ದಿನಾಂಕ–೨೭–೦೮–೨೦೧೭ ಆಯೋಜನೆ– ಪದ್ಯಪಾನ ಸ್ಥಳ– ಅಭಿನವ, ಬಸವನಗುಡಿ ಬೆಂಗಳೂರು ಪೀಠಿಕಾಪದ್ಯಗಳು– अभिनवशुभरङ्गे नित्यनृत्यप्रसङ्गे निरुपमरसयोगे राजदानन्दयागे | उपसरतु मुदारं वाणिनीवात्मवाणी विधुकरमधुपूरं व्यञ्जयन्ती जयन्ती || ಇಷ್ಟತಮವಯಸ್ಯವರೋ– ತ್ಕೃಷ್ಟಮನೀಷಾವಿತಾನವೇಲ್ಲನ್ಮಲ್ಲೀ ಸೃಷ್ಟಿಗೆ ಸರಿಯೆನೆ ಮಾಮಕ- ಮಷ್ಟವಧಾನಂ ಸರಸ್ವತೀ ಸಾರವತೀ || ಚಾರುಚಂದ್ರಚರಣಾನುರಾಗದಿಂ ಕೈರವಂ ಮಲರ್ವವೊಲ್ ವಿಭಾವರೀ ದ್ವಾರದೊಳ್ ವಿಲಸದರ್ಜುನರ್ಮವಾಕ್ ಸ್ಫಾರದಿಂದೆ ಸಭೆ ಸಲ್ಗೆ ಮಾಮಕಂ || ಅವಧಾನಾಂಗಗಳು– ಪದ್ಯಗಳು– *ಅಪ್ರಸ್ತುತ ಪ್ರಸಂಗ– ಪೃಚ್ಛಕರು– ಶ್ರೀ ಶಶಿಕಿರಣ ಬಿ ಎನ್ *ಕಾವ್ಯವಾಚನ– ಪೃಚ್ಛಕರು– ಶ್ರೀ ಕಶ್ಯಪ ನ ನಾಯಕ […]
ಓಣಮ್ ಹಬ್ಬದ ಹೂವಿನ ರಂಗೋಲಿಯನ್ನು ವರ್ಣಿಸಿ ಪದ್ಯರಚಿಸಿರಿ. ಈ ಕೆಳಕಂಡ ಅಕ್ಷರಗಳನ್ನು ನಿರ್ದೇಶಿತ ಸ್ಥಾನದಲ್ಲಿ ಬಳೆಸಿರಿ. 1ನೇ ಸಾಲು: 3ನೇ ಅಕ್ಷರ ‘ಕ’ 2ನೇ ಸಾಲು: 4ನೇ ಅಕ್ಷರ ‘ಚ’ 3ನೇ ಸಾಲು: 5ನೇ ಅಕ್ಷರ ‘ತ’ 4ನೇ ಸಾಲು: 6ನೇ ಅಕ್ಷರ ‘ಪ’ ಛಂದಸ್ಸು ನಿಮ್ಮ ಆಯ್ಕೆ (ಈ ಬಾರಿಯ ಪ್ರತಿಕ್ರಿಯೆಗಳನ್ನು ಗಮನಿಸಿ ಛಂದಸ್ಸನ್ನೂ ಮುಂದಿನ ನ್ಯಸ್ತಾಕ್ಷರಿಯ ಕಂತುಗಳಲ್ಲಿ ನಿರ್ದೇಶಿಸಲಾಗುವುದು)
ಧೂಮಪಾನಿಯೆನಿಪಂ ಜನಾರ್ದನಂ
ಗೋಕುಲಾಷ್ಟಮಿಯ ಅಲಂಕಾರವನ್ನು ವರ್ಣಿಸಿ ಪದ್ಯ ರಚಿಸಿರಿ
ಜೀವಿಕ್ಕುಂ ಬೆಂಕಿಯೊಳ್ ಪತಂಗಂ ಬೀಳ್ದುಂ
ವರ್ಣನೆಯ ವಸ್ತು ‘ಭೀಮನಮಾವಾಸ್ಯೆ’
ಕಲಂಜಮಂ ಮೆಲ್ಲುವನಲ್ತೆ ಮಸ್ಕರಂ ಕಲಂಜಮಂ – ಬೆಳ್ಳುಳ್ಳಿಯನ್ನು ಮಸ್ಕರಂ – ಸನ್ಯಾಸಿ
ಸಾಗರವನ್ನು ವರ್ಣಿಸಿ ಪದ್ಯರಚಿಸಿರಿ
ಆಕೃತಿ ರಾಮಚಂದ್ರು ವಿರಹಾಕೃತಿ ಕನ್ಬೊಮತೀರು ಸ್ವಾಮಿ ಚಾ- ಪಾಕೃತಿ ಕನ್ನುಲನ್ ಪ್ರಭು ಕೃಪಾಕೃತಿ ಕೈಶಿಕಮಂದು ರಾಮ ದೇ- ಹಾಕೃತಿ ಸರ್ವದೇಹಮುನ ಯಂದುನ ರಾಘವವಂಶಮೌಳಿ ಧ- ರ್ಮಾಕೃತಿ ಕೂರುಚುನ್ನ ವಿಧಮಂತಯು ಸ್ವಾಮಿ ಪ್ರತಿಜ್ಞಮೂರ್ತಿಯೈ (ಶ್ರೀಮದ್ರಾಮಾಯಣಕಲ್ಪವೃಕ್ಷಮು, ಸುಂದರಕಾಂಡಮು, ಪರರಾತ್ರಖಂಡಮು) ಆಕೃತಿ ರಾಮಚಂದ್ರ ವಿರಹಾಕೃತಿ ಪುರ್ಬಿನ ಬಾಗು ರಾಮ ಚಾ- ಪಾಕೃತಿ ಕಂಗಳೊಳ್ ಪ್ರಭು ಕೃಪಾಕೃತಿ ಕೈಶಿಕೆಯಲ್ಲಿ ರಾಮ ದೇ- ಹಾಕೃತಿ ಸರ್ವದೇಹದೊಳಗೆಲ್ಲವು ರಾಘವವಂಶಮೌಳಿ ಧ- ರ್ಮಾಕೃತಿ ಕೂರ್ತಭಂಗಿವಿಧಮೆಲ್ಲವು ಸ್ವಾಮಿ ಪ್ರತಿಜ್ಞಮೂರ್ತಿಯೈ ಕಲ್ಪನೆಯೆಂದರೆ, ಒಂದು ಹೊಸ ದೃಕ್ಕೋನ. ಎಲ್ಲರಿಗೂ ತಿಳಿದ ವಿಷಯಗಳನ್ನು […]