Jul 032020
 

ನೀಲಕಂಠ ಕುಲಕರ್ಣಿಯವರ ಪರಿಹಾರ:
ಸರಿಯಲ್ ಪರೀಕ್ಷೆ ಕರ್ಣಂ-
ಗುರೆ ದೊರೆತನಮೊಪ್ಪಿತಲ್ತೆ ಮೇಣ್ ದೊರೆತನಮಂ|
ನೆರೆ ಕೊಟ್ಟಾತಂ ತಾನಾ
ದೊರೆತನಕೇಂ ಕಳವಳಿಪ್ಪನೊ ಸುಯೋಧನನಯ್||
ಪರೀಕ್ಷೆ ಮುಗಿದಾದ ಮೇಲೆ ಕರ್ಣ ರಾಜನಾದ. ಆದರೆ ಅವನನ್ನು ರಾಜನಾಗಿಸಿದ ದುರ್ಯೋಧನನೇ ರಾಜನಾಗಲು ಅದೆಷ್ಟು ಕಳವಳಪಟ್ಟ!

Jul 032020
 

ಶ್ರೀಧರ ಸಾಲಿಗ್ರಾಮರ ಪರಿಹಾರ
ಲೋಪಮಾಗಳ್ಕೆ ತನ್ನಿಂದಂ
ಶಾಪಮೀಯಲ್ ವಿನಾಯಕಂ
ಭಾಪಿಂ ಬೆನ್ನನೇತಕ್ಕಂ
ತೋರ್ಪನೋ ಚೌತಿ ಚಂದ್ರನಾ

ಉಷಾರವರ ಪರಿಹಾರ (ವಿನೋದವಾಗಿ)
ಸಾಕಾರನೊಮ್ಮೆಗೆ ನಿರಾಕಾರ ಮಗದೊಮ್ಮೆ
ಏಕಾಂತಮಿರುವಾಗೆ ತಾರೆಯರೊಡಂ
ಆಕಾರಮಿಪ್ಪತ್ತು ಮತ್ತೇಳು ತಿಂಗಳೊಳ್
ನಾಕಾಣೆನೆಂತು ಮತ್ತೊಂದು ಮೊಗವುಂ ?!!
ಹೀಗೊಂದು ಲೆಕ್ಕಾಚಾರದ ಪದ್ಯ !!
ತಿಂಗಳಿಗೆ 30 ದಿನ, 1 ದಿನ – ಪೂರ್ಣ ಮುಖ, 1 ದಿನ – ನಿರಾಕಾರ, 27 ದಿನ – 27 ನಕ್ಷತ್ರಗಳು ಜೊತೆ – 20+7 ಬೇರೆಬೇರೆ ಮುಖಗಳು, ಒಟ್ಟು 29 ಮುಖಗಳಾದವು. ಅವನ “ಮತ್ತೊಂದು ಮುಖ” ಯಾವುದು?