ಈ ಬಾರಿಯ ಗಣೇಶಚತುರ್ಥಿಯ ಅಂಗವಾಗಿ ನಮ್ಮ ರಾಮಣ್ಣನ ತಮ್ಮನ ಮಗ ಮಾಡಿದ ಅತಿಸುಂದರವಾದ ಮಣ್ಣಿನ ಗಣೇಶನನ್ನು ಕುರಿತು ಪದ್ಯ ರಚಿಸಿರಿ
೧. ಶಿವನ ತಾಂಡವವನ್ನು ಕಂಡು ಪಾರ್ವತಿಯ ಸ್ವಗತ
೨. ಮುಸುಕಿನ ಜೋಳ
೩. ಗುಡಿಸಲ ಗುಟ್ಟು
೪. ಹದ
ಜಲೋದ್ಧತಗತಿಯ ಸಮಸ್ಯೆಯ ಸಾಲನ್ನು ಪೂರ್ಣ ಮಾಡಿರಿ:
ಸುವಾಸಿನಿಯರೇ ವಿಲಾಸಿನಿಯರಯ್
ಮತ್ತೇಭದ ಸಮಸ್ಯೆಯ ಸಾಲನ್ನು ಪೂರ್ಣ ಮಾಡಿರಿ:
ಪಸಿವಿಂದಾರ್ತನೆ ಬಿಕ್ಕೆಯಂ ತೃಣಮೆನಲ್ ಕೈಯ್ಯೊಡ್ಡಿದಂ ಭೋಗಿ ತಾಂ
೧. ಕೊಕ್ಕರೆ
೨. ಬೇತಾಳ
೩. ಅಣೇಕಟ್ಟು
ಈ ಕೆಳಕಂಡ ವಸ್ತುಗಳನ್ನು ವರ್ಣಿಸಿ ಪದ್ಯರಚಿಸಿರಿ:
೧. ಮರದ ಬುಡದ ಪಾತಿ
೨. ನೆಲ್ಲಿಕಾಯಿ
೩. ನಗ್ನ ಸನ್ಯಾಸಿ
೧. ಕಂದಪದ್ಯದ ಸಮಸ್ಯೆಯ ಸಾಲನ್ನು ಪರಿಹರಿಸಿ
ಎಳೆಯರ ಪಿರಿತನವ ಕಂಡು ಸುಯ್ದರ್ ಮುದಿಯರ್
೨. ಉತ್ಪಲಮಾಲೆಯ ಸಮಸ್ಯೆಯ ಸಾಲನ್ನು ಪರಿಹರಿಸಿ:
ಗೋವಿನ ರೋಷಕಂ ಬೆದರ್ದ ಸಿಂಗಮನೀಕ್ಷಿಪುದಲ್ತೆ ಸಂತತಂ
ಈ ವಾರದ ವರ್ಣನೆಯ ವಸ್ತುಗಳು
೧. ಅಂಕುಶ
೨. ಪರಶುರಾಮನ ಪರಾಭವ
೩. ಅಂಕದ ಕೋಳಿಯ ಜಗಳ
೧. ಮಾಲಿನೀಛಂದಸ್ಸಿನ ಸಮಸ್ಯೆಯನ್ನು ಪರಿಹರಿಸಿರಿ
ಫಲದೆ ಮೆರೆದ ಕಯ್ಪೇ ಸರ್ವದಾಸ್ವಾದನೀಯಂ
೨. ದೃತವಿಲಂಬಿತದ ಸಮಸ್ಯೆಯಸಾಲನ್ನು ಪೂರ್ಣಮಾಡಿರಿ
ಇರುಳ ನೇಸರನಾತಪದಂತೆ ದಲ್
ಈ ಕೆಳಗಿನ ಪದಗಳನ್ನು ವರ್ಣಿಸಿ ಪದ್ಯರಚಿಸಿರಿ:
೧. ಮುರಿದ ಕನ್ನಡಕ
೨. ಬೆವರು
೩. ಬಾಲ