Nov 042011
 

ರಾಮಾಯಣ, ಮಹಾಭಾರತ, ಕಾಳಿದಾಸನ ಮಹಾಕಾವ್ಯಗಳೆಲ್ಲವನ್ನೂ ಮೂಲದಲ್ಲಿ ಓದಿ ಮುಗಿಸಿದ ಗೆಳೆಯನ ಕುರಿತು ಬರೆದ ಪದ್ಯಗಳು :: ಮೇಲೆ ತೇಲುತ ಸಾಗರಂಗಳ ಮೂಲೆಯಲ್ಲಳುಕುತ್ತ ಮೆರೆಯದೆ ಆಳಗಳನೆಲ್ಲವನು ಶೋಧಿಸಿ ಮಥಿಸಿದಾ ಶೂರ | ಮೂಲ ಗ್ರಂಥಂಗಳ ಪಠನವೀ ಕಾಲಗಳಲಪರೂಪವಾಗಿರೆ ಪಾಲು ಕದಳೀ ಫಲದವೋಲ್ ಕಳೆದಿರ್ಪನೀ ಧೀರ || ಪರುಠವಿಸುತ ಕುಶಾಗ್ರಮತಿಯ – ನ್ನರಸಿ ಸತ್ಯಾಂಶಂಗಳೆಳೆಗಳ – ನೆರಕವೆರೆದಿಹ ತರ್ಕಗಳ ಚಿರ ತತ್ವಗಳ ಬೆಳಗಿ | ಸರಸ  ಹಾಸದ ಸರಳ ಸಖ ಸುಮ – ಧುರ ಸರಾಗ ಗುಣಂಗಳಾ ಗಣಿ ಹರಳೊ […]

Oct 262011
 

ಚತುರ್ವಿಧ ಕಂದವೆಂದರೆ, ಒಂದೇ ಕಂದಪದ್ಯವನ್ನು ವಿವಿಧ ರೀತಿಗಳಲ್ಲಿ ವಿಭಜಿಸಿ ಅರ್ಥಭಂಗವಾಗದಂತೆ ಮತ್ತಷ್ಟು ಕಂದಪದ್ಯಗಳನ್ನು ರಚಿಸುವ ಪ್ರಕ್ರಿಯೆ. ಇಲ್ಲಿ ಮೊದಲಪದ್ಯವೇ ಕೀಲಕ. ಮೊದಲಪದ್ಯದಲ್ಲಿ (೧), ಘನಶಾಸ್ತ್ರ ವೆಂಬ ಎರಡನೆಯ ಸಾಲಿನ ಎರಡನೆಯ ಪದದಿಂದ ಪ್ರಾರಭಿಸಿ ಎರಡನೆಯ ಕಂದಪದ್ಯವನ್ನೂ, ಸ್ಫುರಧೀ ವೆಂಬ ಮೂರನೇ ಸಾಲಿನ ಮೊದಲ ಪದದಿಂದ ಪ್ರಾರಭಿಸಿ ಮೂರನೇ ಕಂದಪದ್ಯವನ್ನೂ,  ದಿನಕರ ಎಂಬ ನಾಲ್ಕನೇ ಸಾಲಿನ ಎರಡನೆಯ ಪದದಿಂದ ಪ್ರಾರಭಿಸಿ ನಾಲ್ಕನೇ ಕಂದಪದ್ಯವನ್ನೂ ಬಿಡಿಸಿ ರಚಿಸೆದೆ. ಮೊದಲ ಪದ್ಯದಲ್ಲಿನ ಪದಗಳೇ ನಾಲ್ಕೂಪದ್ಯಗಳಲ್ಲಿ ಪುನರಾವೃತ್ತಿಯಾಗದೆ,  ಬೇರೆ ಪದಗಳನ್ನು ಸೇರಿಸದೆ ರಚನೆಯಾಗಿರುವುದು […]

