Jul 052020
 

ವೀಣಾ ಉದಯನರ ಪದ್ಯ
ತಾರ! ತಾವರೆಯನೆಂದಾ ತಾಯ ಮಾತಿನಿಂ
ಪೋರನೈತರೆ ಕೆರೆಯ ದಾರಿಯಲ್ಲಿ
ನೀರೆ ಬರಲವಳ ವದನವ ಕಂಡು ಬೆಸಗೊಂಡ
ನೀರನುಳಿದೂ ಕಮಲವರಳಲಹುದೇ?!
ಇದು ಸಸಂದೇಹಾಲಂಕಾರದಿಂದ ಕಮಲದ ವರ್ಣನೆಯಾಯಿತೋ ಅಥವಾ ಕಮಲವದನೆಯ ವರ್ಣನೆಯಾಯ್ತೋ ಎಂಬ ಗೊಂದಲವಿದೆ.

ರಾಮಚಂದ್ರರ ಪದ್ಯ
ವಾರಿಯೊಳಗಾಡಿರ್ದ ನೀರೆಯಂ ಕಂಡಾಗ
ಜಾರನೈದಂ ಛಲದೆ ಕಾಣದವೊಲೀಸಿ
ನೀರಿನೊಳ್ ಪಿಡಿಯಲ್ ಸಪೂರ ನಡುವಂ ಮನದೆ
ನೀರಜೆಯ ಸಾಂಗತ್ಯದೋಲ್ ಸಂದೆಗಂ
[ಮೆಲ್ಲಗೆ ಈಸಿ ಹೋಗಿ ನೀರಿನಲ್ಲಿದ್ದ ನೀರೆಯ ತೆಳ್ಳನೆಯ ನಡುವನ್ನು ಹಿಡಿಯಲಾಗಿ ತಾನು ಕಮಲದ ಜೊತೆಗಿರುವ ಸಂದೇಹವಾಯ್ತು. (ನಡುವು ಕಮಲದ ದಂಟಿನಂತೆ ತೋರಿತೆಂಬ ಧ್ವನಿಯ ಆಶಯ)]

ಕಾಂಚನಾರ ಪದ್ಯ-೧
ಅರಳುವುದನನುಕರಿಸೆ ಭೂತಲದ ಜನಕಿದೋ
ದೊರಕಿತೆಂ ನಗುವೆಂಬ ಸುಂದರದುಡೆ!
ಶರರುಹವೆ! ಕೆಸರಿಂದಲೆದ್ದೊಗೆವ ತವ ಬಾಳ್ತೆ
ಪಿರಿದಪ್ಪ ಬದುಕಿಂಗೆ ನೆರವಿತ್ತುದೇಂ!|

ಕಾಂಚನಾರ ಪದ್ಯ-೨
ತನ್ನಂತರಂಗಮಂ ಬಚ್ಚಿಡುತುಮಂಬುಜಂ
ನನ್ನಿಯಿಂದೀಕ್ಷಿಸುತಲಿನನ ಬರವಂ,|
ಚೆನ್ನಾದ ಮಾರ್ಗಮಂ ನಿಕ್ಷೇಪಿಸಿರ್ಪಳೇಂ
ಬನ್ನದಭಿಸರಣದೊಳ್ ಸುಖಮದೆಂದು!|

ಕಾಂಚನಾರ ಪದ್ಯ-೩
ಇರುಳೊಳಿನನಂ ಕಾವುದಂಬುಜಕೆ ಸಾಜಮೋ!
ವಿರಹದಿಂದೊದವಿದಭಿಸಾರಮಿದುವೋ!
ಪರಮಾತ್ಮಸಾನಿಧ್ಯಕೆಂದಿತ್ತ ಮನಮೊ! ಇದು
ಮರಳುಮಾಳ್ಪೊಂದು ನಾಟಕದಾಟಮೋ!
(ಸೂರ್ಯನಿಗಾಗಿ ಕಾಯುವುದು ಅಂಬುಜಕೆ ಸಹಜವೊ, ಕೈಗೊಂಡ ಅಭಿಸಾರವೋ, ಭಕ್ತಿಯೋ, ಮರಳು ಮಾಡಲಾಡುವ ನಾಟಕದಾಟಮೋ)

