Apr 302018
 

ಈ ಕೆಳಕಂಡ ಸಮಸ್ಯೆಯ ಸಾಲುಗಳನ್ನು ಪರಿಹರಿಸಿರಿ ಆಟವೆಲದಿ: ಪಲವು ಬಾರಿ ಬಾಳೆ ಫಲಮನೀಗುಂ ೧ನೆ ಹಾಗು ೩ನೆ ಸಾಲುಗಳು:: ಬ್ರಹ್ಮ  ಬ್ರಹ್ಮ  ಬ್ರಹ್ಮ  ವಿಷ್ಣು  ವಿಷ್ಣು ೨ನೆ ಹಾಗು ೪ನೆ ಸಾಲುಗಳು:: ಬ್ರಹ್ಮ  ಬ್ರಹ್ಮ  ಬ್ರಹ್ಮ  ಬ್ರಹ್ಮ  ಬ್ರಹ್ಮ   ತೇಟಗೀತಿ: ತೋಟದೊಳಗೆಲ್ಲ ವಾಹನಂ ಚಲಿಸುತಿರ್ಕುಂ ೧ ರಿಂದ ೪ನೆ ಸಾಲಿನವರೆಗೆ:: ಬ್ರಹ್ಮ  ವಿಷ್ಣು  ವಿಷ್ಣು  ಬ್ರಹ್ಮ  ಬ್ರಹ್ಮ

Apr 092018
 

೧. ಅರ್ಧಸಮವೃತ್ತವಾದ ವಿಯೋಗಿನೀ ಛಂದಸ್ಸಿನ ಸಮಸ್ಯೆ ಪಗಲೊಳ್ ದೀವಿಗೆ ವೇಳ್ಕುಮೆತ್ತಲುಂ ಗತಿ: ನ ನ ನಾ ನ ನ ನಾ ನ ನಾ ನ ನಾ (ಮೊದಲ ಮತ್ತು ಮೂರನೇಯ ಸಾಲುಗಳು) ನ ನ ನಾ ನಾ ನ ನ ನಾ ನ ನಾ ನ ನಾ(ಎರಡನೇಯ ಮತ್ತು ನಾಲ್ಕನೇಯ ಸಾಲು) ೨. ಶಾರ್ದೂಲದ ಸಮಸ್ಯೆ ಪಂಕಪ್ಲಾವಿತಮಂಜಲಿಸ್ಥಜಲಮೆಂದಾಶಂಕಿಪಂ ಯಾತ್ರಿಕಂ

Mar 252018
 

ಪದ್ಯಸಪ್ತಾಹದ ೩೦೦ನೇ ಕಂತನ್ನು ತಲುಪಿದ್ದೇವೆ, ನಿಮ್ಮೆಲ್ಲರ ಬೆಂಬಲದಿಂದಲೇ ಇದು ಸಾಧ್ಯವಾಯಿತು. ಧನ್ಯವಾದಗಳು, ಅಭಿನಂದನೆಗಳು! ಪದ್ಯಪಾನಿಗಳ ಸಹಕಾರವನ್ನು ಕೋರುತ್ತಾ ಈ ವಾರದ ಸಮಸ್ಯಾಪೂರಣದ ಸಾಲುಗಳನ್ನು ಕೊಡುತ್ತಿದ್ದೇನೆ: ೧. ಕಂದಪದ್ಯದ ಸಾಲು ಆನೆಗಳೇ ನಾಯ ಕಂಡು ಬೆದರೋಡಿರ್ಕುಂ ೨. ಪಂಚಮಾತ್ರಾ ಚೌಪದಿಯ ಸಾಲು ಕಾಂಸ್ಯಮೌನಂ ಮನೋಹರಮೆನಿಕ್ಕುಂ ಕಾಂಸ್ಯ – ಕಂಚು (ಕಂಚಿನ ಕಂಠ)

Mar 052018
 

೧. ಅರ್ಧಸಮವೃತ್ತವಾದ ವಿಯೋಗಿನೀ ಛಂದಸ್ಸಿನ ಸಮಸ್ಯೆ ವಿಧುವಾದಂ ವಧು ಬೇಗದಿಂದಲೇ ಗತಿ: ನ ನ ನಾ ನ ನ ನಾ ನ ನಾ ನ ನಾ (ಮೊದಲ ಮತ್ತು ಮೂರನೇಯ ಸಾಲುಗಳು) ನ ನ ನಾ ನಾ ನ ನ ನಾ ನ ನಾ ನ ನಾ(ಎರಡನೇಯ ಮತ್ತು ನಾಲ್ಕನೇಯ ಸಾಲು) ೨. ಕಂದ ಪದ್ಯದ ಸಮಸ್ಯೆ ಶಿಲೆಗಳನೇ ತಿಂದು ಬದುಕುವುದೆ ಬಲ್ಸೊಗಸಯ್