Oct 252011
 

ದೀಪಾವಳಿಯ ಕಾರಣ ಕೆಲವಾದರೂ ಹಬ್ಬದ ಬಗೆಗಿನ ಪದ್ಯಗಳಿರಲೆಂದು ಅಪೇಕ್ಷೆ. ಈ ನೆವದಲ್ಲಿ  ಹೊಸ ಛಂದಸ್ಸುಗಳ ಅಥವಾ ವಿವಿಧಚ್ಛಂದಸ್ಸುಗಳ ಬಳಕೆಯಾಗಲೆಂಬ ಬಯಕೆಯೂ ಇದೆ. ಮೊದಲ ಹೆಜ್ಜೆಯಾಗಿ ನನ್ನ ಒಂದೆರೆಡು ಪದ್ಯಗಳು: ದ್ರುತವಿಲಂಬಿತವೃತ್ತ|| ನರಕದಾನವಕಾಲದವಾನಲ- ಕ್ಕುರುವಿನೀಲಪಯೋಧರವಾಗುತುಂ | ಮೆರೆದ ಕೃಷ್ಣನ ಕಂಗಳ ಮಂಗಳ- ಸ್ಫುರಣದೀಪಿಕೆಗಳ್  ಶುಭಕೊಪ್ಪುಗುಂ || ರಥೋದ್ಧತಾವೃತ್ತ|| ದೇವಗಂಗೆ ಧವಳಧ್ವಜೋಪಮಂ ತೀವಿರಲ್ ನಭದೆ ವಾಮನಾಂಘ್ರಿಯೊಳ್ ಜೀವಿಗಳ್ಗೆ ಸುಖಶಾಂತಿಯೀವವೊಲ್ ಭಾವಿಕಂ ಗಡಿದು ಪರ್ಬಮೊಪ್ಪುಗುಂ|| ಕಂದ|| ಕತ್ತಲೆಸುತ್ತುಂ ಜಗಮಿದು ಕತ್ತಲೆ ಸುತ್ತುಂ ಕಡಂಗಿದುದೆನುತ್ತುಂ ಬೇ- ಸತ್ತಿರೆ ಸಂಪದನಳಿಸುತೆ, ಸತ್ತಿರೆ ಸಂಪದಮದಂ ಬರ್ದುಂಕಿಪುದೊಳಿತಯ್|| […]

Oct 242011
 

ಕಂದವ ರಚಿಸಲ್ ಯತ್ನಿಸಿ ಚಂದದಿ ಭಾಮಿನಿಯ  ತನ್ನ ಮನದೊಳ್ ಮೊದಲೊಳ್ ಕುಂದಿರದೆಯೆ ನಿಲಿಸಿರಬೇ ಕೆಂಬುದು ಅರಿವಾಯಿತೆನ್ನ್ ಮಂದದ ಮತಿಯೊಳ್   the above one is with corrections from ganesh sir. it was earlier as ಕಂದವ ರಚಿಸಲ್ ಯತ್ನಿಸಿ ಚಂದದಿ ಭಾಮಿನಿಯ ಪೂರ್ವದಲಿ ತನ್ನ ಮನದ ಬಂದನದೊಳು ನಿಲಿಸಿರಬೇ ಕೆಂಬುದು ಅರಿವಾಯಿತೆನ್ನ್ ಮಂದದ ಮತಿಯೊಳ್

Oct 202011
 

ಕಂದ ಛಂದಸ್ಸಿನ ಸಮಸ್ಯಾಪದ್ಯದ ನಾಲ್ಕನೆಯ ಸಾಲು ಹೀಗಿದೆ :: ಡಂಗುರಮಂ ಬನದೆ ಸಾರುತಿರ್ಕುಂ ಭ್ರಮರಂ ಮೊದಲ ಮೂರು ಸಾಲುಗಳನ್ನು ಪೂರೈಸಿರಿ. ವಿ.ಸೂ ::‌ ಈ ಸಮಸ್ಯೆಯು ಗಣೇಶರಿಂದ ಸಿಕ್ಕದ್ದು