ಕಾಂಚನಾರ ಪದ್ಯ-೪
ದೇವಿಯ ಕರದಿಂ ಪಡೆಯುತು
ಮೀ ವಿಧದೊಂದು ಮೃದುಕಾಯಮಂ, ಚೆಂದುಟಿಯಿಂ|
ಪಾವಕವರ್ಣಮನಾ ಹರಿ
ಯೋವಿದ ಮೊಗದಿಂದೆ ಕಾಂತಿಯಾಂತುದೆ ಕಮಲಂ!!
(ದೇವಿಯ ಕರದಿಂದ ಮೃದುತ್ವವನ್ನು, ತುಟಿಯಿಂದ ಬೆಂಕೆಯ ವರ್ಣವನ್ನು ಪಡೆದು ಹರಿಯು ಪ್ರೀತಿಸುವ ಮೊಗದಿಂದ ಕಾಂತಿಯನ್ನು ಈ ತಾವರೆಯು ಪಡೆದಿದೆಯೇ!!)

ಉಷಾರವರ ಪದ್ಯ
ಸಮ ಪಂಕಜಂ ಪಾದ, ಹಸ್ತಗಳ್ ಮೇಣ್ ಹೃದಯ
ಕುಮುದಂ, ಸಹಸ್ರದಳಪದ್ಮ ಶಿರವುಂ|
ಕಮನೀಯವುಂ ಕಮಲದೊಳ್ ಕಮಲ ಮುಖನಯನ
ಅಮಮಮಾ “ಜಲಜ”ವೇಂ ಜೀವಜಗವುಂ?!

ವೀಣಾರವರ ಪದ್ಯ
ಬಗೆಬಗೆಯ ಪೂಗಳಿರೆ ಜಗದೊಳು
ಸೊಗದ ಮೊಗಗಳಿಗೆನ್ನ ಪೆಸರಿಂ
ಸೊಗಸುಮಾತುಗಳಾಡುತಲಿ ಬಣ್ಣಿಪರು ಕವಿವರರು|
ಬಗೆಯೆ ಕಾರಣವೇನಹುದು ಸಿರಿ
ಭಗವತಿಯನೀ ನೆವದಿನೆಳೆಯುವ
ಬಗೆಯಿದೇನೆಂದಂಜಿ ಮುದುಡಿತೆ ಕೆಂಪುದಾವರೆಯು?!

ರವೀಂದ್ರಹೊಳ್ಳರ ಪದ್ಯ
ಘನಮೀ ಕಾವ್ಯಾಬ್ಧಿಯೊಳ್ ಕಾಣ್ ಕವಿಕುಲಗುರುವೆಂದೆಂದಿಗುಂ ಶ್ರೇಷ್ಠಪದ್ಮಂ
ತನುವೆಂದುಂ ಬಾಡದಿರ್ಕುಂ ಬೆಳಗಿರುವನಕಂ ಭಾರತಾರ್ಷೇಯಸೂರ್ಯಂ|
ನೆನೆಯಲ್ ವ್ಯಾಸಂಗಿಭೃಂಗರ್ ಕಮಲಕುಲಲಲಾಮಂ ನಿಜಂ ಮೇಣದೆಂತಾ
ಸನನಾದಂ ವಾಣಿಗಂ ಹ್ಹಾ! ಸರಸಿಜಭವನಿತ್ತಿರ್ಪುದೇಂ ಪ್ರೀತಿಯಿಂದಂ||
ಕಾಳಿದಾಸನಾದರೋ ಕಾವ್ಯಸರೋವರದಲ್ಲಿ ಶ್ರೇಷ್ಠಪದ್ಮ, ಭಾರತಾರ್ಷೇಯಸೂರ್ಯ ಬೆಳಗಿರುವ ತನಕ ಬಾಡುವನಲ್ಲ. ವ್ಯಾಸಂಗಿಭೃಂಗರಾದ ಸಹೃದಯರು, ಕಾವ್ಯಾಸಕ್ತರು (ಯಾವಾಗಲೂ) ನೆನೆಯುತ್ತಿರುತ್ತಾರೆ. ಆದ್ದರಿಂದ ಈತ ಕಮಲಕುಲಲಲಾಮನೇ ಸರಿ. ಆದರೆ, ಕಮಲಾಸನನ ಪೀಠವಾಗುವ ಬದಲು ಶಾರದಾಪೀಠನಾದನಲ್ಲ! ಬಹುಶಃ ಬ್ರಹ್ಮನೇ ಪ್ರೀತಿಯಿಂದ ಕೊಟ್ಟನೇನೋ?

