Nov 022013
 

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು :)

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙂

‘ದಿವ್ಯದೀಪಾವಲಿಶ್ರೀ’ ಎಂಬ ಸೊಲ್ಲನ್ನುಪಯೋಗಿಸಿ ಪದ್ಯವನ್ನು ಪೂರ್ಣಗೊಳಿಸಿರಿ. ಈ ಸಾಲು ಪಂಚಮಾತ್ರಾಚೌಪದಿ, ಭುಜಂಗಪ್ರಯಾತ, ಶಾಲಿನಿ, ಮಾಲಿನಿ, ಮಂದಾಕ್ರಾಂತ, ಸ್ರಗ್ಧರಾ ಹಾಗೂ ಮಹಾಸ್ರಗ್ಧರಾ ವೃತ್ತಗಳಿಗೆ ಹೊಂದುತ್ತದೆ. ‘ದಿವ್ಯದೀಪಾವಲಿಶ್ರೀ:’ ಎಂದು ಸಂಸ್ಕೃತದಲ್ಲೂ ಪೂರಣಗಳನ್ನು ನೀಡಬಹುದು.

 

 

Oct 102013
 

अन्यभाषासु उपलब्धानि रसवत्पद्यानि विभिन्नछन्दांसि आश्रित्य संस्कृतभाषायै भाषान्तरम् करणीयः |

Sep 142013
 

सर्वशुक्ला वसुन्धरा

इति अनुष्टुप् पद्यस्य अन्तिमपादं उपयुज्य समस्यापूरणं कुर्मः

Aug 112013
 

कर्णाटभाषायां आदिकविरिति प्रसिद्धस्य पम्पमहाकवेः पद्येन उद्धृतमिदं शार्दूलविक्रीडितवृत्तपादस्य अन्तिमभागं ‘संसारसारोदयम्‘ उपयुज्य संस्कृतभाषायां पद्यानि रचयामः |

This month we shall compose sanskrit verses in śārdūlavikrīḍita meter utilising the phrase ‘saṁsārasārodayam‘ taken from a verse written by pampa, famously known as ādikavi of kannada.

ಆದಿಕವಿ ಪಂಪನ ಶಾರ್ದೂಲವಿಕ್ರೀಡಿತ ವೃತ್ತದಲ್ಲಿರುವ ಪದ್ಯದಿಂದ ಆಯ್ದ ಭಾಗ ‘ಸಂಸಾರಸಾರೋದಯಂ‘ ಅನ್ನುವ ಪಾದಭಾಗವು ಸಮಸಂಸ್ಕೃತ ಕನ್ನಡದಲ್ಲಿರುವುದರಿಂದ ಅದನ್ನು ಉಪಯೋಗಿಸಿ ಕನ್ನಡದಲ್ಲೂ  ಆಸಕ್ತರು ಪದ್ಯಪೂರಣ ಮಾಡಬಹುದು.

Jul 092013
 

Dear Padyapānis

Padyapāna which started as a platform for all of us to hone our skills in metrical and classical poetry has got overwhelming responses from all and it led to the organizing of tumbugannaḍa śatāvadhāna. Till now we have been mainly concentrating on versification in kannaḍa except for few stray verses in saṁskṛta. In a bid to expand our horizons a bit more we have decided to start a section in saṁskṛta. Today being ‘आषाढस्य प्रथमदिवसे’ , the first day of the month of āṣāḍha, the day when Yakṣa of the famous Meghadūta spotted the cloud and today’s Nakṣatra being ‘Punarvasu’, the birth star of Rāma (Meghadūta has number of references to Sītā and Rāma  like जनकतनयास्नानपुण्योदकेषु, रामगिर्याश्रमेषु, रघुपतिपदैरङ्कितं मेखलासु ), we couldn’t find a day more apt to start this venture. As āṣāḍha pūrṇimā is celebrated as the birthday of Bhagavān Veda Vyāsa it is apt to start with verses on that great ṛṣi kavi.

So the first topic in this section

Verse/verses on Bhagavān Veda Vyāsa in conformance to any metrical pattern in saṁskṛta.

