Feb 122018
 

ಈ ಬಾರಿ ಎರಡು ಸಮಸ್ಯೆಯ ಸಾಲನ್ನು ಕೊಡಲಾಗಿದೆ: ೧. ಅರ್ಧಸಮವೃತ್ತವಾದ ವಿಯೋಗಿನೀ ಛಂದಸ್ಸಿನ ಸಮಸ್ಯೆ ಸರಯೂತೀರದೆ ಕೃಷ್ಣನಾಡಿದಂ ಗತಿ: ನ ನ ನಾ ನ ನ ನಾ ನ ನಾ ನ ನಾ (ಮೊದಲ ಮತ್ತು ಮೂರನೇಯ ಸಾಲುಗಳು) ನ ನ ನಾ ನಾ ನ ನ ನಾ ನ ನಾ ನ ನಾ(ಎರಡನೇಯ ಮತ್ತು ನಾಲ್ಕನೇಯ ಸಾಲು) ೨. ಅನುಷ್ಟುಪ್ ಛಂದಸ್ಸಿನ ಸಮಸ್ಯೆ ಕಬಂಧಂ ಪೆಣ್ಣ ಚುಂಬಿಕುಂ

Feb 052018
 

ನಮಸ್ಕಾರ, ಪದ್ಯಪಾನಿಗಳಿಗೆ ಹೆಚ್ಚಿನ ಪದ್ಯರಚನೆಗೆ ಅವಕಾಶವನ್ನು ಮಾಡಿಕೊಡುವ ದೃಷ್ಟಿಯಿಂದ ವರ್ಣನೆಯ ಈ ಕಂತಿನಿಂದ ಮೊದಲುಗೊಂಡು ಒಂದೇ ವಸ್ತುವಿನ ಬದಲು ಹಲವು ವಸ್ತುಗಳನ್ನು ನೀಡಲಾಗುತ್ತದೆ, ಈ ಬಾರಿ ನಾಲ್ಕು ವಸ್ತುಗಳನ್ನು ನೀಡಲಾಗಿದೆ, ನಿಮ್ಮ ಪದ್ಯಗಳು ಯಾವ ವಸ್ತುವನ್ನು ಕುರಿತಾಗಿದೆ ಎಂದು ಸೂಚಿಸಿ ಪದ್ಯರಚಿಸುವುದು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ. ವಸ್ತುಗಳು: ೧. ಅಡಿಕೆ ಮರ ೨. ದಾನದ ಮಹಾತ್ಮೆ ೩. ಮಚ್ಚೆ ೪. ದೇವರ ಬಟ್ಟೆ ಬರೆ (wardrobe of gods/any god)

Jan 152018
 

ಎಲ್ಲಾ ಪದ್ಯಪಾನಿಗಳಿಗೂ ಮಕರಸಂಕ್ರಾಂತಿಯ ಶುಭಾಶಯಗಳು, ಭಾರತೀಯರೆಲ್ಲರೂ ವೈವಿಧ್ಯಮಯವಾಗಿ ಆಚರಿಸುವ ವಿಶೇಷವಾದ ಈ ಹಬ್ಬದ ಯಾವುದೇ ಆಯಾಮವನ್ನು ವರ್ಣಿಸಿ ಪದ್ಯ ರಚಿಸಿರಿ.

Jan 012018
 

ಎಲ್ಲಾ ಪದ್ಯಪಾನಿಗಳಿಗೂ ೨೦೧೮ರ ಶುಭಾಶಯಗಳು 🙂 ಈಗ ನಿಶ್ಚಯಗಳ(resolutions) ಸಮಯವಾದದ್ದರಿಂದ, ಮಾಲಿನೀ, ಸ್ರಗ್ಧರಾ, ಮಹಾಸ್ರಗ್ಧರಾ ಮುಂತಾದ ವೃತ್ತಗಳ ಪಾದಾಂತ್ಯಕ್ಕೆ ಹೊಂದುವ ಕೆಳಗಿನ ಸಾಲನ್ನು ಅಳವಡಿಸಿ ಪದ್ಯಪೂರಣವನ್ನು ಮಾಡಿರಿ ನಿಶ್ಚಯಂಗೆಯ್ವುದಲ್ತೇ