Jul 052020
 

ವೀಣಾ ಉದಯನರ ೧೧ ಪದ್ಯಗಳು
वात्सल्यभावार्द्रपयोधरायाः
आशीविषैः सिक्तपयोधरायाः।
कंसानुजायाश्च कुपूतनायाः
लक्ष्यं मुकुन्दं मनसा स्मरामि॥१॥

चोर! क्व यातोऽसि दधि प्रणाश्य?!
वेत्रं गृहीत्वेत्थमनुद्रवन्त्याः।
वृन्दावने वन्दितनन्दवध्वाः
लक्ष्यं मुकुन्दं मनसा स्मरामि॥२॥

हा!त्रास्य तत्पिञ्छमियं हि तद्गौः
हा! ध्वानमन्योऽप्यसुरो हतः स्यात्।
अन्विष्यतामित्थमिदं(मं) सखानां
लक्ष्यं मुकुन्दं मनसा स्मरामि॥३॥

व्याजेन केनापि गृहस्य कृत्याद्
उत्थाय, पश्यामि कदा प्रिय! त्वाम्।
इत्याकुलस्त्रीकुललोचनानां
लक्ष्यं मुकुन्दं मनसा स्मरामि॥४॥

क्रूरेण नीतोऽस्ति कदैति वेति
प्रतीक्षणश्रान्तदृशेषितानाम्।
राधासुनिःश्वासजपत्रिकाणां
लक्ष्यं मुकुन्दं मनसा स्मरामि॥५॥

धर्माध्वरेऽग्रास्य भवेत् सपर्ये
त्युक्त्यैकमात्रं समभूद्यदित्थम्।
प्रेमाक्षमत्रासवदीक्षितानां
लक्ष्यं मुकुन्दं मनसा स्मरामि॥६॥

दुर्वृत्तदुश्शासनशास्यमानां
गोविन्द पाहीति तदा सभायाम्।
रोरुद्यमानद्रुपदात्मजाया
लक्ष्यं मुकुन्दं मनसा स्मरामि॥७॥

कामं परित्यज्य च सर्वधर्मान्
त्वं मां शरण्यं शरणं व्रजेति।
योऽबोधयत्तं परमार्थरूपं
लक्ष्यं मुकुन्दं मनसा स्मरामि॥८॥

धनुर्गृहीत्वौपनिषन्महास्त्रं
शरं ह्युपासानिशितं विधाय।
विन्दन्ति यं योगिन एकमात्रं
लक्ष्यं मुकुन्दं मनसा स्मरामि॥९॥

यो वै रसानामपि नीरसानाम्
आधार आनन्दनिधी रसः सः।
साहित्यगीतादिकलानदीनां
लक्ष्यं मुकुन्दं मनसा स्मरामि॥१०॥

यत्तत्त्वमस्यादिपदैर्विभाव्यं
यद्ब्रह्म सच्चित्सुखरूपमाद्यम्।
अज्ञानिनां ज्ञानवतां तदेकम्
लक्ष्यं मुकुन्दं मनसा स्मरामि॥११॥

Jul 052020
 

ಸಂದೀಪರ ಪದ್ಯ:
ಕುಟ್ಟಿದಳು ಹೊಟ್ಟೆಯನು ಸಿಟ್ಟಿನಲ್ಲಕಟಾ
ಕಟ್ಟಿತದು ಖಳಕೂಟ ನರಕದಲಿ ನಗುತ|
ಹೆಟ್ಟುವೊಲೆ ತಾಯ್ತನವ ಮತ್ಸರವ ಹಡೆಯೆ
ಚಟ್ಟದೆಡೆ ಹೋಗಿತ್ತು ಭರತಕುಲದೊಡಲು||

