Jul 032020
 

1) ಶ್ರೀಲಲಿತಾ ರೂಪನಗುಡಿಯವರ ಪರಿಹಾರ:
महायुद्धे पूर्णे भुवन-बहु-भारे विगलिते
बृहद्वृक्षस्याधो हसितवदनेन क्रमविदा ।
हृषीकेशेनान्ते प्रतिगमननाट्यं स्वमनसो
विनोदार्थं सार्थं घटितमथ मृत्यु-प्रकरणम् ॥
(ಶ್ರೀಕೃಷ್ಣ ನಿರ್ಯಾಣ)

2) ಉಷಾ ಉಮೇಶರ ಪರಿಹಾರ-೧:
ಅನೂಚಾನಂ ಸಾವೈ, ನಶಿಸುತುದಿಸಲ್ ಮಾನವರೊಳಿಂ
ತನಂತಂ ಚೈತನ್ಯಾನ್ವಿತಕಣಚಯಂ ತಾಮನುದಿನಂ|
ಪುನರ್ಜನ್ಮಕ್ಕಂ ನಿಶ್ಚಿತಮದನಿವಾರ್ಯಂ ಮರುಳೆ ಕಾಣ್
ವಿನೋದಕ್ಕಂ ತಕ್ಕಂತೊದವಿದುದು ಮೃತ್ಯು ಪ್ರಕರಣಂ!!
ಮಾನವ ಶರೀರದಲ್ಲಿ ಅಸಂಖ್ಯ ಜೀವಕಣಗಳು ಸತ್ತು ಹುಟ್ಟುತ್ತಿರುವಾಗೆ – ಪುನರ್ಜನ್ಮಕ್ಕಾಗಿ ನಿಶ್ಚಿತ ಮರಣದಾಟದ ಬಗೆಗಿನ ಪೂರಣ

3) ಉಷಾ ಉಮೇಶರ ಪರಿಹಾರ-೨:
ದಿನಂ ಕಾರ್ಯಾಕಾರ್ಯಂ ಗಡ ಮನುಜಗಂ ಜಾಗೃತಿಯೊಳುಂ
ವಿನಾಕಾರ್ಯಂ ತಕ್ಕಂತೊದವುದದೊ ಸ್ವಪ್ನಪ್ರಕಟಣಂ
ಅನಾಯಾಸಂತಂ ಕಾಣ್ ಕಡುನಿದಿರೆಯಿಂದೆಚ್ಚರಗೊಳಲ್
ವಿನೋದಕ್ಕಂ ತಕ್ಕಂತೊದವಿದುದು ಮೃತ್ಯು ಪ್ರಕರಣಂ
“ಜಾಗೃತ್ – ಸ್ವಪ್ನ – ಸುಷುಪ್ತಿ” ಯ ಕೌತುಕದ ಬಗೆಗಿನ ಪೂರಣ. “ಗಾಢನಿದ್ರೆ” ಮರಣಕ್ಕೆ ಸಮ ಅಲ್ಲವೇ?

Jul 032020
 

1) ಅವಧಾನಿ ಗಣೇಶಭಟ್ಟ ಕೊಪ್ಪಲತೋಟರ ಪರಿಹಾರ:
ಖಂಡಿಸಿ ಸಿದ್ಧಾಂತಂಗಳ
ಮಂಡನೆಯಂ ಮಾಡದಿರ್ಪರಿವರಿಂತೀ ವೈ-|
ತಾಂಡಿಕವಾದಂಗೆಯ್ದಿರೆ
ಪಂಡಿತರುಂ ಸೋಲ್ತರಲ್ತೆ ಪಾಮರರಿದಿರೊಳ್||
(ಪಾಮರರಾದರೂ ಖಂಡನೆ ಮಂಡನೆಗಳನ್ನು ಸರಿಯಾಗಿ ಮಾಡದೇ ಬರಿದೇ ವಿತಂಡವಾದ ಮಾಡಿದ ಕಾರಣ ಪಂಡಿತರೂ ಅವರ ಎದುರು ಸೋತರು)

2) ಶ್ರೀ ಕೆ. ಬಿ. ಎಸ್. ರಾಮಚಂದ್ರರ ಪರಿಹಾರ:
ದಂಡದ ಮಾತಾಡುತಲೆ ವಿ-
ತಂಡವ ಮಾಳ್ದವನ ಕೂಡೆ ಸೋಗಂ ಬಿಡುತಿ-|
ನ್ನುಂಡಾಗಿರೆ ಸುಖನಿದ್ರೆಗೆ
ಪಂಡಿತರುಂ ಸೋಲ್ತರಲ್ತೆ ಪಾಮರನೆದುರೊಳ್||

