ಸರಸ, ವಿರಸ, ವಿಮಲ, ತುಮುಲ ಪದಗಳನ್ನು ಬಳಸಿ ಸ್ವಾತಂತ್ರ್ಯದ ಹೋರಾಟದ ಬಗ್ಗೆ ನಿಮ್ಮ ಇಚ್ಛೆಯ ಛಂದಸ್ಸಿನಲ್ಲಿ ಪದ್ಯ ರಚಿಸಿರಿ
ಬನ್(bun), ಗನ್(gun), ಪನ್(pun), ರನ್(run) ಪದಗಳನ್ನು ಬಳಸಿ ನಿಮ್ಮ ಇಚ್ಛೆಯ ಛಂದಸ್ಸಿನಲ್ಲಿ ನಿಮ್ಮ ಇಚ್ಛೆಯ ವೃಕ್ಷದ ವರ್ಣನೆಯನ್ನು ಮಾಡಿರಿ
ಸ್ವಾನ್, ಜಾಟರ್, ಹೀರೋ, ಪಾರ್ಕರ್ ಪದಗಳನ್ನು ಬಳೆಸಿ ನಿಮ್ಮ ಇಚ್ಛೆಯ ಕಾವ್ಯದ ಬಗೆಗೆ ನಿಮ್ಮ ಇಚ್ಛೆಯ ಛಂದಸ್ಸಿನಲ್ಲಿ ಪದ್ಯ ರಚಿಸಿ
ಸಪ, ಜದ, ಅದ ಮತ್ತು ಜಪ ಎನ್ನುವ ಪದಗಳಿಂದ ರಣವಿಜಯದ ಬಗ್ಗೆ ಪದ್ಯಗಳನ್ನು ರಚಿಸಿರಿ
ಚುನಾವಣೆಯ ಚಿಹ್ನೆಗಳಾದ ‘ಕಮಲ, ಕರ, ಆನೆ ಮತ್ತು ಶಂಖ’ ಪದಗಳನ್ನು ಬಳೆಸಿ ಉತ್ತಮವಾದ ರಾಜನ/ರಾಜಧರ್ಮದ ಬಗ್ಗೆ ಪದ್ಯಗಳನ್ನು ಬರೆಯಿರಿ
ಲಿಕ್ಕರ್, ನಿಕ್ಕರ್, ಕುಕ್ಕರ್, ಸಕ್ಕರ್ ಪದಗಳನ್ನು ಬಳೆಸಿ ದುಷ್ಟರನ್ನು ನಿಂದಿಸುವ ಪದ್ಯವನ್ನು ರಚಿಸಿರಿ.
ಕಾಲರಾ, ಕಾಮಾಲೆ, ಜ್ವರ, ಆಮಶಂಕೆ ಪದಗಳನ್ನು ಬಳಸಿ ಧನ್ವಂತರಿಯ ಸ್ತುತಿಯನ್ನು ನಿಮ್ಮಿಚ್ಛೆಯ ಛಂದಸ್ಸಿನಲ್ಲಿ ಮಾಡುವುದು
ಯತ, ನತ, ಕತ, ಪತ ಪದಗಳಿಂದ ರಾಮಾಯಣದ ಯಾವುದಾದರೂ ಪ್ರಸಂಗವನ್ನು ಕುರಿತು ನಿಮ್ಮ ಇಚ್ಛೆಯ ಛಂದಸ್ಸಿನಲ್ಲಿ ಪದ್ಯವನ್ನು ರಚಿಸಿರಿ
ಮದಪ, ಸರಿಸ, ನಿಸದ, ಪಮಗ ಪದಗಳನ್ನು ಬಳಸಿ ಯಾವುದಾದರೂ ಸಂಗೀತೇತರ ವಸ್ತು ಆಧಾರಿಸಿ ಪೂರಣಗಳನ್ನು ನೀಡಿರಿ
‘ದೋಸೆ’, ‘ಸಾರು’, ‘ಪಲ್ಯ’, ‘ಪೂರಿ’ ಪದಗಳನ್ನುಪಯೋಗಿಸಿ ನಿಮ್ಮ ಇಷ್ಟದೇವತೆಯ ಸ್ತುತಿಯನ್ನು ಪದ್ಯರೂಪದಲ್ಲಿ ರಚಿಸಿರಿ.
ಛಂದಸ್ಸು ನಿಮ್ಮ ಆಯ್ಕೆ.
nut(ನಟ್), but(ಬಟ್), wit(ವಿಟ್), cut(ಕಟ್) ಪದಗಳನ್ನು ಬಳಸಿ ನಿಮ್ಮ ಇಚ್ಛೆಯ ಛಂದಸ್ಸಿನಲ್ಲಿ ಮಹಾಭಾರತದ ಯಾವುದಾದರೂ ಘಟನೆಯನ್ನು ಕುರಿತು ಪದ್ಯ ರಚಿಸಿ
ಶ್ರೀ ರಾ. ಗಣೇಶರ ಈಚಿನ ಶತಾವಧಾನದಲ್ಲಿ ಪೃಚ್ಛಕರಾದ ಶ್ರೀಮತಿ ಶ್ರೀಲಲಿತಾ ರೂಪನಗುಡಿಯವರು ನೀಡಿದ ದತ್ತಪದಿಯಿದು: ವಿವಿಧ ಭಾಷೆಗಳಲ್ಲಿ ’ಮಳೆ’ಯ ಸಮಾನಾರ್ಥಕ ಪದಗಳಾದ ವಾನ (Telugu), ಅಮೆ (Japanese), ಯಾಮೂರ್ (Turkish), ರಿಯನ್ (Afrikaans)ಗಳನ್ನು ಬಳಸಿ ಬರಗಾಲವರ್ಣನೆ ಮಾಡಿ. ಛಂದೋವೈವಿಧ್ಯವಿರಲಿ.