತ್ರ ನೋಡಿ) ಎ೦ಬ ಮೆನು(ಪಟ್ಟಿ)ವಿನಲ್ಲಿ ಪಾನಮ೦ಡಳಿಯು ನೀಡಿದ್ದಿತು.  ಮುಖ್ಯವಾಗಿ, ಹೊಸದಾಗಿ ಪದ್ಯಪಾನಿಗಳಾಗಬಯಸುವವರು ಪದ್ಯವಿದ್ಯೆಯಲ್ಲಿರುವ ಎಲ್ಲ ವೀಡಿಯೋ ಗಳನ್ನೂ, ಸಾಮಾನ್ಯ ಪ್ರಶ್ನೆಗಳನ್ನೂ ಮತ್ತು […]

Jan 242012
 

ರಾತ್ರೆ ಊಟದ ಮೊದಲು ಕೋಣೆಯಲ್ಲಿ ನನ್ನ ತಮ್ಮನ ಜೊತೆ ಹರಟುತ್ತಿದ್ದೆ. ಮಗನೂ ಅಲ್ಲೇ ಆಡಿಕೊಳ್ಳುತ್ತಿದ್ದ. ಹೀಗೇ ಹರಟುತ್ತಿದ್ದಾಗ ಅದೇಕೋ ಮತ್ತಕೋಕಿಲಾ ಛಂದಸ್ಸು ನೆನಪಿಗೆ ಬಂತು. ಅದರ ಬಗ್ಗೆ ನನ್ನ ತಮ್ಮನಿಗೆ ಹೇಳುತ್ತಾ “ಇದು ಏಳೇಳು ಮಾತ್ರೆಗಳ ಮಿಶ್ರಗತಿಯಲ್ಲಿ ಬರುತ್ತದೆ – ಮತ್ತಕೋಕಿಲ ಮತ್ತಕೋಕಿಲ ಮತ್ತ ಕೋಕಿಲ ಕೋಕಿಲಾ” ಎಂಬಂತೆ ಎಂದು ಹೇಳಿದೆ. ಅವನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾ “ಇದಕ್ಕೆ ಬೇರಾವುದಾದರೂ ಉದಾಹರಣೆಯಿದೆಯೇ” ಎಂದ. ನಾನು “ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ಪಾಹಿಮಾಂ” ಎಂದೆ ಅಷ್ಟುಹೊತ್ತಿಗೆ ಹೊರಗೆ ತಟ್ಟೆಹಾಕಿ ಊಟಕ್ಕೆ ಕರೆಯುತ್ತಿದ್ದರು. […]

Jan 222012
 

“ಕೀರ್ತಿಗೊಬ್ಬ ಮಗ ಆರತಿಗೊಬ್ಬ ಮಗಳು” ಎಂಬೊಂದು ಕುಟುಂಬ ಯೋಜನೆಯ ಕರೆಯಿದ್ದಿತ್ತು. ಈ ವಿಷಯದ ಬಗ್ಗೆ ನಿಮ್ಮ ಭಾವಗಳನ್ನು ನಿಮಗಿಷ್ಟವಾದ ಛಂದಸ್ಸಿನ ಪದ್ಯರೂಪಗಳಲ್ಲಿ ಹೊಮ್ಮಿಸಿರಿ.