Jul 042020
 

ಶಶಿಕಿರಣ್ ರವರ ಪದ್ಯ
भूयान्नः समवर्तिवर्तनपरिज्ञानप्रतिष्ठापितं
निर्णिक्तं नचिकेतसः, पितृवचःप्रामाण्यधिक्कारजम्।
प्रह्लादस्य, निजाम्बिकागृहविशत्तातावरोधात्मकं
दौर्लालित्यममोघमप्रतिभटं तद्भूयसे श्रेयसे।।
(ಯಮನ ವರ್ತನೆಯ ಹಿಂದಿರುವ ತತ್ತ್ವವನ್ನು ತಿಳಿಯಬಯಸಿದ ನಚಿಕೇತನ, ತಂದೆಯ ಮಾತನ್ನೂ ಲೆಕ್ಕಿಸದ ಪ್ರಹ್ಲಾದನ, ಅಮ್ಮನ ಮನೆಯೊಳಗೆ ಹೋಗಲು ಬಯಸಿದ ತನ್ನ ತಂದೆಯನ್ನೇ ತಡೆದ ಗಣಪತಿಯ ಮೊಂಡುತನ ನಮಗೆ ಅಪಾರಶ್ರೇಯಸ್ಸನ್ನು ಕರುಣಿಸಲಿ.)

ರವೀಂದ್ರಹೊಳ್ಳರ ಪದ್ಯ
ಕಂದನ ಕೋಪದಿಂ ಬಡವಳಾಗಿರೆ ಲಕ್ಷ್ಮಿ, ಸರಸ್ವತಿ ಪ್ರತಿ-
ಸ್ಪಂದಿಸಿ ಯುಕ್ತಿಗಾಣದಿರೆ ಪಾರ್ವತಿ ಯತ್ನಿಸಿ ಶಕ್ತಿಗುಂದಿರಲ್|
ನಂದಿನಿ ಬಂದು ಪಾಲುಣಿಸಿ ಲಾಲಿಸಿ ನಿದ್ರಿಸೆ ತೋರಿದತ್ತು ಬಾ
ಲೇಂದುವೆ ಕಾಂತಿಯಿಂ ಮುಗಿಲಿನೊಲ್ಮೆಯ ತೊಟ್ಟಿಲನೇರಿದಂತೆಯೋಲ್||
(ಮಕ್ಕಳ ಹಟಕ್ಕೆ ಎಷ್ಟೋ ಬಾರಿ, ಮೂಲಕಾರಣ, ಹಸಿವು ನಿದ್ರೆಯೇ ಆದಾಗ, ದುಡ್ಡು, ಬುದ್ಧಿ, ಶಕ್ತಿ ಸೋಲುತ್ತದೆ.)

Jul 042020
 

ರವೀಂದ್ರಹೊಳ್ಳರ ಪರಿಹಾರ:
ಏಕೆಂದುಂ ಬರೆದವನುಂ
ಸಾಕೆಂದುಂ ಕೇಳುತಿರ್ಪನರಿಯದ ಕವಿಗಳ್
ಲೋಕದ ಸಮ್ಮೇಳನದೊಳ್
ಮೂಕಂ ಪಾಡಲ್ಕೆ ಕಿವುಡನಾಲಿಸುತಿರ್ದಂ
(ಬರೆದವನಿಗೆ ಬರೆದದ್ದೇಕೆಂದು ಗೊತ್ತಿಲ್ಲ, ಕೇಳುಗನಿಗೆ ಸಾಕೆಂದು ಹೇಳಲೂ ತಿಳಿಯದ ಸಾಹಿತ್ಯಸಮ್ಮೇಳನದ ಗತಿ)

ಕಾಂಚನಾರ ಪರಿಹಾರ:
ನಾ ಕಾಣುತಿರ್ಪೊಡಂ ಚಾ
ಲಾಕಿ ಕ್ರೈಸ್ತಗುರುವರ್ಯನಾ ಕಪಟಕರಂ|
ತಾಕಲ್, ನಡೆದಂ ಹೆಳವಂ!
ಮೂಕಂ ಪಾಡಲ್ಕೆ! ಕಿವುಡನಾಲಿಸುತಿರ್ದಂ!|
(ಮತಾಂತರದ ನಾಟಕ)