Oct 162011
 

ಕೆಳಗಿನ ಸಾಲು ಕಂದ ಪದ್ಯದ ಕೊನೆಯ ಸಾಲು. ಮೇಲಿನ ಮೂರು ಸಾಲುಗಳನ್ನು ಪೂರೈಸಿರಿ :: ಕಮಲಂ ಚಂದ್ರಂಗೆ ತಕ್ಕುದೆನಿಸಿತ್ತಲ್ತೇ! (ಕಮಲ ಮತ್ತು ಚಂದ್ರರಿಗೆ ಹೊಂದಿಕೆಯಿಲ್ಲವೆಂಬ ಕವಿಸಮಯವನ್ನು ಆಧರಿಸಿದ ಸಮಸ್ಯೆಯಿದು) ವಿ.ಸೂ ::‌ ಇದು ಗಣೇಶರು ನೀಡಿದ ಸಮಸ್ಯೆ ಕಂದ ಪದ್ಯದ ಛಂದಸ್ಸಿನ ವಿವರಣೆ ಇಲ್ಲಿದೆ

Oct 112011
 

ಕಂದ ಛಂದಸ್ಸಿನ ಪದ್ಯದ ಕೊನೆಯ ಸಾಲು ಹೀಗಿದೆ :: ಫಲಮಂ ತಿನಲಪ್ಪುದೇಂ ರಸಾಲಫಲದವೊಲ್? (ರಸಾಲ= ಮಾವು) ಮೊದಲ ೩ ಸಾಲುಗಳನ್ನು ಪೂರೈಸಿರಿ ಕಂದ ಪದ್ಯದ ಛಂದಸ್ಸಿನ ಸ್ವರೂಪ ಇಲ್ಲಿದೆ ವಿ.ಸೂ :: ಇದು ಗಣೇಶರು ಕೊಟ್ಟ ಸಮಸ್ಯೆ

Oct 112011
 

ಇದು ಕನ್ನಡದಲ್ಲಿ, ಚತುರ್ಮಾತ್ರಾಗಣದ ವಿಶೇಷವಾಗಿ ಉಪಯೋಗಿಸಲ್ಪಟ್ಟ ಛಂದಸ್ಸು. ಇದರ ಹೆಸರಿನ ಉಗಮ “ಸ್ಕಂದಕ → ಕಂದಅ → ಕಂದ” ಹೀಗೆ ಆಗಿರಬಹುದು. ೪ ಪಾದಗಳಲ್ಲಿ ಮಾತ್ರಾ–ಗಣ ವಿಭಾಗಗಳು ಇಂತಿವೆ :: ೧. ೪ + ೪ + ೪ ೨. ೪ + ೪ + ೪ + ೪ + ೪ ೩. ೪ + ೪ + ೪ ೪. ೪ + ೪ + ೪ + ೪ + ೪ ಈ […]

Oct 062011
 

ಗೆಳೆಯರೆ, ಕನ್ನಡದ ಜೊತೆಜೊತೆಗೆ, ಸಂಸ್ಕೃತದ ಛಂದಸ್ಸನ್ನು ಜೊತೆಗೆ ಸಂಸ್ಕೃತವನ್ನೂ ಅರಗಿಸಿಕೊಳ್ಳುವ ಮನಸ್ಸು ನನ್ನದು. ಅದಕ್ಕಾಗಿ, ನನ್ನ ಮೊದಲ ಪ್ರಯತ್ನ. ವಿಜಯದಶಮಿಯ ದಿನವೇ ಆರಂಭಿಸಬೇಕೆಂಬ ತರಾತುರಿಯಿಂದ ಬರೆದಿದ್ದೇನೆ. ತಪ್ಪುಗಳನ್ನು ತಿಳಿಸಿ, ತಿದ್ದಿಕೊಳ್ಳುತ್ತೇನೆ. ಸುಮುಹೂರ್ತೆ ದಶಮ್ಯಾಂ ಹಿ ಪದ್ಯಂ ರಚಿತುಮುತ್ಸುಕ: ಬೀಜಮಿದಂ ವಪಾಮ್ಯದ್ಯ, ದೃಷ್ಟುಮಿಚ್ಚಾಮಿಕಾನನಂ (ಶುಭ ದಶಮಿಯಂದು ಪದ್ಯರಚಿಸಲು ಉತ್ಸುಕನಾಗಿ, ಮೊದಲ ಬೀಜವನ್ನು ಬಿತ್ತಿದ್ದೇನೆ. (ಬೇಗ)ಕಾಡನ್ನು ನೋಡುವ ಆಸೆ)