ಪದ್ಯಪಾನಿಗಳಿಗೆ ನಮಸ್ಕಾರ,
ಛಂದೋಬದ್ಧ ಹಾಗು ಅಭಿಜಾತ ಪದ್ಯರಚನೆಯ ಸಲುವಾಗಿ ಪದ್ಯಪಾನವೆಂಬ ಈ ವೇದಿಕೆ ಆರಂಭವಾಯಿತು. ಇದಕ್ಕೆ ದೊರೆತ ಅಭೂತಪೂರ್ವ ಪ್ರತಿಕ್ರಿಯೆ ಹಾಗು ಬೆಂಬಲದ ಫಲವಾಗಿ ತುಂಬುಗನ್ನಡ ಶತಾವಧಾನದ ಆಯೋಜನೆ ಸಾಧ್ಯವಾಯಿತು. ಇಲ್ಲಿಯವರೆಗೆ ನಾವು ಮುಖ್ಯವಾಗಿ (ಕೆಲವು ಪದ್ಯಗಳನ್ನು ಹೊರತುಪಡಿಸಿ) ಕನ್ನಡದಲ್ಲಿ ಪದ್ಯರಚನೆ ಮಾಡುತ್ತಾ ಬಂದಿದ್ದೇವೆ. ಸಂಸ್ಕೃತದಲ್ಲೂ ಸಹ ಪದ್ಯರಚನೆ ಮಾಡುವ ಹಂಬಲದಿಂದ ಸಂಸ್ಕೃತ ವಿಭಾಗವನ್ನು ಆರಂಭಿಸಲು ನಿಶ್ಚಯಿಸಿದ್ದೇವೆ. ಇಂದು ‘आषाढस्य प्रथमदिवसे’ ಅಂದರೆ ಆಷಾಢ ಮಾಸದ ಮೊದಲ ದಿನ, ಇಂದೇ ಮೇಘದೂತ ಕಾವ್ಯದಲ್ಲಿ ನಾಯಕನಾದ ಯಕ್ಷನು ಮೋಡವನ್ನು ಕಂಡದ್ದು ಹಾಗು ಇಂದಿನ ನಕ್ಷತ್ರ ರಘುಕುಲತಿಲಕನಾದ ಶ್ರೀ ರಾಮಚಂದ್ರನ (ಮೇಘದೂತದಲ್ಲಿ ಸೀತಾರಾಮರ ಬಹಳಷ್ಟು ಪಂಕ್ತಿಗಳಿವೆ ಉದಾ: जनकतनयास्नानपुण्योदकेषु, रामगिर्याश्रमेषु, रघुपतिपदैरङ्कितं मेखलासु  ) ಜನ್ಮನಕ್ಷತ್ರವಾದ ಪುನರ್ವಸು ಹೀಗಾಗಿ ಇಂದಿನ ದಿನಕ್ಕಿಂತ ಒಳ್ಳೆಯ ದಿನ ಸಿಗಲಾರದೆಂಬ ಆಶಯದಿಂದ ಇಂದೇ ಈ ವಿಭಾಗವನ್ನು ಆರಂಭಿಸೋಣ.

ಆಷಾಢ ಮಾಸದ ಪೂರ್ಣಿಮೆಯನ್ನು ಭಗವಾನ್ ವೇದ ವ್ಯಾಸರ ಜನ್ಮದಿನವೆಂದು ಆಚರಿಸುವುದರಿಂದ ಈ ಬಾರಿ ಅದನ್ನೇ ವಸ್ತುವಾಗಿ ತೆಗೆದುಕೊಂಡು ಭಗವಾನ್ ವೇದ ವ್ಯಾಸರ ಮೇಲೆ ಛಂದೋಬದ್ಧವಾಗಿ ಸಂಸ್ಕೃತದಲ್ಲಿ ಪದ್ಯವನ್ನು/ಪದ್ಯಗಳನ್ನು ರಚಿಸೋಣ

Feb 182013
 

ಈ ಸಮಸ್ಯೆಯ ಉಳಿದ ಸಾಲುಗಳನ್ನು ಒದಗಿಸಿ ಸಮಸ್ಯೆಯನ್ನು ಪರಿಹರಿಸಿ

ಸಂಸ್ಕೃತದಲ್ಲಿ

दश भवन्ति मनोभवसायकाः   (द्रुतविलम्बिता)

ಕನ್ನಡದಲ್ಲಿ ಪೂರಣ ಮಾಡಬಯಸುವವರಿಗೆ

ಮನಸಿಜನ ಬಳಿ ಹತ್ತುಬಾಣಗಳಿರುವುದೇ ನಿಜವೈ

ಅಥವಾ

ಮನ್ಮಥನ ಬಳಿ ಹತ್ತುಬಾಣಗಳಿರುವುದೇ ನಿಜವೈ  (ಭಾಮಿನೀ ಷಟ್ಪದಿ)

 

Apr 272012
 

ಈ ಪ್ರಹೇಳಿಕೆಯನ್ನು ಬಿಡಿಸಿ

ದಂತೈರ್ಹೀನಃ ಶಿಲಾಭಕ್ಷೀ

ನಿರ್ಜೀವೋ ಬಹುಭಾಷಕಃ

ಗುಣಸ್ಯೂತಿ ಸಮೃದ್ಧೋಪಿ

ಪರಪಾದೇನ ಗಚ್ಚತಿ

ದಂತಹೀನವದು ತಿಂಬುದು ಕಲ್ಗಳ

ನಂತಭಾಷಕ ಜೀವವಿಲ್ಲ

ಸ್ವಂತ ಸುಗುಣಗಣಿ ಯಾದರೇನನ್ಯ ಪ

ದಾಂತ ಪಿಡಿದು ಚರಿಸುವುದು

Apr 152012
 

ಸುಮಾರು ಎಂಟು ವರ್ಷಗಳಿಂದ ಬೆಂಗಳೂರಿನಲ್ಲಿ ಗಣೇಶರು ನಡೆಸುತ್ತಿದ್ದ ಪಾಕ್ಷಿಕ ಪಠಣ ವರ್ತುಲದಲ್ಲಿ (study circle)  ರಘುವಂಶದ ಪಾಠವು ಸದ್ಯದಲ್ಲೇ ಪೂರ್ಣಗೊಂಡಿದ್ದು, ಆ ಸಂದರ್ಭದಲ್ಲಿ ಸಹಪಾಠಿಗಳು ಬರೆದ ಪದ್ಯಗಳ ಸಂಗ್ರಹ ಇಲ್ಲಿದೆ. ಇವರೆಲ್ಲರು ಪದ್ಯಪಾನಿಗಳೇ ಆದ್ದರಿಂದ ಇದನ್ನು ಪದ್ಯಪಾನದಲ್ಲಿಯೇ ಅಳವಡಿಸುವುದು ಒಳಿತೆಂದು ತಿಳಿದು ಇಲ್ಲೆ ಪ್ರಕಟಿಸಲಾಗಿದೆ. ಪದ್ಯಗಳು ರಚನಕಾರರ ಹೆಸರಿನ ಪ್ರಕಾರ ಜೋಡಿಸಲಾಗಿವೆ.