ಉಷಾರವರ ಪರಿಹಾರ:
ಲೋಕದೊಳತಿ ಸಾಮಾನ್ಯಂ
ಮೂಕಾಭಿನಯಂ ಸಲಲ್ ಶ್ರವಣಸಾಧನದೊಳ್|
ಏಕಾಂಗಿಯಿನೇಕಾಂಕದೆ
ಮೂಕಂ ಪಾಡಲ್ಕೆ ಕಿವುಡನಾಲಿಸಿರ್ಪಂ!!
ಇಅರ್ ಫೋನ್ ಧರಿಸಿದ ಏಕಾಂಗಿ (ಕಿವುಡ) – (ಇಅರ್ ಫೋನ್ ಕನೆಕ್ಟ್ ಆದ ತಕ್ಷಣ ಮ್ಯೂಟ್ ಆಗುವ – ಮೂಕ ) ಮೊಬೈಲ್ ನಲ್ಲಿ ಮುಳುಗಿರುವ “ಏಕಾಂಕ”ದ ಪೂರಣ

Jul 042020
 

ಶಶಿಕಿರಣ್ ರವರ ಪದ್ಯ:
क्रीडोद्भवेन रजसा तरुणस्य रुष्टः
केदारकर्दमजुषा कृषकस्य दिग्धः।
लोकत्रयप्रसृमरप्रभवस्य पुंस-
स्त्रैविक्रमोऽस्तु जगतां प्रशमाय पादः।।

ರಾಘವೇಂದ್ರ ಹೆಬ್ಬಳಲುರವರ ಪದ್ಯ
जीवमलीमसमानसमन्दिर-
खेलनतत्पर बाल हरे।
तामसराजसपङ्किलपादं
क्षालय मे नयनोष्णजलैः।।
O Hari, O child who is engrossed in playing in the dirty mind-abodes of the jIvas, wash your feet dirtied by rajas & tamas with my hot tears.

ಸಂದೀಪರ ಪದ್ಯ
ಮುನಿಯ ದರ್ಪಪಾದನೇತ್ರ
ಮಣಿಸೆ ಸರ್ಪಶಾಯಿಯಂ|
ಹಣಿಯೆ ಮಂದಹಾಸದಲ್ಲಿ
ಮುನಿಗಾಯ್ತು ತಪಃಫಲಂ||

ರವೀಂದ್ರಹೊಳ್ಳರ ಪದ್ಯ
ಊರ್ಮಿಮಧ್ಯದ ಸಮುದ್ರಮಂಥನಂ
ಮಾರ್ಮಿಕಂ ಗಡ ಮುಳುಂಗೆ ಮಂದರಂ|
ಕೂರ್ಮನಾಧರಿಸೆ ಬಾಗಿ ವಂದಿಪೆಂ
ಧರ್ಮಕೆಂದೆ ಕೊಳಕಾದ ಕಾಲಿಗಂ||

Jul 042020
 

ಶಶಿಕಿರಣ್ ರವರ ಪದ್ಯ:
विभातीव चिरादुल्का गर्भेतृप्तस्य कामना।
भास्वरा प्रथमे पादे पर्यन्ते गर्तगामिनी।।
(ಉಲ್ಕೆ ನಿಷ್ಪ್ರಯೋಜಕನಾದ ಸೋಮಾರಿಯ ಆಶೆಯಂತೆ ಕಾಣುತ್ತದೆ–ಮೊದಮೊದಲಲ್ಲಿ ಬೆಳಗಿ ಕೊನೆಗೆ ಹಳ್ಳ ಸೇರುತ್ತದೆ.)

ರಾಘವೇಂದ್ರ ಹೆಬ್ಬಳಲುರವರ ಪದ್ಯ:
ऋक्षैर् मन्दप्रकाशैस्तैर् दीर्घायुर्भिः किमस्ति नः?
उल्कयात्यल्पकालेपि लोक आलोकितोऽखिलः।।
(आलोकित – lit)

ವೀಣಾ ಉದಯನರ ಪದ್ಯ:
प्रतीक्षमाणं सुचिरात् स्वकान्तां
तं कामिनं निःश्वसितेद्धगात्रम्।
दिगम्बरस्येव तृतीयनेत्रात्
समुत्थितोल्का निजघान हन्त!|