3) ಶ್ರೀಧರ ಸಾಲಿಗ್ರಾಮರ ಪರಿಹಾರ:
ಭಂಡಂ ಪುಸಿಯುಲಿಯಿಂದಂ
ಕೊಂಡಾಡಲ್ ಮದ್ಯಪಾನಕಾಹ್ವಾನಿಸಿರಲ್|
ಮಂಡಿಸೆ ವಾದಂ ನಶೆಯೊಳ್
ಪಂಡಿತರುಂ ಸೋಲ್ತರಲ್ತೆ ಪಾಮರನಿದಿರೊಳ್||

4) ಶ್ರೀಮತಿ ಕಾಂಚನರವರ ಪರಿಹಾರ
ಗುಂಡಿಗೆಯೊಳ್ ತುಂಬಿರ್ಪುದು
ಬಂಡೆನುತುಂ ಸದ್ಗುಣಂಗಳಂ ತೋರುತೆ, ತಾಂ|
ಬಂಡೆರ್ದೆಯಾಣ್ಮರಾದೊಡೆ
ಪಂಡಿತರುಂ ಸೋಲ್ತರಲ್ತೆ ಪಾಮರನಿದಿರೊಳ್!!
ಪಾಮರರಲ್ಲೂ ಗುಣವನ್ನು ಗ್ರಹಿಸುತ್ತ, ತಾವು ಹೃದಯವಂತರಾಗಿರುವರಿವರು…..

5) ಶ್ರೀಮತಿ ಉಷಾರವರ ಪರಿಹಾರ-೧:
ಗಂಡಾಂತರಂ ಗಡಾ ಬ್ರ-
ಹ್ಮಾಂಡಜ್ಞಾನಮಿರದಾಗೆ ಪ್ರಾಣಾಪಾಯಂ|
ಖಂಡಿತಮಂತಾಸಮಯಂ
ಪಂಡಿತರುಂ ಸೋಲ್ತರಲ್ತೆ ಪಾಮರರಿದಿರೊಳ್ !!
ಬ್ರಹ್ಮಾಂಡಜ್ಞಾನ(ಲೋಕಜ್ಞಾನ)ವಿಲ್ಲದಿರೆ ಪ್ರಾಣಾಪಾಯ ಸಮಯದಲ್ಲಿ ಪಾಮರರಿಗೆ(ಅಶಿಕ್ಷಿತರಿಗೆ) ಸೋಲಬೇಕಾಗುವ ಪಂಡಿತರ ಕಲ್ಪನೆ (ಈಜಲು ಬಾರದ ಪಂಡಿತ ನಾವಿಕನಿಗೆ ಶರಣಾದ ಕಥೆಯ ಹಿನ್ನೆಲೆಯಲ್ಲಿ)

6) ಶ್ರೀಮತಿ ಉಷಾರವರ ಪರಿಹಾರ-೨:
ಕೆಂಡಾಮಂಡಲಗೊಂಡಂ
ಚಂಡಾಲನೊಡಂದು ಶಂಕರಂ, ಬಳಿಕಾತಂ|
ಪಿಂಡಾಂಡಮರ್ಮಮರಿಪಲ್
ಪಂಡಿತನುಂ ಸೋಲ್ತನಲ್ತೆ ಪಾಮರನಿದಿರೊಳ್||
“ಚಂಡಾಲ”ನಿಗಾಗಿ ಬರೆದ ಪದ್ಯ! ಏನಾದರು ತಪ್ಪಿದ್ದಲ್ಲಿ ಯಾರೂ ದಯವಿಟ್ಟು ಕೆಂಡಾಮಂಡಲರಾಗದಿರಿ