 :ಆದರದಿಂದ ವಂದಿಸುವೆನದ್ರಿಸುತಾಹೃದಯಾನುರಾಗಸಂ
ಪಾದಿಗೆ
ದೋಷಭೇದಿಗೆ ಪ್ರಪನ್ನವಿನೋದಿಗೆ ವಿಘ್ನವಲ್ಲಿಕಾ
ಚ್ಹೇದಿಗೆ
ಮಂಜುವಾದಿಗಮಶೇಷಜಗಜ್ಜನನಂದವೇದಿಗಂ
ಮೋದಕಖಾದಿಗಂ
ಸಮದ ಮೂಷಕಸಾದಿಗೆ ಸುಪ್ರಸಾದಿಗಂ

ವಂಶೀ ನಿನಾದ ನಾನಾ ರಾಗಗಾನ ರಘು
ವಂಶಾನುಸಂಧಾನ
ಸಂಮೃಷ್ಟಯಾನ
ಅಂಶಮಿದು
ಸರ್ಗವೇಕೋನವಿಂಶವು ಸೇರೆ
ವಿಂಶ
ಸರ್ಗ ಸ್ವರ್ಗಮಿತ್ರಕೂಟಂ

ಯಂತ್ರಾಣು ವಿಜ್ಞಾನ ಶಾಸ್ತ್ರ ಕವಿತಾಗಾನ
ಮಂತ್ರ
, ನಾಟ್ಯ, ವಿಚಾರ, ರಸ, ಸದಾಚಾರ
ತಂತ್ರ
, ಶಿಲ್ಪ, ವಿಧಾನ, ಸ್ವಾಂತಮಂಥನ ವಸ್ತು
ತಂತ್ರಗಳ
ಮಂತಲ್ತೆ
ಮಿತ್ರಕೂಟಂ

ಕಾಲಿದಾಸಂ, ಪದ್ಮಸುಭ್ರಮಣ್ಯಂ, ವ್ಯಾಸ
ಬಾಲಮುರಲೀ
, ವಿಶ್ವನಾಥಂ, ಕುವೆಂಪು
ತೇಲುವರು
, ದ್ರಾಕ್ಷಿಯೇಲಾಲವಂಗಂಭಕ್ಷ್ಯ
ದಾಳದಿಂದೊಗೆವಂತೆ
ವಾಕ್ಸರಣಿಯೊಳ್

ದಕ್ಷತೆಯ ತಿಳಿವು, ಧೃತಿ, ತೀಕ್ಷ್ಣಮತಿ ಬಲವು, ನಿರ
ಪೇಕ್ಷೆ
ದೃಕ್ಪಥಪಂಥ
, ಸತ್ಯದನ್ವೇಶ
ದಾಕ್ಷಿಣ್ಯವಿರದ
ನುಡಿ
, ಪಾಕ್ಷಿಕತೆ ಸುಡುವ ಕಿಡಿ
ಲಾಕ್ಷಣಿಕರೊಡಲ
ಗುಡಿಶ್ರೀಗಣೇಶಂ

ಸೃಷ್ಟಿ ದುಸ್ತರವಲ್ಲವಿಷ್ಟವಿರೆ, ದುಸ್ಸಾಧ್ಯ
ಕಷ್ಟ ಪಟ್ಟರೆ
ಸಾಧ್ಯ ಭಾಷೆ ಷೋಡಶವೇಂ
?
ಅಷ್ಟಾವಧಾನವೇಂ
ಶತಸಹಸ್ರಂಗಳ

ಮಷ್ಟಿ ಬಲವೊಂದೆನುವ
ಶ್ರೀಗಣೇಶಂ

ವ್ಯಕ್ತಿಯೆನೆ ಸತ್ವರಜತಮದೂಟೆಗಳ ಮೂಟೆ
ರಕ್ತಿಯಾ ಕ್ಷೇತ್ರವೆನ
ಗವಧಾನಿಯಂತಃ

ಶಕ್ತಿಗಳನರಿಯೆ
ರಘುವಂಶಾಧ್ಯಯನ ನೆಪವೊ
ಮುಕ್ತವಾ
ತಿಳಿವೆಲ್ಲಶ್ರೀಗಣೇಶ

– ಚಂದ್ರಮೌಳಿ


ಆದಿಯಲಿ ನಮಿಸುತಲಿ ಶಾರದೆಗೆ ಗಣಪಂಗೆ
ಮೋದದಲಿ ಕಾವ್ಯವನು ಹೇಳಿದಗಣೇಶರಿಗೆ
ಕಾದು ಕೆನೆಗಟ್ಟಿದೊಲವಿನ ರಸಿಕ ಮಿತ್ರರಿಗೆ
ಸಾಧನೆಗೆ ನಮನ ಜಯವು ಕವಿಕುಲ ಗುರುವಿಗೇ

ಫಲ ನೀಡಿ ಧನ್ಯತೆಯನನುಭವಿಪ ಮರದಂತೆ
ಕಲೆಯ ರಸ ಹಂಚುತಿಹ ರಾಗರೇ ಧನ್ಯರೆನೆ
ಬಲವಿಲ್ಲ ಋಣತೀರಿಸಲು ಮರಕೆ, ರಾಗರಿಗೆ
ಒಲವೊಂದೆ ಕೊಡಲುಂಟು ರಾಗರಿಗೆ ಮನದುಂಬಿ

ಗಣೇಶರು ವಿಧ ವಿಧವಾದ ಜ್ಞಾನದ ಹಣ್ಣುಗಳುಳ್ಳ ಮರದಂತೆ. ೨ನೇ ಪದ್ಯದಲ್ಲಿ ಛಂದಸ್ಸಿಗೋಸ್ಕರ ಕಲೆಯ ರಸ ಎಂದು ಹಾಕಿದ್ದೇನೆ. ಇದು ನಿಜವಾಗಿ ಜ್ಞಾನದ ರಸ ಎಂದಾಗಬೇಕು.