ರವೀಂದ್ರಹೊಳ್ಳರ ಪದ್ಯ
ಉಲ್ಕಾಪಾತಂ ಗಗನದೊಡಲೊಳ್ ಸಂದ ಮಾಯಾವಿನೋದಂ
ಮಿಲ್ಕೀವೇಯೊಳ್ ಮೊಸರಪನಿಗಳ್ ಬೀಳ್ದೊಡಂ ಬಾನೆ ನುಂಗಲ್
ಕಲ್ಕೀಶಂ ಮೇಣದೊ ವಿರಮಿಸಲ್ ದೀಪಮಂ ಪೊಳ್ತಿಸಲ್ ಮಾ
ಸಲ್ಕೀ ದೃಶ್ಯಂ ಜನನಯನದೊಳ್ ತೋರ್ವುದಾಶ್ಚರ್ಯಹರ್ಷಂ||

Jul 042020
 

ವೀಣಾ ಉದಯನರ ಪದ್ಯ:
स्वहावैरात्मानं दशरथमिहाकर्षति बलात्
असन्तृप्तं लक्षैः परिजनयशःश्रीप्रभृतिभिः।
दुराशासैरन्ध्रीवचनकृतसम्प्रोषितसुखम्
मनः कैकेयीव श्रथति पुरुषं क्लीबधिषणम्।।

Jul 042020
 

ಉಷಾ ಉಮೇಶರ ಪದ್ಯ:
ಕಾಡಿಹರು ಗೊಟ್ಟಿಯಲಿ ಸಾಲ್ದಲೆಯ ಕಬ್ಬಿಗರು
ಸೋಡಿಬಿಡದಲೆಯೆ ಸಾಲಕದೊ ಸಾಲ|
ಕೂಡಿಕೊಡಲೆನಗೆ ಕಾಲವೆ ಸಾಲುತಿಲ್ಲವಲ
ನೀಡುವಿರೆ ನಾಲ್ನಾಲ್ಕು ಸಾಲ ಸಾಲ?!!

Jul 042020
 

ಕಾಂಚನಾರ ಪರಿಹಾರ:
ಕುಣಿಯಲಮ್ಮದು ಸೋಗೆ ಜಗತ್ತಿನೊಳ್,
ಮಣಿದು ಬೇಡಿದರಾದೊಡನುಂ ನರರ್!
ಗಣಿಸುತೀ ಪರಿ ಕಂಟಕಮಂ ದಿಟಂ
ತಣಿದರೆಂದೊ ಮಯೂರದ ವೇಷದೊಳ್!|
ನರರು ನೋಡಬಯಸಿ ಬೇಡಿಕೊಂಡರೂ ಸೋಗೆಯು ಕುಣಿಯುವುದಿಲ್ಲವೆಂದು ಎಂದೋ ಮಯೂರನೃತ್ಯವನ್ನು ರೂಢಿಸಿಕೊಂಡಿದ್ದಾರೆ

ವೀಣಾ ಉದಯನರ ೨ ಪರಿಹಾರಗಳು:
शिवताण्डवमीक्षितं स्मर-
न्ननुकृत्य स्खलितः पुरः स्त्रियः।
गत इत्युपहासपात्रताम्
प्रचलाकी न हि वेत्ति नर्त्तनम्।।1

निजपिञ्छमपाहरत्पुरा-
पहरेदन्नकलेद्य मे त्विति।
यदुबाल-कलिङ्गनर्तनात्
प्रचलाकी न हि वेत्ति नर्त्तनम्।।2

Jul 042020
 

ನೀಲಕಂಠ ಕುಲಕರ್ಣಿಯವರ ೨ ಪರಿಹಾರಗಳು:
ವ್ಯೋಮವಿಚಿತ್ರತೆಯೆನಲೀ
ನೇಮದೆ ಖಗ್ರಾಸಭಾಸ್ಕರಗ್ರಹಣಂ ತಾಂ|
ಕ್ಷೇಮದೆ ಸರಿಯಲ್ಕರರೇ
ಸೋಮಂ ಪ್ರಸವಿಸಿದನಲ್ತೆ ಸೂರ್ಯನನೀಗಳ್||೧