7) ಶ್ರೀಮತಿ ಉಷಾರವರ ಪರಿಹಾರ-೩:
ಮಂಡಲದಿ ಸುತ್ತುತೆ ಕೊರಳ
ಗೊಂಡೆಯಲುಗಿಸಿರ್ಕೆ ಗಾಣದೆತ್ತುಗಳುಂ ತಾಂ|
ಅಂಡಯಿಸಿರ್ದಂ ಕೃಷಿಕಂ
ಖಂಡಿತಮಾಗುತಿರಲಾಗೆ ಗಂಟಾನಾದಂ||
ಕಂಡೀ ಸೋಜಿಗಮಂ ಗಡ-
ಮಂಡಲೆದೋರ್ವ ಪ್ರಕಾಂಡ ಪಾರಂಗತನುಂ|
ಮಂಡಿಸಲನುಮಾನಂ “ಬರಿ
ರುಂಡಮಲುಗಿಸಿರಲುಮೆಂತು ಗಾಣಮೆಳೆಯದಲ್”?
ಗಂಡಾಳೆ, ನಿನ್ನಿನಿತು ಮತಿ
ಮಂಡೆಯಿರದವಕ್ಕೆನಲ್ಕೊಡಂತವಮಾನಂ-|
ಗೊಂಡು ನಿಪುಣತೆಗೆ ಮಣಿದುಂ
ಪಂಡಿತನುಂ ಸೋಲ್ತನಲ್ತೆ ಪಾಮರನಿದಿರೊಳ್||
(ಕಥೆ ಗೊತ್ತಿದ್ದವರಿಗೆ ಅರ್ಥವಾಗಬಹುದೇನೋ ?!!)

Nov 062018
 

ಎಲ್ಲರಿಗೂ ದೀಪಾವಳಿಯ ಶುಭಾಶಯಗಳು.

ಕಂದಪದ್ಯದ ಈ ಸಮಸ್ಯೆಗಳನ್ನು ಪರಿಹರಿಸಿ:

೧. ತನ್ನೊಳ್ ಮುನಿದಾಣ್ಮನಿಂದೆ ಸತಿ ಸಂತಸಿಪಳ್

೨. ದೀಪಾವಳಿ ಕಲ್ತಲೆಂದೆ ಭಾಸಿಕುಮಲ್ತೇ

Oct 152018
 

೧. ಉತ್ಪಲಮಾಲೆಯ ಸಮಸ್ಯೆ

ಜಾರಿಣಿಯಾದಳಲ್ತೆ ರಘುರಾಮನಪತ್ನಿ ದಶಾಸ್ಯರಕ್ತಿಯೊಳ್

೨. ಕಂದದ ಸಮಸ್ಯೆ

ಹರಶಿರದೊಳ್ ಪೂರ್ಣಚಂದ್ರನೆಸೆದಂ ನೋಡಾ

Sep 032018
 

ಜಲೋದ್ಧತಗತಿಯ ಸಮಸ್ಯೆಯ ಸಾಲನ್ನು ಪೂರ್ಣ ಮಾಡಿರಿ:

ಸುವಾಸಿನಿಯರೇ ವಿಲಾಸಿನಿಯರಯ್

ಮತ್ತೇಭದ ಸಮಸ್ಯೆಯ ಸಾಲನ್ನು ಪೂರ್ಣ ಮಾಡಿರಿ:

ಪಸಿವಿಂದಾರ್ತನೆ ಬಿಕ್ಕೆಯಂ ತೃಣಮೆನಲ್ ಕೈಯ್ಯೊಡ್ಡಿದಂ ಭೋಗಿ ತಾಂ

Jul 252018
 

೧. ಕಂದಪದ್ಯದ ಸಮಸ್ಯೆಯ ಸಾಲನ್ನು ಪರಿಹರಿಸಿ
ಎಳೆಯರ ಪಿರಿತನವ ಕಂಡು ಸುಯ್ದರ್ ಮುದಿಯರ್

೨. ಉತ್ಪಲಮಾಲೆಯ ಸಮಸ್ಯೆಯ ಸಾಲನ್ನು ಪರಿಹರಿಸಿ:
ಗೋವಿನ ರೋಷಕಂ ಬೆದರ್ದ ಸಿಂಗಮನೀಕ್ಷಿಪುದಲ್ತೆ ಸಂತತಂ

Jul 032018
 

೧. ಮಾಲಿನೀಛಂದಸ್ಸಿನ ಸಮಸ್ಯೆಯನ್ನು ಪರಿಹರಿಸಿರಿ

ಫಲದೆ ಮೆರೆದ ಕಯ್ಪೇ ಸರ್ವದಾಸ್ವಾದನೀಯಂ

೨. ದೃತವಿಲಂಬಿತದ ಸಮಸ್ಯೆಯಸಾಲನ್ನು ಪೂರ್ಣಮಾಡಿರಿ

ಇರುಳ ನೇಸರನಾತಪದಂತೆ ದಲ್