 (ಕುವೆಂಪು , ಕೆ.ಎಸ್.ನರಸಿಂಹಸ್ವಾಮಿಗಳನ್ನು ನೆನಪಿಸಿಕೊಳ್ಳುತ್ತ)
ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು
ನಮ್ಮೆಲ್ಲರನು ಮತ್ತೆ ಬಂಧಿಸಿಹುದೋ ಕಾಣೆ

ಎಂಟು ವರ್ಷದ ಹಿಂದೆ ಶ್ರೀಲಲಿತ ಮನೆಯಲ್ಲಿ
ರಘುವಂಶವಾರಂಭಿಸಿದ್ದು ನೀವಲ್ಲವೇ
ಬಡತನವೊ ಸಿರಿತನವೊ ಯಾರಿರಲಿ ಎಲ್ಲಿರಲಿ

ಪಯಣದಲಿ ಜೊತೆಯಾಗಿ ನಾವಿಲ್ಲವೇ

-ಗಾಯತ್ರಿ ಇಂದಾವರ

ಕ್ಷೇತ್ರಂದತ್ತ್ವಾ  ಸ್ಫುರದುಪಕೃತೀ ಕಾಂಚನಾರಾಮಚಂದ್ರೌ |
ಕ್ಷಿಪ್ತಂಬೀಜಂ ವರರಘುಕಥಾ ತತ್ರರಾಗೇಣನೀತಮ್
||
ಪಕ್ಷೇಪಕ್ಷೇ ವಚನಸರಿತಾ ಪೂರಯತ್ಯಾಲವಾಲಮ್
|
ಜಾತಾವೃಕ್ಷೇ ರಸಿಕಹೃದಯಾಃ ಕಾವ್ಯಶಿಷ್ಯಾಃ ಸುಮಾಭಾಃ
||

[ಛಂದಸ್ಸು ಮಂದಾಕ್ರಾಂತಾ]

( ರಾಮಚಂದ್ರ – ಕಾಂಚನಾ ಅವರಿತ್ತ ಜಾಗದಲ್ಲಿ ಕಾವ್ಯರಸಙ್ಙರಾದ ರಾಗ (ಗಣೇಶರು) ರಘುವಂಶ ವ್ಯಾಸಂಗ ಗೋಷ್ಠಿಯ ಬೀಜ ಬಿತ್ತಿದರು , ತಮ್ಮ ವಚನಗಂಗೆಯಿಂದ ಪಕ್ಷಕ್ಕೆ ಒಮ್ಮೆ ಪಾತಿತುಂಬಿಸಿ ಆರಿಕೆಮಾಡಿದರು , ಅದರ ಸಂಯುಕ್ತ ಫಲಿತವೇ ಈ ಹೆಮ್ಮರ ಇಂದು ನಾನಾ ಕಾವ್ಯಸಹೃದಯರೆಂಬ ಹೂಗಳಿಗೆ ಆಶ್ರಯವಾಗಿದೆ. )

ಕಾವ್ಯದ ಕಾಲಯಾನ

ಕವಿಕುಲ ಗುರುವಿನ ಪದಗಳ |
ಛವಿಯನು ಹಿಡಿಯುತ ಗಮಿಸಲು ಮುಂದೆಯೆ ನಾವ್ಗಳ್
||
ಕವಿತೆಗಳು ಮಾತ್ರ ಕಾಲದ
|
ಗವಿಯಲಿ ಬಗೆಯನು ಸೆಳೆದಿದೆ ಹಿಮ್ಮುಖ ಸವಿಯಿಂ
|| (ಬಗೆಮನಸ್ಸು)

ಎಲ್ಲರಿಗುಮೀಗ ನಮೋ ಸಹಪಾಠಿಮಿತ್ರರೆ |
ಉಲ್ಲಾಸವಿತ್ತವರೆ ಬೆಳಕಪಿಡಿದವರೆ
||
ಬೆಲ್ಲಗಬ್ಬದ ಸೊಗವ ನಮಗೆ ತಂದಿರಿ ನೀವು
|
ಕೊಳ್ಳಿರೀ ನಮನವನು – ಕಬ್ಬದಮ್ಮ
||

ಪ್ರಸಾದ್ ಬಾಪಟ್


उडुपस्थो गणेशेन ज्ञानानन्दरसैर्भरः|
सन्तारितप्रजो
भाति नोहेनैव यहूदिना
||(1)

मूलार्थधान्यरचितॊदनसर्वसत्त्वं
नानावचोविभवसूपरसप्रतिष्ठम्|
वक्रोक्तिपर्पटविनोदितकं समश्नन्
त्रैविक्रमं भजत वामनकालिदासः ||(2)

प्रत्यक्षो यदि कालिदासकविराट् स्यात्च्छ्रीगणेशाहिते
व्याख्यानेक
परार्थसूक्ष्मभरितेकालत्रयीलालिते|
हास्योल्लासविलासरासमधुरे पाठे सहृद्भिर्युते

प्रायो
गर्वमुपैति सूत्रमभवं रत्नावलीगुम्फनॆ
||(3)

The three verses are ‘consolations’ or ‘answers’ to verses 1.2, 1.3 and 1.4 in the Raghuvamsha, where Kalidasa bemoans that he is unworthy to speak of the great race of Raghu.

