Apr 242012
 
ಪದ್ಯಬರೆಯಲು ಪರಿಕರಗಳೇನು?  ಅಲ್ಲಸಾನಿ ಪೆದ್ದನನ ಪಟ್ಟಿ

    ಕನ್ನಡರೂಪಾಂತರ ನಿರುಪಹತಿಸ್ಥಲಂ ಸುರಮಣೀ ಪ್ರಿಯದೂತಿಕೆ ತಂದುಕೊಟ್ಟ ಕ- ಪ್ಪುರದೆಲೆ, ಯಾತ್ಮಕಿಂಪಹ ಸುಭೋಜನ, ವುಯ್ಯಲೆ ಮಂಚ, ಮೊಪ್ಪು ತ- ಪ್ಪರಿತ ರಸಜ್ಞರೂಹೆ ತಿಳಿವಂಥಹ ಲೇಖಕ, ಪಾಠಕೋತ್ತಮರ್ ದೊರಕಿದರಲ್ತೆ,   ಕಾವ್ಯಗಳ ಸುಮ್ಮನೆ ಲೇಖಿಸೆನಲ್ಕೆ ಶಕ್ಯಮೇ ಮೂಲ ಪದ್ಯ  ನಿರುಪಹತಿಸ್ಥಲಂಬು ರಮಣೀಪ್ರಿಯದೂತಿಕ ತೆಚ್ಚಿಯಿಚ್ಚು ಕ ಪ್ಪುರವಿಡೆ ಮಾತ್ಮಕಿಂಪಯಿನ ಭೋಜನ ಮುಯ್ಯಲಮಂಚ ಮೊಪ್ಪು ತ ಪ್ಪರಯು ರಸಜ್ಞುಲೂಹ ತೆಲಿಯಂಗಲ ಲೇಖಕ ಪಾಠಕೋತ್ತಮುಲ್ ದೊರಕಿನ ಗಾಕ ಯೂರಕ ಕೃತುಲ್ರಚಿಯಿಂಪುಮಟನ್ನ ಶಕ್ಯಮೇ ಆಂಧ್ರ ಕವಿತಾ ಪಿತಾಮಹನೆಂಬ ಖ್ಯಾತಿಯ ಅಲ್ಲಸಾನಿಪೆದ್ದನ ರಚಿಸಿದ ಪದ್ಯವಿದು.  […]

Apr 152012
 
ರಘುವಂಶಾನುಭವಂ

ಸುಮಾರು ಎಂಟು ವರ್ಷಗಳಿಂದ ಬೆಂಗಳೂರಿನಲ್ಲಿ ಗಣೇಶರು ನಡೆಸುತ್ತಿದ್ದ ಪಾಕ್ಷಿಕ ಪಠಣ ವರ್ತುಲದಲ್ಲಿ (study circle)  ರಘುವಂಶದ ಪಾಠವು ಸದ್ಯದಲ್ಲೇ ಪೂರ್ಣಗೊಂಡಿದ್ದು, ಆ ಸಂದರ್ಭದಲ್ಲಿ ಸಹಪಾಠಿಗಳು ಬರೆದ ಪದ್ಯಗಳ ಸಂಗ್ರಹ ಇಲ್ಲಿದೆ. ಇವರೆಲ್ಲರು ಪದ್ಯಪಾನಿಗಳೇ ಆದ್ದರಿಂದ ಇದನ್ನು ಪದ್ಯಪಾನದಲ್ಲಿಯೇ ಅಳವಡಿಸುವುದು ಒಳಿತೆಂದು ತಿಳಿದು ಇಲ್ಲೆ ಪ್ರಕಟಿಸಲಾಗಿದೆ. ಪದ್ಯಗಳು ರಚನಕಾರರ ಹೆಸರಿನ ಪ್ರಕಾರ ಜೋಡಿಸಲಾಗಿವೆ.  ಉ:ಆದರದಿಂದ ವಂದಿಸುವೆನದ್ರಿಸುತಾಹೃದಯಾನುರಾಗಸಂ ಪಾದಿಗೆ ದೋಷಭೇದಿಗೆ ಪ್ರಪನ್ನವಿನೋದಿಗೆ ವಿಘ್ನವಲ್ಲಿಕಾ ಚ್ಹೇದಿಗೆ ಮಂಜುವಾದಿಗಮಶೇಷಜಗಜ್ಜನನಂದವೇದಿಗಂ ಮೋದಕಖಾದಿಗಂ ಸಮದ ಮೂಷಕಸಾದಿಗೆ ಸುಪ್ರಸಾದಿಗಂ ವಂಶೀ ನಿನಾದ ನಾನಾ ರಾಗಗಾನ ರಘು– ವಂಶಾನುಸಂಧಾನ […]

Apr 072012
 

Trunk (ಟ್ರಂಕ್), Belt (ಬೆಲ್ಟ್), Belly (ಬೆಲ್ಲಿ), Tusk (ಟಸ್ಕ್) – ಈ ಪದಗಳನ್ನುಪಯೋಗಿಸಿ, ಹಳ್ಳಿ ಜೀವನದ ಸೊಗಸಿನ ಬಗ್ಗೆ  ಪದ್ಯಗಳನ್ನು  ನಿಮಗಿಷ್ಟವಾದ ಛಂದಸ್ಸಿನಲ್ಲಿ ರಚಿಸಿರಿ

Apr 012012
 

ಕಂದಪದ್ಯದ ಒಂದು ಸಾಲು ಹೀಗಿದೆ :: ದಕ್ಷಿಣದೊಳ್ ಭಾನುಬಿಂಬಮಿಂದುದಿಸಿತಲಾ [ದಕ್ಷಿಣ ದಿಕ್ಕಿನಲ್ಲಿ ಸೂರ್ಯೋದಯವಾಯಿತು ಎಂಬ ಅಸಂಭಾವ್ಯತೆಯ ಸಮಸ್ಯೆ] ಉಳಿದ ಸಾಲುಗಳನ್ನು ಪೂರ್ಣಗೊಳಿಸಿ, ಸಮಸ್ಯೆಯನ್ನು ಬಗೆಹರಿಸಿರಿ

Apr 012012
 

ಯಾವುದಾದರು ಭಾಷೆಯ ನಿಮಗಿಷ್ಟವಾದ ಸುಂದರ ಪದ್ಯಗಳನ್ನು ಬೇರೊಂದು ಭಾಷೆಗೆ ಅನುವಾದಿಸಿರಿ. ಛಂದಸ್ಸು – ನಿಮ್ಮನುವಾದಕ್ಕೆ ಅನುಕೂಲವಾದದ್ದು ದಯವಿಟ್ಟು ಮೂಲದ ಪದ್ಯವನ್ನೂ ಪ್ರಕಟಿಸಿರಿ