ಹೋ ಮಣ್ತಿಂದೆಯೊ ನೀನೆನು-
ತಾ ಮಾತೆ ಯಶೋದೆ ನೋಡೆ ಬಾಯೊಳ್ ಸೃಷ್ಟಿ-|
ಸ್ತೋಮಮನೆ ತೋರಿ ಯದುಕುಲ-
ಸೋಮಂ ಪ್ರಸವಿಸಿದನಲ್ತೆ ಸೂರ್ಯನನೀಗಳ್||೨
ತಾಯಿಗೆ ತನ್ನ ವಿಶ್ವರೂಪವನ್ನು ತೋರುತ್ತ ಯದುಕುಲಸೋಮ ತಾನು ಸೂರ್ಯನನ್ನು ಹೆತ್ತುದನ್ನು ತೋರಿದನು

ಕಾಂಚನಾರವರ ಪರಿಹಾರ:
ವಾಮವದನನಾ ಪೌರ್ಣಿಮೆ
ಸೋಮಂ, ಪ್ರಸವಿಸಿದನಲ್ತೆ ಸೂರ್ಯನೀಗಳ್!
ಭಾಮೆಯನಾಗಮನದೊಳಾ
ಕಾಮಿಯ ಚಿತ್ತದೊಳೆ ವೆಂಕೆಯಿಡುತೆ ವಿರಹದಾ||

ವೀಣಾ ಉದಯನರ ಪರಿಹಾರ-೧ – ಸ್ಯಮಂತಕಮಣಿಪ್ರಸಂಗ:
ರಾಮೆಯೊಡನೆ ಕರಿಗುಹೆಯಿಂ-
ದಾ ಮಣಿಯಂ ಪಿಡಿದುಂ ತಾಂ ಕೃಷ್ಣ ಬರಲ್ಕಾ|
ತಾಮಸಜನರಿಂತೆಂದರ್
ಸೋಮಂ ಪ್ರಸವಿಸಿದನಲ್ತೆ ಸೂರ್ಯನನೀಗಳ್||

ವೀಣಾ ಉದಯನರ ಪರಿಹಾರ-೨
ನೇಮದೆ ಧ್ಯಾನದೊಳಿರಲಾ
ಕಾಮಂ ಬರೆ ಕೆಣಕೆ ತಪವ ನಿಲಿಸಲ್, ರುಷೆಯಿಂ|
ರಾಮಾ! ಧಗೆಯಾಯ್ತಯ್ಯೋ!
ಸೋಮಂ ಪ್ರಸವಿಸಿದನಲ್ತೆ ಸೂರ್ಯನನಾಗಳ್||

ಶಕುಂತಲಾ ಮೊಳೆಯಾರರ ಪರಿಹಾರ:
ತಾಮಸದಿಂದಿರೆ ನಿಜದೊಳ್,
ಸೀಮಾತೀತದೊಳೆ ದೀಪ್ತಿಯಂ ಜಗಕೀಯಲ್,|
ನೇಮದೆ ಪಡೆದವನಿಂದಂ, (ನೇಮದೆ ಪಡೆಯುತೆ ರವಿಯಿಂ)
ಸೋಮಂ ಪ್ರಸವಿಸಿದನಲ್ತೆ ಸೂರ್ಯನನೀಗಳ್।।

ಉಷಾ ಉಮೇಶರ ಪರಿಹಾರ-೧:
ಕೋಮಳಮಮಮಾ ಕಂದಂ
ಬಾಮದ ಮುಖಚಂದ್ರದಿಂದೆಸೆದ ರವಿನೇತ್ರಂ|
ಭ್ರೂಮಧ್ಯದೆಡಬಲದೆ ಕಾಣ್
ಸೋಮಂ ಪ್ರಸವಿಸಿದನಲ್ತೆ ಸೂರ್ಯನನಾಗಳ್!!
(ಬಾಮ = ಮನೋಹರ)

ಉಷಾ ಉಮೇಶರ ಪರಿಹಾರ-೨:
ಭೂಮಿಯೊಳು ಕಾಲಗಣನದ
ನೇಮಮಿದುಂ, ಹೊತ್ತು ’ತಿಂಗಳು’ ಹೆರುದು ’ದಿನ’ವಂ|
ಸಾಮಂ ಕಾಣ್ ’ಪದ’ದೊಳ್ ಗಡ
ಸೋಮಂ ಪ್ರಸವಿಸಿದನಲ್ತೆ ಸೂರ್ಯನನಾಗಳ್!!
(ತಿಂಗಳು = ಚಂದ್ರ, ದಿನ = ಸೂರ್ಯ)