  1. By Ganesh’s help, the boatman carrying the essence of gnyana and ananda got the satisfaction of safely conveying his charge, like Noah of the Ark. (In 1.2, Kalidasa compares himself as one trying to cross the ocean on a raft)
  1. Having as its rice the core meaning [of the Raghuvamsha], full of vital essence, with the sambar of the knowledge of works of scholars across tens of languages, with the uppinakaayi of barbed criticism and the happala of humor, [the meal called Ganesh’s class] nourishes the Vamana Kalidasa into Trivikrama (In 1.3, Kalidasa compares himself to a dwarf (vaamana) trying to reach for high-hanging fruit)
  1. If Kalidasa was present in Ganesh’s class – full of anecdotes concerning great and minute things, caressing ideas of the past, present and the future, with ample humour and fun, and consisting like-minded folks, he’d have smiled to himself, satisfied: “Ah! I’m the proud thread of a gem necklace that is forever bright/desired!” (In 1.4, Kalidasa compares himself to a mere thread through gem, following the path of a diamond that has already drilled through)

ಮೋಹನ್. ಕೆ.ವಿ.


एतत्सख्यं लवणसदृशं जीवनाख्यानपाके
पक्षे पक्षे रघुपतिगृहे योजितं वाग्विशेषं 
भव्यायै वै श्रवणसुभगौ कारणौ वां सभायै
गौरीपुत्रं कविकुलगुरुं कालिदासं वन्दे

ರಾಘವೇಂದ್ರ. ಜಿ. ಎಸ್.


शेषैः पुण्यैर्हृतमिव शुभं भाग्यमेतन्महन्नो
गौण्ड्ये
पीठे रघुकुलकथां कालिदास प्रणीताम् ।।
धर्मोदारां
नवरसयुतां भारतीयात्मभूताम् 
प्रोक्तुं
तावत्बुधगणवराः प्रीतिबद्धा बभूवुः।।

It is indeed our great and auspicious fortune, as if we pawned our last bit of merit for this purpose, that the best amongst the learned (Dr. G, no doubt!), became bound by love, so to speak, to teach us (or talk about) kAlidAsa’s wonderful work on the Raghus – that expounds generously on Dharma, is endowed with all the nine poetic Rasas and indeed embodies the soul of bhArata at that great institution founded by DVG.

(sheShaiH puNyairHRutamiva – attempted homage to the Bard of UjjayinI from his own Megha. I crave pardon in advance for any perceived misuse)

गीर्वाणवाङ्मयी धेनुर्दोग्धावधानिसत्तमः।
वयं
शिष्याश्चभोक्तारो दुग्धं रसामृतं महत्॥

With Samskrit literature as the celestial Cow, and the Cowherd being the best of avadhAnis (our teacher, Dr. G), we, the students are the lucky partakers of the wonderful milk of Rasa.

सदुक्तिमीनसङ्घातैः स्नेह भावनतोयजैः।
शोभते
रघुवंशाख्या नदीरसजलैर्भरा ॥

With beautiful sayings (profound statements, witticisms, humorous comments) as the schools of fish, and wonderful feelings of friendship as blooming lotuses, does shine our Raghuvamsha-named-river (group referred to here – not the work), filled, again with the wonderful waters of Rasa.

ರಾಘವೇಂದ್ರ ಹೆಬ್ಬಳಲು


ಎನಿತೊ ಮಮ ಸಂಸ್ಕೃತಿಯ ಗೊಂದಲ
ವೆನಿತೊ
ಪೂರ್ವಾಪರದ ವಿಸ್ಮಯ
ಮನನ
ಮಾಡಿ ಸಮನ್ವಯಿಸೆ ಘನ ವಿದ್ಯೆಯದು ವಿರಳ |
ಮನದಲನುಮಾನಗಳು
ಸಂದಿರ

ಲನುದಿನವು
ಸೆಲೆಯನ್ನದರಸಿರ

ಲನುವದಾಯಿತು
ಪುನಃ ಹಳೆ ಸಹಪಾಠಿಯೊಡೆ ಸಂಗ || ೧‌ ||

ಮಿತದ ಸಮಯದಿ ಕುದುರಿ ಬಂಧವು
ಸತತ
ಗೆಳೆತನವನ್ನು ಬಯಸುತ
ಲತುಲ
ಮುದದಿಂದೆತ್ತಿ ಕೈಯನು ಪಠನ ವರ್ತುಲಕೆ |
ವಿತತ
ರಘುಕುಲದಧ್ಯಯನದಲಿ
ಕತೆ
ಕವಿತೆ ಶಾಸ್ತ್ರಗಳಮೀಂಟುತ
ಮತಿಯು
ಬೆಳೆದುದು ಹಾಸ್ಯ ಲಾಸ್ಯ ರಸಾಲ ಸಂಗದೊಳು || ೨ ||

ಜ್ಞಾನನದಿಯಂದದಲಿ ಹರಿದಿರೆ
ಮೀನಿನೊಲು
ಸಡಗರದೊಳಾಡೆ
ಸ್ನಾನ
ಪಾನಕೆ ಪುಷ್ಕಳವು ಬಹಿರಂತರಕು ಸುಧೆಯು |
ಲೀನವಾಗಿಸಿ
ಗುಂಪಿನೊಳು

ನಾನೆಂಬುದನ್ನಳಿಸೆಲ್ಲರೊಡನೆಯು

ಜೇನ
ಸವಿಯನ್ನುಣಿಸಿ ಬೆಳೆಸಿತು ಕಾವ್ಯ ಪಾಠನವು || ೩ ||

ತೂಗುವುಯ್ಯಾಲೆಯೊಲು ಬಾಳಲಿ
ವೇಗದೆಳೆತಕ್ಕೋಡುತಿರೆ
ಯಾ

ವಾಗಲೂ
ನಮಗಿರಲಿ ಸಖ್ಯವು
, ರಾಗ ಸಮರಸವು |
ಹೀಗೆ
ನಡೆಯಲಿದೆಂದು ನಮ್ಮಯ
ಮಾಗಿದಿಳಿವಯಸಿನಲು
ಬಿಡದೆಯೆ
ಸಾಗುವಾ
ಬೆನ್ನೇರಿ ಕಾಳಿಯದಾಸ ಶೂದ್ರಕರ || ೪ ||

ರಾಮಚಂದ್ರ


ಬಿ.ಜಿ.ಎಲ್.ಸ್ವಾಮಿಯವರನ್ನುನೋಡಲಾಗಲಿಲ್ಲ.ಇನ್ನುವಂಚಿತನಾಗಬಾರದೆಂದುಗಣೇಶರನ್ನು(ಹಾಗೂಭೈರಪ್ಪನವರನ್ನು)ಹುಡುಕಿಕೊಂಡುಹೋದೆ.

[ವನಮಯೂರವೃತ್ತ:]
ಕಾಣದೆಲೆ ಪೋದೆನೆನುತಾವರಿಸೆಖೇದಂ
ತಾಣದೊಳಗಿದ್ದೊಡೆಯುಮಾ ದಿವಿಜಪುತ್ರನ್|
ಕಾಣದಿರಲಾರದಿವರನ್ನರಸಿ ಪೋದೆನ್
ಮೇಣದೊಲು ರೂಢಿಸಲು ಚಿತ್ತವನು ನಿಚ್ಚಂ||

ರಂಗನಾಥ ಪ್ರಸಾದ್


ಗೀರ್ವಾಣ ವಾಙ್ಮಯ ಮುಖಾಬ್ಜ ಸುಹಾಸ ಭಾಸಮ್
ವಾಣೀ ಕಟಾಕ್ಷ ಸಲಿಲೈಧಿತ ದಿವ್ಯ ವೃಕ್ಷಮ್
|
ಪ್ರೀತ್ಯಾದರೇಣ ಚ ಗುರೂ ರಘುವಂಶಕಾವ್ಯಮ್
ವ್ಯಾದಿಶ್ಯಸಾರ್ಥಮಕರೋತ್ಪಠಿತಮ್ಮದೀಯಮ್

gIrvANavA~GmayamukhAbja-suhAsa-bhAsam
vANIkaTAkSha-salilaidhitadivyavRukSham |
prItyAdareNa ca gurU raghuvamshakAvyam
vyAdishya sArthamakarot paThitam madIyam  ||

I had been randomly reading this and that all the time. But our Guru made it all meaningful by teaching the Raghuvamsha, which is as resplendent as the smile on the lotus-face of Samskrita-vA~Gmaya, and which is the divine tree that was grown by the water that was the kaTAkSha of Goddess Saraswati.

ಸುದುಸ್ತರಮ್ತಂ ರಘುವಂಶ ಸಾಗರಮ್
ತಿತೀರ್ಷುರಾಸಂ ಹ್ಯುಡುಪೇನ ಬುದ್ಧಿನಾ
|
ದಿಷ್ಟ್ಯಾ ಪರಂ ಕರ್ಣಿಕಸತ್ತಮಾಶ್ರಿತಾ
ಪ್ರಾಪ್ತಾ ತು ನೌಕಾ ಸಖಿಭಿರ್ಯುತಾ ಚ ಮೇ
||

sudustaram taM raghuvamshasAgaram
titIrShurAsam hyuDupena buddhinA |
diShTyA param karNika-sattamAshritA
prAptA tu naukA sakhibhiryutA ca mE ||

I wanted to cross the vast ocean of Raghuvamsha (kAvya) with my own buddhi that is like a tiny boat. But luckily I found a ship with friends, and which was under the protection of (under the tutelage of) a master steersman.

ಶ್ರೀಲಲಿತಾ


ಧನಕನಕ ಸೆಳೆದಿಲ್ಲ ಕೀರ್ತಿಯದೊ ರುಚಿಸಿಲ್ಲ
ಮನದೊಳಗೆ ಸುಳಿದಿರುವುದಾವಾಸೆಯೋ
?
ವನಕಾವ್ಯದೊಳು ನಡೆಯೆ ಜತೆಗೂಡೆ ರಸಿಕ
ಜನತೀರಿಹುದು ತಿಳಿಯದಿರ್ದ ಬಯಕೇ
?

ಬಳಸಿಹೆವು ರಘುವ೦ಶದಡವಿಯನು ಸರಸದಲಿ
ಕಳೆದಿಹೆವು ನಡೆಯುತಲೆ ವರ್ಷವೆ೦ಟು
|
ತಿಳಿಯದಾಯಾಸ ನಗೆಮಾತಿನೊಡಗೂಡಿರಲು
ಬೆಳಗಿರಲು
ದಾರಿಯನು ಗುರುನಲ್ಮೆಯು
||

ಶ್ರೀಶ ಕಾರಂತ


ಕಾಲಿದಾಸವಚೋದೀಪಶ್ರೀರಕ್ಷಾಕರಸಂಪುಟೀ|
ಕಾಲಿದಾಸವಚೋವಲ್ಲೀವಿಲಾಸವಿಪಿನಸ್ಥಲೀ||
ಕಾಲಿದಾಸವಚೋಲೀಲಾಶಿಬಿಕಾಸ್ಕಂಧವೇದಿಕಾ|
ಕಾಲಿದಾಸವಚೋಯಜ್ಞಸ್ವಾಹಾಕಾರಪರಂಪರಾ||
ಕಾಲಿದಾಸವಚೋವ್ಯೋಮವಿಹಾರವಿಹಗಚ್ಛಟಾ|
ಕಾಲಿದಾಸವಚೋದ್ವಾರಪ್ರತೀಹಾರನಿತಂಬಿನೀ||
ಕಾಲಿದಾಸವಚೋವೀಣಾಲಾಲನಪ್ರಕ್ರಿಯಾಂಗುಲಿಃ|
ಕಾಲಿದಾಸವಚೋಯೋಗಪ್ರಾಣಾಯಾಮಕ್ರಮೌಚಿತೀ||
ಕಾಲಿದಾಸವಚೋವೃಂದವೃಂದಾವನಕಲಿಂದಜಾ|
ಕಾಲಿದಾಸವಚೋಗ್ರಂಥಿಚ್ಛೇದನೈಕನಖಾಗ್ರಭೂಃ||
ಕಾಲಿದಾಸವಚೋವಾಣೀಚರಣಾಲಕ್ತಕಪ್ರಭಾ|
ಕಾಲಿದಾಸವಚೋದೃಷ್ಟಿನವಾಂಜನಪರಿಷ್ಕ್ರಿಯಾ||
ಕಾಲಿದಾಸವಚೋಬಂಧಸುಗಂಧಮಲಯಸ್ಥಲೀ|
ಕಾಲಿದಾಸವಚೋಯಕ್ಷಪ್ರೌಢಾಷಾಢಘನೋನ್ನತಿಃ||
ಕಾಲಿದಾಸವಚೋರುದ್ರಭದ್ರಭಸ್ಮರಜಶ್ಚ್ಛಟಾ|
ಗಣೇಶವಿದುಷೋವ್ಯಾಖ್ಯಾ ಸೌಖ್ಯಸಖ್ಯಾಯನೋಭವೇತ್||

ಡಾ|| ಶಂಕರ್ ರಾಜಾರಾಮನ್


ಪಾಮರ೦ಗೆ ಗಾಯತ್ರಿಯಿ೦ದ ರಘುವ೦ಶ ಪಾಠ ತಿಳಿಯಲ್
ವ್ಯೋಮದೊಳ್ ಪೊಳೆವದಿ೦ದ್ರಛಾಪ ಕೈಗೆಟುಕಿದ೦ತೆ ನಲಿಯಲ್
ನೇಮವೆನುತದೇಳ್ ವರ್ಷ ಸಾಗೆ ಬೆ೦ಬಲದ ನೆರವು ಸ್ತುತ್ಯ
ರಾಮಕಾ೦ಚನರ ಲಲಿತರಾಘವರ ನೆನೆಯಬೇಕು ನಿತ್ಯ

ಮೇರುಪ್ರತಿಭೆಯವಧಾನಿಗಳ್ಗೆ  ಸಮ ಗುರುಗಳಾರು ಪೇಳಯ್
ದೂರದರ್ಶನದೆ ತುಷ್ಥನಾದವಗೆ ಕನಸು ನನಸೆ ನೋಡೈ
ಸಾರವದ್ಭರಿತ ಕಾವ್ಯದೊಳ್ಗಲ೦ಕಾರ ಮತ್ತು ಛ೦ದ
ತೋರುತೆನಿತೊ ವ್ಯಾಕರಣ ವಿವರಗಳ ಪಾಠ್ಯ ಕ್ರಮವದ೦ದ

ಕಲ್ಪವೃಕ್ಷವನು ಕಾಮಧೇನುವನು ಕಾಣುವಾಸೆಯಿಲ್ಲ
ಶಿಲ್ಪ ನೃತ್ಯ ಸಾಹಿತ್ಯ ಸ೦ಸ್ಕೃತಾಧ್ಯಾತ್ಮ ಗೀತ ಬಲ್ಲ
ಗುರುವಿರ್ಪರಯ್ಯ ಕಳೆದಿರ್ಪ ಸಮಯವೊ೦ದೊ೦ದು ಬಹು ಅಮೂಲ್ಯ
ದೊರೆಕಿತಯ್ಯ ಸ್ಪಷ್ಟತೆಯು ಮನಕೆ ಕಲೆ ಮೆಚ್ಚುವಲ್ಲೆ ಮೌಲ್ಯ

ಅಧ್ಯಯನವೆಲ್ಲಿ ಬ೦ದಿಲ್ಲವೇಕಲೆ೦ದೆ೦ದು ಕೇಳಲಿಲ್ಲ
ಮಧ್ಯದೊಳ್ ಬರುವೆ ಪೋಪೆನೆ೦ಬುವರನೆ೦ದು ಹಳೆಯಲಿಲ್ಲ
ಚೋದ್ಯವಿಹುದದೀ ಪಾಠದಲ್ಲಿ ವಣ ಶಿಸ್ತನೆಸೆಗಲೊಲ್ಲರ್
ಬದ್ಧರಿಹರು ಮುಕ್ತತೆಯ ಕಡಲೊಳಗೆ ಸ್ನೇಹ ತೋರುತೆಲ್ಲರ್

ಕಾವ್ಯಕೌತುಕಕೆ ನೀರನೆರೆಯೆ ಪುಟ್ಟಿಹುದು ಪದ್ಯಪಾನ
ನವ್ಯ ಪದ್ಯಗಳ ನಿತ್ಯ ಪೊರ್ದದಾಗಿಹುದು ತ೦ಗುದಾಣ
ವರ್ಷದಲ್ಲೆ ಸಾವಿರದ ಪದ್ಯಗಳನೊರೆಯೆ ಮಿತ್ರವೃ೦ದ
ಹರ್ಷದಿ೦ದಲೊ೦ದೊ೦ದನೋದಿ ಗುರಿ ತೋರ್ದ ಬಗೆಯು ಚ೦ದ

ಬಗೆಬಗೆಯ ತಿನಿಸು ಬಗೆಬಗೆಯ ಚರ್ಚೆ ಚಟಪಟಿಪ ನಾಲ್ಗೆಗಳ್ಗೆ
ಹಗುರವಾದ ವಾದಗಳ ದಿಶೆ ತಿರುಗೆ ಧ್ಯೇಯದೇಳ್ಗೆಗಳ್ಗೆ
ಸೊಗದಿಗಯ್ದ ಸ೦ಚಾರಗಳ ನೆನಪದೆ೦ದು ಹಸಿರು ಮನದೆ
ಮುಗಿವೆ ಕರವ ನಡೆಯಲ್ಕೆ ದೇವ ಸತ್ಸ೦ಘ ವಿಘ್ನವಿರದೆ

– ಸೋಮಶೇಖರ ಶರ್ಮ


ಹಲವು ಕಾಲಗಳಿಂದಲಾ ಕವಿ
ಕುಲಗುರುವಿನಧ್ಯಯನ ಗೋಷ್ಠಿಯ
ನಲಿವಿನಿಂದ ನಡೆಸುತಿಹ ಗಣೇಶಾವಧಾನಿಗಳು
|
ಕೆಲರನವಧಾನಿಗಳನಾಗಿಸಿ
ಹಲವರನು ಕವಿ ಪಂಕ್ತಿಗೇರಿಸಿ
ಉಳಿದ ಮಂದಿಯ ಧರ್ಮಕಾಮಿಗಳನ್ನು ಮಾಡಿಹರು
||

ಕಾಲ ನಿಲ್ಲಿಸಿ ದೇಶ ಸೋಲಿಪ
ಕಾಳಿದಾಸನ ಕಾವ್ಯವೋದಲು
ಬಾಳುವೆಯ ಮರಳಿ ಪಡೆಯುವ ಬಯಕೆಯನು ಹೊಂದಿಹಿರಿ
|
ನೀಲಲೋಹಿತನೊಳು ಪುನರ್ಭವ

ವಾಳಿಸೆಂದಲವತ್ತು ಕೊಂಡಿಹ
ಕಾಳಿದಾಸನು ನಿಮ್ಮನಪ್ಪಲು ಮರುಜನುಮ ಬೇಡ್ವ
||

ಸುನೀತಾ ಗಣಪತಿ


Oct 062011
 

ಗೆಳೆಯರೆ,

ಕನ್ನಡದ ಜೊತೆಜೊತೆಗೆ, ಸಂಸ್ಕೃತದ ಛಂದಸ್ಸನ್ನು ಜೊತೆಗೆ ಸಂಸ್ಕೃತವನ್ನೂ ಅರಗಿಸಿಕೊಳ್ಳುವ ಮನಸ್ಸು ನನ್ನದು. ಅದಕ್ಕಾಗಿ, ನನ್ನ ಮೊದಲ ಪ್ರಯತ್ನ. ವಿಜಯದಶಮಿಯ ದಿನವೇ ಆರಂಭಿಸಬೇಕೆಂಬ ತರಾತುರಿಯಿಂದ ಬರೆದಿದ್ದೇನೆ. ತಪ್ಪುಗಳನ್ನು ತಿಳಿಸಿ, ತಿದ್ದಿಕೊಳ್ಳುತ್ತೇನೆ.

ಸುಮುಹೂರ್ತೆ ದಶಮ್ಯಾಂ ಹಿ

ಪದ್ಯಂ ರಚಿತುಮುತ್ಸುಕ:

ಬೀಜಮಿದಂ ವಪಾಮ್ಯದ್ಯ,

ದೃಷ್ಟುಮಿಚ್ಚಾಮಿಕಾನನಂ

(ಶುಭ ದಶಮಿಯಂದು ಪದ್ಯರಚಿಸಲು ಉತ್ಸುಕನಾಗಿ, ಮೊದಲ ಬೀಜವನ್ನು ಬಿತ್ತಿದ್ದೇನೆ. (ಬೇಗ)ಕಾಡನ್ನು ನೋಡುವ ಆಸೆ)